Sunday, December 22, 2024
HomeViral Videoಯುವಕನ ಜೀವ ಬಾಯಿಗೆ ಬಂದಂತೆ ಮಾಡಿದ ಸಿಂಹ; ವಿಡಿಯೋ Viral.!
spot_img

ಯುವಕನ ಜೀವ ಬಾಯಿಗೆ ಬಂದಂತೆ ಮಾಡಿದ ಸಿಂಹ; ವಿಡಿಯೋ Viral.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ನಾವು ನಮ್ಮ ಮನೆಗಳಲ್ಲಿ ನಾಯಿ, ಬೆಕ್ಕು ಸಾಕಿದಂತೆ (Pets are dog, cat) ಕೆಲವರು ಸಿಂಹ, ಹುಲಿ, ಚಿರತೆ, ಹಾವು ಮುಂತಾದವುಗಳನ್ನು ಸಾಕಿರುತ್ತಾರೆ. ನೋಡಲು ಬಂದವರು ಅವುಗಳನ್ನು ಮುಟ್ಟುವ ಮುದ್ದಾಡುವ (cute) ಅವಕಾಶ ನೀಡುತ್ತಾರೆ. ಅಲ್ಲದೇ ಈ ಮೂಲಕ ಹಣ ಮಾಡುತ್ತಾರೆ.

ಅನೇಕರು ಇಂತಹ ಸಾಕು ಪ್ರಾಣಿಯಾಗಿ ಬದಲಾಗಿರುವ ಕಾಡು ಪ್ರಾಣಿಗಳ ಜೊತೆ ಫೋಟೋ ತೆಗೆಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ.

ಇದನ್ನು ಓದಿ : ಸ್ಮಾರ್ಟ್‌ಫೋನ್‌ಲ್ಲಿ ಇರುವ aeroplane ಮೋಡ್’ನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.?

ಆದರೆ ಇಲ್ಲೊಂದು ಕಡೆ ಸಾಕಿದ ಸಿಂಹವೊಂದು (domestic lion) ತನ್ನ ಮುದ್ದಾಡಲು ಬಂದ ವ್ಯಕ್ತಿಯ ಮೇಲೆ ಭೀಕರವಾಗಿ ದಾಳಿ (attack) ಮಾಡಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ ಆಗಿದೆ. ವಿಡಿಯೋ ನೋಡಿದ ಜನ ಅಚ್ಚರಿಗೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕಂಟೆಂಟ್ ಕ್ರಿಯೇಟರ್ (content creater) ಮಿಯಾನ್ ಅಝರ್ ಎಂಬುವವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇವರು ಪ್ರಾಣಿಗಳ ಜೊತೆಗಿನ ಹಲವು ವಿಡಿಯೋಗಳನ್ನು ಶೇರ್ ಮಾಡುತ್ತಾರೆ.

ವೈರಲ್ ವಿಡಿಯೋದಲ್ಲಿರುವ ದೃಶ್ಯ :
ಸಿಂಹವನ್ನು ಇರಿಸಲಾಗಿರುವ ಕಬ್ಬಿಣದ ನೆಟ್‌ನ ಗೂಡಿನಲ್ಲಿ ಇಬ್ಬರು ಯುವಕರಿದ್ದಾರೆ‌ (Two young men). ಅವರಲ್ಲಿ ಒಬ್ಬನ ಕಾಲನ್ನು ಸಿಂಹವೂ ಗಟ್ಟಿಯಾಗಿ ತನ್ನೆರಡು ಮುಂಗಾಲಿನಲ್ಲಿ ಹಿಡಿದುಕೊಂಡಿದೆ (Strongly held in its two forelegs). ಈ ವೇಳೆ ಆತನೊಂದಿಗೆ ಇದ್ದ ಮತ್ತೋರ್ವ ಯುವಕ ಸಿಂಹದ ಬಾಯಿಯಿಂದ ಆತನನ್ನು ಬಿಡಿಸಲು ಶತ ಪ್ರಯತ್ನ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಇದನ್ನು ಓದಿ : ಮದುವೆಯಾಗಿ 7 ವರ್ಷ ಕಳೆದರೂ First Night ಗೆ ಒಪ್ಪದ ಮಹಿಳೆ; ಹೈಕೋರ್ಟ್ ಹೇಳಿದ್ದೇನು.?

