Thursday, April 25, 2024
spot_img
spot_img
spot_img
spot_img
spot_img
spot_img

Lokayukta : ವಾಣಿಜ್ಯ ತೆರಿಗೆ ಅಧಿಕಾರಿ ಲೋಕಾಯುಕ್ತ ಬಲೆಗೆ.!

spot_img

ಜನಸ್ಪಂದನ ನ್ಯೂಸ್, ತುಮಕೂರು : ವಾಣಿಜ್ಯ ತೆರಿಗೆ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ (Lokayukta) ಬಲೆಗೆ ಬಿದ್ದ ಘಟನೆ ನಡೆದಿದೆ.

ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿ (commercial tax officer) ಮಂಜುನಾಥ್ ವಿ.ಕೆ ಬಲೆಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : Public Exam : 5, 8 ಮತ್ತು 9ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ಸುಪ್ರೀಂ ತಡೆ.!

ಪೆಪ್ಲಿ ವಿತರಣೆ ಏಜೆನ್ಸಿಯಾಗಿರುವ ಜಿ. ಮಂಜುನಾಥರೆಡ್ಡಿ ಎಂಬುವವರ ಎಪಿಎಂಸಿ ಯಾರ್ಡ್‌ನಲ್ಲಿ ದಾಸ್ತಾನು ಮಳಿಗೆ (Inventory store) ಇದೆ. ಡಿ. 26ರಂದು ಸ್ಥಳಕ್ಕೆ ಭೇಟಿ ನೀಡಿದ್ದ ವಿ.ಕೆ.ಮಂಜುನಾಥ ತಪಾಸಣೆ ನಡೆಸಿ, ಕೆಲವು ದಾಖಲೆಗಳನ್ನು ಪರಿಶೀಲಿಸಿದ ನಂತರ ಸ್ಥಳದಲ್ಲೇ ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್‌ನಲ್ಲಿ ಕೇಳಿರುವ ವಿವರಗಳಿಗೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಅಧಿಕಾರಿಗೆ ಸಲ್ಲಿಸಿದ್ದರು.

ದಾಖಲೆಗಳನ್ನು (documents) ಪರಿಶೀಲಿಸಿದ ಅಧಿಕಾರಿ ₹7 ಲಕ್ಷ ಜಿಎಸ್‌ಟಿ ಕಟ್ಟುವಂತೆ ತಿಳಿಸಿದ್ದಾರೆ. ಕೊನೆಗೆ ಮಾತುಕತೆ ನಡೆದು ಜಿಎಸ್‌ಟಿ ಮೊತ್ತವನ್ನು ಕಡಿಮೆ ಮಾಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈ ಸಂಬಂಧ ಮಂಜುನಾಥರೆಡ್ಡಿ ಲೋಕಾಯುಕ್ತರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕಚೇರಿಯಲ್ಲಿ ಲಂಚದ (bribe) ಹಣ ಪಡೆದುಕೊಳ್ಳುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು.

ಇದನ್ನು ಓದಿ : ಮದ್ವೆ ಮಾಡ್ತಾರೆ ಪಾಸ್ ಮಾಡಿ ಪ್ಲೀಸ್ ಸರ್ ; ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿನಿಯ ಮನವಿ.!

ವಿಚಾರಣೆ ನಂತರ ಆರೋಪಿ ವಿ.ಕೆ.ಮಂಜುನಾಥ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ (judicial custody) ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

spot_img
spot_img
spot_img
- Advertisment -spot_img