ಜನಸ್ಪಂದನ ನ್ಯೂಸ್, ಬೆಂಗಳೂರು : ನಗರ ಸಶಸ್ತ್ರ ಮೀಸಲು ಪ್ರಧಾನ ಕಚೇರಿ (CAR) ಹೆಡ್ಕಾನ್ಸ್ಟೇಬಲ್ ವಿರುದ್ಧ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದೆ.
ಹೆಡ್ಕಾನ್ಸ್ಟೇಬಲ್ ಆಗಿರುವ ಪ್ರಶಾಂತ್ ಕುಮಾರ್ ಅವರ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ.
ಇದನ್ನು ಓದಿ : ಪಾನಿಪುರಿಯನ್ನು ಬಾಯಿ ಚಪ್ಪರಿಸಿ ತಿನ್ನುವುದಕ್ಕಿಂತ ಮುಂಚೆ ಈ ವಿಡಿಯೋವನ್ನೊಮ್ಮೆ ನೋಡಿ.
ಮಹಾಲಕ್ಷ್ಮೀ ಲೇಔಟ್ ನಿವಾಸಿ ಮಹಿಳೆ ದೂರು ನೀಡಿದ್ದಾರೆ. ದೂರು ಆಧರಿಸಿ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
2011ರಲ್ಲಿ ದೂರುದಾರೆ ಮಹಿಳೆ ಅವರಿಗೆ ಪ್ರಶಾಂತ್ ಕುಮಾರ್ ಪರಿಚಯವಾಗಿದ್ದಾರೆ. ತಮ್ಮ ಇಬ್ಬರು ಮಕ್ಕಳಿಗೆ ಸರ್ಕಾರಿ ಕೆಲಸ ಕೊಡಿಸಿ ಎಂದು ಮಹಿಳೆ ಪ್ರಶಾಂತ್ ಕುಮಾರ್ ಅವರಿಗೆ ಹೇಳಿದ್ದಾರೆ. ಅದಕ್ಕೆ ಪ್ರಶಾಂತ್ ಕುಮಾರ್ ನನಗೆ ಹಲವು ಸರ್ಕಾರಿ ಅಧಿಕಾರಿಗಳು ಪರಿಚಯ ಇದ್ದಾರೆ. ನಿಮ್ಮ ಇಬ್ಬರು ಮಕ್ಕಳಿಗೆ ಕೆಲಸ ಕೊಡಿಸುತ್ತೇನೆ ಎಂದಿದ್ದರು.
ಕೆಲ ದಿನಗಳ ಬಳಿಕ ಪೇದೆ ಪ್ರಶಾಂತ್ ಕುಮಾರ್, ನಿಮ್ಮ ಇಬ್ಬರು ಮಕ್ಕಳಿಗೆ ಮೂರು ತಿಂಗಳಲ್ಲಿ ಎಫ್ಡಿಎ, ಎಸ್ಡಿಎ ಶ್ರೇಣಿಯ ಕೆಲಸ ಕೊಡಿಸುವೆ. ಇದಕ್ಕಾಗಿ 25 ಲಕ್ಷ ರೂ. ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ.
ಅಲ್ಲದೇ ಪೇದೆ ಪ್ರಶಾಂತ್ ಕುಮಾರ್, ಮಂಜುನಾಥ್ ಪ್ರಸಾದ್ ಎಂಬುವರನ್ನು ತನ್ನ ಪಿಎ ಎಂದು ಭಾಗ್ಯಮ್ಮ ಅವರಿಗೆ ಪರಿಚಯ ಮಾಡಿಸಿದ್ದಾನೆ. ನಂತರ ಆರೋಪಿಗಳು ಭಾಗ್ಯಮ್ಮ ಅವರಿಂದ ಒಟ್ಟು 47 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಜೊತೆಗೆ 857 ಗ್ರಾಂ. ಚಿನ್ನಾಭರಣವನ್ನೂ ಪಡೆದಿದ್ದಾರೆ.
ಇದನ್ನು ಓದಿ : ಬೆಳಗಾವಿಯ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಹೀಗಾಗಿ ಭಾಗ್ಯಮ್ಮ ಆರೋಪಿಗಳ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಂಜುನಾಥ್ ಪ್ರಸಾದ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರಶಾಂತ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.