ಸಿಂಹ ಮಾತ್ರ ಆತನಿಗೆ ಜೀವ ಬಾಯಿಗೆ ಬರುವಂತೆ ಮಾಡಿದೆ. ಆತ ತನ್ನನ್ನು ಬಿಡಿಸಿಕೊಳ್ಳಲು ಯತ್ನಿಸಿದಷ್ಟು (Try to break free), ಸಿಂಹ ತನ್ನ ಹಿಡಿತ ಬಿಗಿಗೊಳಿಸಿದೆ (tight).

ಈ ವಿಡಿಯೋಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಸಿಂಹವನ್ನು ಬಂಧನದಲ್ಲಿ ಇರಿಸಿದ್ದೀರಿ. ಅಲ್ಲದೇ ಅದನ್ನು ಕೆಣಕಿ ಹಿಂಸೆ ನೀಡುತ್ತೀರಿ. ಆತ ತಿರುಗಿ ಬಿದ್ದರೆ ಸಂತ್ರಸ್ತರಂತೆ ಆಡಲು ಶುರು ಮಾಡುತ್ತೀರಿ. ಮತ್ತೆ ಆತನಿಗೆ ಟಾರ್ಚರ್ ನೀಡುತ್ತೀರಿ. ಇಂತಹ ಹಿಂಸೆಯ ಕರ್ಮಗಳಿಗೆ ನಿಮಗೆ ಪ್ರತಿಫಲ ಸಿಗುವುದು (Violent deeds will reward you) ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇಲ್ಲಿ ಪ್ರಾಣಿ ಹಿಂಸೆಯಾಗಿದೆ. ಇದನ್ನು ತಡೆಯಬೇಕು ಎಂದು ಕಮೆಂಟ್ ಮಾಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ : 

ಹಿಂದಿನ ಸುದ್ದಿ : ವಿವಾಹಿತ ಮಹಿಳೆಯರಿಂದ ಕ್ರೌರ್ಯ ಕಾನೂನು ದುರ್ಬಳಕೆ : ಸುಪ್ರೀಂ ಕೋರ್ಟ್

ಜನಸ್ಪಂದನ ನ್ಯೂಸ್, ಡೆಸ್ಕ್ : ತಮ್ಮ ಸ್ವಾರ್ಥಕ್ಕಾಗಿ (own selfishness) ಗಂಡ ಮತ್ತು ಅತ್ತೆ ಮಾವಂದಿರಿಗೆ ಕಿರುಕುಳ ನೀಡಲು ವಿವಾಹಿತ ಮಹಿಳೆಯರು (Married women) ಕ್ರೌರ್ಯ ಕಾನೂನನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಈ ಮೂಲಕ ಕ್ರೌರ್ಯ ಕಾನೂನನ್ನು ದುರ್ಬಳಕೆ (Abuse of Cruelty Law) ಮಾಡಿಕೊಳ್ಳುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ಕೆಲ‌ ದಿನಗಳ ಹಿಂದೆ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ (34) ಅವರು ಹಣ ಸುಲಿಗೆ ಮಾಡಲು ಪತ್ನಿ ಮತ್ತು ಆಕೆಯ ಕುಟುಂಬ ತನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು (false case) ದಾಖಲಿಸುತ್ತಿದೆ ಎಂದು ಆರೋಪಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಅವರಿಗೆ ನ್ಯಾಯಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಗಳ ಮಧ್ಯೆ ಸುಪ್ರೀಂ ಕೋರ್ಟ್ ಈ ಕಳವಳ ವ್ಯಕ್ತಪಡಿಸಿದೆ.

ಇದನ್ನು ಓದಿ : ಪಂಚಮಸಾಲಿ ಹೋರಾಟಗಾಗರರ ಮೇಲೆ ಲಾಠಿ ಚಾರ್ಜ್‌ ; ತೀವ್ರ ಸ್ವರೂಪ ಪಡೆದ ಮೀಸಲಾತಿ ಹೋರಾಟ.!

ಗಂಡ ಮತ್ತು ಆತನ ಸಂಬಂಧಿಕರಿಂದ ಕ್ರೌರ್ಯವನ್ನು ದಂಡಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 498 ಎ ಅನ್ನು ವಿವಾಹಿತ ಮಹಿಳೆಯರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ (misuse) ಎಂದು ನ್ಯಾಯಾಲಯ ಮಂಗಳವಾರ ಪ್ರಕರಣದ (ದಾರಾ ಲಕ್ಷ್ಮಿ ನಾರಾಯಣ ಮತ್ತು ಇತರರು ವಿರುದ್ಧ ತೆಲಂಗಾಣ ರಾಜ್ಯ ಮತ್ತು ಇನ್ನೊಂದು) ವಿಚಾರಣೆ ವೇಳೆ ಹೇಳಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.

ಈ ನಿಬಂಧನೆಯು (Provision) ಮಹಿಳೆಯರನ್ನು ಕೌಟುಂಬಿಕ ಹಿಂಸಾಚಾರ ಮತ್ತು ಕಿರುಕುಳದಿಂದ ರಕ್ಷಿಸುವ ಉದ್ದೇಶವನ್ನು (Intended to protect against domestic violence and harassment) ಹೊಂದಿದ್ದು, ವೈಯಕ್ತಿಕ ದ್ವೇಷವನ್ನು ಬಿಚ್ಚಿಡಲು ಮಹಿಳೆಯರು ಈ ನಿಬಂಧನೆಯನ್ನು ಸಾಧನವಾಗಿ ಬಳಸುವ ಪ್ರವೃತ್ತಿ ಹೆಚ್ಚುತ್ತಿದೆ.

ಕೆಲವು ಮಹಿಳೆಯರು ಪತಿ ಮತ್ತು ಅವರ ಕುಟುಂಬಸ್ಥರನ್ನು ತಮ್ಮ ಅಸಮಂಜಸ ಬೇಡಿಕೆಗಳನ್ನು (unreasonable demands) ಅನುಸರಿಸುವಂತೆ ಒತ್ತಾಯಿಸಲು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಬಿ. ವಿ. ನಾಗರತ್ನ ಮತ್ತು ಎನ್. ಕೋಟಿಶ್ವರ್ ಸಿಂಗ್ ಅವರ ನ್ಯಾಯಪೀಠವು ತಿಳಿಸಿದೆ.

ಇದನ್ನು ಓದಿ : KLC : ಕರ್ನಾಟಕ ವಿಧಾನ ಪರಿಷತ್ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಮಹಿಳೆಯೊಬ್ಬರು ಪತಿ ಮತ್ತು ಅತ್ತೆ ಮಾವನ ವಿರುದ್ಧ ದಾಖಲಿಸಿದ್ದ ಕ್ರೌರ್ಯ ಮತ್ತು ವರದಕ್ಷಿಣೆ ಪ್ರಕರಣಗಳನ್ನು (Dowry cases) ವಜಾಗೊಳಿಸುವಾಗ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ತೆಲಂಗಾಣ ಹೈಕೋರ್ಟ್ (Telangana High Court) ಪ್ರಕರಣವನ್ನು ವಜಾಗೊಳಿಸಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಮತ್ತು ಅವರ ಕುಟುಂಬ ಸದಸ್ಯರು ಮೇಲ್ಮನವಿ ಸಲ್ಲಿಸಿದ್ದರು. ಪತಿ ಡಿವೋರ್ಸ್ ಕೋರಿದ ಬಳಿಕ ಮಹಿಳೆ ಕೇಸ್ ದಾಖಲಿಸಿದ್ದರು. ವಾದಗಳನ್ನು ಪರಿಶೀಲಿಸಿದ (Arguments checked) ನಂತರ, ಆಕೆ ತನ್ನ ವೈಯಕ್ತಿಕ ಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳಲು ಪ್ರಕರಣ ದಾಖಲಿಸಿದ್ದಾಳೆ. ಮಹಿಳೆಯರನ್ನು ರಕ್ಷಿಸುವ ಉದ್ದೇಶದ ಕಾನೂನು ನಿಬಂಧನೆಗಳನ್ನು ಈಕೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ (Supreme Court) ತೀರ್ಮಾನಿಸಿದೆ ಎಂದು ವರದಿಯಿಂದ ತಿಳಿದು ಬಂದಿದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments