Tuesday, October 22, 2024
spot_img
spot_img
spot_img
spot_img
spot_img
spot_img
spot_img

ನೀವೂ Ice Cream ಪ್ರಿಯರೇ ; ಸಂಶೋಧನೆಯಿಂದ ಬಯಲಾಯ್ತು ಆಘಾತಕಾರಿ ಮಾಹಿತಿ.!

spot_img
WhatsApp Group Join Now
Telegram Group Join Now
Instagram Account Follow Now

 ಜನಸ್ಪಂದನ ನ್ಯೂಸ್‌, ಡೆಸ್ಕ್ : ಬೇಸಿಗೆಯಲ್ಲಿ ತಂಪಾಗಿರಲು ಎಲ್ಲರಿಗೂ ನೆನಪಾಗುವುದು ಐಸ್‌ಕ್ರೀಂ. ಮಕ್ಕಳಿಂದ ವಯಸ್ಸಾದವರ ತನಕ ಐಸ್‌ಕ್ರೀಂ ಇಷ್ಟಪಡದವರು ಯಾರೂ ಇಲ್ಲ.

ಬಾಯಲ್ಲಿಟ್ಟರೆ ಕರಗುವ ಐಸ್‌ಕ್ರೀಂ ನಿಜವಾಗಿಯೂ ದೇಹಕ್ಕೆ ತಂಪು ನೀಡುವ ಆಹಾರವೇ? ಐಸ್‌ಕ್ರೀಂ ಬೇಸಿಗೆಗೆ ಪರ್ಫೆಕ್ಟ್‌ ಆಹಾರ ಎನ್ನುವವರಿಗೆ ಶಾಕಿಂಗ್ ವಿಷಯವೊಂದಿದೆ.

ಇದನ್ನು ಓದಿ : Warden ಮತ್ತು ಇತರೆ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ; ಕೂಡಲೇ ಅರ್ಜಿ ಸಲ್ಲಿಸಿ.!

ಐಸ್‌ಕ್ರೀಂ ಬಾಯಲ್ಲಿಟ್ಟರೆ, ತಂಪು ಅನುಭವ ನೀಡಬಹುದಾದರೂ, ನಮ್ಮ ದೇಹಕ್ಕೆ ಇದು ತಂಪು ಖಂಡಿತಾ ಅಲ್ಲ. ಬದಲಾಗಿ ನಮ್ಮ ದೇಹದ ಉಷ್ಣತೆಯನ್ನು ಹೆಚ್ಚು ಮಾಡುತ್ತವೆ ಎನ್ನುತ್ತವೆ ಸಂಶೋಧನೆಗಳು

ಐಸ್‌ಕ್ರೀಂನಲ್ಲಿ ಶೇ.10ಕ್ಕೂ ಹೆಚ್ಚು ಹಾಲಿನ ಕೊಬ್ಬಿನ ಅಂಶವಿದೆ. ಜೊತೆಗೆ ಸಕ್ಕರೆಯೂ ಬೇಕಾದಷ್ಟಿದೆ ಎಂದು ಹೇಳುತ್ತವೆ ಸಂಶೋಧನೆಗಳು. ಈ ಕೊಬ್ಬು ದೇಹಕ್ಕೆ ಸೇರಿ ಕರಗುವ ಸಮಯದಲ್ಲಿ ಶಾಖವನ್ನು ಬಿಡುಗಡೆ ಮಾಡುತ್ತದೆ. ಆಹಾರಕ್ಕೆ ಸಂಬಂಧಿಸಿದ ಉಷ್ಣತೆ ಇದಾಗಿದ್ದು ಇದನ್ನು ಡಯಟ್‌ ಇನ್‌ಡ್ಯೂಸ್ಡ್‌ ಥರ್ಮೋಜೆನೆಸಿಸ್‌ ಎಂದು ಕರೆಯುವರು.

ಐಸ್‌ಕ್ರೀಂ ತಿನ್ನುವ ಸಂದರ್ಭದಲ್ಲಿ ನಾಲಿಗೆಗೆ ಹಾಗೂ, ಗಂಟಲಲ್ಲಿ ಇಳಿಯುವಾಗ ತಂಪು ಅನಿಸಿದರೂ ದೇಹದೊಳಕ್ಕೆ ಸೇರಿದ ಮೇಲೆ, ನಿಮಗೆ ಇನ್ನಷ್ಟು ಸೆಖೆಯಾಗುತ್ತದೆ. ಕೇವಲ ಇಂದ್ರಿಯ ಮಾತ್ರ ತಂಪನ್ನು ಗುರುತಿಸುತ್ತದೆ.

ಇದನ್ನು ಓದಿ : ಲೈಫ್‌ಗೆ ಬೇಕು ವೈಫ್ : ಮಧ್ಯರಾತ್ರಿ ಬೇಕು ಅಂದ್ರು ಕೊಡಬೇಕು ; ವರನ Condition ನೋಡಿದ್ರೆ ಶಾಕ್.!

ಆದರೆ, ಈ ಐಸ್‌ಕ್ರೀಂ ದೇಹದೊಳಗೆ ಕರಗಲು ಆರಂಭಿಸಿದ ತಕ್ಷಣ ದೇಹದಲ್ಲಿ ಶಾಖ ಬಿಡುಗಡೆಯಾಗುತ್ತದೆ. ಹೀಗಾಗಿ ಐಸ್‌ಕ್ರೀಂ ತಿಂದು ಸ್ವಲ್ಪ ಹೊತ್ತಿನ ನಂತರ ದೇಹ ತಂಪಾಗುವ ಬದಲು, ಹೆಚ್ಚು ಸೆಖೆಯಾಗಲು ಆರಂಭವಾಗುತ್ತದೆ.

ಐಸ್‌ಕ್ರೀಂ ಅಷ್ಟೇಯಲ್ಲ ಎಲ್ಲ ಬಗೆಯ ತಂಪು ಆಹಾರಗಳಿಗೂ ಅನ್ವಯಿಸುತ್ತದೆ. ಐಸ್ಡ್‌ ಕಾಫಿ, ಐಸ್ಡ್‌ ಟೀ, ಐಸ್‌ ಕ್ಯಾಂಡಿಗಳು ಸೇರಿದಂತೆ ಬಹುತೇಕ ಎಲ್ಲ ಕೂಲ್‌ ಕೂಲ್‌ ಆಹಾರಗಳು ದೇಹದಲ್ಲಿ ವಿರುದ್ಧವಾದ ಅನುಭವವನ್ನೇ ನೀಡಬಹುದು. ಜಾಹೀರಾತುಗಳಲ್ಲಿ ಬರುವ ಕೂಲಿಂಗ್‌ ಡ್ರಿಂಕ್‌ಗಳೂ ಅಷ್ಟೇ, ಕೇವಲ ನಿಮ್ಮ ನಾಲಿಗೆಯನ್ನಷ್ಟೇ ಒಮ್ಮೆ ಕೂಲ್‌ ಮಾಡುತ್ತದೆ. ಹೊರತು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ.

ಜನಸ್ಪಂದನ ನ್ಯೂಸ್, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು ಮತ್ತು ಕರ್ತವ್ಯವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img