ಜನಸ್ಪಂದನ ನ್ಯೂಸ್, ಡೆಸ್ಕ್ : ಮದುವೆ ಸಂಭ್ರಮ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ (return) ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ (terrible accident) ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ನವ ವಧು- ವರ ಇದ್ದ ಕಾರು ಓವರ್ ಟೇಕ್ ಮಾಡುವ ವೇಳೆ ಎದುರಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಕಾರಿನಲ್ಲಿದ್ದ ವಧು ವರ ಸೇರಿ ಒಂದೇ ಕುಟುಂಬದ ಆರು ಜನ (Six members of the same family) ಹಾಗೂ ರಿಕ್ಷಾ ಚಾಲಕ ಸೇರಿ ಒಟ್ಟು 7 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿ : Belagavi : ಬೆಳಗಾವಿಯಲ್ಲಿ ಹೀನ ಕೃತ್ಯ ; ಸಾರ್ವಜನಿಕವಾಗಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ.!
ಮದುವೆ ಕಾರ್ಯಕ್ರಮ ಮುಗಿಸಿ ತಡರಾತ್ರಿ ಕಾರಿನಲ್ಲಿ ಹಿಂತಿರುಗಿದ ಕುಟುಂಬ ಸದಸ್ಯರಿದ್ದ ಕಾರು ವಾಪಸ್ಸಾಗುತ್ತಿದ್ದ ವೇಳೆ ಧಂಪುರದ ರಾಷ್ಟ್ರೀಯ ಹೆದ್ದಾರಿ 74ರಲ್ಲಿ (National Highway 74) ದಟ್ಟ ಮಂಜು ಆವರಿಸಿದೆ.
ಈ ವೇಳೆ ಮುಂದೆ ಸಾಗುತ್ತಿದ್ದ ಮತ್ತೊಂದು ವಾಹನವನ್ನು ಓವರ್‌ಟೇಕ್ ಮಾಡುವ ವೇಳೆ ವಿರುದ್ಧ ದಿಕ್ಕಿನಲ್ಲಿ (opposite direction) ಬರುತ್ತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆ ಬದಿಯಲ್ಲಿದ್ದ ಕಮರಿಗೆ ಉರುಳಿ ಈ ಅಪಘಾತ ಸಂಭವಿಸಿದೆ.
ಕಾರಿನಲ್ಲಿದ್ದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ (serious injuries) ರಿಕ್ಷಾ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : Health : ಯಾವುದೇ ಕೆಲಸ ಮಾಡದಿದ್ದರೂ ದಣಿವಾಗುತ್ತಿದೆಯೇ? ನಿಮಗೆ ಈ ಆರೋಗ್ಯ ಸಮಸ್ಯೆ ಇರಬಹುದು.!
ಅಪಘಾತದ ಬಗ್ಗೆ ಬಿಜ್ನೋರ್ (Bijnor) ಎಸ್ಪಿ ಅಭಿಷೇಕ್ ಅವರು, ಕಾರಿನಲ್ಲಿ ವಧು ವರ ಸೇರಿ ಸುಮಾರು ಹನ್ನೊಂದು ಮಂದಿ ಇದ್ದರು ಎಂದು ತಿಳಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಹಿಂದಿನ ಸುದ್ದಿ ಓದಿ : ರಾತ್ರಿ 10 ಗಂಟೆಯ ನಂತರ ದೇಹವು ಈ ಸೂಚನೆಯನ್ನು ನೀಡುತ್ತಿದೆಯೇ? ಇದು stroke ಆಗಿರಬಹುದು.!
ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚೆಗೆ ಯುವ ಪೀಳಿಗೆಯವರಿಗೆ ಹೃದಯಾಘಾತ (heart attack), ಪಾರ್ಶ್ವವಾಯು, ಕ್ಯಾನ್ಸರ್‌ನಂತಹ ಸಮಸ್ಯೆಗಳು ಕಾಡಿಸುತ್ತೀವೆ.
ಅದರಲ್ಲಿಯೂ ಪಾರ್ಶ್ವವಾಯು (stroke) ಹಿಂದೆ ಹಿರಿಯರಿಗೆ ಕಾಡುವ ಕಾಯಿಲೆ ಎಂಬ ನಂಬಿಕೆ ಇತ್ತು. ಆದರೆ ಚಿಕ್ಕ ವಯಸ್ಸಿನಲ್ಲಿಯೇ ಸ್ಟ್ರೋಕ್ ಸಮಸ್ಯೆ ಹೆಚ್ಚಾಗುತ್ತಿರುವುದು ಕೂಡ ಆತಂಕ ಹೆಚ್ಚಲು ಕಾರಣವಾಗಿದೆ. ಇದಕ್ಕೆ ಹಲವಾರು ರೀತಿಯ ಕಾರಣಗಳಿರಬಹುದು.
ಇದನ್ನು ಓದಿ : ಅಪ್ರಾಪ್ತ ಪತ್ನಿ ಜೊತೆ ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆಸುವುದು ಸಹ ಅತ್ಯಾಚಾರಕ್ಕೆ ಸಮ; Highcourt.!
ಸಾಮಾನ್ಯವಾಗಿ ನಮ್ಮ ಮೆದುಳಿಗೆ ರಕ್ತ ಸಂಚಾರದಲ್ಲಿ (blood circulation to brain) ಏರುಪೇರಾದಾಗ ಸ್ಟ್ರೋಕ್ ಸಮಸ್ಯೆ ಬರುತ್ತದೆ. ಮೆದುಳಿಗೆ ರಕ್ತ ಸಂಚಾರ ಏರುಪೇರು ಉಂಟಾಗಲು ಹಲವು ಕಾರಣಗಳಿವೆ ಎಂಬುದು ಕೂಡ ಸಾಬೀತಾಗಿದೆ. ಕೊಲೆಸ್ಟ್ರಾಲ್ ಹೆಚ್ಚಾಗಿರುವುದು, ಮೆದುಳಿಗೆ ರಕ್ತ ಸಂಚಾರಕ್ಕೆ ಕಾರಣವಾದ ರಕ್ತನಾಳವು ಅಶಕ್ತ ಆಗಿರುವುದು. ಹೀಗೆ ಇವು ಪ್ರಮುಖ ಕಾರಣಗಳಾಗಿವೆ.
ಆದರೆ ಪಾರ್ಶ್ವವಾಯು ಬರುವ ಮುಂಚೆ ನಮ್ಮ ದೇಹವು ಹಲವು ರೀತಿಯ ಸೂಚನೆಗಳನ್ನು ನೀಡುತ್ತದೆ. ಅದರಲ್ಲಿಯೂ ರಾತ್ರಿ ಮಲಗಿದ ವೇಳೆ ಈ ರೀತಿಯ ಸೂಚನೆಗಳನ್ನು ನಿಮ್ಮ ದೇಹ ನೀಡುತ್ತಿದೆ ಎಂದಾದರೆ ಖಂಡಿತವಾಗಿಯೂ ನೀವು ಅದನ್ನು ನಿರ್ಲಕ್ಷಿಸಬಾರದು (neglected).
ಇದನ್ನು ಓದಿ : ಹೆಣ್ಣು ಹುಡುಕಿ ಕೊಡದ ಮ್ಯಾಟ್ರಿಮೋನಿ ಪೋರ್ಟಲ್ಗೆ ದಂಡ ವಿಧಿಸಿದ court; ಎಷ್ಟು ಗೊತ್ತಾ.?
ಹೆಚ್ಚಿನ ಜನರು ರಾತ್ರಿ ಮಲಗಿದ್ದಾಗಲೇ ಸ್ಟ್ರೋಕ್‌ಗೆ ಒಳಗಾಗುತ್ತಾರೆ ಎಂದು ಸಂಶೋಧನೆಗಳು ಹೇಳುತ್ತವೆ. ರಾತ್ರಿ 10 ಗಂಟೆಯ ಬಳಿಕ ದೇಹದಲ್ಲಿ ಯಾವ ಬದಲಾವಣೆಗಳು ಪಾರ್ಶ್ವವಾಯುವಿನ ಸೂಚನೆ ನೀಡುತ್ತವೆ ಅಂತ ಮುಂದೆ ಓದಿ.
* ರಾತ್ರಿ ವೇಳೆ ಏಕಾಏಕಿ (suddenly) ತಲೆನೋವು (headache) ಕಾಣಿಸಿಕೊಳ್ಳುವುದು. ಸ್ಟ್ರೋಕ್‌ಗೆ ಕಾರಣವಾಗುವ ತಲೆನೋವು ಸ್ವಲ್ಪ ಭಿನ್ನವಾಗಿರುತ್ತದೆ. ತಲೆ ಸಿಡಿಯುವಂತೆ ನೋವು ಉಂಟಾಗುವುದು, ಗಾಢ ನಿದ್ರೆಯಲ್ಲೂ ತಲೆ ನೋವು ಉಲ್ಬಣಗೊಳ್ಳುವುದು, ಒಮ್ಮೊಮ್ಮೆ ತಲೆನೋವಿನಿಂದ ನರಳುವ (suffering) ಪರಿಸ್ಥಿತಿ ಬರುವುದು.
ಇದನ್ನು ಓದಿ : Health : ಬೆಳಿಗ್ಗೆ ಗೋಡಂಬಿಯನ್ನು ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು.!
* ರಾತ್ರಿ ವೇಳೆ ಮಲಗಿದ ಬಳಿಕ ಎಚ್ಚರವಾದಾಗ ಮಾತನಾಡಲು ನೀವು ಕಷ್ಟಪಡುತ್ತಿದ್ದರೆ ಅಥವಾ ಮಾತನಾಡುವಾಗ ತೊದಲುತ್ತಿದ್ದರೆ ಇದು ಕೂಡ ಸ್ಟ್ರೋಕ್‌ನ ಸೂಚನೆಯಾಗಿದೆ. ಅಂತಹ ರೋಗ ಲಕ್ಷಣಗಳನ್ನು ನಿರ್ಲಕ್ಷಿಸಬಾರದು.
* ದೇಹದ ಒಂದು ಭಾಗದಲ್ಲಿ ಹಠಾತ್ ಆಗಿ ಮರುಗಟ್ಟುವಂತೆ (recap) ಆಗುವುದು ಅಥವಾ ದೌರ್ಬಲ್ಯ ಉಂಟಾಗಬಹುದು.
ಇದನ್ನು ಓದಿ : ರಾತ್ರಿ 10 ಗಂಟೆಯ ನಂತರ ದೇಹವು ಈ ಸೂಚನೆಯನ್ನು ನೀಡುತ್ತಿದೆಯೇ? ಇದು stroke ಆಗಿರಬಹುದು.!
* ಪಾರ್ಶ್ವವಾಯುವಿನ ಮುನ್ಸೂಚನೆಗಳಲ್ಲಿ ಹಠಾತ್ ತಲೆ ತಿರುಗುವಿಕೆ (vertigo) ಒಂದು. ಬಹಳಷ್ಟು ಜನರಲ್ಲಿ ಬೇರೆ ಬೇರೆ ಕಾರಣಕ್ಕೆ ಕಾಣಿಸಿಕೊಳ್ಳಬಹುದು. ಆದರೆ ಎಚ್ಚರಿಕೆ ವಹಿಸುವುದು ಒಳ್ಳೆಯದು.
* ರಾತ್ರಿ ಮಲಗಿದ ಸಮಯದಲ್ಲಿ ದೃಷ್ಟಿ ಸಮಸ್ಯೆ ಎದುರಾಗುವುದು ಕೂಡ ಪಾರ್ಶ್ವವಾಯುವಿನ ಸೂಚನೆಯಾಗಿದೆ. ದೃಷ್ಟಿ ಮಸುಕಾಗುವಂತೆ (Blurred vision) ಆಗುವುದು, ಒಂದು ವಸ್ತು ಎರಡು ಮೂರು ರೀತಿ ಕಾಣಿಸುವುದು.
ಇದನ್ನು ಓದಿ : ರಾತ್ರಿ 10 ಗಂಟೆಯ ನಂತರ ದೇಹವು ಈ ಸೂಚನೆಯನ್ನು ನೀಡುತ್ತಿದೆಯೇ? ಇದು stroke ಆಗಿರಬಹುದು.!
Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಗಳು ಮತ್ತು ವರದಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ ಜನಸ್ಪಂದನ ನ್ಯೂಸ್‌ಗೂ (Janaspandhan News), ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.