Thursday, April 3, 2025
No menu items!
HomeViral VideoVideo : ಕಾಡು ಪ್ರಾಣಿಗಳು ಮೊದಲ ಬಾರಿ ಕನ್ನಡಿ ನೋಡಿದಾಗ ಹೇಗೆ ವರ್ತಿಸುತ್ತವೆ ಗೊತ್ತಾ.? 
spot_img
spot_img
spot_img
spot_img

Video : ಕಾಡು ಪ್ರಾಣಿಗಳು ಮೊದಲ ಬಾರಿ ಕನ್ನಡಿ ನೋಡಿದಾಗ ಹೇಗೆ ವರ್ತಿಸುತ್ತವೆ ಗೊತ್ತಾ.? 

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಕಾಡು ಪ್ರಾಣಿಗಳು ಮೊದಲ ಬಾರಿ ಕನ್ನಡಿ ನೋಡಿದಾಗ ಹೇಗೆ ವರ್ತಿಸುತ್ತವೆ ಅಂತ ತಮಗೇನಾದ್ರು ಗೊತ್ತಾ.? ಗೊತ್ತಿಲ್ಲದಿದ್ರೆ ಈ ವಿಡಿಯೋ ನೋಡಿ. ವನ್ಯಮೃಗ ಛಾಯಾಚಿತ್ರಕಾರ ಇದರ ಕುತೂಹಲದ ಚಿತ್ರಣವನ್ನು ನಮ್ಮ ಮುಂದೆ ತಂದಿದ್ದು, ಸದ್ಯ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕನ್ನಡಿಯಲ್ಲಿ ಕಾಡು ಪ್ರಾಣಿಗಳು ಮೊದಲ ಬಾರಿ ತಮ್ಮ ಮುಖ ನೋಡಿದಾಗ ಹೇಗೆಲ್ಲಾ ವರ್ತಿಸಬಹುದು ಎನ್ನುವ ಕುತೂಹಲ ಹಲವರಲ್ಲಿ ಇದ್ಧೆ ಇರುತ್ತದೆ. ಫ್ರೆಂಚ್ ಛಾಯಾಗ್ರಾಹಕ ಕ್ಸೇವಿಯರ್ ಹ್ಯೂಬರ್ಟ್ ಬ್ರಿಯೆರ್ ಅವರು ಹಲವು ವನ್ಯಮೃಗಗಳ ಎದುರು ಕನ್ನಡಿ ಇಟ್ಟು, ಅವು ಹೇಗೆ ವರ್ತಿಸುತ್ತವೆ ಎನ್ನುವುದನ್ನು ತೋರಿಸಿದ್ದಾರೆ.

ಇದನ್ನು ಓದಿ : Photo : “ನನ್ನನ್ನು ಜಸ್ಟ್‌ ಪಾಸ್‌ ಮಾಡು” ಎಂದು ದೈವ ದೇವರಿಗೆ ಮನವಿ ಮಾಡಿದ ವಿದ್ಯಾರ್ಥಿ.!

ಸಿಂಹ, ಚಿರತೆ, ಆನೆ, ಚಿಂಪಾಂಜಿ, ಮುಳ್ಳುಹಂದಿ, ಕರಡಿ ಇತ್ಯಾದಿ ವನ್ಯಮೃಗಗಳ ಬಗ್ಗೆ ಈ ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. ಆಫ್ರಿಕಾದ ಗ್ಯಾಬೊನ್‌ನಲ್ಲಿರುವ ಕಾಡಿನಾದ್ಯಂತ ಈ ಕನ್ನಡಿ ಇಟ್ಟು ಪ್ರಯೋಗ ಮಾಡಲಾಗಿದೆ. ಸಹಜ ಎನ್ನುವಂತೆ ಎಲ್ಲಾ ಪ್ರಾಣಿಗಳೂ ಅಲ್ಲಿ ಬೇರೆಯದ್ದೇ ಪ್ರಾಣಿ ಇವೆ ಎಂದು ರಿಯಾಕ್ಟ್​ ಮಾಡಿರುವುದನ್ನು ನೋಡಬಹುದು.

