ಜನಸ್ಪಂದನ ನ್ಯೂಸ್, ದೆಹಲಿ : ಗುರುವಾರ ಸಂಸತ್ ಆವರಣದಲ್ಲಿ ನಡೆದ ಪ್ರತಿಭಟನೆಯ ವೇಳೆ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಗಾಯಗೊಂಡಿದ್ದಾರೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ತಮ್ಮನ್ನು ತಳ್ಳಿದ್ದರಿಂದ ನನಗೆ ಗಾಯವಾಗಿದೆ ಎಂದು ಸಂಸದ ಪ್ರತಾಪ್ ಚಂದ್ರ ಸಾರಂಗಿ ಹೇಳಿಕೊಂಡಿದ್ದಾರೆ. ಆದಾಗ್ಯೂ, ಸಂಸತ್ತಿನ ಮಕರದ್ವಾರದಲ್ಲಿ ಬಿಜೆಪಿ ಸಂಸದರು ತಮ್ಮನ್ನು ತಡೆದರು ಎಂದು ರಾಹುಲ್ ಗಾಂಧಿ ಹೇಳಿದರು.
ಇದನ್ನು ಓದಿ : ಪಕ್ಷದ ಆಫೀಸಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಶವ ಪತ್ತೆ.!
ಬಿಜೆಪಿ ಸಂಸದರು ನನ್ನನ್ನು ತಳ್ಳುತ್ತಿದ್ದರು ಮತ್ತು ಬೆದರಿಸುತ್ತಿದ್ದರು. ಆಗ ಸಾಕಷ್ಟು ನೂಕಾಟ ನಡೆಯಿತು. ಒಳಗೆ ಹೋಗಲು ಒಂದು ದ್ವಾರವಿದ್ದು, ಅಲ್ಲಿ ಅವರು ಕುಳಿತು ನನ್ನನ್ನು ಒಳಗೆ ಬರದಂತೆ ತಡೆಯಲು ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
69 ವರ್ಷದ ಪ್ರತಾಪ್ ಸಾರಂಗಿ ಅವರಿಗೆ ರಕ್ತಸ್ರಾವವಾಗುತ್ತಿರುವಂತೆ ಆಸ್ಪತ್ರೆಗೆ ಸಾಗಿಸಲಾಯಿತು. “ನಾನು ದೀರ್ಘ ಅಂತರದಲ್ಲಿ ನಿಂತಿದ್ದೆ, ರಾಹುಲ್ ಗಾಂಧಿ ಮತ್ತೊಬ್ಬ ಸಂಸದರನ್ನು ತಳ್ಳಿದರು ಮತ್ತು ಅವರು ನನ್ನ ಮೇಲೆ ಡಿಕ್ಕಿ ಹೊಡೆದಾಗ ನಾನು ಬಿದ್ದು ಗಾಯಗೊಂಡೆ ಎಂದು ಸಾರಂಗಿ ಹೇಳಿದ್ದಾರೆ.
ಇದನ್ನು ಓದಿ : Health : ಈ ಹಣ್ಣಿನಲ್ಲಿದೆ ಮಧುಮೇಹ, ಕ್ಯಾನ್ಸರ್ ತಡೆಯುವ ಶಕ್ತಿ ; ಬೆಳಿಗ್ಗೆ ತಿಂದ್ರೆ ಆರೋಗ್ಯದಲ್ಲಿ ಚಮತ್ಕಾರ.!
ಲೋಕಸಭಾ ಸ್ಪೀಕರ್ ಭೇಟಿ:
ಪ್ರತಾಪ್ ಸಾರಂಗಿ ಅವರ ದೂರಿನ ಕುರಿತು ವಿರೋಧ ಪಕ್ಷಗಳು ಲೋಕಸಭಾ ಸ್ಪೀಕರ್ ಅವರನ್ನು ಭೇಟಿ ಮಾಡಲಿವೆ ಎಂದು ಕಾಂಗ್ರೆಸ್ ಸಂಸದ ಮಾಣಿಕಮ್ ಟ್ಯಾಗೋರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಂಸತ್ತಿನ ಭದ್ರತೆಯ ಉಸ್ತುವಾರಿ ವಹಿಸಿರುವ ಸಿಐಎಸ್‌ಎಫ್ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದ್ದು, “ಸಿಐಎಸ್ಎಫ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಡಿಯಲ್ಲಿ ಬರುತ್ತದೆ. ಶಾ ಅವರನ್ನು ಉಳಿಸಲು ಇದೆಲ್ಲವನ್ನೂ ಮಾಡಲಾಗಿದೆ” ಎಂದು ಅವರು ಆರೋಪಿಸಿದ್ದಾರೆ.
#WATCH | Lok Sabha LoP Rahul Gandhi says, "This might be on your camera. I was trying to go inside through the Parliament entrance, BJP MPs were trying to stop me, push me and threaten me. So this happened…Yes, this has happened (Mallikarjun Kharge being pushed). But we do not… https://t.co/q1RSr2BWqu pic.twitter.com/ZKDWbIY6D6
— ANI (@ANI) December 19, 2024