ಜನಸ್ಪಂದನ ನ್ಯೂಸ್, ರಾಮನಗರ : ರಾಮನಗರ (Ramanagar) ತಾಲ್ಲೂಕಿನ ಸಂಗಬಸವನದೊಡ್ಡಿ ಸಮೀಪ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ (Bangalore-Mysore National Highway) ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ.
ಇದನ್ನು ಓದಿ : ಚಳಿಗಾಲದಲ್ಲಿ Brain ಸ್ಟ್ರೋಕ್ ಮತ್ತು ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು; ಕಾರಣ.?
ಮೃತರು ಬೆಂಗಳೂರಿನ ಶಿವಾಜಿನಗರದ ಗುಜರಿ ವ್ಯಾಪಾರಿ (rummage merchant) ಲಿಯಾಖತ್ ಅಲಿ ಖಾನ್ (55), ಪತ್ನಿ ಅಸ್ಮಾ ಪರ್ವೀನ್ (45) ಹಾಗೂ ಸ್ನೇಹಿತ ನೂರ್ ಉಲ್ಲಾ ಷರೀಫ್ (50) ಎಂದು ತಿಳಿದು ಬಂದಿದೆ.
ಲಿಯಾಖತ್ ಅವರು ಪತ್ನಿಯೊಂದಿಗೆ ಮೈಸೂರಿನಲ್ಲಿರುವ ಮಗಳ ಮನೆಗೆ ಸ್ನೇಹಿತನ ಕಾರಿನಲ್ಲಿ ಹೊರಟಿದ್ದರು. ಸಂಗಬಸವನದೊಡ್ಡಿ ಬಳಿ ಬರುತ್ತಿದ್ದಂತೆ ಕಾರು ನಿಯಂತ್ರಣ ಕಳೆದುಕೊಂಡಿದೆ (car lost control).
ಬಳಿಕ ರಸ್ತೆ ವಿಭಜಕದ (Road divider) ಮೇಲೆ ಹತ್ತಿ ಪಲ್ಟಿಯಾಗಿ ಬೆಂಗಳೂರು ಕಡೆಗೆ ಬರುತ್ತಿದ್ದ ಕೆ. ಎಸ್. ಆರ್. ಟಿ. ಸಿ ಅಶ್ವಮೇಧ ಬಸ್ಸಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನು ಓದಿ : Special news : ಮುಖಕ್ಕೆ ಬ್ಲಾಂಕೆಟ್ ಹೊದ್ದಿಕೊಂಡು ಮಲಗುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.!
ವಿಷಯ ತಿಳಿದು ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಶವಗಳನ್ನು ರಾಮನಗರ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಿದರು. ಘಟನೆಯಲ್ಲಿ ಕಾರು ನಜ್ಜುಗುಜ್ಜಾಗಿದ್ದು (The car was crushed), ಬಸ್ಸಿನ ಮುಂಭಾಗ ಹಾನಿಗೊಂಡಿದೆ ಎನ್ನಲಾಗಿದೆ.
ಹಿಂದಿನ ಸುದ್ದಿ : ಚಳಿಗಾಲದಲ್ಲಿ ಬ್ರೈನ್ ಸ್ಟ್ರೋಕ್ ಮತ್ತು ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು; ಕಾರಣ.?
ಜನಸ್ಪಂದನ ನ್ಯೂಸ್, ಆರೋಗ್ಯ : ಚಳಿಗಾಲ (winter) ಶುರುವಾದ ಕೂಡಲೇ ಹತ್ತು ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲಿಯೂ ಚಳಿಗಾಲದಲ್ಲಿ ಹೃದಯಾಘಾತ ಮತ್ತು ಬ್ರೈನ್ ಸ್ಟ್ರೋಕ್‌ನಂತಹ (heart attack and brain stroke) ಕಾರಣಗಳಿಂದ ಸಾಯುವವರ ಸಂಖ್ಯೆಯೂ ಹೆಚ್ಚು ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಇದನ್ನು ಓದಿ : ನೀರಿನಿಂದ ಆಚೆ ಜಿಗಿದು ಹಾವನ್ನೇ ಬೇಟೆಯಾಡಲು ಮುಂದಾದ ಮೀನು; ವಿಡಿಯೋ Viral.!