ಆದರೆ ಒಂದೊಂದು ಪ್ರಾಣಿಯ ಪ್ರತಿಕ್ರಿಯೆಗಳು ವಿಭಿನ್ನ ರೀತಿಯಲ್ಲಿ ಇವೆ. ಚಿಂಪಾಂಜಿಯ ರಿಯಾಕ್ಷನ್​ ನೋಡಿದರೆ ನಕ್ಕು ನಗಿಸುವಂತಿದೆ. ತನ್ನನ್ನು ತಾನು ನೋಡಿಕೊಳ್ಳುವ ಚಿಂಪಾಜಿ ನೆಗೆಯುತ್ತಾ ಹೋಗುವುದನ್ನು ನೋಡಬಹುದು. ಇನ್ನು ಮುಳ್ಳುಹಂದಿಯಂತೂ ಎದ್ದೆನೋ, ಬಿದ್ದೆನೋ ಎಂದು ಕಾಲುಕಿತ್ತಿದೆ. ಚಿರತೆ ಮತ್ತು ಸಿಂಹಗಳು ಭಾರಿ ಆಕ್ರೋಶ ವ್ಯಕ್ತಪಡಿಸಿ, ಅಲ್ಲಿರುವ ಪ್ರತಿಬಿಂಬವನ್ನು ಸೆಣೆಸಾಡಲು ಕರೆಯುವಂತಿದೆ.

ಇದನ್ನು ಓದಿ : AAI : ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಆರಂಭದಲ್ಲಿ ಸಹಜವಾಗಿ ಎಲ್ಲ ಪ್ರಾಣಿಗಳೂ ಸಿಟ್ಟಿಗೆದ್ದಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ ನಿಧಾನವಾಗಿ ಬಹುತೇಕ ಪ್ರಾಣಿಗಳಿಗೆ ಕನ್ನಡಿಯಲ್ಲಿರುವ ಪ್ರಾಣಿಗಳಿಂದ ತಮ್ಮ ಜೀವಕ್ಕೆ ಅಪಾಯವಿಲ್ಲ ಎನ್ನುವುದು ಅರಿವಾಗಿದೆ ಎಂದಿದ್ದಾರೆ.

ಆದರೆ, ಎಲ್ಲಕ್ಕಿಂತಲೂ ಕುತೂಹಲ ಎನ್ನಿಸಿದ್ದು ಚಿರತೆಯದ್ದು ಎಂದಿದ್ದಾರೆ. ಚಿರತೆಗೆ ಕನ್ನಡಿಯಲ್ಲಿ ಇರುವುದು ತನ್ನ ಸಂಗಾತಿಯಂತೆ ಭಾಸವಾಗಿದೆ. ಆದ್ದರಿಂದ ಸದಾ ಅದು ಕನ್ನಡಿಯ ಸಮೀಪ ಹೋಗಿ ಮಲಗುತ್ತಿತ್ತು. ಆ ಸಂಗಾತಿಯನ್ನು ಅದು ಪ್ರೀತಿಸುತ್ತಿತ್ತು. ನಿದ್ದೆ ಮಾಡುತ್ತಿದ್ದರೂ ಆ ಸಂಗಾತಿ ಎಲ್ಲಿ ಓಡಿ ಹೋಗಿಬಿಡುವುದೋ ಎಂದು ಆಗಾಗ್ಗೆ ಕಣ್ಣುಬಿಟ್ಟು ನೋಡುತ್ತಿತ್ತು ಎಂದಿದ್ದಾರೆ. ಆದರೆ ಸಿಲ್ವರ್‌ಬ್ಯಾಕ್ ಗೊರಿಲ್ಲಾಗಳಿಗೆ ಮಾತ್ರ ಕೊನೆಯವರೆಗೂ ಅಲ್ಲಿ ಯಾರೋ ಪ್ರತಿಸ್ಪರ್ಧಿ ಇದ್ದಂತೆ ಕಂಡು ಸಿಡಿಮಿಡಿಗೊಳ್ಳುತ್ತಲೇ ಇತ್ತು ಎಂದಿದ್ದಾರೆ.

ಇದನ್ನು ಓದಿ : ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ Yoga ಶಿಕ್ಷಕನನ್ನು ಪತಿ ಮಾಡಿದ್ದೇನು ಗೊತ್ತೇ.?

ಇನ್ನು ಕೆಲವು ಪ್ರಾಣಿಗಳು ಆ ಕನ್ನಡಿಯೊಳಗಿನ ಪ್ರಾಣಿಗಳ ಜೊತೆ ಆಟವಾಡಲು ಶುರು ಮಾಡಿದವು. ನಿತ್ಯವೂ ಅವುಗಳಿಗೆ ಅದೇ ಕೆಲಸವಾಯಿತು. ಕೆಲವು ದಿನಗಳ ಬಳಿಕ ಆ ಕನ್ನಡಿಯನ್ನು ತೆಗೆದಾಗ ಈ ಪ್ರಾಣಿಗಳೆಲ್ಲವೂ ಚಡಪಡಿಸಲು ಶುರು ಮಾಡಿದವು. ಏನನ್ನೋ ಕಳೆದುಕೊಂಡಂತೆ ಮಾಡಿದವು. ನಂತರ ಕನ್ನಡಿಯನ್ನು ಮತ್ತೆ ಇಟ್ಟಾಗ ಅವುಗಳ ಸಂತೋಷಕ್ಕೆ ಪಾರವೇ ಇರಲಿಲ್ಲ ಎಂದಿದ್ದಾರೆ.

