Saturday, December 21, 2024
HomeHealth and FitnessWarning : ಮೈ ಕೊರೆಯುವ ಚಳಿಯಲ್ಲಿ ಈ ಕೆಲಸಗಳನ್ನು ಮಾಡಲೇಬೇಡಿ.!
spot_img

Warning : ಮೈ ಕೊರೆಯುವ ಚಳಿಯಲ್ಲಿ ಈ ಕೆಲಸಗಳನ್ನು ಮಾಡಲೇಬೇಡಿ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಆರೋಗ್ಯ : ಚಳಿಗಾಲ (winter) ಆರಂಭವಾಗಿದ್ದು, ಜೊತೆಜೊತೆಗೆ ಸಾಕಷ್ಟು ಜನರಿಗೆ ರೋಗಗಳು ಸಹ ವಕ್ಕರಿಸಿಕೊಳ್ಳುತ್ತಿವೆ. ಹೀಗಾಗಿ ನೀವು ಈ ಕಾಲದಲ್ಲಿ ಕೆಲವೊಂದಿಷ್ಟು ನಿಯಮಗಳನ್ನು ಪಾಲಿಸಿದರೆ ಒಳ್ಳೆಯದು.

* ಈ ಸಮಯದಲ್ಲಿ ನೀವು ಸೂಪ್‌ಗಳು ಮತ್ತು ಹುರಿದ ತರಕಾರಿಗಳಂತಹ ಆರಾಮದಾಯಕ ಆಹಾರಗಳನ್ನು (Comfort food) ತಿನ್ನಬಹುದು. ಅಲ್ಲದೇ ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಲು (To increase energy levels) ಸೀಡ್ಸ್‌ ಮತ್ತು ಒಣಗಿದ ಹಣ್ಣುಗಳನ್ನು ತಿನ್ನಿರಿ. ಬಿಸಿ ಚಾಕೊಲೇಟ್, ಚಹಾ ಅಥವಾ ಕಾಫಿಯನ್ನು ಕುಡಿಯಿರಿ. ಆದರೆ ಎಲ್ಲವನ್ನೂ ಅತಿಯಾಗಿ ಸೇವಿಸಬೇಡಿ (Do not consume too much).

* ಟೋಪಿ, ಕೈಗವಸ ಮತ್ತು ಸ್ಕಾರ್ಫ್ ಸೇರಿದಂತೆ ಉಸಿರಾಡುವ ಬಟ್ಟೆಯ ಲೇಯರ್‌ಗಳನ್ನು ಧರಿಸಿರಿ. ಈ ಬಟ್ಟೆಗಳು ಬೆಚ್ಚಗಿನ ಗಾಳಿಯನ್ನು ಹಿಡಿದಿಟ್ಟುಕೊಳ್ಳಲು (To trap warm air) ಸಹಾಯ ಮಾಡಿ, ನಿಮ್ಮನ್ನು ನಿರೋಧಿಸುತ್ತದೆ.

ಇದನ್ನು ಓದಿ : ವೃದ್ದರನ್ನು ಬಹಳ ಹೊತ್ತು ಕಾಯಿಸಿದ ಅಧಿಕಾರಿಗಳಿಗೆ ನಿಂತು ಕೆಲಸ ಮಾಡುವ ಶಿಕ್ಷೆ ನೀಡಿದ IAS ಆಫೀಸರ್.!

* ಚಳಿ ಇದೆಯಂತ ನೀರು ಕುಡಿಯುವುದನ್ನು ಕಡಿಮೆ ಮಾಡಬೇಡಿ. ನಿರ್ಜಲೀಕರಣವನ್ನು (Dehydration) ತಪ್ಪಿಸಲು ಸಾಕಷ್ಟು ನೀರು ಕುಡಿಯಿರಿ. ನಿರ್ಜಲೀಕರಣವು ನಿಮ್ಮ ಲಘೂಷ್ಣತೆ ಮತ್ತು ಇತರ ಶೀತ -ಸಂಬಂಧಿತ ಕಾಯಿಲೆಗಳ (Cold- related illness) ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಸಾಕಷ್ಟು ನೀರು ಕುಡಿಯಿರಿ.

* ಎಂದಿನಂತೆ ವಾಕಿಂಗ್‌ ಹೋಗುವುದನ್ನು ಸ್ವಲ್ಪ ದಿನದ ಮಟ್ಟಿಗೆ ತಪ್ಪಿಸಿ. ಯಾಕೆಂದರೆ ಈ ಸಮಯದಲ್ಲಿ ಹೃದಯಾಘಾತಗಳು (heart attack) ಹೆಚ್ಚಾಗಿ ಸಂಭವಿಸುತ್ತವೆ. ಬದಲಾಗಿ ಬೆಚ್ಚಗಿನ ವಾತಾವರಣ ಉಂಟಾದಾಗ ವಾಕಿಂಗ್‌ ಹೋಗಿ. ಹಾಗೆಯೇ ಸಂಜೆ ಆರು ಗಂಟೆ ಬಳಿಕ (After six o’clock in the evening) ಸಹ ನೀವು ವಾಕಿಂಗ್‌ಗೆ ಹೋಗುವುದು ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ.

