ಜನಸ್ಪಂದನ ನ್ಯೂಸ್, ಡೆಸ್ಕ್ : ಬೈಕ್ ಸವಾರರು, ಕಾರು, ಲಾರಿ ಚಾಲಕರು (drivers) ಟ್ರಾಫಿಕ್ ನಿಯಮಗಳನ್ನು (traffic rules) ಸರಿಯಾಗಿ ಅನುಸರಿಸುತ್ತಾರಾ ಅಥವಾ ಇಲ್ಲವಾ ಎಂಬುದನ್ನು ಪರಿಶೀಲನೆ ಮಾಡಲು ರಸ್ತೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿರುತ್ತದೆ.
ಒಂದು ವೇಳೆ ಸವಾರರು ರಸ್ತೆ ಸುರಕ್ಷಾ ನಿಯಮಗಳನ್ನು (Road safety rules) ಪಾಲನೆ ಮಾಡದಿದ್ದರೆ ಅವರಿಗೆ ದಂಡ ಫಿಕ್ಸ್. ಅದರಲ್ಲಿಯೂ ಮಹಾನಗರಗಳಲ್ಲಿ (In big cities) ಹೆಲ್ಮೆಟ್ ಕಡ್ಡಾಯವಾಗಿರುತ್ತದೆ. ಒಮ್ಮೆ ಪೊಲೀಸರು ವಾಹನ ತಡೆದು ನಿಲ್ಲಿಸಿದ್ರೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸುತ್ತಾರೆ.
ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪೊಲೀಸರು ಯಾವುದೇ ದಂಡ ವಿಧಿಸದೇ ಹಾಗೆ ಕಳುಹಿಸಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಇದನ್ನು ಓದಿ : ನಗ್ನವಾಗಿ ರೈಲು ಹತ್ತಿದ ವ್ಯಕ್ತಿ : ಶಾಕ್ ಆದ ಮಹಿಳಾ ಪ್ರಯಾಣಿಕರು ; ವಿಡಿಯೋ ವೈರಲ್.!
ವೈರಲ್ ವಿಡಿಯೋದಲ್ಲಿರುವ ದೃಶ್ಯ :
ಬೈಕ್ ಸವಾರನೋರ್ವನನ್ನು ತಡೆದ ಪೊಲೀಸರು, ಏನಯ್ಯಾ ಹೀಗೆ ನುಗ್ಗುತ್ತಿದ್ದೀಯಾ? ಎರಡನೇ ಮದುವೆ (second marriage) ಆಗಬೇಕೆಂದು ಅಂದ್ಕೊಂಡಿದ್ದೀಯಾ? ಎದುರು ಟ್ರಕ್ ಬರುತ್ತಿದ್ರೂ ಹೀಗೆ ನುಗುತ್ತಿದ್ದೀಯಾ? ಹುಷಾರು, ನಿಧಾನವಾಗಿ ಬೈಕ್ ಓಡಿಸು ಎಂದು ಪೊಲೀಸರು ಹೇಳುತ್ತಾರೆ.
ಇದಕ್ಕೆ ಸವಾರ ಸಹ ಇನ್ಮುಂದೆ ಹೀಗೆ ಮಾಡಲ್ಲ ಎಂದು ಹೇಳುತ್ತಾನೆ. ಅವನ ಮಾತಿಗೆ ಪೊಲೀಸರು ಯಾವುದೇ ದಂಡ ಹಾಕದೇ ಕಳುಹಿಸುತ್ತಾರೆ.
ಇದನ್ನು ಓದಿ : ಸಿಕ್ಕೇ ಬಿಟ್ಟಿತ್ತು Cancer ರೋಗಿಗಳಿಗೆ ಗುಡ್ ನ್ಯೂಸ್.!
ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಈ ಘಟನೆ ಎಲ್ಲಿಯದ್ದು ಎಂಬ ಮಾಹಿತಿ ತಿಳಿದು ಬಂದಿಲ್ಲ. ವಿಡಿಯೋ ನೋಡಿದ ನೆಟ್ಟಿಗರು ಟ್ರಾಫಿಕ್ ಪೊಲೀಸರಿಂದ ದಂಡ ಹಾಕಿಸಿಕೊಳ್ಳಬಾರದು ಅಂದ್ರೆ ಸುಂದರ ಯುವತಿಯರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕಾ? ಎಂದು ಪ್ರಶ್ನಿಸುತ್ತಿದ್ದಾರೆ.
ಈ ವಿಡಿಯೋವನ್ನು Arey BC ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಈ ವಿಡಿಯೋಗೆ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.
View this post on Instagram
ಹಿಂದಿನ ಸುದ್ದಿ : SBIನಲ್ಲಿ ಖಾಲಿ ಇರುವ 13,735 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI- State Bank Of India)ಕ್ಲರ್ಕ್ ನೇಮಕಾತಿ 2024 ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ಇದನ್ನು ಓದಿ : ವೃದ್ದರನ್ನು ಬಹಳ ಹೊತ್ತು ಕಾಯಿಸಿದ ಅಧಿಕಾರಿಗಳಿಗೆ ನಿಂತು ಕೆಲಸ ಮಾಡುವ ಶಿಕ್ಷೆ ನೀಡಿದ IAS ಆಫೀಸರ್.!
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು SBI ನ ಅಧಿಕೃತ ವೆಬ್‌ಸೈಟ್ (Official website) sbi.co.in ನಲ್ಲಿ ಪರಿಶೀಲನೆ ಮಾಡಬಹುದು.
ಹುದ್ದೆಗಳ ವಿವರ :
* ನೇಮಕಾತಿ ಮಾಡಬೇಕಾದ ಬ್ಯಾಂಕ್ ಹೆಸರು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
* ಹುದ್ದೆ ಹೆಸರು : ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್ ಮತ್ತು ಸೇಲ್ಸ್) Junior Associate (Customer Support & Sales)
* ವೇತನ ಶ್ರೇಣಿ : ಮಾಸಿಕ ಆರಂಭಿಕ ವೇತನ ರೂ 26730 /-
* ಕರ್ನಾಟಕದಲ್ಲಿ ಜೂನಿಯರ್ ಅಸೋಸಿಯೇಟ್ಸ್ ಹುದ್ದೆಗಳು : 50
* ಒಟ್ಟು ಹುದ್ದೆಗಳ ಸಂಖ್ಯೆ : 13,735
ಶೈಕ್ಷಣಿಕ ಅರ್ಹತೆ :
* ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆ (Any equivalent qualification recognized by Central Govt) ಪಡೆದಿರಬೇಕು.
* ತಾವು ಅರ್ಜಿ ಸಲ್ಲಿಸುತ್ತಿರುವ ರಾಜ್ಯದ ಸ್ಥಳೀಯ ಭಾಷೆಯನ್ನು ಅಭ್ಯರ್ಥಿಗಳು ಬಲ್ಲವರಾಗಿರಬೇಕು.
ಇದನ್ನು ಓದಿ : ವೇಗವಾಗಿ ಬಂದು ಡಿಕ್ಕಿಯಾದ ಪೊಲೀಸ್ ಜೀಪ್; ಮುಂದೆನಾಯ್ತು? ಆಘಾತಕಾರಿ Video ನೋಡಿ.!
ಆಯ್ಕೆ ಪ್ರಕ್ರಿಯೆ :
* ಪೂರ್ವಭಾವಿ ಪರೀಕ್ಷೆ/ ಮುಖ್ಯ ಪರೀಕ್ಷೆ ಹಾಗೂ ಭಾಷಾ ಪ್ರಾವಿಣ್ಯತೆ (Language proficiency) ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
* ಪೂರ್ವಭಾವಿ ಪರೀಕ್ಷೆಯು (Preliminary examination) 100 ಅಂಕಗಳಿಗೆ ವಸ್ತುನಿಷ್ಠ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ.
* ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ (online) ನಡೆಸಲಾಗುವುದು.
ವಯಸ್ಸಿನ ಮಿತಿ :
ಅಭ್ಯರ್ಥಿಯ ವಯಸ್ಸಿನ ಮಿತಿಯು 01.04.2024 ರಂತೆ 20 ವರ್ಷಗಳಿಗಿಂತ ಕಡಿಮೆ ಮತ್ತು 28 ವರ್ಷಕ್ಕಿಂತ ಹೆಚ್ಚಿರಬಾರದು.
ಅರ್ಜಿ ಶುಲ್ಕ :
* ಸಾಮಾನ್ಯ/ OBC/ EWS : ₹ 750/-
* ಪರಿಶಿಷ್ಟ ಜಾತಿ ಹಾಗೂ ಪಂಗಡ, ಅಂಗವಿಕಲ ವರ್ಗ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
ಪ್ರಮುಖ ದಿನಾಂಕಗಳು :
ಅಪ್ಲಿಕೇಶನ್ ಆರಂಭ ದಿನಾಂಕ : ಡಿಸೆಂಬರ್ 17, 2024
ಅಪ್ಲಿಕೇಶನ್‌ನ ಕೊನೆಯ ದಿನಾಂಕ : ಜನವರಿ 7, 2025