Courtesy : Suvarna News.

ಹಿಂದಿನ ಸುದ್ದಿ : ಹೆದ್ದಾರಿಯಲ್ಲಿ ಅಪಘಾತಗೊಂಡವರಿಗೆ ಸಹಾಯ ಮಾಡಿದರೆ ರೂ. 25,000 ಬಹುಮಾನ : ಸಚಿವ ಗಡ್ಕರಿ.!

ಜನಸ್ಪಂದನ ನ್ಯೂಸ್, ಬೆಂಗಳೂರು : ಬಹಳಷ್ಟು ಸಲ ಅಪಘಾತವಾಗಿ ಗಂಭೀರ ಪರಿಸ್ಥಿತಿಯಲ್ಲಿದ್ದರೂ (serious) ನಿಂತು ವಿಡಿಯೋ ಮಾಡುವವರೇ ಹೆಚ್ಚು. ವ್ಯಕ್ತಿಯ ಜೀವ ಹೋಗುತ್ತಿದ್ದರೂ ಯಾರೂ ನೆರವಿಗೆ ಬಾರದೇ ಪ್ರಾಣ ಕಳೆದಯಕೊಳ್ಳುತ್ತಾರೆ.

ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಜನರಲ್ಲಿ ಸಹಾಯ ಮಾಡುವ ಮನೋಭಾವನೆ ಹೆಚ್ಚಿಸಲು ಕ್ರಮ ಕೈಗೊಂಡಿದೆ.

ಇದನ್ನು ಓದಿ : ಅತ್ತಿಗೆಯನ್ನು ಮಂಚಕ್ಕೆ ಕರೆದ ; ಒಪ್ಪದಿದ್ದಕ್ಕೆ ಏನು ಮಾಡಿದ ಗೊತ್ತಾ ನೀಚ Maiduna?

ಅಪಘಾತದ ಗಾಯಾಳುವಿನ ನೆರವಿಗೆ ಮುಂದಾಗುವ ಮೂರನೇ ವ್ಯಕ್ತಿಗೆ 25 ಸಾವಿರ ರೂ. ಬಹುಮಾನ ನೀಡಲಾಗುವುದು (25 thousand rupees to the third party who comes to the aid of the injured. Prizes will be awarded) ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಅಪಘಾತವಾದ ವ್ಯಕ್ತಿಗೆ ಸಹಾಯ ಮಾಡಲು ಮುಂದೆ ಬರುವ ಯಾವುದೇ ಮೂರನೇ ವ್ಯಕ್ತಿಗೂ 25 ಸಾವಿರ ರೂ. ಬಹುಮಾನ ನೀಡುತ್ತೇವೆ ಎಂದು ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : ರಿಕವರಿ Gold ದುರ್ಬಳಕೆ ಹಾಗೂ ಚಿನ್ನದ ವ್ಯಾಪಾರಿಗೆ ವಂಚನೆ ಆರೋಪ ; PSI Suspend.!

ಇನ್ನೂ ವ್ಯಕ್ತಿಯು ಅಪಘಾತದಿಂದ ಅಥವಾ ಅಪಘಾತದ ನಂತರ ಯಾವುದೇ ಆಸ್ಪತ್ರೆಗೆ ದಾಖಲಾದರೆ, ಅವರಿಗೆ ಒಂದೂವರೆ ಲಕ್ಷ ರೂ. ವರೆಗೂ ಧನಸಹಾಯ (Funding) ಮಾಡಲಾಗುವುದು ಅಥವಾ ಏಳು ವರ್ಷಗಳವರೆಗೆ ವೈದ್ಯರಿಂದ ಆಗುವ ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

ಪ್ರತೀ ವರ್ಷ ನಮ್ಮ ದೇಶದಲ್ಲಿ 4,80,000 ಅಪಘಾತಗಳು ಸಂಭವಿಸುತ್ತವೆ. 18 ವರ್ಷಕ್ಕಿಂತ ಕೆಳಗಿನ ವಯಸ್ಸಿನ 10,000 ಮಂದಿ ಮೃತಪಟ್ಟರೆ, 18ರಿಂದ 45 ವರ್ಷ ವಯಸ್ಸಿನ 1,88,000 ಜನ ಸಾವಿಗೀಡಾಗುತ್ತಿದ್ದಾರೆ. ಈ ರಸ್ತೆ ಅಪಘಾತಗಳಿಂದ ಜಿಡಿಪಿಗೆ ಶೇ. 3ರಷ್ಟು ನಷ್ಟವಾಗುತ್ತಿದೆ ಎಂದು ನಿತಿನ್ ಗಡ್ಕರಿ ಖೇದ ವ್ಯಕ್ತಪಡಿಸಿದ್ದಾರೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!