ಜನಸ್ಪಂದನ ನ್ಯೂಸ್, ಡೆಸ್ಕ್ : ಪೊಲೀಸ್ ವಾಹನವೊಂದು (police vehicle) ಅತಿ ವೇಗವಾಗಿ ಬಂದು ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡಿರುವ (serious injuries) ಘಟನೆ ಕಾನ್ಪುರದಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಕಾನ್ಪುರದ (Kanpur) ಸಚೇಂಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.
ಘಟನೆಗೆ ಸಂಬಂಧಿಸಿದಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (social media) ವೈರಲ್ (Viral Video) ಆಗಿದೆ.
ಇದನ್ನು ಓದಿ : Prostitution : ವೇಶ್ಯೆವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ; ಐವರು ಮಹಿಳೆಯರ ರಕ್ಷಣೆ.!
ವ್ಯಕ್ತಿಯು ರಸ್ತೆ ದಾಟುತ್ತಿದ್ದ ವೇಳೆ ಅತಿ ವೇಗದಿಂದ ಪೊಲೀಸ್ ವಾಹನವು ಬಂದು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಅಪಘಾತದ ಭೀಕರತೆಗೆ( horror of the accident) ವ್ಯಕ್ತಿ ಗಾಳಿಯಲ್ಲಿ ಹಾರಿ ಹೋಗಿ ರಸ್ತೆಯ ಇನ್ನೊಂದು ಬದಿಗೆ ಬಿದ್ದಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಏನಾಗಿದೆ ಎಂದು ನೋಡದೇ ಪೊಲೀಸ್ ಜೀಪ್ ನಿಲ್ಲದೇ ಘಟನಾ ಸ್ಥಳದಿಂದ ವೇಗವಾಗಿ ಮುಂದೆ ಸಾಗಿದೆ. ಅಪಘಾತದ ಬಳಿಕ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಇನ್ನೂ ವಾಹನವನ್ನು ಚಾಲನೆ ಮಾಡುತ್ತಿದ್ದ ಕಾನ್ಸ್‌ಟೇಬಲ್ ಅಪಘಾತದ ನಂತರ ವ್ಯಕ್ತಿಯ ಕುಟುಂಬದೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬುದಾಗಿ ವರದಿಯಾಗಿದೆ.
ವೈರಲ್ ವಿಡಿಯೋ ಇಲ್ಲಿದೆ :
सचेंडी इलाके में #पुलिस की जीप ने एक युवक को टक्कर मारी,जिसके बाद युवक हवा में उछलकर कई फीट दूर जा गिरा
घायल लड़के का बिना हाल-चाल लिए, उसे बिना अस्पताल पहुंचाये और बिना रुके उसी रफ्तार में जीप आगे निकल गई
इसके बाद दोस्तों द्वारा उसे अस्पताल ले जाया गया,घटना का… pic.twitter.com/97fKUWL7kO
— Simer Chawla (@Simerchawla20) December 16, 2024
ಹಿಂದಿನ ಸುದ್ದಿ : ಆತ್ಮಹತ್ಯೆಗೆ ಶರಣಾದ ಪೊಲೀಸ್ ಕಮಾಂಡೋ.!
ಜನಸ್ಪಂದನ ನ್ಯೂಸ್, ಬೆಂಗಳೂರು : ಪೊಲೀಸರ ವಿಶೇಷ ಕಾರ್ಯಾಚರಣೆ ಗ್ರೂಪ್‌ಗೆ (Police Special Operations Group) ಸೇರಿದ ಕಮಾಂಡೋ (Commando) ಒಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ (suicide attempt) ಘಟನೆ ಕೇರಳದಲ್ಲಿ (Kerala) ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
35 ವರ್ಷದ ವಿನೀತ್ ಭಾನುವಾರ ರಾತ್ರಿ ವೇಳೆ ಮೃತಪಟ್ಟಿದ್ದಾರೆ.
ಇದನ್ನು ಓದಿ : ಅತಿಯಾಗಿ Internet ನೋಡುವುದರಿಂದ ಬರುತ್ತೆ ಮೆದುಳಿನ ಕೊಳೆತ ರೋಗ.!
ಮಲಪ್ಪುರಂ ಜಿಲ್ಲೆಯ ಅರೆಕೋಡ್ (Arecode of Malappuram District) ಪೊಲೀಸ್ ಶಿಬಿರದಲ್ಲಿ ತನ್ನ ಸೇವಾ ರೈಫಲ್ ನಿಂದ ಗುಂಡು ಹಾರಿಸಿಕೊಂಡು (Shooting from a rifle) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಮೃತ ಕಮಾಂಡೋ ಗರ್ಭಿಣಿ ಪತ್ನಿಯ ಜೊತೆಯಲ್ಲಿರಲು ರಜೆ ಕೇಳಿದ್ದರು. ಆದ್ರೆ, ರಜೆ ನೀಡಲು ನಿರಾಕರಿಸಿದ (Refuse to grant leave) ಹಿನ್ನೆಲೆ ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ.
ಅವರು ತೀವ್ರ ಕೆಲಸದ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಹಿಂದಿನ ಸುದ್ದಿ : ವೇಶ್ಯೆವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ; ಐವರು ಮಹಿಳೆಯರ ರಕ್ಷಣೆ.!
ಜನಸ್ಪಂದನ ನ್ಯೂಸ್, ಮೈಸೂರು : ವೇಶ್ಯೆವಾಟಿಕೆ ನಡೆಸುತ್ತಿದ್ದ ಇಬ್ಬರನ್ನೂ ಬಂಧಿಸಿದ ಪೊಲೀಸ್ ಐವರು ಮಹಿಳೆಯರನ್ನು ರಕ್ಷಣೆ ಮಾಡಿದ ಘಟನೆ ಮೈಸೂರಿನ ಹೆಬ್ಬಾಳು ಪೊಲೀಸ್ ಠಾಣೆಯ (Hebbalu Police Station) ಬಳಿ ಬಸವನಗುಡಿ ವೃತ್ತದ ಮನೆಯೊಂದರಲ್ಲಿ ನಡೆದಿದೆ.
ಇದನ್ನು ಓದಿ : Health : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುತ್ತೀರಾ? ಹಾಗಿದ್ರೆ ಈ ಸುದ್ದಿ ಓದಿ.!
ಇನ್ನೂ ಈ ಐವರು ಮಹಿಳೆಯರು ಮೈಸೂರು, ಹಾಸನ, ಕೆ.ಆರ್ ನಗರ (Mysore, Hassan, K. R. Nagar) ಮೂಲದವರಾಗಿದ್ದು, ಅವರನ್ನು ರಕ್ಷಣೆ ಮಾಡಲಾಗಿದೆ.
ಒಡನಾಡಿ ಸಂಸ್ಥೆ ಮುಖ್ಯಸ್ಥ (Head of the organization) ಸ್ಟ್ಯಾನ್ಲಿ ಪರುಶು ಅವರು ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ತಿಳಿದು ಬಂದಿದೆ.
ಎಸಿಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಈ ವೇಳೆ ವೇಶ್ಯಾವಾಟಿಕೆ (Prostitution) ನಡೆಸುತ್ತಿದ್ದ ಮಹಿಳೆ ಮತ್ತು ಓರ್ವ ಗ್ರಾಹಕನನ್ನು ಅರೆಸ್ಟ್ ಮಾಡಲಾಗಿದೆ.
ಹೆಬ್ಬಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.