Friday, October 18, 2024
spot_img
spot_img
spot_img
spot_img
spot_img
spot_img
spot_img

Mobile ಅತಿಯಾದ ಬಳಕೆ ಈ ರೋಗಗಳಿಗೆ ಕಾರಣವಾಗಬಹುದು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಈಗಂತೂ ಎಲ್ಲರ ಕೈಯಲ್ಲಿ ಸ್ಮಾರ್ಟ್​ ಫೋನ್ ಗಳು ಇವೆ. ಹಿಂದೆ ಊಟ, ಬಟ್ಟೆ ಮತ್ತು ಮನೆ ಪ್ರಮುಖ ಮೂಲಭೂತ ಅವಶ್ಯಕತೆಗಳಾಗಿದ್ದವು. ಆದರೆ ಇಂದು ಮೊಬೈಲ್ ಕೂಡ ಇದಕ್ಕೆ ಸೇರ್ಪಡೆಯಾಗಿದೆ

ಮೊಬೈಲ್ ಬಳಕೆ ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಅದನ್ನು ಹೆಚ್ಚು ಬಳಸುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಯಾವುದೇ ವ್ಯಕ್ತಿ ಅಥವಾ ವಸ್ತುವಾಗಿರಲಿ ಅವುಗಳಲ್ಲಿ ಒಳ್ಳೆಯದರ ಜೊತೆಗೆ ಕೆಟ್ಟದ್ದು ಇರುತ್ತದೆ.

ಇದನ್ನು ಓದಿ : ಭಾರತದ ಹೆಮ್ಮೆಯ ಅಗ್ರಗಣ್ಯ ಕೈಗಾರಿಕೋದ್ಯಮಿ ರತನ್ ನಾವಲ್ ಟಾಟಾ ನಿಧನ.!

ಇಂದಿನ ಕಾಲದಲ್ಲಿ, ನಾವು ಫೋನ್ ಮೇಲೆ ಎಷ್ಟು ಅವಲಂಬಿತರಾಗಿದ್ದೇವೆ ಎಂದರೆ ಅದರ ವ್ಯಸನಿಗಳಾಗಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಯಾವುದನ್ನಾದರೂ ಬಿಡಬಹುದು ಆದರೆ ಮೊಬೈಲ್ ಫೋನ್ ಗಳನ್ನು ಬಿಡಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರೀತಿಯ ಅಭ್ಯಾಸ ನಮಗೆ ಅನೇಕ ರೀತಿಯ, ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಫೋನ್ ನಿಂದ ಹೊರಹೊಮ್ಮುವ ವಿದ್ಯುತ್ಕಾಂತೀಯ ವಿಕಿರಣ ಮತ್ತು ಫೋನ್ ಪರದೆಯಿಂದ ಹೊರಸೂಸುವ ನೀಲಿ ಬೆಳಕು ನಮ್ಮ ದೇಹಕ್ಕೆ ಹಾನಿ ಮಾಡುತ್ತದೆ. ವಿಶೇಷವಾಗಿ ನಾವು ಫೋನ್ ಅನ್ನು ತಲೆಯ ಬಳಿ ಇಟ್ಟಾಗ, ಅಂದರೆ, ಫೋನ್ ಮತ್ತು ಬಳಕೆದಾರರ ನಡುವಿನ ಅಂತರ ಕಡಿಮೆಯಿದ್ದರೆ, ದೇಹದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ಇದನ್ನು ಓದಿ : ಆರೋಗ್ಯದ ದೃಷ್ಟಿಯಿಂದ ರಾತ್ರಿ ಒಳ ಉಡುಪು ಧರಿಸಿ ಮಲಗುವುದು ಸರಿಯೇ.?

ಮೊಬೈಲ್ ನ್ನು ಅತಿಯಾಗಿ ಬಳಸುವುದರಿಂದ ಯಾವ ರೋಗಗಳ ಅಪಾಯವಿದೆ ಗೊತ್ತಾ.?

ರಾತ್ರಿ ಮಲಗುವ ಮೊದಲು ಫೋನ್ ಬಳಸುವುದರಿಂದ ಮೆಲಟೋನಿನ್ ಹಾರ್ಮೋನ್ ಮಟ್ಟ ಕಡಿಮೆಯಾಗುತ್ತದೆ.

ಮೊಬೈಲ್ ಫೋನ್ ಗಳ ಅತಿಯಾದ ಬಳಕೆಯು ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದೀರ್ಘಕಾಲದ ವರೆಗೆ ಫೋನ್ ನಲ್ಲಿ ಕೆಲಸ ಮಾಡುವುದರಿಂದ ಕಣ್ಣು ಮಸುಕಾಗುವುದು, ಕಿರಿಕಿರಿಯಂತಹ ಸಮಸ್ಯೆಗಳು ಉಂಟಾಗಬಹುದು.

ಇದನ್ನು ಓದಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಫೋನ್ ಬಳಸುವಾಗ ದೀರ್ಘಕಾಲ ಕುಳಿತುಕೊಳ್ಳುವುದು, ದೈಹಿಕ ಚಟುವಟಿಕೆಯ ಕೊರತೆ, ಒತ್ತಡ ಮತ್ತು ತಲೆನೋವು ಹೃದಯ ಮತ್ತು ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ

ನಿದ್ರೆಗೆ ತೊಂದರೆ ಉಂಟು ಮಾಡುತ್ತದೆ.

ಕುತ್ತಿಗೆ ಬಗ್ಗಿಸಿ ಮೊಬೈಲ್ ನೋಡುವುದು ಅಥವಾ ಫೋನ್ ಗಳನ್ನು ನಿರಂತರವಾಗಿ ಕೈಯಲ್ಲಿ ಹಿಡಿದುಕೊಳ್ಳುವುದರಿಂದ ದೇಹವು ಕೆಟ್ಟ ಭಂಗಿಯಿಂದ ಬಳಲು ಕಾರಣವಾಗುತ್ತದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img