Wednesday, March 12, 2025
HomeViral Videoರಸ್ತೆ ಮಧ್ಯೆ ಯುವತಿಗೆ ಪೆಟ್ರೋಲ್ ಸುರಿದ ಯುವಕ ; ಮುಂದೆನಾಯ್ತು video ನೋಡಿ.!
spot_img
spot_img
spot_img
spot_img
spot_img

ರಸ್ತೆ ಮಧ್ಯೆ ಯುವತಿಗೆ ಪೆಟ್ರೋಲ್ ಸುರಿದ ಯುವಕ ; ಮುಂದೆನಾಯ್ತು video ನೋಡಿ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಹಾಡಹಗಲೇ ರಸ್ತೆ ಮಧ್ಯದಲ್ಲಿ ಓರ್ವ ಬುರ್ಕಾಧಾರಿ ಯುವತಿಗೆ ಮೈ ಮೇಲೆ ಪೆಟ್ರೋಲ್ ಸುರಿದು (Pour petrol ) ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ ಆಘಾತಕಾರಿ ಘಟನೆ ನಡೆದಿದೆ.

ಫೆಬ್ರವರಿ 10 ರಂದು ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ (Suryapet district of Telangana) ಎನ್‌ಜಿಒ ಕಾಲೋನಿ ಪ್ರದೇಶದ ರಸ್ತೆಬದಿಯಲ್ಲಿ ಈ ಘಟನೆ ನಡೆದಿದ್ದು, ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನು ಓದಿ : ಕರ್ನಾಟಕ ಹೈಕೋರ್ಟ್‌ನಲ್ಲಿ ಖಾಲಿ ಇರುವ 158 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ರಸ್ತೆ ಮಧ್ಯದಲ್ಲಿ ಓರ್ವ ಬುರ್ಕಾಧಾರಿ ಯುವತಿಯ ಮೇಲೆ ಪೆಟ್ರೋಲ್ ಸುರಿದು ಬೀದಿಯಲ್ಲಿ ಗಲಾಟೆ ಮಾಡುವ ರೆಕಾರ್ಡ್ ಆದ ದೃಶ್ಯ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ವಿಡಿಯೋದಲ್ಲಿ ಏನಿದೆ :

ರಸ್ತೆಯ ಪಕ್ಕದಲ್ಲಿ ಓರ್ವ ಯುವಕ ಹಾಗೂ ಇಬ್ಬರು ಬುರ್ಕಾ ಧರಿಸಿರುವ ಯುವತಿಯರನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದು. ಯುವಕ ಓರ್ವ ಯುವತಿಗೆ ಏನೋ ಹೇಳುತ್ತಿದ್ದು, ಮಾತಿನ ಮಧ್ಯದಲ್ಲಿ ಯುವಕ ತನ್ನ ಮೇಲೆ ಪೆಟ್ರೋಲ್‌ ಸುರಿದು ಕೊಂಡಿದ್ದಾನೆ.

ಇದನ್ನು ಓದಿ : ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ಆಗಿ Lokayukta ಬಲೆಗೆ ಬಿದ್ದ ಗ್ರಾ. ಪಂ. ಅಧ್ಯಕ್ಷ.!

ಅಲ್ಲದೇ ಯುವತಿಯೊಬ್ಬಳ ಮೇಲೆ ಪೆಟ್ರೋಲ್‌ ಸುರಿಯುವುದನ್ನು ವಿಡಿಯೋದಲ್ಲಿ ಕಾಣಬಹುದು. ಬಳಿಕ ಸ್ಥಳಕ್ಕೆ ಬಂದ ವ್ಯಕ್ತಿಯೊಬ್ಬರು ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾನೆ (He slapped).

ಆತನ ಪ್ರೀತಿಯನ್ನು ಒಪ್ಪದಿದ್ದ ಕಾರಣ ಕೋಪಗೊಂಡ ಯುವಕ ಪೆಟ್ರೋಲ್ ಸುರಿದು ಎಲ್ಲರ ಎದುರೇ ಜೀವಂತವಾಗಿ ಸುಡುತ್ತೇನೆ (Burn alive) ಎಂದು ಯುವತಿಯನ್ನು ಬೆದರಿಸಿದ್ದಾನೆ. ಆತ ಹೇಳಿದಂತೆ ಪೆಟ್ರೋಲ್ ತುಂಬಿದ ಬಾಟಲಿಯನ್ನು ಹಿಡಿದು ಯುವತಿಯ ಬಳಿ ಬಂದ ಆತ ಬೀದಿಯಲ್ಲಿ ಬಹಿರಂಗವಾಗಿ ಹಲ್ಲೆ ನಡೆಸಿದ್ದಾನೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : ಸಾಲ ವಸೂಲಿಗೆ ಬಂದ Bank ಸಿಬ್ಬಂದಿಯೊಂದಿಗೆ ಓಡಿಹೋಗಿ ಮದುವೆಯಾದ ವಿವಾಹಿತ ಮಹಿಳೆ.!

ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ಹುಜೂರ್‌ನಗರದ 23 ವರ್ಷದ ಈ ಯುವತಿಯೊಂದಿಗೆ ಯುವಕ ಈ ರೀತಿ ವರ್ತಿಸಿದ್ದಾನೆ. ಘಟನೆಯ ಬಳಿಕ ಯುವಕನ ವಿರುದ್ಧ ಹುಜೂರ್‌ನಗರ ಪೊಲೀಸರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!