Tuesday, October 22, 2024
spot_img
spot_img
spot_img
spot_img
spot_img
spot_img
spot_img

ಪತ್ನಿಯ ಚಿನ್ನಾಭರಣವನ್ನು ಗಿರವಿ ಇಡುವ ಮುನ್ನ ಎಚ್ಚರ; ಹೈಕೋರ್ಟ್ ನಿಂದ ಮಹತ್ವದ ತೀರ್ಪು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ಚಿನ್ನಾಭರಣ ಇದೆ ಅಂತ ಹೆಂಡತಿಯ ಅನುಮತಿ ಇಲ್ಲದೆ ಗಿರವಿ ಇಟ್ಟು ಜೈಲು ಶಿಕ್ಷೆ‌ ಅನುಭವಿಸಿದ ಘಟನೆ ಕೇರಳದಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.

ಪತ್ನಿಗೆ ಸಂಬಂಧಿಸಿದ ಯಾವುದೇ ಚಿನ್ನವನ್ನು ಅಥವಾ ಮದುವೆಗೆ ಉಡುಗೊರೆಯಾಗಿ ಪಡೆದ ಚಿನ್ನವನ್ನು ಆಕೆಯ ಅನುಮತಿಯಿಲ್ಲದೆ ಗಿರವಿ ಇಡುವುದು ನಂಬಿಕೆ ದ್ರೋಹ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ.

ಇದನ್ನು ಓದಿ : ಅಂತ್ಯೋದಯ & ಬಿಪಿಎಲ್​ ಪಡಿತರ ಚೀಟಿ ಪಡೆದವರಿಗೆ ರಾಜ್ಯ ಸರ್ಕಾರದಿಂದ ಖಡಕ್​ ಸೂಚನೆ.!

ಅಲ್ಲದೆ, ಕಾಸರಗೋಡು ಮೂಲದ ವ್ಯಕ್ತಿಯ ಶಿಕ್ಷೆಯನ್ನು ನ್ಯಾಯಾಲಯ ಎತ್ತಿ ಹಿಡಿಯುವ ಮೂಲಕ ಹೈಕೋರ್ಟ್ ಖಡಕ್​ ಸಂದೇಶವನ್ನು ರವಾನಿಸಿದೆ.

ಪತ್ನಿಯು ಗಂಡನಿಗೆ 50 ಪವನ್ ಚಿನ್ನ ಕೊಟ್ಟು ಬ್ಯಾಂಕ್​ನ ಲಾಕರ್​ನಲ್ಲಿ ಸೇಫ್​ ಆಗಿ ಇಡುವಂತೆ ಹೇಳಿದ್ದಾಳೆ. ಆದರೆ ಆತ ತನ್ನ ಸ್ವಂತ ಬಳಕೆಗಾಗಿ ಬ್ಯಾಂಕ್​ನಲ್ಲಿ ಗಿರವಿ ಇಟ್ಟಿದ್ದ. ಅಲ್ಲದೆ, ಲಾಕರ್​​ನಲ್ಲಿ ಭದ್ರವಾಗಿ ಇಟ್ಟಿರುವುದಾಗಿ ನಕಲಿ ದಾಖಲೆಗಳನ್ನು ಪತ್ನಿಗೆ ತೋರಿಸಿದ್ದ. ಈ ನಡುವೆ ಇಬ್ಬರ ಮಧ್ಯೆ ಗಲಾಟೆ ಶುರುವಾಗಿ ಇಬ್ಬರು ಡಿವೋರ್ಸ್​ ಪಡೆದುಕೊಂಡಿದ್ದಾರೆ.

ಇದನ್ನು ಓದಿ : SSLC, PUC ಪಾಸಾದವರಿಗೆ ಗುಡ್ ನ್ಯೂಸ್: KPTCLನಲ್ಲಿ 2975 ಹುದ್ದೆಗಳಿಗೆ ನೇಮಕಾತಿ; ಅರ್ಜಿ ಸಲ್ಲಿಕೆ ಇಂದಿನಿಂದ ಪ್ರಾರಂಭ.!

ಬಳಿಕ ಪತ್ನಿ ತನ್ನ ಚಿನ್ನಾಭರಣವನ್ನು ವಾಪಸ್ ಕೊಡುವಂತೆ ಬೇಡಿಕೆ ಇಟ್ಟಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ವಿಚಾರ ತಿಳಿದು ಮಹಿಳೆ ತನ್ನ ಪತಿ ವಿರುದ್ಧ ಪೊಲೀಸ್ ದೂರು ನೀಡಿದ್ದಳು.

ಈ ಪ್ರಕರಣದ ವಿಚಾರಣೆ ಕಾಸರಗೋಡು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಂಬಿಕೆ ದ್ರೋಹದ ಅಡಿಯಲ್ಲಿ ಆರು ತಿಂಗಳ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ. ದಂಡ ವಿಧಿಸಿತ್ತು. ಈ ತೀರ್ಪನ್ನು ಆರೋಪಿ ಹೈಕೋರ್ಟ್​ನಲ್ಲಿ ಪ್ರಶ್ನೆ ಮಾಡಿದ್ದ. ಆದರೆ, ಹೈಕೋರ್ಟ್​ ಕೂಡ ಕಾಸರಗೋಡು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img