* ಹೆಚ್ಚಿನ ಚಳಿ ಸಂದರ್ಭದಲ್ಲಿ ಹೃದಯದ ಅಪಧಮನಿಗಳು ಪೆಡಸಾಗುತ್ತವೆ (Arteries become inflamed). ಆಗ ರಕ್ತದೊತ್ತಡ ಮತ್ತು ಪ್ರೊಟೀನ್ ಪ್ರಮಾಣ ಕಡಿಮೆ ಆಗಲಿದೆ. ಈ ಮೂಲಕ ರಕ್ತ ಹೆಪ್ಪುಗಟ್ಟುತ್ತದೆ.

ಇದನ್ನು ಓದಿ : ವೇಗವಾಗಿ ಬಂದು ಡಿಕ್ಕಿಯಾದ ಪೊಲೀಸ್ ಜೀಪ್; ಮುಂದೆನಾಯ್ತು? ಆಘಾತಕಾರಿ Video ನೋಡಿ.!

* ಅಸ್ತಮಾ ರೋಗಿಗಳು (Asthma patients) ಈ ಸಮಯದಲ್ಲಿ ಹೆಚ್ಚಿನ ಸಮಸ್ಯೆಗೆ ಒಳಗಾಗುತ್ತಾರೆ. ಪರಿಣಾಮ ಆರು ವರ್ಷದೊಳಗಿನ ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟವರು ಈ ಮೈ ಕೊರೆಯುವ ಚಳಿಗಾಲದ ಸಮಯದಲ್ಲಿ ಭಾರೀ ಎಚ್ಚರಿಕೆಯಿಂದ ಇರಬೇಕಿದೆ.

* ಜನರು ಹೊರಗಿನ ತಿನಿಸಿಗೆ ಮಾರು ಹೋಗುತ್ತಾರೆ. ಆದರೆ ನೀವು ಈ ಕೆಲಸ ಮಾಡಬೇಡಿ. ಅದರಲ್ಲೂ ಮಾಂಸಾಹಾರವನ್ನು ಹೆಚ್ಚಾಗಿ ತಿನ್ನಬೇಡಿ (Don’t eat too much meat). ಇದರ ಬದಲಾಗಿ ಹಣ್ಣು, ತರಕಾರಿ, ಕಾಳಿನ ಪದಾರ್ಥಗಳನ್ನು ತಿನ್ನಿರಿ. ಇದರೊಂದಿಗೆ ಬೆಚ್ಚಗಿನ ಅಥವಾ ಬಿಸಿ ನೀರು ಕುಡಿಯುವುದನ್ನು ಮರೆಯಬೇಡಿ.

* ಗಾಳಿಯಿಂದ ರಕ್ಷಿಸಲು ಸನ್‌ಸ್ಕ್ರೀನ್ ಮತ್ತು ಶುಷ್ಕ ಚರ್ಮವನ್ನು ತಡೆಗಟ್ಟಲು ಮಾಯಿಶ್ಚರೈಸರ್ ಅನ್ನು ಹಚ್ಚಿಕೊಳ್ಳಿ. ಜುಮ್ಮೆನಿಸುವಿಕೆ, ಮರಗಟ್ಟುವಿಕೆ (Tingling, numbness) ಅಥವಾ ಬಣ್ಣಬಣ್ಣದಂತಹ ಫ್ರಾಸ್‌ಬೈಟ್‌ನ ಚಿಹ್ನೆ ಏನಾದರೂ ಕಂಡರೆ ನಿಮ್ಮ ದೇಹದ ಕಡೆ ಗಮನಹರಿಸಿ. ಜೊತೆಗೆ ಸಾಕಷ್ಟು ನಿದ್ದೆ ಮಾಡಿ.

ಹಿಂದಿನ ಸುದ್ದಿ : ವೃದ್ಧರನ್ನು ಕಾಯುವಂತೆ ಮಾಡಿದ ಅಧಿಕಾರಿಗಳಿಗೆ ನಿಂತುಕೊಂಡು ಕೆಲಸ ಮಾಡುವ ಶಿಕ್ಷೆ; ಹೃದಯ ಗೆದ್ದ IAS ಅಧಿಕಾರಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದಿನ ಯುಗದಲ್ಲಿ ಸರ್ಕಾರಿ ಕಚೇರಿಗಳಲ್ಲಿ (government office) ಸರ್ವರ್​ ಡೌನ್​ ಅಂತೇಳಿ ಕಾಯಿಸುವುದನ್ನು ನೋಡಬಹುದು. ಇದೇ ರೀತಿ ವೃದ್ಧರನ್ನು (the elderly) ಕಾಯಿಸಿದ ತಪ್ಪಿಗೆ ಸಿಬ್ಬಂದಿಗೆ ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಶಿಕ್ಷೆಯನ್ನು ಕೊಟ್ಟ ಅಪರೂಪದ ಘಟನೆ ನಡೆದಿದೆ.

