Friday, October 18, 2024
spot_img
spot_img
spot_img
spot_img
spot_img
spot_img
spot_img

ನಾಯಕನ ಮಾತು ಕೇಳಿ ಪ್ರಾಣ ಉಳಿಸಿಕೊಂಡ ಆಟಗಾರ ; ಭಯಾನಕ Video ನೋಡಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ :  ಭಾರತ ಮತ್ತು ಇಂಗ್ಲೆಂಡ್ (India vs England) ನಡುವಣ 5 ಟೆಸ್ಟ್ ಪಂದ್ಯದಲ್ಲಿ, ಟೀಮ್ ಇಂಡಿಯಾ ಇನ್ನಿಂಗ್ಸ್ ಮತ್ತು 64 ರನ್​ಗಳ ಜಯ ಸಾಧಿಸಿ ಸರಣಿಯನ್ನು 4-1 ಅಂತರದಿಂದ ವಶಪಡಿಸಿಕೊಂಡಿದೆ.

ಈ ನಡುವೆ ಅಂತಿಮ ಅಂದರೆ ಐದನೇ ಟೆಸ್ಟ್ ಪಂದ್ಯದ ವೇಳೆ ದೊಡ್ಡ ಅವಘಡ ಒಂದು ತಪ್ಪಿದ್ದು, ಈ ಪಂದ್ಯದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ (social media) ಸಖತ್ ವೈರಲ್ ಆಗುತ್ತಿದೆ. ಅದೆನೆಂದರೆ, ಸರ್ಫರಾಜ್ ಶಾರ್ಟ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಶೋಯೆಬ್ ಬಶೀರ್ (Shoaib Bashir) ಹೊಡೆದ ಶಾಟ್ ಅವರ ಹೆಲ್ಮೆಟ್‌ಗೆ ತಗುಲಿತು. ಅದೃಷ್ಟವಶಾತ್, ಸರ್ಫರಾಜ್ ಹೆಲ್ಮೆಟ್ ಧರಿಸಿದ್ದರಿಂದ ದೊಡ್ಡ ಅಪಾಯದಿಂದ ಪಾರಾದರು.

PUC ಆದವರು KEA ಮ್ಯಾನೇಜರ್ ಗ್ರೇಡ್-III ಮೇಲ್ವಿಚಾರಕೇತರ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಿ.

ರೋಹಿತ್ ಶರ್ಮಾ ಅವರ ಕಾಳಜಿಯ ಪರಿಣಾಮ ಇಂಗ್ಲೆಂಡ್ ವಿರುದ್ಧದ ಧರ್ಮಶಾಲಾ ಟೆಸ್ಟ್ ಪಂದ್ಯದ ವೇಳೆ ಸರ್ಫರಾಜ್ ಖಾನ್ ಅವರನ್ನು ದೊಡ್ಡ ಅಪಾಯದಿಂದ ಪಾರು ಮಾಡಿತು. ಹಿಂದಿನ ಪಂದ್ಯ (4th Test) ದಲ್ಲಿ ರಕ್ಷಣಾತ್ಮಕ ಕವಚ ಇಲ್ಲದೆ ಬ್ಯಾಟ್ಸ್‌ಮನ್‌ನ ಹತ್ತಿರ ಫೀಲ್ಡಿಂಗ್ ಮಾಡಲು ಸರ್ಫರಾಜ್ ಸಿದ್ಧರಾಗಿದ್ದರು, ಇದನ್ನು ಗಮನಿಸಿದ ನಾಯಕ ರೋಹಿತ್, ಸರ್ಫರಾಜ್‌ಗೆ ಜೋರು ಮಾಡಿ ಹೆಲ್ಮೆಟ್ ಧರಿಸುವಂತೆ ಹೇಳಿದ್ದರು.

ನಾಲ್ಕನೇ ಟೆಸ್ಟ್​ನಲ್ಲಿ ನಾಯಕ ಹೇಳಿದ ಮಾತನ್ನು ಐದನೇ ಟೆಸ್ಟ್​ನಲ್ಲೂ ಪಾಲಿಸಿ ಸರ್ಫರಾಜ್ ಖಾನ್ ಅವರು ಹೆಲ್ಮೆಟ್ ಧರಿಸಿದ್ದರು. ಹೀಗಾಗಿ ದೊಡ್ಡ ಅಪಾಯದಿಂದ ಪಾರಾದರು.

ಅಂಚೆ ಇಲಾಖೆಯಲ್ಲಿ 55,000 ಹುದ್ದೆಗಳ ನೇಮಕಾತಿ ; ಶೀಘ್ರದಲ್ಲಿ ಅರ್ಜಿ ಆಹ್ವಾನ.!

ಪಂದ್ಯದ 38ನೇ ಓವರ್‌ನ ಮೂರನೇ ಎಸೆತದಲ್ಲಿ ಈ ಘಟನೆ ನಡೆದಿದ್ದು, ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಇಂಗ್ಲೆಂಡ್ ಬ್ಯಾಟರ್ ಶೋಯೆಬ್ ಬಶೀರ್ ಹೊಡೆದ ಶಾಟ್ ವೇಗ (Shot speed) ವಾಗಿ ಮತ್ತು ನೇರವಾಗಿ ಸರ್ಫರಾಜ್ ಅವರ ಹೆಲ್ಮೆಟ್‌ಗೆ ತಗುಲಿದೆ. ಅದೃಷ್ಟವಶಾತ್, ಸರ್ಫರಾಜ್ ಹೆಲ್ಮೆಟ್ ಧರಿಸಿದ್ದರಿಂದ ದೊಡ್ಡ ಅಪಾಯದಿಂದ ಪಾರಾದರು.

ವಿಡಿಯೋ ನೋಡಿ :

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img