Monday, December 23, 2024
HomeBelagavi NewsBelagavi : ಅಡ್ಡಾದಿಡ್ಡಿ ಲಾರಿ ಚಲಾಯಿಸಿದ್ದಕ್ಕೆ ಚಾಲಕನ ಹತ್ಯೆ; ಐವರು ಆರೋಪಿಗಳು ಅರೆಸ್ಟ್.!
spot_img

Belagavi : ಅಡ್ಡಾದಿಡ್ಡಿ ಲಾರಿ ಚಲಾಯಿಸಿದ್ದಕ್ಕೆ ಚಾಲಕನ ಹತ್ಯೆ; ಐವರು ಆರೋಪಿಗಳು ಅರೆಸ್ಟ್.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಜಿಲ್ಲೆಯ ಹುಕ್ಕೇರಿ (Hukkeri) ತಾಲೂಕಿನ ಬೆನಕೋಳಿ ಗ್ರಾಮದ ಬೈಕ್, ಕ್ಯಾಂಟರ್ ಗೆ ಗುದ್ದಿದ ಗಾಬರಿಯಲ್ಲಿ ಅಡ್ಡಾದಿಡ್ಡಿಯಾಗಿ ಲಾರಿ ಓಡಿಸಿಕೊಂಡು ಹೊರಟಿದ್ದ ಚಾಲಕನ ಬರ್ಬರ ಹತ್ಯೆ ಮಾಡಿದ ಘಟನೆ ನಡೆದಿದೆ.

ಸಾವನ್ನಪ್ಪಿದ ಲಾರಿ ಚಾಲಕ (lorry driver) ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದ ಅಜೀಮ್ ಇಪ್ಪೇರಿ (23) ಎಂದು ತಿಳಿದು ಬಂದಿದೆ.

ಇದನ್ನು ಓದಿ : Health : ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಅಭ್ಯಾಸವಿದೆಯೇ? ಈ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ.!

ಪರಸಪ್ಪ, ಹಣಮಂತ, ಹಾಳಪ್ಪ ಹಳ್ಯಾಗೋಳ, ಈರಪ್ಪ ಹಾಗೂ ಅಮಿತ್ ಶಿಂಧೆ ಬಂಧಿತ ಆರೋಪಿಗಳಾಗಿದ್ದಾರೆ.

ಚಾಲಕ ಅಜೀಮ್, ಸಂಕೇಶ್ವರದಿಂದ ಬೆಳಗಾವಿ (Sankeshwar to Belagavi) ಕಡೆ ಲಾರಿ ಚಲಾಯಿಸಿಕೊಂಡು ಹೋಗುತ್ತಿದ್ದ. ಈ ವೇಳೆ ಪರಸಪ್ಪ ನಾಯಿಕ್ ಎಂಬಾತನಿಗೆ ಸೇರಿದ ಬೈಕ್‌ ಹಾಗೂ ಹಣಮಂತ ಇಡ್ಲಿಗೆ ಸೇರಿದ ಕ್ಯಾಂಟರ್ ಗೆ ಚಾಲಕ ಅಜೀಂ ಲಾರಿ ಗುದ್ದಿಸಿದ್ದಾನೆ (punched). ಈ ವೇಳೆ ಎರಡು ಕಡೆ ಅಪಘಾತ ಎಸಗಿದರೂ ಲಾರಿ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದಾನೆ.

ಇನ್ನೂ ಲಾರಿ ಚಾಲಕನನ್ನು ಪರಸಪ್ಪ ಮತ್ತು ಹಣಮಂತ ಹಿಂಬಾಲಿಸಿದ್ದು (follow), ಕಟಬಾಳಿ ಗ್ರಾಮದ ಬಳಿ ಲಾರಿಗೆ ಕಲ್ಲೆಸೆದು ತಡೆದು ನಿಲ್ಲಿಸಿದ್ದಾರೆ. ಬಳಿಕ ಪರಸಪ್ಪ ಹಾಗೂ ಆತನ ಐವರು ಸ್ನೇಹಿತರ ಜೊತೆಗೂಡಿ ಅಜೀಂ ಜೊತೆಗೆ ವಾಗ್ವಾದ ನಡೆಸಿದ್ದಾರೆ. ಈ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಲಾರಿ ಚಾಲಕನ ಮರ್ಮಾಂಗಕ್ಕೆ ಒದ್ದು, ಬಡಿಗೆಯಿಂದ ಐವರು ಸೇರಿ ಮಾರಣಾಂತಿಕ ಹಲ್ಲೆ (Fatal assault) ನಡೆಸಿದ್ದಾರೆ.

ತೀವ್ರ ಅಸ್ವಸ್ಥಗೊಂಡಿದ್ದ (seriously ill) ಅಜೀಂನನ್ನು ಬೆಳಗಾವಿಯ ಬೀಮ್ಸ್ ಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ (Treatment is ineffective) ಲಾರಿ ಚಾಲಕ ಅಜೀಂ ಸಾವಿಗೀಡಾಗಿದ್ದಾನೆ.

