ಜನಸ್ಪಂದನ ನ್ಯೂಸ್, ಡೆಸ್ಕ್ : ಶಬರಿಮಲೆ (Sabarimala) ಯಾತ್ರಾರ್ಥಿಗಳು ತೆರಳುತ್ತಿದ್ದ ಬಸ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನವವಿವಾಹಿತ ದಂಪತಿ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಪಥನಂತಿಟ್ಟ ಜಿಲ್ಲೆಯ ಕೂಡಲ್‌ನಲ್ಲಿ (Kudal in Pathanamthitta district) ಭಾನುವಾರ ಮುಂಜಾನೆ ನಡೆದಿದೆ.
ಮಲ್ಲಸೇರಿ ಮೂಲದ ಮಥಾಯ್ ಈಪೆನ್, ಅನು, ಅಖಿಲ್ ಮತ್ತು ಬಿಜು ಪಿ. ಜಾರ್ಜ್ (Mathai Eepen, Anu, Akhil and Biju P George) ಬಲಿಯಾಗಿದ್ದಾರೆ. ಮುಂಜಾನೆ 3.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.
ಇದನ್ನು ಓದಿ : Health : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುತ್ತೀರಾ? ಹಾಗಿದ್ರೆ ಈ ಸುದ್ದಿ ಓದಿ.!
ಅನು ಮತ್ತು ನಿಖಿಲ್ ದಂಪತಿಗಳಾಗಿದ್ದರೆ, ಬಿಜು ಅನು ಅವರ ತಂದೆ ಮತ್ತು ಮಥಾಯ್ ಈಪೆನ್ ನಿಖಿಲ್ ಅವರ ತಂದೆ. ನವೆಂಬರ್ 30 ರಂದು ಮದುವೆಯಾದ ನಿಖಿಲ್ ಮತ್ತು ಅನು ಮಲೇಷ್ಯಾದಲ್ಲಿ ಹನಿಮೂನ್ (honeymoon in Malaysia) ಮುಗಿಸಿ ತಿರುವನಂತಪುರಂ ವಿಮಾನ ನಿಲ್ದಾಣದಿಂದ ಮನೆಗೆ ಮರಳುತ್ತಿದ್ದರು.
ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಮಹಿಳೆ ಪತ್ತನಂತಿಟ್ಟ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಚಾಲಕ (Including driver) ಸೇರಿದಂತೆ ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇದನ್ನು ಓದಿ : Belagavi : ಕೈದಿಯಿಂದ ಜೈಲರ್ ಮೇಲೆ ಮಾರಣಾಂತಿಕ ಹಲ್ಲೆ.!
ಸ್ಥಳೀಯರು ಮೊದಲು ಸ್ಥಳಕ್ಕೆ ಆಗಮಿಸಿ ಸಂತ್ರಸ್ತರಿಗೆ ಸಹಾಯ ಮಾಡಲು ಪ್ರಯತ್ನಿಸಿದರು. ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಹೈಡ್ರಾಲಿಕ್ ಕಟರ್ (hydraulic cutters) ಬಳಸಿ ಕಾರಿನೊಳಗೆ ಸಿಲುಕಿದ್ದ ನಾಲ್ವರು ಪ್ರಯಾಣಿಕರನ್ನು ಹೊರತೆಗೆದರು.
ಪುನಲೂರು-ಮುವಾಟ್ಟುಪುಳ ಹೆದ್ದಾರಿಯ (Punalur-Muvattupuzha highway) ಇತ್ತೀಚಿನ ಪುನರ್ನಿರ್ಮಾಣದ ನಂತರ ಹೆಚ್ಚುತ್ತಿರುವ ಅಪಘಾತಗಳ ಬಗ್ಗೆ ಸ್ಥಳೀಯ ನಿವಾಸಿಗಳು ಕಳವಳ ವ್ಯಕ್ತಪಡಿಸಿದ್ದಾರೆ.