ಜನಸ್ಪಂದನ ನ್ಯೂಸ್, ಡೆಸ್ಕ್ : ಅಂದಾಜು 25 ಕೋಟಿ ರೂ. ಮೌಲ್ಯದ ಚಿನ್ನಾಭರಣ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿರುವ ಘಟನೆ ಬಿಹಾರದ ಆರ್ರಾ ಪ್ರದೇಶದಲ್ಲಿ ನಡೆದಿದೆ.
ಇಂದು ಸೋಮವಾರ (ಮಾ.10) ಬಿಹಾರದ ಆರ್ರಾ ಪ್ರದೇಶದಲ್ಲಿರುವ ತನಿಷ್ಕ್ ಜ್ಯುವೆಲ್ಲರ್ಸ್ ಶೋರೂಮ್ನಲ್ಲಿ ಅಂದಾಜು 25 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು ಹಣ ದೋಚ್ಚಿ ಪರಾರಿಯಾಗಿರುವ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.
ಇದನ್ನು ಓದಿ : ಬೇಸಿಗೆಯಲ್ಲಿ ಯಾವ Juice ಕುಡಿಯುವುದು ಆರೋಗ್ಯಕ್ಕೆ ಉತ್ತಮ ಗೊತ್ತಾ.?
ಘಟನೆಯ ಸಂಪೂರ್ಣ ದೃಶ್ಯ CCTV ಯಲ್ಲಿ ಸೆರೆಯಾಗಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಸದ್ಯ ಅರ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತನಿಖೆ ಮುಂದರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನು ಓದಿ : 8 ಅಡಿ ಉದ್ದದ ಹಾವನ್ನು ಹಿಡಿದು ಹಗ್ಗದಂತೆ ಸ್ಕಿಪ್ಪಿಂಗ್ ಆಡಿದ ಮಕ್ಕಳು ; ವಿಡಿಯೋ ವೈರಲ್.!
ಚಿನ್ನಾಭರಣ, ಬಂಗಾರ ಸರಗಳು, ನೆಕ್ಲೇಸ್ ಮತ್ತು ಕೆಲ ವಜ್ರಗಳು ಹಾಗೂ ನಗದು ಹಣ ಸೇರಿ ಬಾಳುವ ವಸ್ತುಗಳನ್ನು ದರೋಡೆಕೊರರು ದೋಚ್ಚಿ ಪರಾರಿಯಾಗಿದ್ದಾರೆಂದು ಶೋರೂಮ್ ಮಾಲೀಕ ಕುಮಾರ್ ಮೃತ್ಯುಂಜಯ ಮಾಧ್ಯಮಗಳಿಗೆ ಹೇಳಿದ್ದಾರೆ.
ದರೋಡೆಕೋರರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶೋರೂಮ್ನ ಕರೆಗೆ ಪೊಲೀಸರು ಮೊದಲು ಸ್ಪಂದಿಸಲಿಲ್ಲ ಎಂದು ಆರೋಪಿಸಿದ್ದಾರೆ.
ಇದನ್ನು ಓದಿ : ಮೊಬೈಲ್‌ನಲ್ಲಿ ಮಾತನಾಡುತ್ತಾ ಮಗುವನ್ನ ಆಟೋದಲ್ಲೇ ಬಿಟ್ಟು ಹೋದ ತಾಯಿ ; ಚಾಲಕ ಮಾಡಿದ್ದೇನು.? ಈ ವಿಡಿಯೋ ನೋಡಿ.!
8 ರಿಂದ 9 ಶಸ್ತ್ರಾಸ್ತ್ರ ಇದ್ದ ಜನರಿರುವ ತಂಡ ಜ್ಯುವೆಲ್ಲರ್ಸ್ ಶೋರೂಮ್ಗೆ ನುಗ್ಗಿ ಒಳಗೆ ಇದ್ದ ಸಿಬ್ಬಂದಿ ಮತ್ತು ಉದ್ಯೋಗಿಗಳಿಗೆ ಗನ್ ತೋರಿಸಿ ಬೆದರಿಸುತ್ತಿರುವುದು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯಲ್ಲಿ ಕಂಡುಬಂದಿದೆ.
ನಂತರ ದರೋಡೆಕೋರರು ಕೌಂಟರ್ (counter) ನಲ್ಲಿದ್ದ ನಗದು (cash) ಮತ್ತು ಹಲವಾರು ಆಭರಣಗಳನ್ನು ದೋಚಿರುವ ದೃಶ್ಯಗಳು CCTVಯಲ್ಲಿ ಸೆರೆಯಾಗಿವೆ.
ವಿಡಿಯೋ ನೋಡಿ :
VIDEO | Armed robbers stormed a Tanishq showroom in Bihar's Arrah this morning and looted jewellery worth crores. The robbery took place at the Gopali Chowk branch in the Arrah police station area and the incident was caught in the CCTV installed inside the showroom.
(Video… pic.twitter.com/sU44vmpWwo
— Press Trust of India (@PTI_News) March 10, 2025
ಹಿಂದಿನ ಸುದ್ದಿ : ಲಾರಿಗೆ ಗುದ್ದಿದ ಕಾರು : ಸ್ಥಳದಲ್ಲಿಯೇ ಐವರು ಸಾ*.!
ಜನಸ್ಪಂದನ ನ್ಯೂಸ್, ಚಿತ್ರದುರ್ಗ : ಲಾರಿಗೆ ಇನ್ನೋವಾ ಕಾರು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ತಾಲೂಕಿನ ಸಿಬಾರಾ ಗ್ರಾಮದ ಬಳಿ ನಡೆದಿದೆ.
ಇದನ್ನು ಓದಿ : ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಚಿತ್ರದುರ್ಗ ತಾಲೂಕಿನ ಸಿಬಾರ ಗ್ರಾಮದ ಬಳಿ ಇಂದು (ಮಾ. 09) ಈ ದುರ್ಘಟನೆ ಸಂಭವಿಸಿದ್ದು, ಅಪಘಾತದಲ್ಲಿ ಮೃತಪಟ್ಟ ಕಾರಿನವರ ಗುರುತು ಪತ್ತೆಯಾಗಿಲ್ಲ.
ದಾವಣಗೆರೆ ಕಡೆಯಿಂದ ಬೆಂಗಳೂರು ಕಡೆಗೆ ಚಲಿಸುತ್ತಿದ್ದ ಇನ್ನೋವಾ ಕಾರು ವೇಗವಾಗಿ ಬಂದು ಚಾಲಕನ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.
ಇದನ್ನು ಓದಿ : ಮಾಲೀಕ ತೀರಿಕೊಂಡಾಗ ಈ ನಾಯಿ ಅಳು ನೋಡಿದರೆ ನೀವೂ ಭಾವುಕರಾಗುತ್ತಿರಿ ; ನೋಡಿ ಹೃದಯಸ್ಪರ್ಶಿ Video.!
ಡಿಕ್ಕಿ ರಬ್ಬಸಕ್ಕೆ ಕಾರಿನಲ್ಲಿದ್ದ ಆರು ಜನರ ಪೈಕಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಸ್ಥಿತಿ ಗಂಭೀರವಾಗಿದ್ದು, ಕೂಡಲೇ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಇನ್ನು ಈ ದುರ್ಘಟನೆಯಲ್ಲಿ ಸಾವಗೀಡಾದ ದುರ್ದೈವಿಗಳನ್ನು ಬೆಂಗಳೂರು ಮೂಲದ ಬಿಎಂಟಿಸಿ ನಿವೃತ್ತ ನೌಕರ ಶಾಂತಮೂರ್ತಿ(60), ವಿದ್ಯಾರಣ್ಯಪುರದ ರುದ್ರಸ್ವಾಮಿ(52), ಬೆಂಗಳೂರು ಉತ್ತರದ ಈರಣ್ಣ ಬಡಾವಣೆಯ ಮಲ್ಲಿಕಾರ್ಜುನ(50) ಎಂದು ಮೃತರ ಗುರುತು ಪತ್ತೆಯಾಗಿದೆ.
ಇದನ್ನು ಓದಿ : Airportನಲ್ಲಿ ಗುಂಡು ಹಾರಿಸಿಕೊಂಡು ಮಹಿಳಾ ಹೆಡ್ ಕಾನ್ಸ್‌ಟೇಬಲ್ ಆತ್ಮಹ*!
ಮೃತರಾದ ಇನ್ನಿಬ್ಬರ ಗುರುತು ಪತ್ತೆಯಾಗಿಲ್ಲ ಎಂದು ಹೇಳಲಾಗುತ್ತಿದ್ದು, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.