Sunday, December 22, 2024
HomeState Newsಮರಕ್ಕೆ Car ಡಿಕ್ಕಿ: ಬಿಮ್ಸ್ ಆಸ್ಪತ್ರೆಯ ಇಬ್ಬರು ವೈದ್ಯರು ಸೇರಿ ಮೂವರ ಸಾವು.!
spot_img

ಮರಕ್ಕೆ Car ಡಿಕ್ಕಿ: ಬಿಮ್ಸ್ ಆಸ್ಪತ್ರೆಯ ಇಬ್ಬರು ವೈದ್ಯರು ಸೇರಿ ಮೂವರ ಸಾವು.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬಳ್ಳಾರಿ : ಕಾರೊಂದು ನಿಯಂತ್ರಣ ತಪ್ಪಿ (out of control) ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬಳ್ಳಾರಿಯ ಮೂವರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡ ಘಟನೆ ಬಳ್ಳಾರಿ ತಾಲೂಕಿನ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ (Adjacent to Andhra Pradesh border) ವಿಡುಪನಕಲ್ಲು – ಚೇಳ್ಳಗುರ್ಕಿ ಮಧ್ಯೆ ರವಿವಾರ (ಡಿ.1) ಬೆಳಗಿನ ಜಾವ ಸಂಭವಿಸಿದೆ.

ಇದನ್ನು ಓದಿ : Health : ಈ ಎಲೆಯ ನೀರು ಸೇವಿಸಿದರೆ ಸಾಕು ನಿಮ್ಮ ಬಿಳಿ ಕೂದಲು ಕಪ್ಪಾಗುವುದು.!‌

ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯ (BIMS Hospital, Ballari) ಕ್ಯಾನ್ಸರ್ ತಜ್ಞ (Cancer specialist), ಡಾ. ಗೋವಿಂದರಾಜುಲು, ನೇತ್ರ ತಜ್ಞ (Ophthalmologist) ಡಾ. ಯೋಗೀಶ್ ಮತ್ತು ವಕೀಲ (Lawyer) ವೆಂಕಟನಾಯ್ಡು ಸ್ಥಳದಲ್ಲಿಯೇ ಮೃತಪಟ್ಟಿದ್ದು, ವೈದ್ಯ ಅಮರೇಗೌಡ ಪಾಟೀಲ್ ಎಂಬುವರಿಗೆ ಗಂಭೀರ ಗಾಯವಾಗಿದ್ದು (serious injuries), ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಬ್ಯಾಂಕಾಕ್ ಪ್ರವಾಸ (Bangkok trip) ಮುಗಿಸಿಕೊಂಡು ಬೆಂಗಳೂರು ವಿಮಾನ ನಿಲ್ದಾಣದ (Bangalore Airport) ಮೂಲಕ ಅನಂತಪುರಂ ಮಾರ್ಗವಾಗಿ (via Ananthapuram) ಈ ನಾಲ್ವರು ಬಳ್ಳಾರಿಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.

ವಕೀಲ ವೆಂಕಟನಾಯ್ಡು ಅವರು ಕಾರನ್ನು ಡ್ರೈವ್ ಮಾಡುತ್ತಿದ್ದರು. ಆದರೆ ನಿದ್ರೆಯ ಮಂಪರಿನಲ್ಲಿ ಚೇಳ್ಳಗುರ್ಕಿ ಇನ್ನು 5 ಕಿ. ಮೀ. ಇರುವಾಗ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದೆ.

ಇದನ್ನು ಓದಿ : ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ Rowdy Sheeter ಬರ್ಬರ ಹತ್ಯೆ.!

ಅಮರೇಗೌಡ ಅವರ ಐ ಪೋನ್ ಅಪಘಾತದ ಮೆಸೇಜ್ ನೀಡಿದ್ದು, ಸಂಬಂಧಿಕರಿಗೆ ಮಾಹಿತಿ ಹೋಗಿದೆ. ಅಮರೇಗೌಡ ಅವರಿಗೆ ಬಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಭಾಗದಲ್ಲಿ ಕ್ಯಾನ್ಸರ್ ಚಿಕಿತ್ಸೆ ನೀಡುವಲ್ಲಿ ಡಾ. ಗೋವಿಂದರಾಜುಲು ಅವರು ಖ್ಯಾತರಾಗಿದ್ದರು. ಬಡ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಅವರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿತ್ತು.

 

ಹಿಂದಿನ ಸುದ್ದಿ : ನೀವು ಹುಟ್ಟಿದ ತಿಂಗಳು ತಿಳಿಸುತ್ತೆ ನಿಮ್ಮ ಗುಣ.!

ಜನಸ್ಪಂದನ ನ್ಯೂಸ್, ವಿಶೇಷ : ಸಂಖ್ಯಾಶಾಸ್ತ್ರದಲ್ಲಿ (Numerology) ನಮ್ಮ ಹುಟ್ಟಿದ ದಿನ, ತಿಂಗಳು, ವರ್ಷ ಎಲ್ಲವೂ ಬಹಳ ಮುಖ್ಯ. ಇವು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ.

ಇದನ್ನು ಓದಿ : ಪ್ರೇಯಸಿಯೊಂದಿಗೆ ಕಾರಿನಲ್ಲಿ ಸುತ್ತಾಡುತ್ತಿದ್ದಾಗ ಪತ್ನಿ ಕೈಗೆ ಸಿಕ್ಕಿಬಿದ್ದ ಗ್ರಾ.ಪಂ. ಅಧ್ಯಕ್ಷ; ಮುಂದೆನಾಯ್ತು? Video ನೋಡಿ.!

ನಮ್ಮ ಮುಂದಿನ ಜೀವನ ಆರ್ಥಿಕ ಸ್ಥಿತಿ, ಕೌಟುಂಬಿಕ ಜೀವನ (Financial status, family life) ಹೀಗೆ ಎಲ್ಲವು ಇದರಿಂದ ನಿರ್ಧಾರವಾಗುತ್ತದೆ ಎಂದು ಹೇಳುತ್ತದೆ. ಹಾಗಾದರೆ ನಿಮ್ಮ ಹುಟ್ಟಿದ ತಿಂಗಳು, ನಿಮ್ಮ ಗುಣಗಳ ಬಗ್ಗೆ ಏನು ಹೇಳುತ್ತದೆ ಎಂದು ತಿಳಿಯೋಣ.

ಜನವರಿ :
ಈ ತಿಂಗಳಿನಲ್ಲಿ ಜನಿಸಿದ ವ್ಯಕ್ತಿಯು ಯಾವುದಕ್ಕೂ ಹೆದರುವುದಿಲ್ಲ. ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಹಾಗೂ ಅಭಿಪ್ರಾಯವನ್ನು (decision and opinion) ಬೇರೆಯವರ ಮಾತು ಕೇಳಿ ಬದಲಾಯಿಸಿಕೊಳ್ಳುವುದಿಲ್ಲವಂತೆ. ನಾಯಕತ್ವ ಗುಣಗಳನ್ನು (Leadership qualities) ಈ ವ್ಯಕ್ತಿ ಹೊಂದಿರುತ್ತಾರೆ.

ಫೆಬ್ರವರಿ :
ಈ ತಿಂಗಳಿನಲ್ಲಿ ಜನಿಸಿದ ವ್ಯಕ್ತಿಯು ಸ್ವತಂತ್ರ ಜೀವನದ ಕನಸು (Dream of independent life) ಕಾಣುತ್ತಾರೆ. ಇವರು ಸಾಹಸಮಯ ಜೀವನ ಇಷ್ಟಪಡುತ್ತಾರೆ‌. ಅಲ್ಲದೇ ಹೆಚ್ಚು ನಿಷ್ಠಾವಂತರಾಗಿದ್ದು (faithful), ಉದ್ಯೋಗ ಕ್ಷೇತ್ರದಲ್ಲಿ ಯಾವಾಗಲೂ ಯಶಸ್ಸು ಸಿಗುತ್ತದೆ.

ಇದನ್ನು ಓದಿ : ಎಷ್ಟೇ ವಯಸ್ಸಾದರೂ young ಆಗಿ ಕಾಣಬೇಕಾ? ಹಾಗಿದ್ರೆ ಈ ಜ್ಯೂಸ್ ಕುಡಿಯಿರಿ.!

ಮಾರ್ಚ್ :
ಮಾರ್ಚ್‌ನಲ್ಲಿ ಜನಿಸಿದರೆ ವ್ಯಕ್ತಿಗಳು ತುಂಬಾ ತಾಳ್ಮೆ, ನಾಚಿಕೆ, ಕಲಾತ್ಮಕ ಗುಣಗಳನ್ನು (Artistic qualities) ಹೊಂದಿರುತ್ತಾರೆ. ಭಾವನೆಗಳಿಗೆ ಹೆಚ್ಚು ಒತ್ತು ನೀಡಿ, ಎಲ್ಲರಿಗೂ ಒಳಿತು ಬಯಸುವ ಮಂದಿ ಆಗಿರುತ್ತಾರೆ. ಶಾಂತಿ ಪ್ರಿಯರು, ಸಹಾನುಭೂತಿ ಗುಣ (Peace loving, compassionate nature) ಹೊಂದಿರುತ್ತಾರೆ.

ಏಪ್ರಿಲ್ :
ಈ ತಿಂಗಳಲ್ಲಿ ಜನಿಸಿದವರು ತುಂಬಾನೆ ಬಲಶಾಲಿಗಳು, ಮೇಲ್ನೋಟಕ್ಕೆ (Apparently) ಕಾಣುವುದಕ್ಕಿಂತ ತುಂಬಾನೆ ದೃಢಶಾಲಿಗಳು (strong) ಆಗಿರುತ್ತಾರೆ. ಮನೋಬಲದಿಂದ ಯಾವ ವಿಚಾರವನ್ನು ಬೇಕಾದರೆ ಜಯಿಸುವ ಮನೋಭಾವದವರಾಗಿದ್ದು, ಬೇರೆಯವರ ಬಗ್ಗೆ ಹೆಚ್ಚು ಆಲೋಚಿಸುವುದಿಲ್ಲ. ಎಂತಹ ರಿಸ್ಕ್ ಬೇಕಾದರೂ ತೆಗೆದುಕೊಳ್ಳಲು ಸಿದ್ಧರಿರುವ ವ್ಯಕ್ತಿಯಾಗಿರುತ್ತಾರೆ ಇವರು.

ಮೇ :
ಮೇ ತಿಂಗಳಲ್ಲಿ ಜನಿಸಿದವರಲ್ಲಿ ಕಲಾತ್ಮಕ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ಇರಲಿದೆ. ಇವರಿಗೆ ಹೆಚ್ಚು ಸ್ನೇಹಿತರ ಬಳಗವೇ (group of friends) ಇರುತ್ತದೆ. ಯಾವಾಗಲು ಏನಾದರೂ ಕೆಲಸ ಮಾಡುತ್ತಲೇ ಇರಬೇಕು ಎಂಬ ವರ್ಗಕ್ಕೆ ಸೇರಿದವರು ಇವರು. ಕಷ್ಟದ ಸಮಯದಲ್ಲೂ ಆತ್ಮಸ್ಥೈರ್ಯ (self- confidence) ಕಳೆದುಕೊಳ್ಳದ ಜನರಾಗಿರುತ್ತಾರೆ.

ಇದನ್ನು ಓದಿ : Special news : ಯಾವುದೇ ಪ್ರಯೋಗಗಳನ್ನು ಮನುಷ್ಯರಿಗಿಂತ ಮುಂಚೆ ಇಲಿಗಳ ಮೇಲೆ ಮಾಡುವುದೇಕೆ.?

ಜೂನ್ :
ಈ ತಿಂಗಳಿನಲ್ಲಿ ಜನಿಸಿದವರು ತುಂಬಾ ಭಾವನಾತ್ಮಕ ಜೀವಿಗಳಾಗಿರುತ್ತಾರೆ (An emotional being). ಬೇರೆಯವರಿಗೆ ನೋವಾಗುವಂತೆ ನಡೆದುಕೊಳ್ಳದ ಮನೋಭಾವದವರು. ಯಾರಿಗಾದರೂ ಕಷ್ಟ ಎಂದರೆ ಅವರ ಸಹಾಯಕ್ಕೆ ಮೊದಲು ಬರುವ ವ್ಯಕ್ತಿಗಳಾಗಿರುತ್ತಾರೆ. ಇವರು ಎಲ್ಲ ಸಮಯದಲ್ಲೂ ಧನಾತ್ಮಕ ವಿಚಾರಗಳ (Positive thoughts) ಕುರಿತು ಯೋಚಿಸುತ್ತಾರೆ.

ಜುಲೈ :
ಜುಲೈನಲ್ಲಿ ಜನಿಸಿದ ವ್ಯಕ್ತಿಗಳು ಬಹುಬೇಗ ಕೋಪಗೊಂಡರೂ ಅಷ್ಟೇ ಬೇಗ ಶಾಂತಿಯಿಂದ (peaceful) ಎಲ್ಲವನ್ನು ನಿಭಾಯಿಸುವ ಗುಣ ಹೊಂದಿರುತ್ತಾರೆ. ಇವರು ಕುಟುಂಬಕ್ಕಾಗಿ ಯಾವ ರೀತಿಯ ಕಷ್ಟಗಳನ್ನು ಕೂಡ ಎದುರಿಸುವ ಮನಸ್ಸು ಉಳ್ಳವರು.

ಆಗಸ್ಟ್ :
ಆಗಸ್ಟ್‌ನಲ್ಲಿ ಜನಿಸಿದ ವ್ಯಕ್ತಿ ಎಲ್ಲರನ್ನು ಪ್ರೀತಿಸುವ ಗುಣಗಳ ಹೊಂದಿರುತ್ತಾರೆ. ಇವರು ಆಧ್ಯಾತ್ಮದ ಕಡೆಗೆ ಹೆಚ್ಚು ಒಲವು (More inclined towards spirituality) ಹೊಂದಿರುವವರು. ಕಷ್ಟಪಟ್ಟು ದುಡಿಯುವ ವರ್ಗಕ್ಕೆ ಸೇರಿದ ಮಂದಿ. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ಗುಣ ಇವರು ಹೊಂದಿರುತ್ತಾರೆ. ಹಿರಿಯರಿಗೆ, ಪ್ರೀತಿ ಪಾತ್ರರಲ್ಲಿ ವಿನಯದಿಂದ (Sincerely) ನಡೆದುಕೊಳ್ಳುವ ಗುಣ ಹೊಂದಿರುತ್ತಾರೆ.

ಇದನ್ನು ಓದಿ : ನೋ ಕೇಬಲ್, ನೋ ಸೆಟ್ಟಾಪ್ ಬಾಕ್ಸ್, ; ಉಚಿತ 500 ಚಾನೆಲ್ ಟಿವಿ ಸರ್ವೀಸ್ BSNL ನಿಂದ.!

ಸೆಪ್ಟೆಂಬರ್ :
ಸೆಪ್ಟೆಂಬರ್ ತಿಂಗಳಲ್ಲಿ ಜನಿಸಿದ ಜನರು ಆಲೋಚನೆಗಳನ್ನು ದೃಢವಾಗಿ ನಂಬುವ ಗುಣದವರು. ಬೇರೆಯವರ ಮಾತಿಗಿಂತ ಅವರ ಮೇಲೆ ಅವರಿಗೆ ನಂಬಿಕೆ ಹೆಚ್ಚಾಗಿರುತ್ತದೆ (They trust their words more than anyone else’s words).

ಅಕ್ಟೋಬರ್ :
ಅಕ್ಟೋಬರ್‌ನಲ್ಲಿ ಜನಿಸಿದ ವ್ಯಕ್ತಿಗಳು ಹೆಚ್ಚು ಪ್ರಮಾಣಿಕರು, ಬುದ್ಧಿವಂತರು, ಗುರಿ ಕಡೆಗೆ ಯಾವಾಗಲು ಯೋಚಿಸುವವರು (Conscientious, intelligent, always thinking towards the goal). ಇವರೆದುರು ವಾದ ಮಾಡುವುದು ಬಹಳ ಕಷ್ಟ. ಹೆಚ್ಚು ಹೆಚ್ಚು ವಿಚಾರಗಳನ್ನು ತಿಳಿಯಲು ಯಾವಾಗಲು ಮುಂದಾಗಿರುತ್ತಾರೆ.

ನವೆಂಬರ್ :
ನವೆಂಬರ್‌ನಲ್ಲಿ ಜನಿಸಿದವರು ಕುಟುಂಬಕ್ಕಾಗಿ ಯಾವುದೇ ಹಂತದಲ್ಲಿ ಕೆಲಸ ಮಾಡಲು ತಯಾರಿರುತ್ತಾರೆ. ಯಾರನ್ನಾದರೂ ಒಮ್ಮೆ ನಂಬಿದರೆ ಕುರುಡಾಗಿ ಅವರನ್ನೇ ಹಿಂಬಾಲಿಸುವ ಗುಣ ಹೊಂದಿರುತ್ತಾರೆ. ದಾನ ಧರ್ಮದಲ್ಲಿ ಹೆಚ್ಚು ನಂಬಿಕೆ (More faith in charity) ಇಟ್ಟಿದ್ದು ಧೈರ್ಯಶಾಲಿಗಳು, ಸಮಾಜಮುಖಿ ಕಾರ್ಯದಲ್ಲಿ ನಂಬಿಕೆ ಇಟ್ಟುಕೊಂಡಿರುತ್ತಾರೆ.

ಡಿಸೆಂಬರ್ :
ಡಿಸೆಂಬರ್ ತಿಂಗಳಲ್ಲಿ ಜನಿಸಿದ ಜನರು ಉದ್ಯೋಗ ಕ್ಷೇತ್ರ ಹಾಗೂ ಹಣಕಾಸು ಸ್ಥಿತಿಯ (Employment sector and financial status) ಬಗ್ಗೆ ಹೆಚ್ಚು ತಲೆ ಕೆಡೆಸಿಕೊಳ್ಳುವುದಿಲ್ಲ. ಯಾವುದೇ ವಿಚಾರದ ಬಗ್ಗೆ ಮಾತನಾಡಲು, ಕೆಲಸ ಮಾಡಲು ಹಿಂಜರಿಯುವುದಿಲ್ಲ ಇವರು. ಪ್ರೀತಿ ಉಳಿಸಿಕೊಳ್ಳಲು ಎಂತಹ ರಿಸ್ಕ್ ಕೂಡ ತೆಗೆದುಕೊಳ್ಳುತ್ತಾರೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments