ಜನಸ್ಪಂದನ ನ್ಯೂಸ್, ಡೆಸ್ಕ್ : ಕೈದಿಗಳನ್ನು ಜೈಲಿನಿಂದ ಕರೆದೊಯ್ಯುವಾಗ ಪೊಲೀಸ್ ವಾಹನದಲ್ಲೇ ಸಬ್ಇನ್ಸ್ಪೆಕ್ಟರ್ ಮದ್ಯ (alcohol) ಸೇವಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೈದಿಗಳನ್ನು (prisoners) ಜೈಲಿನಿಂದ ಕರೆದೊಯ್ಯುತ್ತಿದ್ದ ವೇಳೆ ಸೇಂಟ್ ಥಾಮಸ್ ಮೌಂಟ್ ಸಶಸ್ತ್ರ ಮೀಸಲು ಪಡೆಯ (St. Thomas Mount Armed Reserve Force) SSI ಲಿಂಗೇಶ್ವರನ್ ಅವರು ಪೊಲೀಸ್ ವಾಹನದೊಳಗೆ ಮದ್ಯಪಾನ ಮಾಡಿದ್ದಾರೆ.
ಇದನ್ನು ಓದಿ : ಈ blood ಗುಂಪು ಇರುವವರು ಅದೃಷ್ಟವಂತರು; ಇವರಿಗೆ ಕ್ಯಾನ್ಸರ್, ಹೃದ್ರೋಗ ಅಪಾಯ ಕಡಿಮೆ.!
ಪೊಲೀಸ್ ಡ್ರೈವರ್ ಪಕ್ಕದಲ್ಲಿದ್ದ ಕಪ್ ಹೋಲ್ಡರ್ನಲ್ಲಿ ಇರಿಸಲಾಗಿದ್ದ ಮೊಬೈಲ್ ಫೋನ್ನಲ್ಲಿ ಈ ದೃಶ್ಯ ಸೆರೆಯಾಗಿದ್ದು (record), ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆದ ಬಳಿಕ ಉನ್ನತ ಮಟ್ಟದ ಪೊಲೀಸರು ಈಗ ಎಸ್ಎಸ್ಐ ವಿರುದ್ಧ ಇಲಾಖಾ ತನಿಖೆಗೆ (departmental investigation) ಆದೇಶಿಸಿದ್ದಾರೆ. ಲಿಂಗೇಶ್ವರನ್ ತಪ್ಪಿತಸ್ಥರೆಂದು ಸಾಬೀತಾದರೆ (prove) ಅವರನ್ನು ಸಸ್ಪೆಂಡ್ ಮಾಡಲಾಗುವುದು ಎಂದು ವರದಿಯಿಂದ ತಿಳಿದು ಬಂದಿದೆ.
ಅಲ್ಲದೇ ಜೈಲುಗಳಿಗೆ ಕರೆದೊಯ್ಯುವಾಗ ಹಾಗೂ ವಾಪಸ್ಸು ಕರೆದುಕೊಂಡು ಮರಳುವಾಗ ಕೈದಿಗಳಿಗೆ ತಮ್ಮ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಅಕ್ರಮವಾಗಿ (Illegally) ಮಾತನಾಡಲು ಅವಕಾಶ ಮಾಡಿಕೊಡುತ್ತಾರೆ ಎಂಬ ಆರೋಪ ಕೇಳಿಬಂದಿದೆ.
ಇದನ್ನು ಓದಿ : ಶಾಸಕ ಮುನಿರತ್ನಗೆ ಸಹಕಾರ ಆರೋಪ : ಪೊಲೀಸ್ ಇನ್ಸ್ಪೆಕ್ಟರ್ Arrest.!
ತಮ್ಮ ಮೊಬೈಲ್ ಫೋನ್ ನಿಂದ ಕೈದಿಗಳು ತಮ್ಮ ಕುಟುಂಬದವರಿಗೆ ವಿಡಿಯೋ ಕಾಲ್ ಮಾಡಲು ಅವಕಾಶ (Allow video calling) ಮಾಡಿಕೊಡುತ್ತಾರೆ ಎಂದು ಇತರ ಪೊಲೀಸರು ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.
ವೈರಲ್ ವಿಡಿಯೋ ಇಲ್ಲಿದೆ :
#JUSTIN சென்னையில் போலீஸ் வாகனத்தில் மது அருந்திய எஸ்.எஸ்.ஐ. சஸ்பெண்ட்
சென்னை பரங்கிமலை ஆயுதப்படையில் சிறப்பு உதவி ஆய்வாளராக பணிபுரியும் லிங்கேஸ்வரன், சீருடை அணியாமல் காவல் வாகனத்திலேயே மது அருந்தும் வீடியோ #Chennai #SubInspector #Suspend #News18Tamilnadu |… pic.twitter.com/tsy60W1eWA
— News18 Tamil Nadu (@News18TamilNadu) November 14, 2024
ಹಿಂದಿನ ಸುದ್ದಿ ಓದಿ : ಟ್ಯಾಟೂ ಹಾಕಿಸಿಕೊಂಡವರು ರಕ್ತದಾನ ಮಾಡಬಾರದು ಯಾಕೆ.?
ಜನಸ್ಪಂದನ ನ್ಯೂಸ್, ಆರೋಗ್ಯ : ಇಂದಿನ ಯುವ ಜನತೆಯಲ್ಲಿ ಟ್ಯಾಟೂ ಹಾಕಿಸಿಕೊಳ್ಳುವ ಕ್ರೇಜ್ ಹೆಚ್ಚಾಗಿದೆ. ಕೈ, ಕಾಲು, ಸೊಂಟ, ಬೆರಳು ಸೇರಿದಂತೆ ದೇಹದ ಹಲವು ಭಾಗಗಳಲ್ಲಿ ಹಚ್ಚೆ ಹಾಕಿಸಿಕೊಳ್ಳುತ್ತಾರೆ.
ಕೆಲವೊಬ್ಬರು ಏನೇನೋ ಡಿಸೈನ್ ಹಾಕಿಸಿಕೊಂಡರೆ, ಇನ್ನೂ ಕೆಲವರು ಹೆಸರುಗಳನ್ನು ಬರೆಸುತ್ತಾರೆ. ಆದರೆ ನಾವು ಹೇಳುತ್ತಿರುವ ಮ್ಯಾಟರ್ ಇದಲ್ಲ.
ಇದನ್ನು ಓದಿ : Special : ರಾತ್ರಿ ನಿದ್ರೆ ಕಮ್ಮಿ ಮಾಡುವವರೇ ಈ ಸುದ್ದಿಯನ್ನೊಮ್ಮೆ ಓದಿ.
ನೀವು ಈ ಮಾತು ಕೇಳಿರಬಹುದು. ಅದು ಏನಂದ್ರೆ, ದೇಹದ ಯಾವುದೇ ಭಾಗದಲ್ಲಿ ಹಚ್ಚೆ ಹಾಕಿಸಿಕೊಂಡವರು ರಕ್ತದಾನ (blood donate) ಮಾಡಲು ಡಾಕ್ಟರ್ ಬಿಡುವುದಿಲ್ಲ ಅಂತ.
ವ್ಯಕ್ತಿ ಟ್ಯಾಟೂ ಹಾಕಿಸಿಕೊಂಡಿದ್ದರೆ ಅವರಿಗೆ ರಕ್ತದಾನ ಮಾಡುವುದು ಕೆಲವೊಮ್ಮೆ ಸಮಸ್ಯೆಯಾಗಬಹುದು. ಹಾಗಾದರೆ ನಿಮಗೆ ಗೊತ್ತೇ ದೇಹದ ಮೇಲೆ ಹಚ್ಚೆ ಇದ್ದರೆ ರಕ್ತವನ್ನು ಏಕೆ ನೀಡಬಾರದು ಎಂದು? ಮುಂದೆ ತಿಳಿಯಿರಿ.
ಕೆಲ doctors, ಟ್ಯಾಟೂ ಇದ್ದರೆ ರಕ್ತದಾನ ಮಾಡಲು ಯಾವುದೇ ಅಡೆತಡೆಗಳಿಲ್ಲ ಎಂದು ಅಭಿಪ್ರಾಯ ಪಡುತ್ತಾರೆ. ಹಚ್ಚೆ ಹಾಕಿಸಿಕೊಂಡು ಸುಲಭವಾಗಿ ನಾವು ರಕ್ತದಾನ ಮಾಡಬಹುದು. ಇದು ರೋಗಿಗೆ ಯಾವುದೇ ರೀತಿಯ ತೊಂದರೆಯನ್ನುಂಟು ಮಾಡುವುದಿಲ್ಲ. ಆದರೆ ಹಚ್ಚೆ ಹಾಕಿಸಿಕೊಂಡವರು ಕೆಲವು ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ (follow).
