Tuesday, October 22, 2024
spot_img
spot_img
spot_img
spot_img
spot_img
spot_img
spot_img

Health : ನೀವು ಗ್ಯಾಸ್ಟ್ರಿಕ್‌ ಸಮಸ್ಯೆಗೆ ಒಳಗಾಗಿದ್ದೀರಾ.? ಹಾಗಿದ್ರೆ ಈ ಸುದ್ದಿ ಓದಿ.

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಲವರಿಗೆ ಆಗಾಗ ಹೊಟ್ಟೆಯ ಉಬ್ಬರ, ಹೊಟ್ಟೆ ತುಂಬಿದಂತೆ ಭಾಸವಾಗುವುದು, ಸ್ವಲ್ಪ ಮಟ್ಟಿನ ದಣಿವು ಇಂತಹ ಲಕ್ಷಣಗಳು ಕಂಡುಬರುತ್ತಿರುತ್ತವೆ.

ಹೊಟ್ಟೆ ನೋವು, ಎದೆಯುರಿ, ವಾಕರಿಕೆ ಮತ್ತು ವಾಂತಿಯಂತಹ ರೋಗಲಕ್ಷಣಗಳು ಆಗಾಗ್ಗೆ ಕಾಣಿಸಿಕೊಳ್ಳುವುದು ನೀವು ಗ್ಯಾಸ್ಟ್ರಿಕ್‌ ಸಮಸ್ಯೆ ಹೊಂದಿದ್ದೀರಾ ಎಂದರ್ಥ.

ಗ್ರೀಕ್‌ ಭಾಷೆಯಲ್ಲಿ ಗ್ಯಾಸ್ಟರ್‌ ಎಂದರೆ ಜಠರ. ಆ ಆಧಾರದ ಮೇಲೆ ಯೋಚಿಸಿದರೆ, ಗ್ಯಾಸ್ಟ್ರಿಕ್‌ ಎಂದರೆ ಜಠರದ ಎಂದರ್ಥ, ಉದಾಹರಣೆಗೆ ಗ್ಯಾಸ್ಟ್ರಿಕ್‌ ಅಲ್ಸರ್‌ ಎಂದರೆ ಜಠರದ ಹುಣ್ಣು ಎಂದರ್ಥ.

ಇದನ್ನು ಓದಿ : Health : ಈ ರೋಗಗಳಿಗೆ ಅತ್ಯುತ್ತಮ ಈ ನಿತ್ಯ ಪುಷ್ಪ.!

ಲಕ್ಷಣಗಳು :
ಹೊಟ್ಟೆಯ ಮೇಲ್ಭಾಗದಲ್ಲಿ ನೋವು
ತೂಕ ಇಳಿಕೆ
ಬಿಕ್ಕಳಿಕೆ
ರಕ್ತಸ್ರಾವದ ಜೊತೆ ಕಪ್ಪು ಮಲ
ವಾಕರಿಕೆ
ಹೊಟ್ಟೆಯ ಮೇಲ್ಭಾಗದಲ್ಲಿ ಸುಡುವ ಸಂವೇದನೆ
ಹಸಿವಿನ ನಷ್ಟ
ವಾಂತಿಯಲ್ಲಿ ರಕ್ತ
ಅಜೀರ್ಣ

ಕಾರಣಗಳು :
* ಆಸ್ಪಿರಿನ್ ಮತ್ತು ಐಬುಪ್ರೊಫೇನ್‌ನಂತಹ ಸ್ಟೀರಾಯ್ಡ್ ಅಲ್ಲದ ಉರಿಯೂತದ ಔಷಧಗಳ ದೀರ್ಘಾವಧಿಯ ಬಳಕೆ
* ಅತಿಯಾದ ಮದ್ಯ ಸೇವನೆ
* ಸಮಯಕ್ಕೆ ಸರಿಯಾಗಿ ಆಹಾರ ತಿನ್ನದೇ ಇರುವುದು
* ಸುಟ್ಟಗಾಯಗಳು ಅಥವಾ ಆಘಾತಕಾರಿ ಗಾಯ
* ದೀರ್ಘಕಾಲದ ವಾಂತಿ
* ಒತ್ತಡ
* ಹೆಲಿಕೋಬ್ಯಾಕ್ಟರ್ ಪೈಲೋರಿಯಿಂದ ಉಂಟಾಗುವ ಸೋಂಕು

ಪರಿಹಾರ :
ಸೋಂಪು ಕಾಳುಗಳಲ್ಲಿ ಹೊಟ್ಟೆಯ ಸೆಳೆತವನ್ನು ಕಡಿಮೆ ಮಾಡುವ ಗುಣವಿದೆ. ಮಧ್ಯಾಹ್ನ ಊಟ ಆದಮೇಲೆ ಒಂದು ಟೀ ಚಮಚ ಸೋಂಪು ಕಾಳುಗಳನ್ನು ಬಾಯಿಯಲ್ಲಿ ಹಾಕಿಕೊಂಡರೆ ಗ್ಯಾಸ್ಟ್ರಿಕ್ ಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
ಜೊತೆಗೆ ಸೋಂಪುಕಾಳುಗಳಲ್ಲಿ ಹೆಚ್ಚಿನ ಪ್ರಮಾಣದ ನಾರಿನ ಅಂಶ ಕೊಡ ಇರುವುದರಿಂದ ಸೇವಿಸಿದ ಆಹಾರ ಯಾವುದೇ ಗ್ಯಾಸ್ಟ್ರಿಕ್ ಆಮ್ಲವನ್ನು ಉತ್ಪತ್ತಿ ಮಾಡದೆ ಚೆನ್ನಾಗಿ ಜೀರ್ಣವಾಗುತ್ತದೆ.

ಇದನ್ನು ಓದಿ : ವಿಚ್ಛೇದನದ ಬಳಿಕ ಸೊಸೆ, ಅತ್ತೆ -ಮಾವನ ಮನೆಯಲ್ಲಿ ಇರುವಂತಿಲ್ಲ; High court ಮಹತ್ವದ ತೀರ್ಪು.!

ಅನಾನಸ್ ನಲ್ಲಿ ಬ್ರೋಮೇಲೈನ್ ಎನ್ನುವ ಅಂಶ ಇರುವ ಕಾರಣ ದೇಹದಲ್ಲಿ ಉತ್ಪತ್ತಿಯಾಗುವ ಅತಿಯಾದ ಆಮ್ಲದ ಪರಿಣಾಮವನ್ನು ಮತ್ತು ಎದೆಯುರಿ ಸಮಸ್ಯೆಯನ್ನು ನಿವಾರಣೆ ಮಾಡಿ ಪರಿಹಾರವನ್ನು ಒದಗಿಸುತ್ತದೆ.

ಹೊಟ್ಟೆಯ ಭಾಗದಲ್ಲಿ ಕಂಡುಬರುವ ಆಮ್ಲೀಯ ಪ್ರಭಾವವನ್ನು ಕಡಿಮೆ ಮಾಡುವಲ್ಲಿ ಲವಂಗಗಳು ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಇದರ ಜೊತೆಗೆ ಹೊಟ್ಟೆಯ ಭಾಗದಲ್ಲಿ ಕಂಡುಬರುವ ಸೆಳೆತ ಮತ್ತು ಹೊಟ್ಟೆ ತೊಳಸುವಿಕೆ ಸಂದರ್ಭವನ್ನು ಸಹ ಲವಂಗಗಳು ದೂರಮಾಡುತ್ತವೆ.

ತಣ್ಣನೆಯ ಹಾಲಿನಲ್ಲಿ ಕಂಡುಬರುವ ಕ್ಯಾಲ್ಶಿಯಂ ಅಂಶ ಹೊಟ್ಟೆಯ ಭಾಗದಲ್ಲಿ ಕಂಡುಬರುವ ಅತಿಯಾದ ಆಮ್ಲೀಯತೆಯನ್ನು ತಗ್ಗಿಸುತ್ತದೆ. ಆದರೆ ಯಾವುದೇ ಕಾರಣಕ್ಕೂ ಹಾಲಿಗೆ ನೀವು ಹೆಚ್ಚು ಚಾಕ್ಲೆಟ್ ಪುಡಿ ಅಥವಾ ಸಕ್ಕರೆಯನ್ನು ಬೆರೆಸಿ ಕುಡಿಯಬಾರದು.

ಇದನ್ನು ಓದಿ : Special news : ಈ ರಕ್ತದ ಗುಂಪು ಹೊಂದಿದವರಲ್ಲಿ ಪಾರ್ಶ್ವವಾಯು ಅಪಾಯ ಹೆಚ್ಚು.!

ಜೇನುತುಪ್ಪ ಸೇವನೆಯಿಂದ ಕೆಮ್ಮು ಮತ್ತು ಗಂಟಲಿನ ಉರಿಯೂತವನ್ನು ಕಡಿಮೆ ಮಾಡಿಕೊಳ್ಳುವ ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆಗೆ ಕೂಡ ಉತ್ತಮ ಪರಿಹಾರ ಸಿಗಲಿದೆ. ಜೇನುತುಪ್ಪ ತನ್ನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳನ್ನು ಒಳಗೊಂಡಿರುವ ಕಾರಣ, ಕೇವಲ 5 ನಿಮಿಷದಲ್ಲಿ ಗ್ಯಾಸ್ಟ್ರಿಕ್‌ ಸಮಸ್ಯೆ ಪರಿಹಾರವಾಗುತ್ತದೆ

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img