ಇದನ್ನು ಓದಿ : ಆಫೀಸರ್ ಹೆಸರಿನಲ್ಲಿ ರಿಯಲ್ ಪೊಲೀಸ್ ಅಧಿಕಾರಿಗೆ ವಂಚಿಸಲು ಯತ್ನಿಸಿದ ಫೇಕ್ ಪೊಲೀಸ್; ವಿಡಿಯೋ ಸಖತ್ Viral.!

ಲಾರಿ ಚಾಲಕನ ಹತ್ಯೆ ಮಾಡಿದ ಐವರು ಆರೋಪಿಗಳನ್ನು ಯಮಕನಮರಡಿ ಪೊಲೀಸರು (Yamakanamaradi Police Station) ಅರೆಸ್ಟ್ ಮಾಡಿದ್ದಾರೆ. ಇನ್ನೂ ಆರೋಪಿಗಳನ್ನು ಬೆಳಗಾವಿ ಹಿಂಡಲಗಾ ಜೈಲಿಗೆ (Hindalaga jail) ರವಾನೆ ಮಾಡಲಾಗಿದೆ.

 

ಹಿಂದಿನ ಸುದ್ದಿ ಓದಿ : ನಗ್ನ ಪೋಟೋ ಕಳುಹಿಸುವಂತೆ ವೈದ್ಯೆಗೆ ಕಿರುಕುಳ ನೀಡಿದ PSI.!

ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರು ನಗರದ ಬಸವನಗುಡಿ ಠಾಣೆ ಪೊಲೀಸ್​​ ಸಬ್​ ಇನ್ಸ್​​ಪೆಕ್ಟರ್ ವಿರುದ್ಧ ಖಾಸಗಿ ಆಸ್ಪತ್ರೆ ವೈದ್ಯೆಯೊಬ್ಬರು (private hospital doctor) ದೂರು ನೀಡಿದ್ದಾರೆ.

ವೈದ್ಯೆಗೆ ನಗ್ನ ಫೋಟೋ ಕಳಿಸುವಂತೆ ಪಿಎಸ್‌ಐ ಕಿರುಕುಳ (harassment) ನೀಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್​ ಬಿ. ದಯಾನಂದ್​​ ಅವರಿಗೆ ವೈದ್ಯೆ ದೂರು ನೀಡಿದ್ದಾರೆ.

ಇದನ್ನು ಓದಿ : BPNL : ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್‌ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಬಸವನಗುಡಿ ಠಾಣೆ ಪೊಲೀಸ್​​ ಸಬ್​ ಇನ್ಸ್​​ಪೆಕ್ಟರ್ ರಾಜಕುಮಾರ್​ ಜೋಡಟ್ಟಿ​​ ವಿರುದ್ಧ ಇಂತದ್ದೊಂದು ಆರೋಪ ಕೇಳಿಬಂದಿದೆ.

ಫೇಸ್​ಬುಕ್​​ ಮೂಲಕ 2020ರಲ್ಲಿ ಪಿಎಸ್​​ಐಗೆ ವೈದ್ಯೆಯ ಪರಿಚಯವಾಗಿದೆ. ಈ ವೇಳೆ ಪೊಲೀಸ್​​ ಅಕಾಡೆಮಿಯಲ್ಲಿ PSI ಟ್ರೈನಿಂಗ್​ನಲ್ಲಿದ್ದರು. ಯುವತಿ ಸಹ MBBS ವ್ಯಾಸಂಗ ಮಾಡುತ್ತಿದ್ದಳು. ಅದೇ ವರ್ಷ ಇಬ್ಬರೂ ಪರಸ್ಪರ ಸ್ನೇಹ ಬೆಳೆದು ಪ್ರೀತಿಯಲ್ಲಿ (love) ಬಿದ್ದಿದ್ದರು ಎನ್ನಲಾಗಿದೆ.

ಇದನ್ನು ಓದಿ : ಅಪ್ರಾಪ್ತ ಪತ್ನಿ ಜೊತೆ ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆಸುವುದು ಸಹ ಅತ್ಯಾಚಾರಕ್ಕೆ ಸಮ; Highcourt.!

ಪಿಎಸ್‌ಐ ಯುವತಿಗೆ ನಗ್ನ ಫೋಟೋ (Nude photo) ಕಳಿಸುವಂತೆ ಕಿರುಕುಳ ನೀಡಿದ್ದು, ಈ ಮಾತಿಗೆ ಒಪ್ಪದಿದ್ದಕ್ಕೆ ವೈದ್ಯೆಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ವೈದ್ಯೆಯ call record ತೆಗೆದು ಕಿರುಕುಳ ನೀಡುತ್ತಿರುವ ಆರೋಪಿಸಲಾಗಿದೆ. ಇದರಿಂದ ನೊಂದ ವೈದ್ಯೆ ಬೆಂಗಳೂರು ಪೊಲೀಸ್ ಕಮಿಷನರ್​ಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಲದೇ ವೈದ್ಯೆಯಿಂದ ಸಬ್​ ಇನ್ಸ್​​ಪೆಕ್ಟರ್ ರಾಜಕುಮಾರ್​ ಹಂತ ಹಂತವಾಗಿ 1.71 ಲಕ್ಷ ರೂ. ಹಣ ಪಡೆದಿದ್ದಾರೆ. ಹಣ ವಾಪಸ್ ಕೇಳಿದ್ದಕ್ಕೆ ಹಣ ಬೇಕಾದರೆ ಠಾಣೆಗೆ ಬಂದು ತೊಗೊಂಡು ಹೋಗು ಎಂದು ಬೆದರಿಕೆ ಹಾಕಿದ್ದಾರೆ. ಇದರಿಂದ ತೀವ್ರ ಮನನೊಂದ ವೈದ್ಯೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು (suicide attempt) ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನು ಓದಿ : Health : ಯಾವುದೇ ಕೆಲಸ ಮಾಡದಿದ್ದರೂ ದಣಿವಾಗುತ್ತಿದೆಯೇ? ನಿಮಗೆ ಈ ಆರೋಗ್ಯ ಸಮಸ್ಯೆ ಇರಬಹುದು.!

ಆದರೆ ಈ ಕೇಸಿನಲ್ಲಿ ವೈದ್ಯೆಯ ಹೆಸರಿನಲ್ಲಿ ಫೇಸ್‌ಬುಕ್‌ fake account ಕ್ರಿಯೇಟ್ ಮಾಡಲಾಗಿದೆ ಎನ್ನಲಾಗಿದೆ. ಅಸಲಿಗೆ ಸ್ವಾತಿ ದ್ಯಾಮಕ್ಕನವರ್ ಅನ್ನುವ ಡಾಕ್ಟರ್ ಅಕೌಂಟ್ ಫೇಕ್ ಆಗಿದೆ. ಈ ಫೇಕ್ ಅಕೌಂಟ್ ನ್ನು ಸ್ವಾತಿಯ ಸಹೋದರ ಎಂದು ಹೇಳಿಕೊಂಡು ಬಂದಿರುವ ಇದೇ ಸಿದ್ದಪ್ಪ ದ್ಯಾಮಕ್ಕನವರ್ ಕ್ರಿಯೆಟ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಈ ಆಸಾಮಿ ವೈದ್ಯೆ ಸ್ವಾತಿ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಹಣ ಹೊಡೆಯಲು ಉಪಾಯ ಮಾಡಿದ್ದ. ಫೇಸ್‌ಬುಕ್‌ ಮೂಲಕ PSI ಪರಿಚಯ ಮಾಡಿಕೊಂಡು ಹಂತ ಹಂತವಾಗಿ ಹಣ ವಸೂಲಿ ಮಾಡಿದ್ದನು. ಸ್ವಾತಿ ಹೆಸರಿನಲ್ಲಿ ಇಲ್ಲಿಯವರೆಗೆ ಪಿಎಸ್‌ಐ 50 ಸಾವಿರ ರೂ. ಹಣ ಪಡೆದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಹಣವನ್ನು ಮರಳಿ ಕೊಡದಿದ್ದಾಗ ಸಬ್ ಇನ್ಸಪೆಕ್ಟರ್ ಕೋಪಗೊಂಡಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಇದು fake Facebook account ಎಂಬುದು ಪತ್ತೆಯಾಗಿದೆ.

ಇದನ್ನು ಓದಿ : ರಾತ್ರಿ 10 ಗಂಟೆಯ ನಂತರ ದೇಹವು ಈ ಸೂಚನೆಯನ್ನು ನೀಡುತ್ತಿದೆಯೇ? ಇದು stroke ಆಗಿರಬಹುದು.!

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹನುಮಂತ ನಗರ ಠಾಣೆ ಇನ್ಸಪೆಕ್ಟರ್ ತನಿಖೆ ಮಾಡುತ್ತಿದ್ದಾರೆ. ಈವರೆಗೂ ಆ ಯುವತಿ (ವೈದ್ಯೆ) ವಿಚಾರಣೆಗೆ ಹಾಜರಾಗಿಲ್ಲ. ಹುಡುಗಿ ರೀತಿ ಚಾಟ್ ಮಾಡಿ ಹುಡುಗಿ ಧ್ವನಿಯಲ್ಲಿ ಮಾತನಾಡಿ ಟ್ರ್ಯಾಪ್‌ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಸಬ್ ಇನ್ಸ್‌ಪೆಕ್ಟರ್ ಮತ್ತು ಯುವತಿ ನಡುವೆ ಹಣದ ವ್ಯವಹಾರ ನಡೆದಿದೆ. ಸಹೋದರ ಅಂತ ಬಂದಿರುವ ವ್ಯಕ್ತಿಯ ಬಗ್ಗೆ ಅನುಮಾನವಿದೆ. ಅಧಿಕಾರಿಯನ್ನೇ trap ಮಾಡಲು ಯತ್ನಿಸಿದಂತಿದೆ. ತನಿಖೆ ನಂತರ ಅಸಲಿ ಕಹಾನಿ ಗೊತ್ತಾಗಲಿದೆ ಎಂದು ಬೆರಳು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments