Saturday, July 27, 2024
spot_img
spot_img
spot_img
spot_img
spot_img
spot_img

Health : ಗ್ರೀನ್ ಟೀ ಕುಡಿಯುವುದರಿಂದ ಆಗುವ ಪ್ರಯೋಜನಗಳು.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಗ್ರೀನ್ ಟೀ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಗ್ರೀನ್ ಟೀ (Green tea) ಎಲ್ಲಾ ತೂಕನಷ್ಟ ಯೋಜನೆಗಳ ಅವಿಭಾಜ್ಯ ಅಂಗವಾಗಿದೆ. ಎಲೆಗಳನ್ನು ಬಳಸಿ ತಯಾರಿಸಿದ ಕಡಿಮೆ ಸಂಸ್ಕರಿಸಿದ ಚಹಾಗಳಲ್ಲಿ ಇದು ಒಂದಾಗಿದೆ.

ಗ್ರೀನ್‌ ಟೀ ಕುಡಿಯುವುದರಿಂದ ತೂಕ ಇಳಿಕೆ ಸೇರಿದಂತೆ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಚರ್ಮದ ಸಮಸ್ಯೆಗಳಿಗೂ ಗ್ರೀನ್‌ ಟೀ ಮದ್ದು.

ಗ್ರೀನ್ ಟೀ ಸೇವನೆಯ ಉಪಯೋಗಗಳು :

* ಕೂದಲಿನ ಕೋಶಗಳನ್ನು ಉತ್ತೇಜಿಸುವಲ್ಲಿ ಗ್ರೀನ್ ಟೀ ತುಂಬಾ ಒಳ್ಳೆಯದು

* ಕೀಲು ನೋವು, ಮೂಳೆ ನೋವು, ಕೆಮ್ಮು ಮತ್ತು ಶೀತವನ್ನು ನಿವಾರಿಸಲು ಈ ಚಹಾ ಸಹಾಯ ಮಾಡುತ್ತದೆ.

* ಒಸಡುಗಳು, ಹಲ್ಲಿನ ಸಮಸ್ಯೆಗಳು (Dental problems) ಮತ್ತು ಕೆಟ್ಟ ಉಸಿರಾಟದಂತಹ ರೋಗಲಕ್ಷಣಗಳ ವಿರುದ್ಧ ಗ್ರೀನ್ ಟೀ ಪರಿಣಾಮಕಾರಿಯಾಗಿದೆ.

* ಗ್ರೀನ್ ಟೀ ಮಹಿಳೆಯರಲ್ಲಿ ಹಾರ್ಮೋನುಗಳ ಅಸಮತೋಲನವನ್ನು (Imbalance) ಕಡಿಮೆ ಮಾಡಲು ಸಹಾಯ ಮಾಡುತ್ತದೆ.

* ಆರೋಗ್ಯ ತಜ್ಞರ ಪ್ರಕಾರ, ಪ್ರತಿದಿನ ಒಂದು ಕಪ್ ಗ್ರೀನ್ ಟೀ ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ನೀವು ಈ ಹಸಿರು ಚಹಾವನ್ನು ಪ್ರತಿದಿನ (Daily) ನಿಮ್ಮ ಆಹಾರದಲ್ಲಿ ತೆಗೆದುಕೊಳ್ಳಬಹುದು.

* ಹೃದಯ ಸಂಬಂಧಿತ ಕಾಯಿಲೆಗಳನ್ನು ತಡೆಯುತ್ತದೆ.

* ಇದು ಕ್ಯಾನ್ಸರ್ ಕೋಶಗಳು ಹೆಚ್ಚು ಬೆಳೆಯದಂತೆ ತಡೆಯುತ್ತದೆ.

* ದಿನವಿಡೀ ದೇಹದಲ್ಲಿ ತೇವಾಂಶವನ್ನು (Moisture) ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

* ಚಯಾಪಚಯ ಕಾಯಿಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

* ಇದು ಕ್ಯಾನ್ಸರ್ ಕೋಶಗಳು ಹೆಚ್ಚು ಬೆಳೆಯದಂತೆ ತಡೆಯುತ್ತದೆ.

* ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ (Bad cholesterol) ಅನ್ನು ನಿಯಂತ್ರಿಸುವಲ್ಲಿ ಗ್ರೀನ್ ಟೀ ತುಂಬಾ ಒಳ್ಳೆಯದು.

* ಗ್ರೀನ್ ಟೀ ಅಧಿಕ ರಕ್ತದೊತ್ತಡವನ್ನು ತಡೆಯುತ್ತದೆ.

* ಮೆದುಳು ಸಕ್ರಿಯವಾಗಿರುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

spot_img
spot_img
- Advertisment -spot_img