Friday, October 18, 2024
spot_img
spot_img
spot_img
spot_img
spot_img
spot_img
spot_img

ಫ್ಲ್ಯಾಟ್‌ನಲ್ಲಿ 14 ಯುವಕರ ಜೊತೆ 6 ಯುವತಿಯರು ; ಮುಂದೆ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ‌ಡೆಸ್ಕ್ : ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ 200 ಕ್ಕೂ ಹೆಚ್ಚು ಜನರನ್ನು ಒಳಗೊಂಡಿರುವ ರೇವ್ ಪಾರ್ಟಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಕರ್ನಾಟಕ ಪೊಲೀಸರು ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದರು.

ಇದನ್ನು ಓದಿ : ಜಮೀನಿಗೆ ಹೋಗಿದ್ದ ಮಹಿಳೆಯರ ಜೀವಂತ ಸಮಾಧಿಗೆ ಯತ್ನ : ಎಲ್ಲೆಡೆ ಭಾರೀ ವಿರೋಧ ; ಹೃದಯ ವಿದ್ರಾವಕ ಘಟನೆಯ video ವೈರಲ್.!

ಈ ರೇವ್‌ ಪಾರ್ಟಿಯಲ್ಲಿ ತೆಲುಗಿನ ನಟಿಯೊಬ್ಬರು ಸಿಕ್ಕಿಬಿದ್ದಿದ್ದರು. ಅಷ್ಟೇ ಅಲ್ಲ, ಹೈದರಾಬಾದ್‌ ಮೂಲದವರೇ ಹಲವರಿದ್ದರು ಎಂಬುದು ಮಾಹಿತಿ. ಇದೀಗ, ಹೈದರಾಬಾದ್‌ನಲ್ಲೇ ರೇವ್‌ ಪಾರ್ಟಿ ನಡೆದಿದೆ.

ಹೈದರಾಬಾದ್‌ನ ಮಾದಾಪುರ್‌ನ ಅಪಾರ್ಟ್‌ಮೆಂಟ್‌ ಒಂದರ ಫ್ಲ್ಯಾಟ್‌ನಲ್ಲಿ ಬರ್ತ್‌ ಡೇ ಪಾರ್ಟಿ ಹೆಸರಿನಲ್ಲಿ ಈ ರೇವ್‌ ಪಾರ್ಟಿ ಆಯೋಜಿಸಲಾಗಿತ್ತು.

ಬೇಗಂಪೇಟೆಯ ನಾಗರಾಜು ಎಂಬುವವರ ಹುಟ್ಟುಹಬ್ಬದ ಹೆಸರಿನಲ್ಲಿ ಈ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಈವೆಂಟ್ ಪ್ರವರ್ತಕ ಕಿಶೋರ್ ಅವರನ್ನೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಗುರುವಾರ ರಾತ್ರಿ ನಡೆದ ಈ ಪಾರ್ಟಿಗೆ ಹುಡುಗಿಯರನ್ನು ಕೂಡಾ ಕರೆಸಲಾಗಿತ್ತು. ಫ್ಲ್ಯಾಟ್‌ನಲ್ಲಿ 14 ಯುವಕರು ಹಾಗೂ 6 ಯುವತಿಯರು ಪಾರ್ಟಿ ಮಾಡುತ್ತಿದ್ದರು.

ಇದನ್ನು ಓದಿ : WhatsApp ಬಳಕೆದಾರರಿಗೆ ಗುಡ್‌ ನ್ಯೂಸ್ ; ಇನ್ಮುಂದೆ ಇಂಟರ್ನೆಟ್ ಇಲ್ಲದೆಯೇ ಕಳುಹಿಸಬಹುದು ಫೋಟೋ, ಫೈಲ್.!

ಈ ವಿಚಾರ ಟಾಸ್ಕ್‌ ಫೋರ್ಸ್‌ ಪೊಲೀಸರಿಗೆ ಗೊತ್ತಾಗಿ ದಾಳಿ ಮಾಡಿದ್ದಾರೆ. ಐವರು ಸಂಘಟಕರ ವಿರುದ್ಧ ಕೇಸ್‌ ದಾಖಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಇನ್ನೂ ರೇವ್‌ ಪಾರ್ಟಿಯಲ್ಲಿ ಒಂದು ಗ್ರಾಂ ಕೊಕೇನ್‌, ಎರಡು ಗ್ರಾಂ ಎಂಡಿಎಂಎ, ಹಲವು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಹುಡುಗಿಯರನ್ನು ಕರೆತರಲು ಬಳಸಿದ್ದ ಇನ್ನೋವಾ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಮಾದಕ ವಸ್ತುಗಳ ಮೌಲ್ಯ 1 ಲಕ್ಷದ 25 ಸಾವಿರ ರೂಪಾಯಿ ಎಂದು ತಿಳಿದು ಬಂದಿದೆ. ಪಾರ್ಟಿಯಲ್ಲಿ ಪಾಲ್ಗೊಂಡ ಬಹುತೇಕರು ಡ್ರಗ್ಸ್‌ ಸೇವನೆ ಮಾಡಿದ್ದರು ಎಂದು ವರದಿ ತಿಳಿಸಿದೆ.

ಇದನ್ನು ಓದಿ : Nurse ಜೊತೆ ಹೆಡ್ ಕಾನ್ಸ್‌ಟೇಬಲ್ ಅಕ್ರಮ ಸಂಬಂಧ ; ರೆಡ್ ಹ್ಯಾಂಡ್ಆಗಿ ಹಿಡಿದ ಕಾನ್ಸ್‌ಟೇಬಲ್ ಪತ್ನಿ.!

ನಾಗರಾಜು, ಸಾಯಿಕುಮಾರ್ ಹಾಗೂ ಬೇಗಂಪೇಟೆ ಭಾಗದ ಬಿ. ಟೆಕ್ ವಿದ್ಯಾರ್ಥಿಗಳು ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಮೋಟರ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img