ಇದನ್ನು ಓದಿ : Job : ಭಾರತೀಯ ಸೇನೆಯಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರಿಗೆ ಗುಡ್ ನ್ಯೂಸ್.!
ಯಾವಾಗಲೂ ಹೊಸ ಸೂಜಿಗಳನ್ನು ಬಳಸಿ Tattoo ಹಾಕಿಸಿಕೊಳ್ಳಬೇಕಾಗುತ್ತದೆ. ಹೆಚ್ಚಿನ ಜನರು ಕೆಲವೊಮ್ಮೆ ಒಂದೇ ಸೂಜಿಗಳಿಂದ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಆದರೆ ಹಚ್ಚೆ ಹಾಕಿಸಿಕೊಂಡಾತನಿಗೆ ಇದು ಒಳ್ಳೆಯದಲ್ಲ.
ಯಾಕೆಂದರೆ ಇಂತಹ ಸಂದರ್ಭದಲ್ಲಿ, ರಕ್ತದ ಮೂಲಕ ಮಾರಣಾಂತಿಕ ಕಾಯಿಲೆಗಳು (Malignant diseases) ದೇಹವನ್ನು ಪ್ರವೇಶಿಸಬಹುದು. ನಂತರ ಅದು ವ್ಯಕ್ತಿಯ ದೇಹಕ್ಕೆ ಹರಡುತ್ತದೆ. ಇನ್ನೂ ಸೋಂಕಿನ ನಂತರ ವೈರಸ್ ಸಂತಾನೋತ್ಪತ್ತಿ (Virus reproduction) ಮಾಡುವ ಅವಧಿಯನ್ನು ಇನ್ಕ್ಯುಬೇಷನ್ ಅವಧಿ ಎಂದು ಕರೆಯಲಾಗುತ್ತದೆ.
ಒಬ್ಬ ವ್ಯಕ್ತಿಯು 6 ತಿಂಗಳೊಳಗೆ HIV, ಹೆಪಟೈಟಿಸ್ ಬಿ ಅಥವಾ ಹೆಪಟೈಟಿಸ್ ಸಿ ವೈರಸ್ ಸೋಂಕಿಗೆ ಒಳಗಾಗುತ್ತಾನೆ. ಆ ಸಮಯದಲ್ಲಿ ರಕ್ತ ಪರೀಕ್ಷೆಗೆ ಒಳಗಾಗಿದ್ದರೆ, ಅದು negative ಬರಬಹುದು. ಹೀಗಾಗಿ ಹಚ್ಚೆ ಹಾಕಿಸಿಕೊಂಡವರು ಆರು ತಿಂಗಳಾದ ಮೇಲೆ ರಕ್ತದಾನ ಮಾಡಬಹುದು.
ಇದನ್ನು ಓದಿ : ಯೂನಿಯನ್ ಬ್ಯಾಂಕ್ ನಲ್ಲಿ ಖಾಲಿ ಇರುವ 1500 ಹುದ್ದೆಗಳಿಗೆ ಅರ್ಜಿ ಆಹ್ವಾನ; ಇಂದೇ Last date.!
ಹಚ್ಚೆ ಹಾಕಿಸಿಕೊಂಡ ವ್ಯಕ್ತಿ ಕನಿಷ್ಠ ಆರು ತಿಂಗಳು ಜಾಗರೂಕರಾಗಿರಬೇಕು. ಆರು ತಿಂಗಳ ಬಳಿಕ, ಖಚಿತಪಡಿಸಿಕೊಳ್ಳಲು ರಕ್ತ ಪರೀಕ್ಷೆ ಮಾಡಿಸಬೇಕು. ಆಗ ಹಚ್ಚೆ ಹಾಕಿಸಿಕೊಂಡಿದ್ದರೂ ಸುರಕ್ಷಿತವಾಗಿ ನೀವು ರಕ್ತದಾನ ಮಾಡಬಹುದಾಗಿದೆ. ಆದರೆ ಕೆಲವು ವಿಶೇಷ ಸಂದರ್ಭಗಳಲ್ಲಿ, ಕೆಲವು ವೈದ್ಯರು ಒಂದು ವರ್ಷದವರೆಗೆ ರಕ್ತದಾನ ಮಾಡುವುದು ಬೇಡ ಎಂದು ನಿಷೇಧಿಸುತ್ತಾರೆ.