Thursday, April 25, 2024
spot_img
spot_img
spot_img
spot_img
spot_img
spot_img

foolery : ಪೊಲೀಸರ ಮುಂದೆ ಅರೆಬೆತ್ತಲಾಗಿ ತೊಡೆ ತಟ್ಟಿ ಆವಾಜ್ ಹಾಕಿದ ಕುಡುಕ.!

spot_img

ಜನಸ್ಪಂದನ ನ್ಯೂಸ್, ತುಮಕೂರು : ತುಮಕೂರು ಜಿಲ್ಲೆಯ ತುರುವೆಕೆರೆ (Turuvekere) ತಾಲೂಕು ಕಚೇರಿಯಲ್ಲಿ ಕುಡಿದ ನಶೆಯಲ್ಲಿ ಅರೆನಗ್ನನಾಗಿ ಬಂದು ಯುವಕ ಅವಾಂತರವನ್ನೇ ಸೃಷ್ಟಿಸಿದ್ದ ಘಟನೆ ನಡೆದಿದೆ.

ತುರುವೆಕೆರೆ ಪಟ್ಟಣದ ವಿನೋಭಾ ನಗರ ನಿವಾಸಿ ರವಿ ಎಂಬಾತ ಈ ರೀತಿ ಹುಚ್ಚಾಟ (foolery) ತೋರಿದ್ದಾನೆ.

ಇದನ್ನು ಓದಿ : ಮಾ*ರಕಾ*ಸ್ತ್ರಗಳಿಂದ ಬಿಜೆಪಿ ಮುಖಂಡನ ಬ*ರ್ಬರ ಹ*ತ್ಯೆ.!

ಕೌಟುಂಬಿಕ ‌ಕಲಹದಿಂದ ಮನನೊಂದ ರವಿ ಕಂಠಪೂರ್ತಿ ಕುಡಿದು ಬಂದಿದ್ದ. ಈ ವೇಳೆ ಪೊಲೀಸರ ಮುಂದೆಯೇ ಬಟ್ಟೆ (clothes) ಹರಿದು ಪತ್ನಿ ಹಾಗೂ ತಾಯಿಯ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.

ಮೊದಮೊದಲು ಅಲ್ಲಿದ್ದ ಸಾರ್ವಜನಿಕರು ರವಿಯನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ. ಆದರೆ ರವಿ ಇದ್ಯಾವುದಕ್ಕೂ ಕ್ಯಾರೆ ಎನ್ನದೇ ಸಿಕ್ಕ ಸಿಕ್ಕವರಿಗೆ ಬೈಯುತ್ತಾ, ಪತ್ನಿ ಹಾಗೂ ತಾಯಿಗೆ ಅವಾಚ್ಯ ಶಬ್ಧಗಳಿಂದ (unspoken sounds) ನಿಂದಿಸಿದ್ದಾನೆ.

ತಾನು ಧರಿಸಿದ್ದ ಪ್ಯಾಂಟ್‌, ಶರ್ಟ್‌ ಬಿಚ್ಚಿ, ಹೊಡೆಯಲು ಬಂದ ಪೊಲೀಸರಿಗೆ ತೊಡೆ ತಟ್ಟಿ ಅವಾಜ್‌ ಹಾಕಿದ್ದಾನೆ. ಇವನ ಹುಚ್ಚಾಟಕ್ಕೆ ಬೇಸತ್ತ ಸಾರ್ವಜನಿಕರು (public) ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ.

ಇದನ್ನು ಓದಿ : Politics : ಬಿಜೆಪಿಯ 15 ಶಾಸಕರು ಅಮಾನತು.!

ಸ್ಥಳಕ್ಕಾಗಮಿಸಿದ ಪೊಲೀಸರು ರವಿಯನ್ನೂ ತಾಲೂಕು ಕಚೇರಿಯಿಂದ ಹೊರಕಳಿಸಲು ಮುಂದಾಗಿದ್ದಾರೆ. ಆದರೆ ಆತ ಹೊರ ಹೋಗದೇ ಮತ್ತಷ್ಟು ಸಿಟ್ಟಾಗಿದ್ದಾನೆ. ರವಿಯ ರಂಪಾಟಕ್ಕೆ ಬೇಸತ್ತ ಪೊಲೀಸರು ಕೂಡಲೇ ವಶಕ್ಕೆ ಪಡೆದಿದ್ದಾರೆ.

ತುರುವೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

spot_img
spot_img
spot_img
- Advertisment -spot_img