ಇದನ್ನು ಓದಿ : ಉದ್ಯೋಗ ನೇಮಕಾತಿ ಪರೀಕ್ಷೆಯಲ್ಲಿ ಚಮತ್ಕಾರ ; 100 ಅಂಕಗಳಿಗೆ 101.66 ಅಂಕ ಪಡೆದ ಅಭ್ಯರ್ಥಿ.!

ಕೌಂಟರ್ ಗಳಲ್ಲಿ ಬಹಳ ಹೊತ್ತಿನವರೆಗೆ ಜನರನ್ನು ಕಾಯಿಸುತ್ತಿದ್ದುದನ್ನು ಕಂಡು ಕೋಪಗೊಂಡ ವಸತಿ ಇಲಾಖೆಯ ಸಿಇಒ ಡಾ. ಲೋಕೇಶ್ ಎಂ (Housing Department CEO Dr. Lokesh M) 16 ಸಿಬ್ಬಂದಿಗಳಿಗೆ ನಿಂತು ಕೊಳ್ಳುವ ಶಿಕ್ಷೆ (punishment) ವಿಧಿಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

IAS ಅಧಿಕಾರಿ ಡಾ. ಲೋಕೇಶ್ ಎಂ ಅವರು ಕಳೆದ ವರ್ಷ ನೊಯ್ಡಾದಲ್ಲಿ (Noida) ಅಧಿಕಾರ ಸ್ವೀಕರಿಸಿದ್ದರು. ಅವರು ಆಗಾಗ ಸಿಸಿಟಿವಿ ಫುಟೇಜ್ ಗಳನ್ನು ಪರಿಶೀಲಿಸುತ್ತಿದ್ದರು.

ಈ ವೇಳೆ ಕೌಂಟರ್ ಗಳ ಬಳಿ ಜನರು ಬಹಳ ಹೊತ್ತು ಕಾಯುತ್ತಿರುವುದನ್ನು (Waiting for a long time) ಗಮನಿಸಿದ್ದರು. ಮುಖ್ಯವಾಗಿ ಹಿರಿಯ ನಾಗರಿಕರು ಕಾಯುತ್ತ ನಿಂತಿರುವುದನ್ನು ಗಮನಿಸಿದ್ದರು.

ವಯಸ್ಸಾದ ವ್ಯಕ್ತಿಯನ್ನು ಹೆಚ್ಚು ಹೊತ್ತು ಕಾಯಿಸಬೇಡಿ ಎಂದು ಕೌಂಟರ್‌ನಲ್ಲಿದ್ದ ಮಹಿಳಾ ಅಧಿಕಾರಿಗೆ ತಿಳಿಸಿದ್ದಾರೆ. ಅವರ ಕೆಲಸ ಮಾಡಲು ಸಾಧ್ಯವಾಗದೇ ಇದ್ದರೆ ಅದನ್ನು ಆ ವ್ಯಕ್ತಿಗೆ ಸ್ಪಷ್ಟವಾಗಿ ಹೇಳಿ ಎಂದು ಸೂಚನೆ ನೀಡಿದರು.

ಇದನ್ನು ಓದಿ : ಶಬರಿಮಲೆ ದೇವಸ್ಥಾನದಲ್ಲಿಯೇ ಕರ್ನಾಟಕದ ಭಕ್ತ ಆತ್ಮಹತ್ಯೆ ; ಶಾಕಿಂಗ್ Video ವೈರಲ್.!

ಬಳಿಕವೂ ಆ ವೃದ್ಧ ಅದೇ ಕೌಂಟರ್ ಎದುರು ನಿಂತಿದ್ದನ್ನು ಗಮನಿಸಿದ ಅಧಿಕಾರಿ ಕೋಪಗೊಂಡು ಸ್ವತಃ ಕೌಂಟರ್ ಬಳಿಗೆ ಬಂದು ಸಿಬ್ಬಂದಿಗಳಿಗೆ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡರು.

ಅಷ್ಟೇ ಅಲ್ಲದೇ ಸಿಬ್ಬಂದಿಗಳಿಗೆ 20 ನಿಮಿಷಗಳ ಕಾಲ ನಿಂತು ಕೆಲಸ ಮಾಡುವ ಶಿಕ್ಷೆ ವಿಧಿಸಿದರು. ನಿಂತುಕೊಂಡೇ ಕೆಲಸ ಮಾಡಿ‌ ಎಂದು ಶಿಕ್ಷೆ ನೀಡಿದ್ದು, ವಿಡಿಯೋ ವೈರಲ್ ಆಗಿದೆ. ಸಿಇಒ ಅವರ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments