ಜನಸ್ಪಂದನ ನ್ಯೂಸ್, ನೌಕರಿ : ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ (AIC) ನಲ್ಲಿ ಖಾಲಿ ಇರುವ ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲುಸುವ ಪೂರ್ವದಲ್ಲಿ ಹುದ್ದೆಗಳಿಗೆ ಸಂಬಂಧಿಸಿದ ಮುಖ್ಯ ವಿಷಯವನ್ನು ಇಲ್ಲಿ ಓದಬಹುದಾಗಿದೆ. ಆದರೂ ಅಧಿಕೃತ ಅಂತರ್ಜಾಲಕ್ಕೆ ಭೇಟಿ ನೀಡಿ ಪರಿಶೀಲಿಸಿ.
ಹುದ್ದೆಗಳ ವಿವರ :
ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ (AIC) ನಲ್ಲಿ ಖಾಲಿ ಇರುವ ಮ್ಯಾನೇಜ್‌ಮೆಂಟ್ ಟ್ರೈನಿಯಲ್ಲಿ 55 ಹುದ್ದೆಗಳು ಖಾಲಿ ಇವೆ.
- ಈ 55 ಹುದ್ದೆಗಳ ಪೈಕಿ,
- ಐಟಿ ತಂತ್ರಜ್ಞಾನ : 20 ಹುದ್ದೆಗಳು
- ಆಕ್ಚುರಿಯಲ್ ಟೆಕ್ನಾಲಜಿ : 5 ಹುದ್ದೆಗಳು ಮತ್ತು
- ಜನರಲಿಸ್ಟ್ ಟೆಕ್ನಾಲಜಿ : 30 ಹುದ್ದೆಗಳಿಗೆ ಮೀಸಲಿಡಲಾಗಿದೆ.
ವಿದ್ಯಾರ್ಹತೆ :
ಐಟಿ ತಂತ್ರಜ್ಞಾನ :
ಅಭ್ಯರ್ಥಿಗಳು B.E ಹೊಂದಿರಬೇಕು, ಬಿ.ಟೆಕ್‌ನಲ್ಲಿ ಸಮಾನ ಶೇಕಡಾವಾರು ಅಂಕಗಳನ್ನು ಹೊಂದಿರಿ.
ಆಕ್ಚುರಿಯಲ್ ಟೆಕ್ನಾಲಜಿ :
ಅಭ್ಯರ್ಥಿಯು B.Sc/BA (ಗಣಿತ/ಸಂಖ್ಯಾಶಾಸ್ತ್ರ/ಆಕ್ಚುರಿಯಲ್ ಸೈನ್ಸ್) ಅಥವಾ B.Com (ಗಣಿತ/ಸಂಖ್ಯಾಶಾಸ್ತ್ರ) ಪದವಿಯನ್ನು ಹೊಂದಿರಬೇಕು.
ಜೆನರಲಿಸ್ಟ್ ಟ್ರೈನಿ ಹುದ್ದೆ :
ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿಯಲ್ಲಿ ಕನಿಷ್ಠ 60 ಪ್ರತಿಶತ ಅಂಕಗಳನ್ನು (ಸಾಮಾನ್ಯ/ಒಬಿಸಿ) ಮತ್ತು 55 ಪ್ರತಿಶತ ಅಂಕಗಳನ್ನು (SC/ST/PwBD) ಹೊಂದಿರಬೇಕು.
ವಯೋಮಿತಿ :
ಅಭ್ಯರ್ಥಿಯು (ಜನವರಿ 1, 2025 ಕ್ಕೆ) ಕನಿಷ್ಠ ವಯಸ್ಸು 21 ಮತ್ತು ಗರಿಷ್ಠ 30 ವರ್ಷಗಳು. [ಸರ್ಕಾರಿ ನಿಯಮಗಳ ಪ್ರಕಾರ, ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ (SC/ST/OBC/PWBD) ವಯಸ್ಸಿನ ಸಡಿಲಿಕೆಯನ್ನು ನೀಡಲಾಗುತ್ತದೆ].
ಅರ್ಜಿ ಶುಲ್ಕ :
- ಸಾಮಾನ್ಯ/OBC/EWS ಅಭ್ಯರ್ಥಿಗಳು : 750/- ರೂ.
- SC/ST/PWBD ಅಭ್ಯರ್ಥಿಗಳು : 100/- ರೂ.
- ಅರ್ಜಿ ಶುಲ್ಕವನ್ನು ಆನ್‌ಲೈನ್ ಮೋಡ್ ಮೂಲಕ ಮಾತ್ರ ಪಾವತಿಸಬೇಕು.
ಅರ್ಜಿ ಹೇಗೆ ಸಲ್ಲಿಸಬೇಕು :
- ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ಇದರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ಮುಖಪುಟದಲ್ಲಿ ಲಭ್ಯವಿರುವ ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ.
- ಅಲ್ಲಿ ಕೇಳಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕವನ್ನು ಪಾವತಿಸಿ.
- ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿದ ನಂತರ Submit ಮಾಡಿ.
ಪ್ರಮುಖ ದಿನಾಂಕ :
- ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : ಜನವರಿ 30, 2025.
- ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : ಫೆಬ್ರುವರಿ 20, 2025.
ಪ್ರಮುಖ ಲಿಂಕ್ :
ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಓಪನ್ ಮಾಡಿ ಮತ್ತು ಅರ್ಜಿ ಸಲ್ಲಿಸಿ. aicofindia.com
Note : ಅಭ್ಯರ್ಥಿಗಳಿಗೆ ಆನ್‌ಲೈನ್ ಲಿಖಿತ ಪರೀಕ್ಷೆಯನ್ನು ಮಾರ್ಚ್/ಏಪ್ರಿಲ್ ತಾತ್ಕಾಲಿಕವಾಗಿ ನಡೆಸಲಾಗುವುದು.
ಹಿಂದಿನ ಸುದ್ದಿ : ಕರ್ನಾಟಕ ಇಂಧನ ಇಲಾಖೆಯಲ್ಲಿ ರಾಜ್ಯಾದ್ಯಂತ ಖಾಲಿ ಇರುವ ಲೈನ್‌ಮ್ಯಾನ್ (Lineman) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಜನಸ್ಪಂದನ ನ್ಯೂಸ್, ನೌಕರಿ : ಕರ್ನಾಟಕ ಇಂಧನ ಇಲಾಖೆಯಲ್ಲಿ ರಾಜ್ಯಾದ್ಯಂತ ಖಾಲಿ ಇರುವ ಲೈನ್‌ಮ್ಯಾನ್ (Lineman) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು Online ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್ (Website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
ಇದನ್ನು ಓದಿ : ರೂ.500 ಕೊಟ್ಟ ಯೂಟ್ಯೂಬರ್ ; ‘ನಾನು ವ್ಯಾಪಾರಿ, ಭಿಕ್ಷುಕನಲ್ಲ’ ಎಂದ ಹಪ್ಪಳ ಮಾರುವ ಹುಡುಗ.!
ಈ ಕುರಿತು ಇತ್ತೀಚೆಗೆ ಮಾತನಾಡಿರುವ ಇಂಧನ ಸಚಿವರು, ಇಲಾಖೆಯಲ್ಲಿ ಖಾಲಿ ಇರುವ 3 ಸಾವಿರ ಲೈನ್‌ಮೆನ್ (Lineman) ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ. ಬರುವ April ನೊಳಗೆ ನೇಮಕಾತಿ ಪ್ರಕ್ರಿಯೆ ಮುಗಿಯಲಿದೆ. ಮೊದಲ ಬಾರಿಗೆ ಇಡೀ ರಾಜ್ಯದಲ್ಲಿ ಒಂದೇ ದಿನ ದೈಹಿಕ ಪರೀಕ್ಷೆ (Physical exam) ನಡೆಸಲು ನಿರ್ಧರಿಸಲಾಗಿದೆ.
ಹುದ್ದೆಗಳ ಮಾಹಿತಿ :
ಅ.ನಂ | ವಿವರ | ಮಾಹಿತಿ |
1 | ಸಂಸ್ಥೆ : | ಇಂಧನ ಇಲಾಖೆ, ಕರ್ನಾಟಕ |
2 | ಲಭ್ಯವಿರುವ ಹುದ್ದೆಗಳು : | ಲೈನ್‌ಮ್ಯಾನ್ |
3 | ಒಟ್ಟು ಹುದ್ದೆಗಳ ಸಂಖ್ಯೆ : | 3,000 |
4 | ಉದ್ಯೋಗ ಸ್ಥಳ : | ಕರ್ನಾಟಕ |
5 | ಅಪ್ಲಿಕೇಶನ್ ಮೋಡ್ : | Online |
6 | ಅಧಿಕೃತ ವೆಬ್‌ಸೈಟ್ : | energy.karnataka.gov.in |
ಇದನ್ನು ಓದಿ : RBIನಿಂದ 350ರ ಹೊಸ ನೋಟು ಬಿಡುಗಡೆ.? ಇಲ್ಲಿದೆ ನಿಜಾಂಶ.!
ವಿದ್ಯಾರ್ಹತೆ :
ಮಾನ್ಯತೆ ಪಡೆದ ಸಂಸ್ಥೆಯಿಂದ SSLC ಪಾಸಾಗಿರಬೇಕು.
ಆಯ್ಕೆ ಪ್ರಕ್ರಿಯೆ :
ಲಿಖಿತ ಮತ್ತು ಸಂದರ್ಶನದ ಮೂಲಕ ನಡೆಸಲಾಗುವುದು.
ಅರ್ಜಿ ಶುಲ್ಕ :
ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ವೇತನ ಶ್ರೇಣಿ :
ಲೈನ್‌ಮೆನ್ ಹುದ್ದೆಗಳಿಗೆ ವೇತನ ಶ್ರೇಣಿಯು ರೂ.28,550/- ರಿಂದ ರೂ.63000/-ರ ವರೆಗೆ.
ಇದನ್ನು ಓದಿ : Airport ನಲ್ಲಿ ವಿಮಾನಕ್ಕೆ ಬಡಿದ ಮಿಂಚು ; ಆಘಾತಕಾರಿ ವಿಡಿಯೋ ವೈರಲ್.!
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : | ಶೀಘ್ರದಲ್ಲೇ ಬರಲಿದೆ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : | ಸಾಧ್ಯವಾದಷ್ಟು ಬೇಗ |
ಉಪಯುಕ್ತ ಲಿಂಕ್‌ಗಳು :
ಅ.ನಂ | ವಿವರಣೆ | ಲಿಂಕ್ |
1 | ಅಧಿಕೃತ ನವೀಕರಣಗಳು | ಅಧಿಕೃತ ಜಾಹೀರಾತು 2025 |
2 | ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ | ಇಲ್ಲಿ ಕ್ಲಿಕ್ ಮಾಡಿ |
3 | ಅಧಿಕೃತ ವೆಬ್‌ಸೈಟ್ | energy.karnataka.gov.in |
Disclaimer : The above given information is available On online, candidates should check it properly before applying. This is for information only.