ಜನಸ್ಪಂದನ ನ್ಯೂಸ್, ಡೆಸ್ಕ್ : ಈ ಕಾಲದ ಲವರ್ಸ್ ಗಳು ಸಾರ್ವಜನಿಕವಾಗಿ ಕಿಸ್ ಮಾಡುವುದು (Kiss), ಹಗ್ ಮಾಡುವುದು (Hug), ನಡು ರೋಡಲ್ಲೇ ಜಗಳ ಮಾಡುವುದು ಇನ್ನೂ ಏನೇನೂ ಹುಚ್ಚಾಟ ಆಡುತ್ತಾರೆ. ಇವರ ವರ್ತನೆ (behaviour) ನೋಡಿ ಜನರು ಛೀ, ಥೂ ಅನ್ನುವದಂತೂ ಗ್ಯಾರಂಟಿ.
ಸದ್ಯ ಇಬ್ಬರು ಹುಡುಗಿಯರು ಒಬ್ಬನಿಗಾಗಿ ಕಚ್ಚಾಡಿಕೊಂಡ ಘಟನೆ ಬಾಂಗ್ಲಾದಲ್ಲಿ (Bangladesh) ನಡೆದಿದೆ.
ಇದನ್ನು ಓದಿ : ಮದುವೆಯಾಗಿ ಏಳು ವರ್ಷ ಕಳೆದರೂ First Night ಗೆ ಒಪ್ಪದ ಮಹಿಳೆ; ಹೈಕೋರ್ಟ್ ಹೇಳಿದ್ದೇನು.?
ಘಟನೆಯ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ ಆಗಿದೆ.
ಓರ್ವ ಯುವತಿ ಮಾತನಾಡುತ್ತಿದ್ದ ವೇಳೆ ಇನ್ನೊಬ್ಬಳು ಹುಡುಗಿಗೆ ಬಲವಾಗಿ (strong) ಕಪಾಳಮೋಕ್ಷ ಮಾಡುತ್ತಾಳೆ. ಎರಡನೆಯವಳು ಅವಳ ಕಿವಿಯನ್ನು ಹಿಡಿದು ಕ್ಷಮೆ ಯಾಚಿಸುತ್ತಾಳೆ. ಕ್ಷಮೆಯ ಹೊರತಾಗಿಯೂ, ಇಬ್ಬರು ಹುಡುಗಿಯರು ಕರುಣೆ ತೋರದೆ ಮತ್ತೆ ಕಪಾಳಕ್ಕೆ ಹೊಡೆಯುವುದನ್ನು ವಿಡಿಯೋದಲ್ಲಿ ಕಾಣಬಹುದು.
‘ಘರ್ ಕೆ ಕಾಲೇಶ್’ ಎಂಬ X ಖಾತೆಯಿಂದ ಈ ವಿಡಿಯೋ ಶೇರ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲವರ್ ಗಾಗಿ ಹುಡುಗಿಯರ ಕಿತ್ತಾಟದ ವಿಡಿಯೋ ಇಲ್ಲಿದೆ :
@gharkekalesh pic.twitter.com/cnL8DvPJUr
— Arhant Shelby (@Arhantt_pvt) December 5, 2024
ಹಿಂದಿನ ಸುದ್ದಿ : ಮದುವೆಯಾಗಿ ಏಳು ವರ್ಷ ಕಳೆದರೂ ಫಸ್ಟ್ ನೈಟ್ಗೆ ಒಪ್ಪದ ಮಹಿಳೆ; ಹೈಕೋರ್ಟ್ ಹೇಳಿದ್ದೇನು.?
ಜನಸ್ಪಂದನ ನ್ಯೂಸ್, ಡೆಸ್ಕ್ : ಮದುವೆಯಾಗಿ ಏಳು ವರ್ಷವಾದರೂ (seven year’s) ಗಂಡನ ಮೇಲೆ ಕೋಪಗೊಂಡಿದ್ದ ಮಹಿಳೆ ಫಸ್ಟ್ ನೈಟ್ಗೆ ಒಪ್ಪದ ಕಾರಣ ಹೈಕೋರ್ಟ್ ವಿಚ್ಛೇದನ (Divorce) ಮಂಜೂರಾತಿ ಕಾಯಂ ಮಾಡಿದೆ.
ಮಹಿಳೆಯು ತನ್ನ ಲೆವೆಲ್ ಗೆ ತಕ್ಕಂತೆ ಆರತಕ್ಷತೆ ಮಾಡದ ಕಾರಣ ಇಟ್ಟುಕೊಂಡು ವೈವಾಹಿಕ ಜೀವನ (married life) ನಡೆಸಲು ಆಸಕ್ತಿ ತೋರಲಿಲ್ಲ.
ಇದನ್ನು ಓದಿ : ಪಂಚಮಸಾಲಿ ಹೋರಾಟಗಾಗರರ ಮೇಲೆ ಲಾಠಿ ಚಾರ್ಜ್ ; ತೀವ್ರ ಸ್ವರೂಪ ಪಡೆದ ಮೀಸಲಾತಿ ಹೋರಾಟ.!
ಹೀಗಾಗಿ ಕೌಟುಂಬಿಕ ನ್ಯಾಯಾಲಯವು (Family Court) ಮಾಡಿದ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್ ವಿಚ್ಛೇದನ ಮಂಜೂರು ಮಾಡಿದೆ.
ಪ್ರಕರಣದ ಹಿನ್ನೆಲೆ :
ಪೋಷಕರು ನಿಶ್ಚಯಿಸಿದ ಮಹಿಳೆ ಜತೆ ರವಿ ಎಂಬುವವರು 2017ರ ಸೆ. 27ರಂದು ವಿವಾಹವಾಗಿದ್ದರು. ಆದರೆ, 2019ರಲ್ಲಿ ರವಿಯವರು ವಿವಾಹ ಅನೂರ್ಜಿತಗೊಳಿಸಿ (cancel) ವಿಚ್ಛೇದನ ಮಂಜೂರು (Divorce granted) ಮಾಡುವಂತೆ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಇದನ್ನು ಓದಿ : ಯುವತಿಗೆ ಕೆಲಸ ಕೊಡಿಸುವ ನೆಪವೊಡ್ಡಿ ಮನೆಗೆ ಕರೆದೊಯ್ದ ಎಂಜಿನಿಯರ್ ; ಮುಂದೆನಾಯ್ತು? Video ನೋಡಿ.!
ಮದುವೆ ಬಳಿಕ ನನ್ನ ಮನೆಗೆ ಬಂದ ಪತ್ನಿ, ಮೊದಲ ರಾತ್ರಿಗೆ (first night) ಒಪ್ಪದೇ, ತನ್ನ ಅಂತಸ್ತು ಹಾಗೂ ಕನಸಿಗೆ ತಕ್ಕಂತೆ ಅದ್ಧೂರಿಯಾಗಿ ಆರಕ್ಷತೆ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಳು.
ಆಬಳಿಕವೂ ಮೊದಲ ರಾತ್ರಿಯನ್ನು ಮಂದೂಡುತ್ತಲೇ ಬಂದಳು. ಅಲ್ಲದೇ ಹಲವು ಕಾರಣಗಳನ್ನು (Many reasons) ನೀಡಿ ನನ್ನನ್ನು ನಿಂದಿಸುತ್ತಿದ್ದಳು (insulting). ಕೆಲ ಸಂದರ್ಭದಲ್ಲಂತೂ ಬೆಡ್ ರೂಂನಲ್ಲಿ ನನ್ನ ಮೇಲೆ ಹಲ್ಲೆ ಸಹ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು.
ಇದನ್ನು ಓದಿ : Health : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವವರೇ ಈ ಸುದ್ದಿಯನ್ನೊಮ್ಮೆ ಓದಿ.
ಮದುವೆ ಆದ ಕೆಲ ತಿಂಗಳ ಬಳಿಕ ಅಪಘಾತದಲ್ಲಿ ಅವಳ (ಪತ್ನಿಯ) ತಂದೆ ಮೃತಪಟ್ಟರೆ, ಅದಕ್ಕೂ ನಾನೇ (ಪತಿ) ಕಾರಣ ಎಂದು ದೂಷಿಸಿದರು. ಈ ಎಲ್ಲಾ ವಿಚಾರಗಳನ್ನು ಪರಿಗಣಿಸಿ (Consider the ideas) ವಿಚ್ಛೇದನ ಮಂಜೂರು ಮಾಡಬೇಕು ಎಂದು ರವಿ ಕೋರಿದ್ದರು. ಇವರ ಅರ್ಜಿ ಪುರಸ್ಕರಿಸಿ ವಿಚ್ಛೇದನ ಮಂಜೂರು ಮಾಡಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯವು (Bangalore Family Court) 2022ರ ಜ.30 ರಂದು ಆದೇಶ (ordered) ಹೊರಡಿಸಿದೆ.
ಆದರೆ ಪತ್ನಿಯೂ ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಮೇಲ್ಮನವಿ (appeal) ಸಲ್ಲಿಸಿದ್ದು, ಪತಿಯನ್ನು ನಾನು ಲವ್ ಮಾಡುತ್ತೇನೆ. ಹೀಗಾಗಿ ವೈವಾಹಿಕ ಜೀವನ ಮುಂದುವರಿಸಲು ಬಯಸುತ್ತಿದ್ದೇನೆ. ಹಾಗಾಗಿ, ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು. ಈ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ (Rejected).