ಜನಸ್ಪಂದನ ನ್ಯೂಸ್, ಡೆಸ್ಕ್ : ಸೂಟ್ ಕೇಸ್ ನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆಯ (Congress party worker) ಶವ ಪತ್ತೆಯಾದ ಘಟನೆ ಹರಿಯಾಣದ ರೋಹ್ಟಕ್ ನಲ್ಲಿ (Rohtak in Haryana) ಶನಿವಾರ (ಮಾ.01) ತಡರಾತ್ರಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಬಸ್ ನಿಲ್ದಾಣದಲ್ಲಿ 22 ವರ್ಷದ ಹಿಮಾನಿ ನರ್ವಾಲ್ ಅವರ ಶವ ಇಟ್ಟ ಸೂಟ್ ಕೇಸ್ ಪತ್ತೆಯಾಗಿದೆ (suit case in which the body was kept was found) ಎಂದು ವರದಿಯಾಗಿದೆ.
ಇದನ್ನು ಓದಿ : ಜಗತ್ತಿನ ಅತಿ ಚಿಕ್ಕ ಕಳ್ಳನ ಕಿತಾಪತಿ : ವಜ್ರವನ್ನೇ ಕದ್ದೊಯ್ದ ಇರುವೆ, Video Viral.!
ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಹಿಮಾನಿ ನರ್ವಾಲ್ ಅವರು ಭಾಗವಹಿಸಿದ್ದರು. ಅಲ್ಲದೇ ಕಾಂಗ್ರೆಸ್ ಪಕ್ಷದೊಂದಿಗೆ ಆಳವಾದ ನಂಟು ಹೊಂದಿದ್ದ (He had a deep connection with the Congress party) ಇವರನ್ನು ಯಾರೋ ಉದ್ದೇಶಪೂರ್ವಕವಾಗಿ ಕೊಲೆಗೈದು (Premeditated murder), ಮೃತದೇಹವನ್ನು ಸೂಟ್ಕೇಸ್ನಲ್ಲಿ ಇಟ್ಟಿರುವ ಅನುಮಾನ ವ್ಯಕ್ತವಾಗಿದೆ.
ಸಂಪ್ಲಾ ಬಸ್ ನಿಲ್ದಾಣದ ಸಮೀಪ ದಾರಿಹೋಕರಿಗೆ ಸೂಟ್‌ಕೇಸ್ ಕಾಣಿಸಿದ್ದು, ಅವರು ಅನುಮಾನದಿಂದ ಪೊಲೀಸರಿಗೆ ಕರೆ ಮಾಡಿ, ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ವಿಧಿವಿಜ್ಞಾನ ತಂಡದ (Forensic team) ಜೊತೆ ದೌಡಾಯಿಸಿದ ನಗರ ಪೊಲೀಸರು, ಸೂಟ್‌ಕೇಸ್ ಒಳಗೆ ಏನಿದೆ ಎಂಬುದನ್ನು ತೆರೆದು ನೋಡಿದ್ದಾರೆ.
ಇದನ್ನು ಓದಿ : ಕಿಟಕಿಯಿಂದ ರೈಲಿನೊಳಗಿದ್ದ ಪ್ರಯಾಣಿಕರ ಮೇಲೆ ನೀರೆರಚಿ ಪುಂಡಾಟ ; ರೈಲ್ವೆ ಪೊಲೀಸ್ ಮಾಡಿದ್ದೇನು ; ಈ ವಿಡಿಯೋ ನೋಡಿ.!
ಸೂಟ್ಕೇಸ್ನಲ್ಲಿ ನರ್ವಾಲ್ ರುಂಡವನ್ನು ದೇಹದಿಂದ ಬೇರ್ಪಡಿಸಿ, ಆಕೆಯ ದುಪಟ್ಟಾದಿಂದ ಸುತ್ತಿಡಲಾಗಿತ್ತು (Wrapped with a dupatta) ಎನ್ನಲಾಗಿದೆ. ಯುವತಿಯ ಕೈಯಲ್ಲಿ ಮೆಹೆಂದಿ ಇರುವುದು ಕಂಡುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನರ್ವಾಲ್ರನ್ನು ಯಾರೋ ದುಪ್ಪಟ್ಟಾದಿಂದ ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : Special news : ಈ ರಾಶಿಯವರು ತಮ್ಮ ಉಸಿರಿರುವರೆಗೂ ಸ್ನೇಹವನ್ನು ಕಾಪಾಡಿಕೊಳ್ತಾರೆ.!