ಜನಸ್ಪಂದನ ನ್ಯೂಸ್, ಬೆಂಗಳೂರು : ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದು. ಸದ್ಯ ಕರ್ನಾಟಕ ಸೇರಿದಂತೆ ದೇಶದ 10 ರಾಜ್ಯಗಳಲ್ಲಿ local bank officer ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಭಾರತದಾದ್ಯಂತ ಒಟ್ಟು 1500 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಕರ್ನಾಟಕದಲ್ಲಿ (Karnataka) 300 ಸ್ಥಾನಗಳಿವೆ.
ಸಾಮಾನ್ಯ ವರ್ಗದವರು : 122
ಆರ್ಥಿಕ ದುರ್ಬಲ ವರ್ಗದವರು : 30
ಒಬಿಸಿ ವರ್ಗದವರು : 81
ಎಸ್‌ಟಿ ವರ್ಗದವರು : 22
ಎಸ್‌ಸಿ ವರ್ಗದವರು : 45 ಹುದ್ದೆಗಳನ್ನು ಮೀಸಲಿಡಲಾಗಿದೆ.
ಯಾವ ರಾಜ್ಯದಲ್ಲಿ ಹುದ್ದೆಗಳು ಖಾಲಿ ಇವೆ :
ಕರ್ನಾಟಕ : 300
ಆಂಧ್ರ ಪ್ರದೇಶ : 200
ಗುಜರಾತ್ : 200
ತಮಿಳನಾಡು : 200
ತೆಲಂಗಾಣ : 200
ಕೇರಳ : 100
ಪಶ್ಚಿಮ ಬಂಗಾಳ : 100
ಓಡಿಶಾ : 100
ಅಸ್ಸಾಂ : 50
ಮಹಾರಾಷ್ಟ್ರ : 50 ಹುದ್ದೆಗಳು ಖಾಲಿ ಇವೆ.
ಅರ್ಜಿ ಶುಲ್ಕ :
ಸಾಮಾನ್ಯ, ಒಬಿಸಿ ಹಾಗೂ ಇತರ ಅಭ್ಯರ್ಥಿಗಳಿಗೆ : 850 ರೂ.
ಪ.ಜಾ, ಪ.ಪಂ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ (handicap) ಹಾಗೂ ಮಾಜಿ ಯೋಧರಿಗೆ : 175 ರೂ.
ಶೈಕ್ಷಣಿಕ ಅರ್ಹತೆ :
ಈ ಹುದ್ದೆಗೆ ಆರ್ಟ್ಸ್, ಕಾಮರ್ಸ್, ಸೈನ್ಸ್ ಅಥವಾ ಇನ್ನಾವುದೇ ವಿಷಯಗಳಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇನ್ನೂ ರಾಜ್ಯಕ್ಕೆ ಅರ್ಜಿ ಸಲ್ಲಿಸುತ್ತಾರೋ ಆ ರಾಜ್ಯದ ಪ್ರಾದೇಶಿಕ ಭಾಷೆ ತಿಳಿದವರಾಗಿರಬೇಕು.
ವಯೋಮಿತಿ :
ಕನಿಷ್ಠ – 20 ವರ್ಷ
ಗರಿಷ್ಠ – 30 ವರ್ಷ (01/10/2024ಕ್ಕೆ ಅನ್ವಯ)
ವಯೋಮಿತಿ ಸಡಿಲಿಕೆ (Age relaxation) :
ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ – 5 ವರ್ಷ
ಒಬಿಸಿ ಅಭ್ಯರ್ಥಿಗಳಿಗೆ – 3 ವರ್ಷ
ಅಂಗವಿಕಲ ಅಭ್ಯರ್ಥಿಗಳಿಗೆ – 10 ವರ್ಷ
ಪರೀಕ್ಷಾ ವಿಧಾನ (Test method) :
* ವಸ್ತುನಿಷ್ಠ ಮಾದರಿ (Objective model) ಹಾಗೂ ಡಿಸ್ಕ್ರಿಪ್ಟಿವ್ ಮಾದರಿ ಪ್ರಶ್ನೆಗಳಿರುತ್ತವೆ.
* ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಪರೀಕ್ಷೆ ಇರುತ್ತದೆ.
* ಆನ್‌ಲೈನ್‌ನಲ್ಲಿ ಪರೀಕ್ಷೆ ಇರುತ್ತದೆ.
ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ/ ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಆನ್‌ಲೈನ್ ಪರೀಕ್ಷಾ ಕೇಂದ್ರಗಳಿವೆ (exam center).
ವೇತನ ಶ್ರೇಣಿ :
₹48,480 ರಿಂದ ₹85,920.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : ಅಕ್ಟೋಬರ್ 24
ಅರ್ಜಿ ಸಲ್ಲಿಸಲು ಕೊನೆಯ ದಿನ : ನವೆಂಬರ್ 13
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ :
www.unionbankofindia.co.in