ಹೃದ್ರೋಗ ಮತ್ತು ತಾಪಮಾನದ (Heart disease and temperature) ನಡುವಿನ ಸಂಬಂಧವನ್ನು ಸ್ವೀಡನ್ನ ಲುಂಡ್ ವಿಶ್ವವಿದ್ಯಾನಿಲಯದ (Lund University, Sweden) ಸಂಶೋಧನೆಯು ಮತ್ತೊಮ್ಮೆ ಸಾಬೀತುಪಡಿಸಿದೆ. ಅದರಲ್ಲಿಯೂ ಚಳಿಗಾಲದಲ್ಲಿ ತಾಪಮಾನವು ಶೂನ್ಯ ಡಿಗ್ರಿಗಿಂತ ಕಮ್ಮಿಯಾದಾಗ (Below zero degrees) ಹೃದಯಾಘಾತದ ಸಮಸ್ಯೆ ಹೆಚ್ಚಾಗುತ್ತದೆ ಎಂಬುದನ್ನು ಸಂಶೋಧಕರು (Researchers) ಕಂಡು ಹಿಡಿದಿದ್ದಾರೆ.
ಈ ಸೀಸನ್ ನಲ್ಲಿ ರಕ್ತನಾಳಗಳು ಕಿರಿದಾಗುವುದರಿಂದ (Blood vessels narrow( ರಕ್ತದೊತ್ತಡವು ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಹೃದಯಾಘಾತ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಚಳಿಗಾಲದಲ್ಲಿ, ಬೆಳಿಗ್ಗೆ ತಾಪಮಾನ ಕುಸಿತದ ಹಿನ್ನೆಲೆ ದೇಹದ ಉಷ್ಣತೆಯು ಕಡಿಮೆಯಾಗುತ್ತದೆ. ತಾಪಮಾನವು ಶೂನ್ಯಕ್ಕಿಂತ ಕಡಿಮೆಯಾದಾಗ, ಹೃದಯಾಘಾತದ ಅಪಾಯವು ಒಂದೇ ದಿನದಲ್ಲಿ 5 ಬಾರಿ ಹೆಚ್ಚಾಗುತ್ತದೆ (The risk of heart attack increases 5 times in a single day) ಎಂದು ಸಂಶೋಧನೆಯಿಂದ ಕಂಡುಬಂದಿದೆ.
ಇದನ್ನು ಓದಿ : Special news : ಯಾವುದೇ ಪ್ರಯೋಗಗಳನ್ನು ಮನುಷ್ಯರಿಗಿಂತ ಮುಂಚೆ ಇಲಿಗಳ ಮೇಲೆ ಮಾಡುವುದೇಕೆ.?
ಬಲವಾದ ಶೀತ ಗಾಳಿ, ಆರ್ದ್ರತೆ ಹೆಚ್ಚಳ ಹಾಗೂ ಸೂರ್ಯನ ಬೆಳಕಿನ ಕೊರತೆಯಿಂದ (Strong cold winds, increased humidity and lack of sunlight) ದೇಹದಲ್ಲಿ ತಾಪಮಾನವನ್ನು ಹೆಚ್ಚಿಸುವ ಸಾಮರ್ಥ್ಯವು ಕಡಿಮೆಯಾಗುತ್ತದೆ. ಇದು ನೇರವಾಗಿ ಆಂತರಿಕ ಅಂಗಗಳ ಮೇಲೆ ಪರಿಣಾಮ ಬೀರಬಹುದು.
ರಕ್ತನಾಳಗಳು ಶೀತಕ್ಕೆ ಪ್ರತಿಕ್ರಿಯಿಸಿದಂತೆ ತೀವ್ರ ನಡುಕ ಮತ್ತು ಅಪಧಮನಿಗಳಲ್ಲಿ ರಕ್ತದೊತ್ತಡ ಹೆಚ್ಚಾಗುವುದರಿಂದ ಹೃದಯಾಘಾತವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರಿಂದ ಹೃದಯ ಸಮಸ್ಯೆ ಇರುವವರು ಈ ಚಳಿಗಾಲದಲ್ಲಿ ಬೆಚ್ಚಗಿನ ವಾತಾವರಣದಲ್ಲಿ ಇರುವುದು ಒಳ್ಳೆಯದು ಎಂದು ಆರೋಗ್ಯ ತಜ್ಞರು (Health experts) ಅಭಿಪ್ರಾಯ ಪಡುತ್ತಾರೆ.
ಇದನ್ನು ಓದಿ : ನೋ ಕೇಬಲ್, ನೋ ಸೆಟ್ಟಾಪ್ ಬಾಕ್ಸ್, ; ಉಚಿತ 500 ಚಾನೆಲ್ ಟಿವಿ ಸರ್ವೀಸ್ BSNL ನಿಂದ.!
ಚಳಿಗಾಲದಲ್ಲಿ ಹೆಚ್ಚು ನೀರು ಕುಡಿಯುವುದಿಲ್ಲ ಬಹಳಷ್ಟು ಮಂದಿ. ಆದರೆ ಸಾಕಷ್ಟು ನೀರು ಸೇವಿಸಿದರೆ ನಿಮ್ಮ ಹೃದಯವು ಆರೋಗ್ಯವಾಗಿರುತ್ತದೆ. ನೀರು ದೇಹದಿಂದ ಕಲ್ಮಶಗಳನ್ನು ಹೊರಹಾಕಲು (To expel impurities from the body) ಅವಶ್ಯಕವಾಗಿದ್ದು, ಹೃದಯವು ತನ್ನ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸಲು ನೀರು ಸಹಾಯ ಮಾಡುತ್ತದೆ.
ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ನಿಯಮಿತ ವ್ಯಾಯಾಮವು (Regular exercise) ಅವಶ್ಯಕವಾಗಿದೆ. ಅಲ್ಲದೇ, ನಿಮ್ಮ ಹೃದಯವು ಗಟ್ಟಿಮುಟ್ಟಾಗಿರುತ್ತದೆ.
ಧೂಮಪಾನವನ್ನು (Quit smoking) ತ್ಯಜಿಸುವುದರಿಂದ ಹೃದಯ ಸಮಸ್ಯೆಯ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ.
ಇದನ್ನು ಓದಿ : Health : ಕಾಲು ಸೆಳೆತದಿಂದ ಬಳಲುತ್ತಿದ್ದೀರಾ.? ಈ ರೀತಿ ಮಾಡಿ ನಿಮಿಷಗಳಲ್ಲಿ ಮಾಯವಾಗುತ್ತೆ ನೋವು.!
ಈ ಚಳಿಗಾಲದಲ್ಲಿ ಜೀವಸತ್ವಗಳು, ಒಮೆಗಾ -3 ಉತ್ಕರ್ಷಣ ನಿರೋಧಕಗಳು (Antioxidants), ಖನಿಜಗಳು ಮತ್ತು ಕೊಬ್ಬಿನಾಮ್ಲ ಸಮೃದ್ಧವಾಗಿರುವ ಆಹಾರವನ್ನು (Food rich in minerals and fatty acids) ಸೇವಿಸುವುದು ಉತ್ತಮ.
Disclaimer : ಇಂಟರ್ನೆಟ್ ನಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ ಜನಸ್ಪಂದನ ನ್ಯೂಸ್‌ಗೂ, ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರರಲ್ಲ.