Tuesday, October 22, 2024
spot_img
spot_img
spot_img
spot_img
spot_img
spot_img
spot_img

ತರಬೇತಿ ಪಡೆಯದೆ UPSC ಪರೀಕ್ಷೆಯಲ್ಲಿ ಉತ್ತೀರ್ಣರಾದ ಪಲ್ಲವಿ ಮಿಶ್ರಾ ಬಗ್ಗೆ ಗೊತ್ತಾ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ತನ್ನ ಮೊದಲ ಪ್ರಯತ್ನದಲ್ಲಿ ವಿಫಲಳಾಗಿ, ಎರಡನೇ ಪ್ರಯತ್ನದಲ್ಲಿ 73ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾದ ಈಕೆ ಎಲ್ಲರಿಗೂ ಸ್ಪೂರ್ತಿ.

ಅವರು ಯಾರೆಂದರೆ ತರಬೇತಿ ಪಡೆಯದೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪಲ್ಲವಿ ಮಿಶ್ರಾ.

ಇದನ್ನು ಓದಿ : ದೇಶಾದ್ಯಂತ 84 ಲಕ್ಷ ವಾಟ್ಸಾಪ್ ಖಾತೆಗಳು Ban; ಹೀಗೆ ಮಾಡಿದ್ರೆ ನಿಮ್ಮ ಅಕೌಂಟ್ ಬಂದ್ ಆಗುತ್ತೆ.!

ಪಲ್ಲವಿ ಮಿಶ್ರಾ ತಮ್ಮ ಶಾಲಾ ಶಿಕ್ಷಣವನ್ನು ಭೋಪಾಲ್‌ನಲ್ಲಿ ಪೂರ್ಣಗೊಳಿಸಿದರು ಮತ್ತು ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು. ಅವರು ಕಾನೂನು ಅಧ್ಯಯನದ ಜೊತೆಗೆ ಸಂಗೀತದಲ್ಲಿ ತುಂಬಾ ಆಸಕ್ತಿ ಹೊಂದಿದ್ದರು ಎಂದು ವರದಿಯಾಗಿದೆ.

ಪಲ್ಲವಿ ಅವರು ಕಾನೂನು ಪದವಿ ಪಡೆದ ನಂತರ ಸಂಗೀತದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದರು. ಮತ್ತು ಇದೀಗ ತರಬೇತಿ ಪಡೆದ ಶಾಸ್ತ್ರೀಯ ಗಾಯಕಿಯಾಗಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ಬಳಿಕ ಪಲ್ಲವಿ ಮಿಶ್ರಾ ಅವರು ಯುಪಿಎಸ್‌ಸಿ ಪರೀಕ್ಷೆ ಬರೆಯಲು ನಿರ್ಧರಿಸುತ್ತಾರೆ. ಪಲ್ಲವಿ ಅವರು ಯಾವುದೇ ತರಬೇತಿಯನ್ನು ಪಡೆಯದೇ ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆಯುತ್ತಾರೆ. ಆದರೆ ಅವರು ತಮ್ಮ ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾಗಲು ವಿಫಲರಾಗುತ್ತಾರೆ.

ಇದನ್ನು ಓದಿ : Special News : ಸಂಬಂಧದಲ್ಲಿ ಸ್ವತಂತ್ರವಾಗಿರಲು ಬಯಸುತ್ತಾರೆ ಈ ರಾಶಿಯವರು.!

ಆದರೆ ಛಲ ಬಿಡದ ಆಕೆ ಎರಡನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದು 73 ನೇ ರ‍್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ. ಈ ಮೂಲಕ ಐಎಎಸ್ ಅಧಿಕಾರಿಯಾಗುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಇನ್ನೂ ಪಲ್ಲವಿ ಮಿಶ್ರಾ, ಹಿರಿಯ ಸಹೋದರ ಆದಿತ್ಯ ಮಿಶ್ರಾ ಅವರು ಐಪಿಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಇಂದೋರ್‌ನ ಡೆಪ್ಯುಟಿ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img