Saturday, December 21, 2024
HomeCrime Newsದುಷ್ಕರ್ಮಿಗಳಿಂದ ಮುಖ್ಯ ಶಿಕ್ಷಕಿಯ ಬರ್ಬರ ಹತ್ಯೆ.!
spot_img

ದುಷ್ಕರ್ಮಿಗಳಿಂದ ಮುಖ್ಯ ಶಿಕ್ಷಕಿಯ ಬರ್ಬರ ಹತ್ಯೆ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಗದಗ : ಗದಗ ಜಿಲ್ಲೆಯ ಗಜೇಂದ್ರಗಡ (Gadag District Gajendragad) ಪಟ್ಟಣದ ನವನಗರದಲ್ಲಿ ರೊಟ್ಟಿ ಮಾಡುವ ಕೋಣಗಿಯಿಂದ ತಲೆಗೆ ಬಲವಾಗಿ ಹೊಡೆದು ಮುಖ್ಯ ಶಿಕ್ಷಕಿಯನ್ನು (head madam) ಕೊಲೆ ಮಾಡಿದ ಘಟನೆ ನಡೆದಿದೆ.

ಮೃತ ಮುಖ್ಯ ಶಿಕ್ಷಕಿ ಅನ್ನಪೂರ್ಣ ರಾಠೋಡ್/Teacher Annapoorna Rathod (55) ಎಂದು ತಿಳಿದು ಬಂದಿದೆ. ಇವರು ಗಜೇಂದ್ರಗಡ ತಾಲೂಕಿನ ರೋಣದ ಬಿಇಒ ಕಚೇರಿ (BEO Office) ಯಲ್ಲಿ ಪ್ರಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಇದನ್ನು ಓದಿ : ‘ನನ್ನ girlfriend ನಿಂಗೆ, ನಿನ್ನ girlfriend ನಂಗೆʼ ; ಬೆಂಗಳೂರಲ್ಲಿ ಹೊಸ ವರ್ಷಕ್ಕೆ ಸ್ವ್ಯಾಪಿಂಗ್ ದಂಧೆ.?

ದುಷ್ಕರ್ಮಿಗಳು ಮುಖ್ಯ ಶಿಕ್ಷಕಿಯ ತಲೆ (Head) ಗೆ ರೊಟ್ಟಿ ಮಾಡುವ ಕಟ್ಟಿಗೆಯ ಕೋಣಗಿಯಿಂದ ಹೊಡೆದು ಭೀಕರ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕೊಲೆಯ ವಿಚಾರ ತಿಳಿದು ಸ್ಥಳೀಯರಲ್ಲಿ‌ ಆತಂಕ ಮನೆ ಮಾಡಿದೆ.

ಸ್ಥಳಕ್ಕೆ ಗಜೇಂದ್ರಗಡ ಪೊಲೀಸರು (Gajendragad PS) ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.

ಹಿಂದಿನ ಸುದ್ದಿ : ಕುಂಬಳಕಾಯಿ ಬೀಜ ಚಿಕ್ಕದಾದರೂ ಅದರ ಪ್ರಯೋಜನಗಳು ಅಪಾರ.!

ಜನಸ್ಪಂದನ ನ್ಯೂಸ್, ಆರೋಗ್ಯ : ಕುಂಬಳಕಾಯಿಯು (Pumpkin) ಭಾರತದಲ್ಲಿ ತರಕಾರಿಗಳಲ್ಲಿ ಪ್ರಸಿದ್ಧಿ ಪಡೆದ ಒಂದು ವಿಶಿಷ್ಠವಾದ ತರಕಾರಿ (special vegetable). ವಿಶೇಷವಾಗಿ ಚಳಿಗಾಲದಲ್ಲಿ ಇದನ್ನು ಹೆಚ್ಚಾಗಿ ಉತ್ಪಾದನೆ ಮಾಡಲಾಗುತ್ತದೆ.

ಕುಂಬಳಕಾಯಿ ತರಕಾರಿ ಮಾಡುವಾಗ ಬಹಳಷ್ಟು ‌ಜನರು ಅದರ ಬೀಜಗಳನ್ನು ಎಸೆಯುತ್ತಾರೆ. ಆದರೆ ನಿಮಗೆ ಗೊತ್ತಾ. ವಿಶ್ವದ 100 ಅತ್ಯಂತ ಶಕ್ತಿಶಾಲಿ ಆಹಾರಗಳ ಪಟ್ಟಿಯನ್ನು BBCಯು ಸಿದ್ಧಪಡಿಸಿದೆ. ಇದರಲ್ಲಿ ಕುಂಬಳಕಾಯಿ ಬೀಜ ಆರನೇ ಸ್ಥಾನವನ್ನು ಪಡೆದಿದೆ ಅಂತ (BBC has prepared a list of the 100 most powerful foods in the world. In this pumpkin seed has got the sixth position).

ಇದನ್ನು ಓದಿ : Health : ಕುಂಬಳಕಾಯಿ ಬೀಜ ಚಿಕ್ಕದಾದರೂ ಅದರ ಪ್ರಯೋಜನಗಳು ಅಪಾರ.!

ಕುಂಬಳಕಾಯಿ ಬೀಜಗಳು ಪೌಷ್ಠಿಕಾಂಶದ ವಿಷಯದಲ್ಲಿ ಮೀನಿಗಿಂತಲೂ ಹೆಚ್ಚು ಶಕ್ತಿಯುತವಾಗಿವೆ (More powerful than fish) ಎಂಬುದು ಇನ್ನೊಂದು ಆಶ್ಚರ್ಯಕರ ಸಂಗತಿ.

* ಕುಂಬಳಕಾಯಿ ಬೀಜಗಳು ಕೂದಲು ಉದುರುವುದನ್ನು ತಡೆಯುತ್ತವೆ. ಇದರಲ್ಲಿನ ಫೈಟೊಕೆಮಿಕಲ್ ಸಂಯುಕ್ತಗಳು (Phytochemical compounds) ಕೂದಲು ಉದುರುವಿಕೆಗೆ ಕಾರಣವಾಗುವ ಹಾರ್ಮೋನ್ ಡೈಹೈಡ್ರೊಟೆಸ್ಟೊಸ್ಟೆರಾನ್ (ಡಿಎಚ್ ಟಿ) ಉತ್ಪಾದನೆಯನ್ನು ತಡೆಗಟ್ಟಲು ಸಹಾಯ ಮಾಡುತ್ತವೆ.

ಡಿಎಚ್ ಟಿ ಮಟ್ಟವನ್ನು ಕಡಿಮೆ ಮಾಡುವ ಮೂಲಕ, ಕುಂಬಳಕಾಯಿ ಬೀಜಗಳು ಕೂದಲು ಉದುರುವಿಕೆ ನಿಧಾನಗೊಳಿಸಿ, ಇರುವ ಕೂದಲನ್ನು ಸಂರಕ್ಷಿಸಲು (To preserve existing hair) ಸಹಾಯ ಮಾಡುತ್ತದೆ.

ಇದನ್ನು ಓದಿ : ಸಿಂಹಿಣಿ, ಬಾಡಿಬಿಲ್ಡರ್ ಮಧ್ಯೆ ಹಗ್ಗಜಗ್ಗಾಟ; ಗೆದ್ದವರಾರು ಗೊತ್ತಾ? Video ನೋಡಿ.!

* ಈ ಬೀಜಗಳಲ್ಲಿ ಇರುವ ಸತುವು ದೇಹವನ್ನು ಸೋಂಕುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ನೀಡುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು (The immune system) ಬಲಪಡಿಸುತ್ತದೆ.

* ಇದರಲ್ಲಿರುವ ಕ್ಯಾರೊಟಿನಾಯ್ಡ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಕೆಲಸ ಮಾಡುತ್ತವೆ.

* ವಿಟಮಿನ್ ಇ ಹೊಂದಿರುವುದರಿಂದ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ರೋಗನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸುತ್ತದೆ.

* ಕುಂಬಳಕಾಯಿ ಬೀಜಗಳು ಕಬ್ಬಿಣ ಮತ್ತು ಮ್ಯಾಂಗನೀಸ್‌ನ ಮೂಲವಾಗಿವೆ. ದೇಹದಲ್ಲಿನ ರಕ್ತಹೀನತೆಯನ್ನು (Anemia) ತೆಗೆದು ಹಾಕುವಲ್ಲಿ ಕಬ್ಬಿಣವು ಸಹಾಯಕವಾದರೆ, ಮ್ಯಾಂಗನೀಸ್ ದೇಹ ಮತ್ತು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಇದನ್ನು ಓದಿ : Breaking news : ತಕ್ಷಣವೇ C.T. ರವಿ ಬಿಡುಗಡೆಗೆ ಕೋರ್ಟ್ ಆದೇಶ.!

* ಕುಂಬಳಕಾಯಿ ಬೀಜಗಳಲ್ಲಿ ಮೆಗ್ನೀಸಿಯಮ್, ರಂಜಕ ಮತ್ತು ಸತುವು (Magnesium, phosphorus and zinc) ಉತ್ತಮ ಪ್ರಮಾಣದಲ್ಲಿದ್ದು, ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಆಸ್ಟಿಯೊಪೊರೋಸಿಸ್ ಅನ್ನು ತಡೆಯಲು ಅಗತ್ಯವಾಗಿ ಇವು ಬೇಕು.

* ಈ ಬೀಜಗಳ ನಿಯಮಿತ ಸೇವನೆಯಿಂದ ಮೂಳೆಗಳು ಬಲಗೊಳ್ಳುತ್ತವೆ.

* ಕುಂಬಳಕಾಯಿ ಬೀಜಗಳು ಇನ್ಸುಲಿನ್ ಅನ್ನು ಸುಧಾರಿಸಿ, ಮಧುಮೇಹದ ತೊಂದರೆಗಳನ್ನು ತಡೆಯುತ್ತವೆ (Improve insulin, prevent complications of diabetes).

* ಇದರಲ್ಲಿರುವ ಪ್ರೋಟೀನ್ ಮತ್ತು ಫೈಬರ್ ಹಸಿವು ಮತ್ತು ತೂಕವನ್ನು ನಿಯಂತ್ರಿಸುತ್ತದೆ. ಇನ್ನೂ 100 ಗ್ರಾಂ ಕುಂಬಳಕಾಯಿ ಬೀಜಗಳು ಕೇವಲ 164 ಕ್ಯಾಲೊರಿಗಳನ್ನು ಹೊಂದಿವೆ (100 grams of pumpkin seeds has only 164 calories) ಎಂದು ವರದಿಗಳು ತಿಳಿಸಿವೆ.

ಇದನ್ನು ಓದಿ : Video : ಸುಂದರ ಮಹಿಳೆಯನ್ನು ನೋಡಿ ದಂಡ ಹಾಕದೇ ಬಿಟ್ಟು ಕಳುಹಿಸಿದ್ರಾ ಪೊಲೀಸರು.?

* ಹೃದಯದ ಲಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಒಮೆಗಾ -3 ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳು ಉರಿಯೂತ, ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಡಿಮೆ ಮಾಡುತ್ತದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments