ಜನಸ್ಪಂದನ ನ್ಯೂಸ್, ಡೆಸ್ಕ್ : ಈ ಥಂಡಿ ಕಾಲ ಬಂತದ್ರ ಸಾಕು ನಮ್ಮ ಮಂದಿಗೆ ಎಲ್ಲಾ ಬಿಸಿಬಿಸಿಯಾಗಿರಬೇಕ. ಬೆಳಿಗ್ಗೆ ಎದ್ದ ಚಾ ಕುಡಿಯುವುದರಿಂದ ಹಿಡಿದು ಜಳಕಾ ಮಾಡೋತನಕ ಬಿಸಿ ನೀರು, ಬಿಸಿ ಚಾ ಇದ್ರ ಮನಸ್ಸಿಗೆ ಏನೋ ಒಂಥರಾ ಖುಷಿ. ಒಬ್ಬೊಬ್ಬರು ಈ ತಂಡ್ಯಾಗ ಬಿಸಿನೀರು ಕುಡಿಯುವುದನ್ನು ರೂಢಿ ಮಾಡ್ಕೊಂಡಿರ್ತಾರೂ.
ಹಂಗ ಇಲ್ಲೊಬ್ಬ ಮಹಾನ್ ವ್ಯಕ್ತಿ ಸಿಕ್ಕಾನೂ. ಇವ ಎಷ್ಟ ಟ್ಯಾಲೆಂಟೆಡ್ ಪರ್ಸನ್ ಅಂದ್ರೆ, ನೀವು ಇವನಿಗೆ ಶಬ್ಬಾಶ್ ಹೇಳೊದ ಗ್ಯಾರಂಟಿ.
ಇದನ್ನು ಓದಿ : Hubli : ಇನ್ಸ್‌ಪೆಕ್ಟರ್‌ನಿಂದ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ.?
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಟ್ಯಾಲೆಂಟೆಡ್ ಯುವಕನ ಬಗ್ಗೆ ಒಂದ ವಿಡಿಯೋ ಹರಿದಾಡುತ್ತಿದೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನೀವ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕಾದದ್ದು ಈ ವ್ಯಕ್ತಿ ಬಳಕೆ ಮಾಡಿದ ಸಾಧನ. ಅದು ಯಾವ ಜಾಗಾದಾಗ ಅಂತೇರಿ? ಬಾತರೂಂದಾಗ ಇಂತದ್ದೊಂದು ಆವಿಷ್ಕಾರ ಮಾಡಿದ್ದಾನೆ ಈ ಹೈದ.
ನಲ್ಲಿ ಕೆಳಗ ತೆಳುವಾದ ಕಬ್ಬಿಣದ ತಂತಿ ಉಪಯೋಗ ಮಾಡ್ಕೊಂಡು ಉರಿಯುತ್ತಿರುವ ಮೇಣದ ಬತ್ತಿಯನ್ನು ನೇತು ಹಾಕಿರುವುದನ್ನು ವಿಡಿಯೋದಾಗ ನೀವ ನೋಡಬಹುದು.
ಇದನ್ನು ಓದಿ : ತಾಕತ್ತಿದ್ದರೆ ನಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಶಾಸಕರು, ಸಚಿವರನ್ನು ವಜಾ ಮಾಡಿ ; ಸ್ವಾಮೀಜಿ.!
ನಲ್ಲಿಯಿಂದ ಹೊರಬರುವ ನೀರು ಮೇಣದ ಬತ್ತಿಯ ಜ್ವಾಲೆಯಿಂದ ಬಿಸಿಯಾಗಿದೆ ಅಂತ ಈ ಶಾಣ್ಯಾ ಹುಡುಗಾ ಆ ಬಿಸಿನೀರ ತೊಗೊಂಡ ಜಳಕಾ ಮಾಡಾತಾನ. ಇದರಿಂದ ಗ್ಯಾಸ್ ಸಿಲಿಂಡರ್ ಉಳಿತು, ಒಂದ ವೇಳೆ ಆತ ಒಲೆ ಮೇಲೆ ನೀರು ಕಾಯಿಸುತಿದ್ರೆ ಕಟ್ಟಿಗೆಯೂ ಉಳ್ದು, ಗೀಸರ್ ಉಪಯೋಗಿಸಿಕೊಂಡು ಜಳಕ ಮಾಡುತ್ತಿದ್ರೆ ಆತ ಕರೆಂಟ್ ಬಿಲ್ ಸಹ ಕಮ್ಮಿ ಮಾಡ್ದಾ ಅಲ್ವಾ.?
View this post on Instagram