ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ ಬ್ಯಾಟರಾಯನಪುರ ಠಾಣೆಯ (Byatarayanpur Police Station) ಕಾನ್ಸ್‌ಟೇಬಲ್ ಓರ್ವ, ಪಾಸ್ಪೋರ್ಟ್ ವೆರಿಫಿಕೇಷನ್ (Passport Verification) ನೆಪದಲ್ಲಿ ಮನೆಗೆ ಬಂದು ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ (He behaved rudely and harassed) ಆರೋಪ ಕೇಳಿ ಬಂದಿದೆ.
ಬ್ಯಾಟರಾಯನಪುರ ಠಾಣೆಯ ಕಾನ್ಸ್‌ಟೇಬಲ್ ಕಿರಣ್ ಎಂಬುವವರ ವಿರುದ್ಧ ಇಂತದ್ದೊಂದು ಆರೋಪ ಕೇಳಿಬಂದಿದ್ದು, ಸದ್ಯ ಅವರನ್ನು ಅಮಾನತು (suspend) ಮಾಡಲಾಗಿದೆ.
ಇದನ್ನು ಓದಿ : ಕೈದಿಗೆ ಕೃಷಿ ಮಾಡಲು 3 ತಿಂಗಳು Parole; ಹೈಕೋರ್ಟ್‌ನಿಂದ ಅಪರೂಪದ ಆದೇಶ.!
ಇತ್ತೀಚೆಗೆ ಬಾಪೂಜಿ ನಗರದ ಯುವತಿ, ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಪೊಲೀಸ್ ಕಾನ್ಸ್‌ಟೇಬಲ್ ಕಿರಣ್, ಪಾಸ್ಪೋರ್ಟ್ ವೆರಿಫಿಕೇಷನ್ಗೆಂದು ಯುವತಿಯ ಮನೆಗೆ ಹೋಗಿದ್ದ. ಎರಡ್ಮೂರು ಸಲ ಕಾನ್ಸ್‌ಟೇಬಲ್ ಯುವತಿಯ ಮನೆಗೆ ಹೋಗಿದ್ದ (constable went to the young woman’s house two or three times) ಎನ್ನಲಾಗಿದ್ದು, ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಪಾಸ್ಪೋರ್ಟ್ ವೆರಿಫಿಕೇಷನ್ ನೆಪದಲ್ಲಿ ಬಂದ ಪೊಲೀಸ್ ಕಾನ್ಸ್‌ಟೇಬಲ್ ಕಿರಣ್ ಯುವತಿಯ ಮನೆಗೆ ತೆರಳಿ ಅರ್ಧ ಬಾಗಿಲು ಮುಚ್ಚಿದ್ದಾನೆ (He went to the young woman’s house and half closed the door) ಎನ್ನಲಾಗಿದೆ. ಯುವತಿ ಬಳಿ, ನಿಮ್ಮ ಅಣ್ಣ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ, ನಿನ್ನ ಪಾಸ್ಪೋರ್ಟ್ ರದ್ದು ಮಾಡಿಸುತ್ತೇನೆ (I will cancel the passport), ಹೀಗಾಗಿ ನೀನು ನನ್ನೊಂದಿಗೆ ಸಹಕರಿಸು, ಬಾಗಿಲು ಹಾಕು (You cooperate with me, close the door) ಎಂದು ತಿಳಿಸಿದ್ದಾನೆ.
ಇದನ್ನು ಓದಿ : Railway ಇಲಾಖೆಯಲ್ಲಿ ಖಾಲಿ ಇರುವ 1,785 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ.!
ಈ ಮಾತಿಗೆ ಆಕೆ ಒಪ್ಪದ ಕಾರಣ ತಾನೇ ಹೋಗಿ ಬಾಗಿಲು ಮುಚ್ಚಿದ್ದಾನೆ. ಅಲ್ಲದೆ, ಯಾರಿಗೂ ಹೇಳಬೇಡ, ಒಂದೇ ಒಂದ್ ಸಲ ತಬ್ಬಿಕೊಳ್ಳುತ್ತೇನೆ (Hugs just once) ಎಂದಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಯುವತಿಯು ಪಶ್ಚಿಮ ವಿಭಾಗ ಡಿಸಿಪಿಗೆ (West Division DCP) ದೂರು ನೀಡಿದ್ದರು. ಡಿಸಿಪಿ ಗಿರೀಶ್ ತನಿಖೆ ನಡೆಸಿ ಪೇದೆ ಕಿರಣ್ನನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.
ಹಿಂದಿನ ಸುದ್ದಿ : ಕೈದಿಗೆ ಕೃಷಿ ಮಾಡಲು ಮೂರು ತಿಂಗಳು Parole; ಹೈಕೋರ್ಟ್‌ನಿಂದ ಅಪರೂಪದ ಆದೇಶ.!
ಜನಸ್ಪಂದನ ನ್ಯೂಸ್, ಬೆಂಗಳೂರು : ಕರ್ನಾಟಕ ಹೈಕೋರ್ಟ್ (High Court of Karnataka) ಅಪರೂಪದ ಆದೇಶವೊಂದನ್ನು ನೀಡಿದೆ. ಕೃಷಿ ಚಟುವಟಿಕೆ ನೋಡಿಕೊಳ್ಳಲು 11 ವರ್ಷಗಳಿಂದ ಜೈಲಿನಲ್ಲಿರುವ ಸಜಾ ಕೈದಿಯೊಬ್ಬನಿಗೆ ಪೆರೋಲ್ ಮಂಜೂರು (Grant of parole) ಮಾಡಿದೆ.
ಇದನ್ನು ಓದಿ : ಕರ್ತವ್ಯನಿರತ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ ಆರೋಪ; ಕಾಂಗ್ರೆಸ್ ಮುಖಂಡ Arrest.!
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ (Kanakpur Taluk of Ramnagar District) ಸಿದ್ದಿದೇವರಹಳ್ಳಿ ನಿವಾಸಿ ಚಂದ್ರ (36) ಎಂಬಾತ ಕೊಲೆ ಪ್ರಕರಣದಲ್ಲಿ (murder case) ಜೀವಾವಧಿ ಶಿಕ್ಷೆಗೆ (Life imprisonment) ಒಳಗಾಗಿದ್ದಾನೆ. ಹೀಗಾಗಿ ತನ್ನ ತಂದೆಯ ಜಮೀನಿನಲ್ಲಿ ಕೃಷಿ ಚಟುವಟಿಕೆ ನೋಡಿಕೊಳ್ಳಲು (take care of agricultural activity) ಪೆರೋಲ್ ನೀಡುವಂತೆ ಕೋರಿ ಹೈಕೋರ್ಟ್‌ಗೆ ಮೊರೆ ಹೋಗಿದ್ದ.
ಸದ್ಯ ಚಂದ್ರ ಅವರಿಗೆ 90 ದಿನಗಳ ಪೆರೋಲ್ (90 days parole) ನೀಡಿ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ಅವರ ಪೀಠ ಆದೇಶಿಸಿದೆ (ordered).
ಇದನ್ನು ಓದಿ : Health : ದೇಹದ ಮೇಲೆ ಕಂಡು ಬರುವ ಮುದ್ದೆಯಂತಹ ಈ ಗುಳ್ಳೆಗಳನ್ನು ಹೋಗಲಾಡಿಸುವುದು ಹೇಗೆ.?
ಕಳೆದ 11 ವರ್ಷಗಳಿಂದ ಚಂದ್ರ ಜೈಲಿನಲ್ಲಿದ್ದು, ಪೆರೋಲ್ ಮೇಲೆ ಯಾವತ್ತೂ ಬಿಡುಗಡೆಯಾಗಿಲ್ಲ (Never released). ಪ್ರಕರಣದ ಸತ್ಯಾಂಶ ಪರಿಶೀಲಿಸಿದಾಗ ಪೆರೋಲ್ ಮೇಲೆ ಬಿಡುಗಡೆಯಾಗುವ ಅಗತ್ಯವನ್ನು ಚಂದ್ರ ಮೇಲ್ನೋಟಕ್ಕೆ ಸಾಬೀತು ಪಡಿಸಿದ್ದಾರೆ (Apparently proved). ಆದ್ದರಿಂದ ಆತನನ್ನು 90 ದಿನ ಪೆರೋಲ್ ಮೇಲೆ ಬಿಡುಗಡೆ ಮಾಡಬೇಕು ಎಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ (Parappana Agrahara Center jail in Bangalore) ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ (Chief Superintendent of Jails) ಹೈಕೋರ್ಟ್ ನಿರ್ದೇಶಿಸಿದೆ.
2023ರ ಸೆ. 23ರಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು, ಚಂದ್ರಗೆ ಪೆರೋಲ್ ನೀಡಲು ನಿರಾಕರಿಸಿ (deny) ನೀಡಿದ್ದ ಹಿಂಬರಹವನ್ನು ಈ ವೇಳೆ ಹೈಕೋರ್ಟ್ ರದ್ದುಪಡಿಸಿದೆ (canceled).
ನ್ಯಾಯಾಲಯವು, ಚಂದ್ರ ಪೆರೋಲ್ ಅವಧಿಯಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ (illegal activity) ಭಾಗಿಯಾಗಬಾರದು, ಪ್ರತಿ ವಾರದ ಮೊದಲ ದಿನದಂದು (First day of every week) ಸ್ಥಳೀಯ ಪೊಲೀಸ್ ಠಾಣೆಗೆ ಆತ ಹಾಜರಾಗಬೇಕು.
ಇದನ್ನು ಓದಿ : ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಕೆಲಸಕ್ಕೆ ಅನರ್ಹ : Supreme Court ಮಹತ್ವದ ತೀರ್ಪು
ಆತ ಪೆರೋಲ್ ಮುಗಿಸಿ, ಜೈಲಿಗೆ ವಾಪಸ್ಸಾಗುವುದನ್ನು ಖಚಿತಪಡಿಸಿಕೊಳ್ಳಲು (confirm) ಮುಖ್ಯ ಅಧೀಕ್ಷಕರು ಅಗತ್ಯ ಷರತ್ತು ವಿಧಿಸಬಹುದು. ಒಂದು ವೇಳೆ ಷರತ್ತು ಉಲ್ಲಂಘಿಸಿದರೆ (Violate the condition), ಪೆರೋಲ್ ಮಂಜೂರಾತಿ ಆದೇಶ ತನ್ನಿಂದ ತಾನೇ ರದ್ದಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