Sunday, December 22, 2024
HomeCrime NewsAccident : ಭೀಕರ ರಸ್ತೆ ಅಪಘಾತ; ಐವರು ಸ್ಥಳದಲ್ಲೇ ಸಾವು.!
spot_img

Accident : ಭೀಕರ ರಸ್ತೆ ಅಪಘಾತ; ಐವರು ಸ್ಥಳದಲ್ಲೇ ಸಾವು.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ವಿಜಯಪುರ : ವಿಜಯಪುರ ಜಿಲ್ಲೆಯ ತಾಳಿಕೋಟೆಯ (Talikote in Vijayapura district) ಬಿಳೆಬಾವಿ ಕ್ರಾಸ್ ಸಮೀಪ ಕಾರು ಮತ್ತು ತೊಗರಿ ಕಟಾವು ಮಷಿನ್ (Car and Togari harvester) ನಡುವೆ ಭೀಕರ ಅಫಘಾತ ಸಂಭವಿಸಿ, ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತಪಟ್ಟವರು ನಿಂಗಪ್ಪಾ ಪಾಟೀಲ್ (55), ಶಾಂತವ್ವ ಶಂಕರ ಪಾಟೀಲ್ (45), ಭೀಮಶಿ ಸಂಕನಾಳ (65), ಶಶಿಕಲಾ ಜೈನಾಪೂರ (50) ಹಾಗೂ ದಿಲೀಪ್ ಪಾಟೀಲ್ (45) ಎಂದು ತಿಳಿದು ಬಂದಿದೆ.

ಇದನ್ನು ಓದಿ : ಇವರೇ ನೋಡಿ 33 ವರ್ಷಗಳ ಸೇವಾವಧಿಯಲ್ಲಿ 57 ಬಾರಿ ವರ್ಗಾವಣೆಯಾದ IAS ಅಧಿಕಾರಿ.!

ವಿಜಯಪುರ ತಾಲೂಕು ಅಲಿಯಾಬಾದ್ (Vijayapura Taluk Aliyabad) ನಿವಾಸಿಗಳಾದ ಈ ಐವರು ಮೃತಪಟ್ಟಿದ್ದಾರೆ.

ಕಾರಿಗೆ ತೊಗರಿ ಕಟಾವು ಮಷಿನ್​ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಪುರುಷರು, ಇಬ್ಬರು ಮಹಿಳೆಯರು (Three men, two women) ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.

ಯಾದಗಿರಿ ಜಿಲ್ಲೆಯ ಅಗ್ನಿ ಗ್ರಾಮದಲ್ಲಿ ಈ‌ ಐವರು ಹುಡುಗಿ (ಕನ್ಯಾ) ನೋಡಲು ತೆರಳಿದ್ದು, ವಾಪಸ್ ಬರುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

ಕ್ರೂಸರ್ ಓವರ್ ಟೇಕ್ (overtake) ಮಾಡುವ ಭರದಲ್ಲಿ ತೊಗರಿ ಕಟಾವು ಮಷಿನ್​​ಗೆ ಕಾರು ಮುಖಾಮುಖಿ ಡಿಕ್ಕಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನು ಓದಿ : Belagavi : ನಾಪತ್ತೆಯಾಗಿದ್ದ ಅಥಣಿ ವಕೀಲನ ಶವ ಕೃಷ್ಣಾ ನದಿಯಲ್ಲಿ ಪತ್ತೆ.!

ಘಟನೆ ನಡೆದ ಸ್ಥಳಕ್ಕೆ ಬಂದ ತಾಳಿಕೋಟೆ ಪೊಲೀಸರು, ಕಾರಿನಲ್ಲಿದ್ದ ಶವಗಳನ್ನು ಜೆಸಿಬಿ ಮೂಲಕ ಹೊರ ತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಐವರ ಶವಗಳನ್ನು ಬಸವನ ಬಾಗೇವಾಡಿ ಸಮುದಾಯ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ತಾಳಿಕೋಟೆ ಪೊಲೀಸ್ ಠಾಣಾ (Talikote Police Station) ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

 

ಹಿಂದಿನ ಸುದ್ದಿ : ಇವರೇ ನೋಡಿ 33 ವರ್ಷಗಳ ಸೇವಾವಧಿಯಲ್ಲಿ 57 ಬಾರಿ ವರ್ಗಾವಣೆಯಾದ IAS ಅಧಿಕಾರಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : IAS ಅಧಿಕಾರಿಯಾಗಿರುವ ಅಶೋಕ್ ಖೇಮ್ಕಾ (IAS officer Ashok Khemka) ಅವರು ಪ್ರಾಮಾಣಿಕತೆ ಹಾಗೂ ವೃತ್ತಿ ನಿಷ್ಠೆಯ (Honesty and professional loyalty) ಕಾರಣದಿಂದ ತಮ್ಮ 33 ವರ್ಷದ ಸೇವಾವಧಿಯಲ್ಲಿ ಬರೋಬ್ಬರಿ 57 ಬಾರಿ ವರ್ಗಾವಣೆಗೊಂಡಿದ್ದಾರೆ‌ (transfer) ಎಂದು ವರದಿಯಾಗಿದೆ.

ಇದನ್ನು ಓದಿ : ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ; ಆರೋಪಿಗೆ ಕಠಿಣ ಶಿಕ್ಷೆ ಪ್ರಕಟ.!

