ಜನಸ್ಪಂದನ ನ್ಯೂಸ್, ಬೆಂಗಳೂರು : ಮಹಿಳಾ ಕಾನ್ಸ್‌ಟೇಬಲ್ ನನ್ನು (lady constable) ಕುಡುಗೋಲಿನಿಂದ ಕೊಚ್ಚಿ ಬರ್ಬರವಾಗಿ ಆಕೆಯ ಸ್ವಂತ ಅಣ್ಣನೇ ಕೊಲೆ ಮಾಡಿದ ಆಘಾತಕಾರಿ ಘಟನೆ (shocking incident) ಹೈದರಾಬಾದ್ ಸಮೀಪದ ಇಬ್ರಾಹಿಂ ಪಟ್ಟಣದಲ್ಲಿ (Ibrahim pattan near Hyderabad) ನಡೆದಿದೆ ಎಂದು ವರದಿಯಾಗಿದೆ.
ಕೊಲೆಯಾದ ಮಹಿಳಾ ಕಾನ್ಸ್‌ಟೇಬಲ್ ಹಯತ್ನಗರದ ಪೊಲೀಸ್ ಠಾಣೆಯ ನಾಗರತ್ನ ಎಂದು ವರದಿ ತಿಳಿಸಿದೆ. ಇದು ಮರ್ಯಾದೆಗೇಡು ಹತ್ಯೆ (Dishonorable killing) ಎಂಬ ಅನುಮಾನ ಮೂಡಿದೆ.
ಇದನ್ನು ಓದಿ : Video : ಕಣ್ಣಿಗೆ ಕನ್ನಡಕ, ತಲೆಗೆ ಟವಲ್, ದೇಹಕ್ಕೆ ಬಾತ್ ಟವೆಲ್ ಧರಿಸಿ ಮೆಟ್ರೋಗೆ ಕಾಲಿಟ್ಟ ಯುವತಿಯರು.!
ಈ ಕೊಲೆ ರಂಗಾರೆಡ್ಡಿ ಜಿಲ್ಲೆಯ (Rangareddy District) ಇಬ್ರಾಹಿಂ ಪಟ್ಟಣದ ರಾಯ್ಪೋಲ್ – ಮನ್ಯಗಢ ರಸ್ತೆಯಲ್ಲಿ (On Raipol – Manyagadh Road) ನಡೆದಿದೆ.
ಸೋಮವಾರ (ಡಿ. 02) ಎಂದಿನಂತೆ ಕರ್ತವ್ಯ ನಿರ್ವಹಿಸಲು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ಸಹೋದರ ಪ್ರಮೇಶ್ ಕಾರನ್ನು ಅಡ್ಡಗಟ್ಟಿ (Block the car) ಮಹಿಳಾ ಕಾನ್ಸ್‌ಟೇಬಲ್ ನಾಗಮಣಿಯನ್ನು ಕುಡುಗೋಲಿನಿಂದ ಹತ್ಯೆ ಮಾಡಿದ್ದಾನೆ (Killed with a scythe) ಎಂದು ವರದಿ ತಿಳಿಸಿದೆ.
ಕೊಲೆಯಾದ ಮಹಿಳಾ ಪೇದೆಯ ಶವವನ್ನು ಕಂಡು ಪಾದಚಾರಿಗಳು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೈದರಾಬಾದ್ನ ಸರ್ಕಾರಿ ಜನರಲ್ ಆಸ್ಪತ್ರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ (The body has been sent to the Government General Hospital, Hyderabad for post-mortem examination) ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : ಕೈದಿಗೆ ಕೃಷಿ ಮಾಡಲು 3 ತಿಂಗಳು Parole; ಹೈಕೋರ್ಟ್‌ನಿಂದ ಅಪರೂಪದ ಆದೇಶ.!
ಇನ್ನು ನಾಗಮಣಿ ಅಂತರ್ಜಾತಿ ವಿವಾಹವಾಗಿದ್ದಕ್ಕೆ (Intercaste marriage) ಆಕೆಯ ಕೊಲೆಯಾಗಿದೆ ಎಂದು ಪ್ರಾಥಮಿಕ ಮಾಹಿತಿಯಲ್ಲಿ (primary information) ತಿಳಿದು ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ನಾಗಮಣಿ ಈಗಾಗಲೇ ಮದುವೆಯಾಗಿದ್ದು, 10 ತಿಂಗಳ ಹಿಂದೆಯೇ ಡಿವೋರ್ಸ್ ಪಡೆದಿದ್ದರು. ಇತ್ತೀಚಿಗೆ ಶ್ರೀಕಾಂತ್ ಎಂಬ ಪೊಲೀಸ್ ಪೇದೆಯನ್ನು ಅಂತರ್ಜಾತಿ ವಿವಾಹವಾಗಿದ್ದರು ಎಂದು ವರದಿಯಿಂದ ತಿಳಿದು ಬಂದಿದೆ.
ಹಿಂದಿನ ಸುದ್ದಿ : ಕೈದಿಗೆ ಕೃಷಿ ಮಾಡಲು ಮೂರು ತಿಂಗಳು Parole; ಹೈಕೋರ್ಟ್‌ನಿಂದ ಅಪರೂಪದ ಆದೇಶ.!
ಜನಸ್ಪಂದನ ನ್ಯೂಸ್, ಬೆಂಗಳೂರು : ಕರ್ನಾಟಕ ಹೈಕೋರ್ಟ್ (High Court of Karnataka) ಅಪರೂಪದ ಆದೇಶವೊಂದನ್ನು ನೀಡಿದೆ. ಕೃಷಿ ಚಟುವಟಿಕೆ ನೋಡಿಕೊಳ್ಳಲು 11 ವರ್ಷಗಳಿಂದ ಜೈಲಿನಲ್ಲಿರುವ ಸಜಾ ಕೈದಿಯೊಬ್ಬನಿಗೆ ಪೆರೋಲ್ ಮಂಜೂರು (Grant of parole) ಮಾಡಿದೆ.
ಇದನ್ನು ಓದಿ : Railway ಇಲಾಖೆಯಲ್ಲಿ ಖಾಲಿ ಇರುವ 1,785 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ.!
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ (Kanakpur Taluk of Ramnagar District) ಸಿದ್ದಿದೇವರಹಳ್ಳಿ ನಿವಾಸಿ ಚಂದ್ರ (36) ಎಂಬಾತ ಕೊಲೆ ಪ್ರಕರಣದಲ್ಲಿ (murder case) ಜೀವಾವಧಿ ಶಿಕ್ಷೆಗೆ (Life imprisonment) ಒಳಗಾಗಿದ್ದಾನೆ. ಹೀಗಾಗಿ ತನ್ನ ತಂದೆಯ ಜಮೀನಿನಲ್ಲಿ ಕೃಷಿ ಚಟುವಟಿಕೆ ನೋಡಿಕೊಳ್ಳಲು (take care of agricultural activity) ಪೆರೋಲ್ ನೀಡುವಂತೆ ಕೋರಿ ಹೈಕೋರ್ಟ್‌ಗೆ ಮೊರೆ ಹೋಗಿದ್ದ.
ಸದ್ಯ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ಅವರ ಪೀಠ, ಚಂದ್ರ ಅವರಿಗೆ 90 ದಿನಗಳ ಪೆರೋಲ್ (90 days parole) ನೀಡಿ ಆದೇಶಿಸಿದೆ (ordered) ಎಂದು ತಿಳಿದು ಬಂದಿದೆ.
ಇದನ್ನು ಓದಿ : ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಕೆಲಸಕ್ಕೆ ಅನರ್ಹ : Supreme Court ಮಹತ್ವದ ತೀರ್ಪು
ಕಳೆದ 11 ವರ್ಷಗಳಿಂದ ಚಂದ್ರ ಜೈಲಿನಲ್ಲಿದ್ದು, ಪೆರೋಲ್ ಮೇಲೆ ಯಾವತ್ತೂ ಬಿಡುಗಡೆಯಾಗಿಲ್ಲ (Never released). ಪ್ರಕರಣದ ಸತ್ಯಾಂಶ ಪರಿಶೀಲಿಸಿದಾಗ ಪೆರೋಲ್ ಮೇಲೆ ಬಿಡುಗಡೆಯಾಗುವ ಅಗತ್ಯವನ್ನು ಚಂದ್ರ ಮೇಲ್ನೋಟಕ್ಕೆ ಸಾಬೀತು ಪಡಿಸಿದ್ದಾರೆ (Apparently proved). ಆದ್ದರಿಂದ ಆತನನ್ನು 90 ದಿನ ಪೆರೋಲ್ ಮೇಲೆ ಬಿಡುಗಡೆ ಮಾಡಬೇಕು ಎಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ (Parappana Agrahara Center jail in Bangalore) ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ (Chief Superintendent of Jails) ಹೈಕೋರ್ಟ್ ನಿರ್ದೇಶಿಸಿದೆ.
2023ರ ಸೆ. 23ರಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು, ಚಂದ್ರಗೆ ಪೆರೋಲ್ ನೀಡಲು ನಿರಾಕರಿಸಿ (deny) ನೀಡಿದ್ದ ಹಿಂಬರಹವನ್ನು ಈ ವೇಳೆ ಹೈಕೋರ್ಟ್ ರದ್ದುಪಡಿಸಿದೆ (canceled).
ನ್ಯಾಯಾಲಯವು, ಚಂದ್ರ ಪೆರೋಲ್ ಅವಧಿಯಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ (illegal activity) ಭಾಗಿಯಾಗಬಾರದು, ಪ್ರತಿ ವಾರದ ಮೊದಲ ದಿನದಂದು (First day of every week) ಸ್ಥಳೀಯ ಪೊಲೀಸ್ ಠಾಣೆಗೆ ಆತ ಹಾಜರಾಗಬೇಕು.
ಇದನ್ನು ಓದಿ : Health : ದೇಹದ ಮೇಲೆ ಕಂಡು ಬರುವ ಮುದ್ದೆಯಂತಹ ಈ ಗುಳ್ಳೆಗಳನ್ನು ಹೋಗಲಾಡಿಸುವುದು ಹೇಗೆ.?
ಆತ ಪೆರೋಲ್ ಮುಗಿಸಿ, ಜೈಲಿಗೆ ವಾಪಸ್ಸಾಗುವುದನ್ನು ಖಚಿತಪಡಿಸಿಕೊಳ್ಳಲು (confirm) ಮುಖ್ಯ ಅಧೀಕ್ಷಕರು ಅಗತ್ಯ ಷರತ್ತು ವಿಧಿಸಬಹುದು. ಒಂದು ವೇಳೆ ಷರತ್ತು ಉಲ್ಲಂಘಿಸಿದರೆ (Violate the condition), ಪೆರೋಲ್ ಮಂಜೂರಾತಿ ಆದೇಶ ತನ್ನಿಂದ ತಾನೇ ರದ್ದಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