ಜನಸ್ಪಂದನ ನ್ಯೂಸ್, ಬೆಂಗಳೂರು : ಕರ್ನಾಟಕ ಹೈಕೋರ್ಟ್ (High Court of Karnataka) ಅಪರೂಪದ ಆದೇಶವೊಂದನ್ನು ನೀಡಿದೆ. ಕೃಷಿ ಚಟುವಟಿಕೆ ನೋಡಿಕೊಳ್ಳಲು 11 ವರ್ಷಗಳಿಂದ ಜೈಲಿನಲ್ಲಿರುವ ಸಜಾ ಕೈದಿಯೊಬ್ಬನಿಗೆ ಪೆರೋಲ್ ಮಂಜೂರು (Grant of parole) ಮಾಡಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ (Kanakpur Taluk of Ramnagar District) ಸಿದ್ದಿದೇವರಹಳ್ಳಿ ನಿವಾಸಿ ಚಂದ್ರ (36) ಎಂಬಾತ ಕೊಲೆ ಪ್ರಕರಣದಲ್ಲಿ (murder case) ಜೀವಾವಧಿ ಶಿಕ್ಷೆಗೆ (Life imprisonment) ಒಳಗಾಗಿದ್ದಾನೆ. ಹೀಗಾಗಿ ತನ್ನ ತಂದೆಯ ಜಮೀನಿನಲ್ಲಿ ಕೃಷಿ ಚಟುವಟಿಕೆ ನೋಡಿಕೊಳ್ಳಲು (take care of agricultural activity) ಪೆರೋಲ್ ನೀಡುವಂತೆ ಕೋರಿ ಹೈಕೋರ್ಟ್ಗೆ ಮೊರೆ ಹೋಗಿದ್ದ.
ಇದನ್ನು ಓದಿ : Railway ಇಲಾಖೆಯಲ್ಲಿ ಖಾಲಿ ಇರುವ 1,785 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ.!
ಸದ್ಯ ಚಂದ್ರ ಅವರಿಗೆ 90 ದಿನಗಳ ಪೆರೋಲ್ (90 days parole) ನೀಡಿ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ಅವರ ಪೀಠ ಆದೇಶಿಸಿದೆ (ordered).
ಕಳೆದ 11 ವರ್ಷಗಳಿಂದ ಚಂದ್ರ ಜೈಲಿನಲ್ಲಿದ್ದು, ಪೆರೋಲ್ ಮೇಲೆ ಯಾವತ್ತೂ ಬಿಡುಗಡೆಯಾಗಿಲ್ಲ (Never released). ಪ್ರಕರಣದ ಸತ್ಯಾಂಶ ಪರಿಶೀಲಿಸಿದಾಗ ಪೆರೋಲ್ ಮೇಲೆ ಬಿಡುಗಡೆಯಾಗುವ ಅಗತ್ಯವನ್ನು ಚಂದ್ರ ಮೇಲ್ನೋಟಕ್ಕೆ ಸಾಬೀತು ಪಡಿಸಿದ್ದಾರೆ (Apparently proved). ಆದ್ದರಿಂದ ಆತನನ್ನು 90 ದಿನ ಪೆರೋಲ್ ಮೇಲೆ ಬಿಡುಗಡೆ ಮಾಡಬೇಕು ಎಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ (Parappana Agrahara Center jail in Bangalore) ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ (Chief Superintendent of Jails) ಹೈಕೋರ್ಟ್ ನಿರ್ದೇಶಿಸಿದೆ.
2023ರ ಸೆ. 23ರಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು, ಚಂದ್ರಗೆ ಪೆರೋಲ್ ನೀಡಲು ನಿರಾಕರಿಸಿ (deny) ನೀಡಿದ್ದ ಹಿಂಬರಹವನ್ನು ಈ ವೇಳೆ ಹೈಕೋರ್ಟ್ ರದ್ದುಪಡಿಸಿದೆ (canceled).
ಇದನ್ನು ಓದಿ : ಕರ್ತವ್ಯ ನಿರತ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ ಆರೋಪ; ಕಾಂಗ್ರೆಸ್ ಮುಖಂಡ Arrest.!
ನ್ಯಾಯಾಲಯವು, ಚಂದ್ರ ಪೆರೋಲ್ ಅವಧಿಯಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ (illegal activity) ಭಾಗಿಯಾಗಬಾರದು, ಪ್ರತಿ ವಾರದ ಮೊದಲ ದಿನದಂದು (First day of every week) ಸ್ಥಳೀಯ ಪೊಲೀಸ್ ಠಾಣೆಗೆ ಆತ ಹಾಜರಾಗಬೇಕು.