ಕೆಲವೇ ತಿಂಗಳ ಸೇವಾವಧಿ (Term of service) ಹೊಂದಿರುವ ಅಶೋಕ್ ಖೇಮ್ಕಾ, ತಮ್ಮ ವೃತ್ತಿ ಜೀವನದಲ್ಲಿ ಪದೇ ಪದೇ (repeatedly) ವರ್ಗಾವಣೆ ಶಿಕ್ಷೆಗೊಳಗಾಗಿದ್ದಾರೆ. 33 ವರ್ಷದ ಸೇವಾವಧಿಯಲ್ಲಿ ಒಟ್ಟು 57 ಬಾರಿ ವರ್ಗಾವಣೆಗೊಂಡಿದ್ದಾರೆ. ಈಗ ಮತ್ತೊಮ್ಮೆ ತಮ್ಮ ಹುದ್ದೆಯಿಂದ ವರ್ಗಾವಣೆಗೊಳ್ಳುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ಮತ್ತೊಬ್ಬ ಐಎಎಸ್ ಅಧಿಕಾರಿಯಾದ ಪ್ರದೀಪ್ ಕಸ್ಮಿ, ತಮ್ಮ 35 ವರ್ಷಗಳ ಸೇವಾವಧಿಯಲ್ಲಿ ಒಟ್ಟು 71 ಸಲ ವರ್ಗಾವಣೆಯಾಗಿದ್ದರು. ತಮ್ಮ ವೈಯಕ್ತಿಕ ಕಾರಣಗಳಿಗಾಗಿ (personal reason) ಪ್ರದೀಪ್ ಕಸ್ಮಿ ಟ್ರಾನ್ಸ್‌ಫರ್ ಆಗುತ್ತಿದ್ದರು.

ಹರ್ಯಾಣದಲ್ಲಿ ಐಎಎಸ್ ಅಧಿಕಾರಿಯಾಗಿ (Haryana) 33 ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು ಮೂಲತಃ ಪಶ್ಚಿಮ ಬಂಗಾಳ (West Bengal) ರಾಜ್ಯದವರು. ಎಪ್ರಿಲ್ 30, 2025ರಲ್ಲಿ ಅವರು ತಮ್ಮ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ (retired) ತಾವು ನಿವೃತ್ತಿಯಾಗಲೂ ಕೇವಲ 5 ತಿಂಗಳಿದ್ದರೂ ಸಹ, ಮತ್ತೆ ಸಾರಿಗೆ ಇಲಾಖೆಗೆ ವರ್ಗಾವಣೆಗೊಂಡಿದ್ದಾರೆ (Transfer to Transport Department).

ಇದಕ್ಕೂ ಮುನ್ನ ಅಶೋಕ್ ಖೇಮ್ಕಾ, ಮುದ್ರಣ ಮತ್ತು ಲೇಖನ ಸಾಮಗ್ರಿಗಳ ಇಲಾಖೆಯಲ್ಲಿ (Department of Printing and Stationery) ಕಾರ್ಯನಿರ್ವಹಿಸುತ್ತಿದ್ದರು.

ಇದನ್ನು ಓದಿ : Health : ಈ ಎಲೆಯ ನೀರು ಸೇವಿಸಿದರೆ ಸಾಕು ನಿಮ್ಮ ಬಿಳಿ ಕೂದಲು ಕಪ್ಪಾಗುವುದು.!‌

ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರು, ಭ್ರಷ್ಟಾಚಾರದ ವಿರುದ್ಧ ದೃಢ ನಿಲುವು (firm stand against corruption) ಹೊಂದಿದ್ದಾರೆ. ಕಳೆದ ವರ್ಷ ಹರ್ಯಾಣ ಮುಖ್ಯಮಂತ್ರಿಗೆ ತಮ್ಮನ್ನು ವಿಚಕ್ಷಣಾ ಇಲಾಖೆಗೆ (Intelligence Department) ನೇಮಿಸುವಂತೆ ಪತ್ರ ಬರೆಯುವ ಮೂಲಕ, ಅಶೋಕ್ ಖೇಮ್ಕಾ ಮತ್ತೆ ಸುದ್ದಿಯಾಗಿದ್ದರು. ನಾನು ನನ್ನ ಉಳಿದ ಸೇವಾವಧಿಯನ್ನು ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಮುಡುಪಿಡಲು ಬಯಸುತ್ತೇನೆ ಎಂದು ಅವರು ಪತ್ರದಲ್ಲಿ ತಮ್ಮ ಬಯಕೆ ತಿಳಿಸಿದ್ದರು.

ಖರಗ್ ಪುರ್ ಭಾರತೀಯ ತಂತ್ರಜ್ಞಾನ ಸಂಸ್ಥೆಯಿಂದ ಕಂಪ್ಯೂಟರ್ ಸೈನ್ಸ್ (Computer Science from Indian Institute of Technology) ನಲ್ಲಿ ಬಿಟೆಕ್ ಪದವಿ ಪಡೆದುಕೊಂಡ ಇವರು, ಮುಂಬೈನ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯಿಂದ (Tata Institute of Fundamental Research) ಕಂಪ್ಯೂಟರ್ ಸೈನ್ಸ್ ನಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments