ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಜಿಲ್ಲೆಯ ರಾಯಬಾಗ (Raibag) ತಾಲೂಕಿನ ಮೊರಬ್ ಗ್ರಾಮದಲ್ಲಿ ವಾಟ್ಸ್ ಆಯಪ್ ಸ್ಟೇಟಸ್‌ಗೆ (WhatsApp status) ಯುವಕ ಪ್ರೇಯಸಿ ಫೋಟೋ ಹಾಕಿದ್ದು, ಇದನ್ನು ನೋಡಿದ ಆಕೆ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಸಾವಿಗೀಡಾದ ಮಹಿಳೆ ಆರತಿ ಕಾಂಬಳೆ (26) ಎಂದು ತಿಳಿದು ಬಂದಿದೆ.
ಇದನ್ನು ಓದಿ : Video : ಯುವಕನಿಂದ ನಡು ರಸ್ತೆಯಲ್ಲಿಯೇ ಮಹಿಳಾ ಪೊಲೀಸ್ ಮೇಲೆ ಹಲ್ಲೆ.!
ಮದುವೆಯಾಗಿದ್ದರೂ ಸಹ ಆರತಿ ಸಾಗರ ಎಂಬಾತನ ಜೊತೆ ಅನೈತಿಕ ಸಂಬಂಧ (illicit relationship) ಹೊಂದಿದ್ದಳು ಎನ್ನಲಾಗಿದೆ. ಆರತಿ ಜೊತೆ ಸ್ನೇಹ ಬೆಳೆಸಿದ್ದ ಸಾಗರ ತನ್ನ ವಾಟ್ಸ್‌ಆಯಪ್ ಸ್ಟೇಟಸ್‌ನಲ್ಲಿ ಆಕೆಯ ಫೋಟೋ ಹಾಕಿದ್ದಾನೆ. ತನ್ನ ಅಕ್ರಮ ಸಂಬಂಧ ಬಯಲಾದ ಹಿನ್ನೆಲೆ ಮನನೊಂದು ಆರತಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ಆರತಿ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದ (Bommanala village of Raibag Taluk) ಸಂಬಂಧಿಕರ ಮನೆಗೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹಿಂದಿನ ಸುದ್ದಿ : Health : ಕಡಲೆಕಾಯಿಯನ್ನು ಚಳಿಗಾಲದಲ್ಲಿ ಏಕೆ ತಿನ್ನಬೇಕು.?
ಜನಸ್ಪಂದನ ನ್ಯೂಸ್, ಆರೋಗ್ಯ : ಬಡವರ ಬಾದಾಮಿ (A poor man’s almond) ಅಂದ್ರೆ ಅದು ಕಡಲೆಕಾಯಿ (peanut) (ಶೇಂಗಾ). ಇದರಲ್ಲಿ ರಂಜಕ, ಮೆಗ್ನೀಸಿಯಮ್, ಬಯೋಟಿನ್, ನಿಯಾಸಿನ್, ಫೋಲೇಟ್, ಮ್ಯಾಂಗನೀಸ್, ವಿಟಮಿನ್ ಇ ಮತ್ತು ಥಯಾಮಿನ್ ಇದ್ದು ಉತ್ತಮ ಆರೋಗ್ಯ ಪಡೆಯಲು ಕಡಲೆಕಾಯಿ ಸೇವನೆ ಒಳ್ಳೆಯದು.
ಇದನ್ನು ಓದಿ : ಕೈದಿಗೆ ಕೃಷಿ ಮಾಡಲು 3 ತಿಂಗಳು Parole; ಹೈಕೋರ್ಟ್‌ನಿಂದ ಅಪರೂಪದ ಆದೇಶ.!
ಇನ್ನೂ ಶೇಂಗಾವನ್ನು ಚಳಿಗಾಲದಲ್ಲಿ ಸೇವಿಸಬೇಕು (Should be consumed in winter) ಏಕೆಂದರೆ ನೀವು ಈ ಸೀಜನಲ್ಲಿ ಕಡಲೆಕಾಯಿ ತಿಂದರೆ ಹತ್ತು ಹಲವು ಆರೋಗ್ಯ ಪ್ರಯೋಜನಗಳನ್ನು ಇದರಿಂದ ಅಸಂಖ್ಯಾತ ಪ್ರಯೋಜನಗಳನ್ನು ಪಡೆಯಬಹುದು.
ಹಾಗಾದರೆ ಈ ಶೇಂಗಾವನ್ನು ಚಳಿಗಾಲದಲ್ಲಿ ಏಕೆ ತಿನ್ನಬೇಕು (Why should peanuts be eaten in winter?) ಯಾವ ರೀತಿ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಅಂತ ನಿಮಗೇನಾದರೂ ಗೊತ್ತಾ.?
* ಇದು ಆರೋಗ್ಯಕರ ಮೊನೊಸಾಚುರೇಟೆಡ್ ಕೊಬ್ಬನ್ನು (Monounsaturated fat) ಹೊಂದಿದೆ.
ಇದನ್ನು ಓದಿ : Health : ಈ ಎಲೆಯ ನೀರು ಸೇವಿಸಿದರೆ ಸಾಕು ನಿಮ್ಮ ಬಿಳಿ ಕೂದಲು ಕಪ್ಪಾಗುವುದು.!
* ಕಡಲೆಕಾಯಿಯಿಂದ ತಯಾರಿಸಿದ ಆಹಾರಗಳನ್ನು ಮಕ್ಕಳಿಗೆ ಪ್ರತಿದಿನ ಕೊಡುವುದರಿಂದ ಮಕ್ಕಳ ಸ್ನಾಯುಗಳು ಸ್ಟ್ರಾಂಗ್ ಆಗುತ್ತವೆ. ಆರೋಗ್ಯ ತಜ್ಞರು ಸಹ ದೇಹದ ಬೆಳವಣಿಗೆಗೂ ಸಹಕಾರಿ (Helps in body growth) ಎಂದು ತಿಳಿಸಿದ್ದಾರೆ.
* ಕಡಲೆಕಾಯಿಯಲ್ಲಿರುವ ಪಿ- ಆಮ್ಲವು ಹೊಟ್ಟೆಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು (Ability to reduce the risk of cancer) ಹೊಂದಿದೆ.
* ಕಡಲೆಕಾಯಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿರುವ (Anti- bacterial properties) ಮಲ್ಟಿವಿಟಮಿನ್‌ಗಳು ಚರ್ಮದ ಆರೈಕೆಗೆ ಸಹಾಯ ಮಾಡುತ್ತವೆ.
* ಕಡಲೆಕಾಯಿಯಲ್ಲಿ ಕಬ್ಬಿಣ ಮತ್ತು ಕ್ಯಾಲ್ಸಿಯಂ (Iron and Calcium) ಹೇರಳವಾಗಿದ್ದು, ರಕ್ತಕ್ಕೆ ಆಮ್ಲಜನಕವನ್ನು ಒದಗಿಸುವಲ್ಲಿ ಮತ್ತು ಮೂಳೆಗಳನ್ನು ಬಲಪಡಿಸುವಲ್ಲಿ (strengthening the bones) ಇವು ಸಹಾಯಕ.
* ವಿಟಮಿನ್ ಬಿ ಯ ಉತ್ತಮ ಮೂಲವೆಂದರೆ ಅದು ಕಡಲೆಕಾಯಿ.
ಇದನ್ನು ಓದಿ : Health : ದೇಹದ ಮೇಲೆ ಕಂಡು ಬರುವ ಮುದ್ದೆಯಂತಹ ಈ ಗುಳ್ಳೆಗಳನ್ನು ಹೋಗಲಾಡಿಸುವುದು ಹೇಗೆ.?
* ಎಸ್ಜಿಮಾ ಮತ್ತು ಸೋರಿಯಾಸಿಸ್ ಕಡಿಮೆ ಮಾಡಲು ಸಹಾಯ ಮಾಡುತ್ತವೆ ಈ ಕಡಲೆಕಾಯಿ.
* ಶಕ್ತಿಯ ಉತ್ತಮ ಮೂಲವೆಂದರೆ (good source of energy) ಅದು ಕಡಲೆಕಾಯಿ. ನಿಮ್ಮ ದೇಹಕ್ಕೆ ಸಾಕಷ್ಟು ಖನಿಜಗಳು, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ.
* ಪ್ರತಿದಿನ ಕಡಲೆಕಾಯಿಯನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು (May reduce the risk of cardiovascular diseases).