ಜನಸ್ಪಂದನ ನ್ಯೂಸ್, ಡೆಸ್ಕ್ : ಯುವಕನೋರ್ವನಿಂದ ಮಹಿಳಾ ಕಾನ್ಸ್‌ಟೇಬಲ್ ಒಬ್ಬರ ಮೇಲೆ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿರುವ ಪ್ರಕರಣ ಉತ್ತರ ಪ್ರದೇಶದ ಮೊರಾದಾಬಾದ್‌ನ ಸಿವಿಲ್ ಲೈನ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಹೇಯ್ ಕೃತ್ಯದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಈ ಘಟನೆ ನವೆಂಬರ್ 30 ರಂದು ನಡೆದಿದೆ.
ಇದನ್ನು ಓದಿ : ಕುಡುಗೋಲಿನಿಂದ ಮಹಿಳಾ Constable ಬರ್ಬರ ಹತ್ಯೆ.!
ಬೈಕ್ ಸವಾರ ಯುವಕರು ಅಮ್ರೀನ್ ಎಂಬ ಮಹಿಳಾ ಪೇದೆ ಮೇಲೆ ಹಲ್ಲೆ ನಡೆಸಿದ್ದಾರೆ. ಸಂತ್ರಸ್ತ ಮಹಿಳಾ ಕಾನ್ಸ್‌ಟೇಬಲ್ ಮೊರಾದಾಬಾದ್‌ನ ಸಿವಿಲ್ ಲೈನ್ಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಂತ್ರಸ್ತೆಯ ದೂರು ದಾಖಲಿಸಿಕೊಂಡ ಪೊಲೀಸರು 10 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಇದರಲ್ಲಿ 4 ಹೆಸರುಗಳು ಮತ್ತು 6 ಅಪರಿಚಿತ ಜನರು ಸೇರಿದ್ದಾರೆ ಎಂದು ತಿಳಿದು ಬಂದಿದೆ.
ಮಹಿಳಾ ಕಾನ್ಸ್‌ಟೇಬಲ್ ಮೇಲೆ ಹಲ್ಲೆ :
ಸಾಮಾನ್ಯ dress ನಲ್ಲಿರುವ ಮಹಿಳಾ ಕಾನ್‌ಸ್ಟೆಬಲ್ ರಸ್ತೆಯಲ್ಲಿ ಹೋಗುತ್ತಿರಬೇಕಾದರೆ ಓರ್ವ ಯುವಕ ಕಾನ್‌ಸ್ಟೆಬಲ್ ಮುಂದೆ ಬೈಕ್ ನಿಲ್ಲಿಸಿದ್ದಾನೆ. ಆಗ ಮಹಿಳಾ ಕಾನ್‌ಸ್ಟೆಬಲ್ ಬೈಕ್ ಸ್ಟಾರ್ಟ್ ಮಾಡುವಂತೆ ಹೇಳಿದಾಗ ಆತ ನಿರಾಕರಿಸಿ ಮಹಿಳಾ ಕಾನ್‌ಸ್ಟೆಬಲ್ ಜೊತೆ ಅನುಚಿತವಾಗಿ ವರ್ತಿಸಿ ಥಳಿಸಿದ್ದಾನೆ.
ವಿಡಿಯೋದಲ್ಲೇನಿದೆ :
ಓರ್ವ ಮಹಿಳಾ ಕಾನ್‌ಸ್ಟೆಬಲ್ ಸಾಮಾನ್ಯ dress ನಲ್ಲಿ (ಯೂನಿಫಾರಂ ಧರಿಸಿರದ) ರಸ್ತೆಯಲ್ಲಿ ಹೋಗುತ್ತಿರುವದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಆಗ ಮಹಿಳೆಯ ಹಿಂಬದಿಯಿಂದ ಬೈಕ್‌ನಲ್ಲಿ ಬಂದ ಯುವಕನೋರ್ವ ಆ ಮಹಿಳೆ ಮುಂದೆ ಬೈಕ್ ನಿ ಲ್ಲಿಸುತ್ತಾನೆ. ಆಗ ಮಹಿಳೆ ಬೈಕ್ ಸರಿಸುವಂತೆ ಹೇಳಿದಾಗ ಯುವಕ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಲ್ಲದೆ ಕೆಳಗೆ ಕೆಡವಿ ಅನುಚಿತವಾಗಿ ವರ್ತನೆ ತೋರಿದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಇದನ್ನು ಓದಿ : ಯುವತಿಗೆ Hug ಮಾಡು ಎಂದು ಕಿರುಕುಳ ನೀಡಿದ ಕಾನ್ಸ್‌ಟೇಬಲ್ ಸಸ್ಪೆಂಡ್.!
ಈ ವೇಳೆ ಮಹಿಳೆ ಆತನಿಂದ ಬಿಡಿಸಿಕೊಳ್ಳಲಾಗದೆ ಆಕೆ ಒದ್ದಾಡಿದ್ದಾಳೆ, ಆಗ ಸುತ್ತಲೂ ನಿಂತಿದ್ದ ಜನ ಹಲ್ಲೆ ಮಾಡಿರು ಯುವಕನನ್ನು ಹಿಡಿಯಲು ಪ್ರಯತ್ನಿಸುವುದನ್ನು ದೃಶ್ಯದಲ್ಲಿ ಕಾಣಬಹುದಾಗಿದೆ.
ಈ ಕುರಿತು ಸಂತ್ರಸ್ತ ಮಹಿಳಾ ಕಾನ್‌ಸ್ಟೆಬಲ್ ಮೊರಾದಾಬಾದ್‌ನ ಸಿವಿಲ್ ಲೈನ್ಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಈ ನಿಟ್ಟಿನಲ್ಲಿ ಆರೋಪಿಗಳ ಪತ್ತೆಗೆ ತಂಡಗಳನ್ನು ನಿಯೋಜಿಸಲಾಗಿದೆ ಎಂದು ನಗರ ಎಸ್ಪಿ ತಿಳಿಸಿದ್ದಾರೆ. ಅಲ್ಲದೇ ಶೀಘ್ರವೇ ಅವರನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ವಿಚಾರದಲ್ಲಿ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಪ್ರಶ್ನೆಗಳನ್ನು ಎತ್ತಿದ್ದು, “ಯುಪಿಯಲ್ಲಿ ಮಹಿಳೆಯರು ಎಷ್ಟು ಸುರಕ್ಷಿತರಾಗಿದ್ದಾರೆ ಸಾಕ್ಷಿಗಳನ್ನು ನೋಡಿ” ಎಂದಿದ್ದಾರೆ.
यूपी में महिलाएं कितनी सुरक्षित हैं,सबूत देख लीजिए।
तस्वीर मुरादाबाद की है, जहां सरेआम महिला कांस्टेबल के साथ युवक छेड़छाड़ करता हैं और विरोध करने पर मारपीट भी।
आरोपियों पर सख्त से सख्त कार्रवाई हो। pic.twitter.com/H7tbK76n3y— Akhilesh Yadav (Son Of PDA) (@SocialistLeadr) December 1, 2024