ಆತ ಪೆರೋಲ್ ಮುಗಿಸಿ, ಜೈಲಿಗೆ ವಾಪಸ್ಸಾಗುವುದನ್ನು ಖಚಿತಪಡಿಸಿಕೊಳ್ಳಲು (confirm) ಮುಖ್ಯ ಅಧೀಕ್ಷಕರು ಅಗತ್ಯ ಷರತ್ತು ವಿಧಿಸಬಹುದು. ಒಂದು ವೇಳೆ ಷರತ್ತು ಉಲ್ಲಂಘಿಸಿದರೆ (Violate the condition), ಪೆರೋಲ್ ಮಂಜೂರಾತಿ ಆದೇಶ ತನ್ನಿಂದ ತಾನೇ ರದ್ದಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹಿಂದಿನ ಸುದ್ದಿ : ವಕ್ಫ್ ಬೋರ್ಡ್ನ್ನೇ ವಜಾಗೊಳಿಸಿದ ಆಂಧ್ರಪ್ರದೇಶ ಸರ್ಕಾರ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಆಂಧ್ರಪ್ರದೇಶ ಸರ್ಕಾರವು (Government of Andhra Pradesh) ವಕ್ಫ್ ಮಂಡಳಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ವರದಿಯಾಗಿದೆ.
ಇದನ್ನು ಓದಿ : ದೇಶದ ಅತಿ ದೊಡ್ಡ IT ದಾಳಿ: ಹಣ ಎಣಿಕೆಗಾಗಿ 36 ಯಂತ್ರಗಳ ಬಳಕೆ.!
ಹಿಂದಿನ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ಸಿಪಿ ಸರ್ಕಾರ ರಚಿಸಿದ್ದ ವಕ್ಫ್ ಬೋರ್ಡ್ ಅನ್ನು ಆಂಧ್ರ ಪ್ರದೇಶ ಸರ್ಕಾರ ವಿಸರ್ಜಿಸಿದೆ (Government dissolved) ಎಂದು ವರದಿಯಿಂದ ತಿಳಿದು ಬಂದಿದೆ.
ಹಾಲಿ ಸರ್ಕಾರವು, ಹಿಂದಿನ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ (Department of Minority Welfare) ಹೊರಡಿಸಿದ್ದ ಜಿಒ-47 ರದ್ದುಗೊಳಿಸಿ, ಹೊಸ ಜಿಒ-75 ಹೊರಡಿಸಿದೆ.
ಈ ಕುರಿತು ರಾಜ್ಯ ಕಾನೂನು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಎನ್. ಎಂ. ಡಿ. ಫಾರೂಕ್, ಶನಿವಾರ ಈ ಆದೇಶ ಹೊರಡಿಸಲಾಗಿದೆ (Order issued) ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಕುರಿತು ಸಚಿವ ಎನ್. ಎಂ. ಡಿ. ಫಾರೂಕ್, ಕಳೆದ ವರ್ಷ ಅಕ್ಟೋಬರ್ 21 ರಂದು ಹಿಂದಿನ ಸರ್ಕಾರವು ಮಂಡಳಿಯ ಸದಸ್ಯರ ನಾಮನಿರ್ದೇಶನವನ್ನು ಪ್ರಶ್ನಿಸಿ (Question the nomination) ಸಲ್ಲಿಸಿದ ಅರ್ಜಿಯ ನಂತರ ವಕ್ಫ್ ಮಂಡಳಿಯ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಹೈಕೋರ್ಟ್ ಮಧ್ಯಂತರ ಆದೇಶಗಳನ್ನು ನೀಡಿದೆ (High Court passed interim orders) ಎಂದು ಸ್ಪಷ್ಟಪಡಿಸಿದರು.
ಇದನ್ನು ಓದಿ : ಮಹಿಳೆಯರ ಒಳ ಉಡುಪು ಧರಿಸಿ ಮಾರ್ಕೆಟ್ ನಲ್ಲಿ ರೀಲ್ಸ್; ಮುಂದೆನಾಯ್ತು? Video ನೋಡಿ.!
ಈ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಸಿಎಂ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ಪ್ರಸ್ತುತ ಸಮ್ಮಿಶ್ರ ಸರ್ಕಾರವು (government) ಹೊಂದಿದೆ ಎಂದು ತಿಳಿಸಿದ್ದಾರೆ.
ವಕ್ಫ್ ಆಸ್ತಿಗಳನ್ನು ರಕ್ಷಿಸಲು ಮತ್ತು ಅದರ ಹೊಸ ನಿರ್ದೇಶನಗಳ ಅಡಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣವನ್ನು ಉತ್ತೇಜಿಸುವ ಸಲುವಾಗಿ ಸರ್ಕಾರವು ಬದ್ಧವಾಗಿದೆ. ಹೊಸ ಆದೇಶ ವಕ್ಫ್ ಮಂಡಳಿಯಲ್ಲಿನ ಆಡಳಿತ ನಿರ್ವಾತವನ್ನು ಪರಿಹರಿಸುವ ಉದ್ದೇಶವನ್ನು (Aim to address governance vacuum) ಹೊಂದಿದೆ ಎಂದು ಅವರು ಒತ್ತಿ ಹೇಳಿದರು