Sunday, December 22, 2024
HomeBelagavi News2 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ ಜೀವ ಇರುವವರೆಗೆ ಕಠಿಣ ಶಿಕ್ಷೆ.!
spot_img

2 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ ಜೀವ ಇರುವವರೆಗೆ ಕಠಿಣ ಶಿಕ್ಷೆ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿಯ ಪೋಕ್ಸೊ ನ್ಯಾಯಾಲಯವು ಎರಡೂವರೆ ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಯುವಕನಿಗೆ ಜೀವ ಇರುವವರೆಗೂ ಕಠಿಣ ಶಿಕ್ಷೆ ಮತ್ತು 30 ಸಾವಿರ ದಂಡ ವಿಧಿಸಿ (Imprisonment for life and fine of Rs 30,000) ಬುಧವಾರ ತೀರ್ಪು ನೀಡಿದ ಘಟನೆ ನಡೆದಿದೆ.

ಶಿಕ್ಷೆಗೆ ಒಳಗಾದ ಆರೋಪಿ ಬೈಲಹೊಂಗಲ ತಾಲ್ಲೂಕಿನ ವಣ್ಣೂರ ಗ್ರಾಮದ (Vannoor village of Bailahongal taluk) ಮಹಾದೇವ ನಾಯ್ಕ ಎಂದು ತಿಳಿದು ಬಂದಿದೆ.

ಇದನ್ನು ಓದಿ : Gram ಪಂಚಾಯಿತಿಯ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ.!

2017 ರಲ್ಲಿ ಶಾಲೆ ಆವರಣದಲ್ಲಿ ಆಟವಾಡುತ್ತಿದ್ದ ಬಾಲಕಿಯನ್ನು ಶಾಲೆ ಕಂಪೌಂಡ್‌ ಬಳಿ ಕರೆದೊಯ್ದು ಅತ್ಯಾಚಾರ ನಡೆಸಿದ್ದ. ಬಳಿಕ ಬಾಲಕಿಯ ಕುತ್ತಿಗೆ ಹಿಸುಕಿ (Squeeze the girl’s neck), ಮಣ್ಣಿನಲ್ಲಿ ಹೂತು ಹಾಕಿ ಕೊಲೆ ಮಾಡಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದ.

ಈ ಹೀನ ಕೃತ್ಯದ ಕುರಿತು ಬಾಲಕಿ ಪೋಷಕರು ನೇಸರಗಿ ಠಾಣೆಯಲ್ಲಿ ದೂರು ದಾಖಲಿಸಿದ್ದರು (A complaint was lodged at Nesaragi police station).

ಇದನ್ನು ಓದಿ : GT : ದೇವಸ್ಥಾನದ ಹತ್ತಿರ ಮಾಜಿ ಉಪ ಮುಖ್ಯಮಂತ್ರಿ ಮೇಲೆ ಗುಂಡಿನ ದಾಳಿ.!

ತನಿಖಾಧಿಕಾರಿ (Investigator) ಎಚ್‌. ಸಂಗನಗೌಡರ ಅವರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (Charge List) ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿ. ಎಂ.‍ ಪುಷ್ಪಲತಾ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತೀರ್ಪು ಪ್ರಕಟಿಸಿದ್ದಾರೆ.

ಜಿಲ್ಲಾ ಕಾನೂನು ಪ್ರಾಧಿಕಾರದಿಂದ (District Legal Authority) 1 ಲಕ್ಷ ಪರಿಹಾರ (1 lakh compensation) ಪಡೆಯುವಂತೆ ಸಂತ್ರಸ್ತೆಗೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ (Special Government Prosecutor) ಎಲ್‌. ವಿ. ಪಾಟೀಲ ವಾದ ಮಂಡಿಸಿದ್ದರು ಎಂದು ತಿಳಿದು ಬಂದಿದೆ.

ಹಿಂದಿನ ಸುದ್ದಿ : ಪ್ರಿಯಕರನ ಜೊತೆ ಸೇರಿ ನದಿಯಲ್ಲಿ ಮುಳುಗಿಸಿ ಪತಿಯ ಕೊಲೆ ; ವರ್ಷದ ಬಳಿಕ ಮೂವರ ಬಂಧನ.!

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಹರಿಯುವ ಕೃಷ್ಣಾ ನದಿಯಲ್ಲಿ ಬರೋಬ್ಬರಿ 11 ತಿಂಗಳ ಹಿಂದೆ ವ್ಯಕ್ತಿಯೊಬ್ಬರನ್ನು ಮುಳುಗಿಸಿ ಕೊಲೆ ಮಾಡಿದ ಪ್ರಕರಣವನ್ನು ಭೇದಿಸುವಲ್ಲಿ ಹಾರೂಗೇರಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.

ಇಂದು (ದಿ.04) ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಶಂಕರ ಗುಳೇದ ಅವರು ಈ ಬಗ್ಗೆ ಮಾಹಿತಿ ನೀಡಿದರು.

ಇದನ್ನು ಓದಿ : GT : ದೇವಸ್ಥಾನದ ಹತ್ತಿರ ಮಾಜಿ ಉಪ ಮುಖ್ಯಮಂತ್ರಿ ಮೇಲೆ ಗುಂಡಿನ ದಾಳಿ.!

2023 ರ ಡಿಸೆಂಬರ್ 27 ರಂದು ಕೃಷ್ಣಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಈ ನಡುವೆ ರಾಯಬಾಗ ತಾಲೂಕಿನ ಇಟ್ನಾಳ ಗ್ರಾಮದ ಯುವಕನೊಬ್ಬ ಕಾಣೆಯಾಗಿದ್ದ. ಆದರೆ ಆತನ ಬಗ್ಗೆ ಯಾವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರಲಿಲ್ಲ ಎಂದು ತಿಳಿಸಿದರು.

ಪೊಲೀಸರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ತನಿಖೆ ನಡೆಸಿದರು. ಕೊನೆಗೂ ಅದು ಇಟನಾಳ ಗ್ರಾಮದ ಯುವಕನ ಶವ ಎನ್ನುವುದು ಗೊತ್ತಾಯಿತು. ಯುವಕನ ಪತ್ನಿ, ಆಕೆಯ ಪ್ರಿಯಕರ, ಹಾಗೂ ಇನ್ನೊಬ್ಬ ಸೇರಿ ಕೃಷ್ಣಾ ನದಿಯಲ್ಲಿ ಯುವಕನನ್ನು ಮುಳುಗಿಸಿ ಕೊಲೆಗೈದಿದ್ದರು ಎನ್ನುವುದು ಪೊಲೀಸ್ ತನಿಖೆಯಲ್ಲಿ ಸಾಬೀತುಗೊಂಡಿದೆ.

ಇದನ್ನು ಓದಿ : Gram ಪಂಚಾಯಿತಿಯ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ.!

ಒಂದೂವರೆ ವರ್ಷದ ಹಿಂದೆ ಯುವಕನ ಪತ್ನಿ ಕಾಣೆಯಾದ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಯುವಕನ ಪತ್ನಿ  ಓರ್ವನೊಂದಿಗೆ ಓಡಿ ಹೋಗಿದ್ದು, ಯುವಕನಿಗೆ ಗೊತ್ತಾಗಿದೆ.

ಕೆಲದಿನಗಳ ನಂತರ ಪತ್ನಿ ಮನೆಗೆ ವಾಪಸ್ ಬಂದಿದ್ದಳು. ಓಡಿ ಹೋಗಿದ್ದ ವಿಷಯಕ್ಕೆ ಸಂಬಂಧ ಪಟ್ಟಂತೆ ದಂಪತಿಗಳ ನಡುವೆ ದಿನವೂ ಗಲಾಟೆಯಾಗುತ್ತಿತ್ತು. ತನ್ನ ಪತ್ನಿಯ ಸಹ ಸಂಗ ಬಿಡುವಂತೆ ಪತ್ನಿಯ ಪ್ರಿಯಕರನಿಗೆ, ಯುವಕ ಎಚ್ಚರಿಕೆ ಕೊಟ್ಟಿದ್ದ.

ಕೊನೆಗೂ ಪತಿಗೆಯೇ ಗತಿ ಕಾಣಿಸಲು ಮುಂದಾದ ಪತ್ನಿ, ತನ್ನ ಪ್ರಿಯಕರ ಹಾಗು ಇನ್ನೊಬ್ಬನ ನೆರವಿನೊಂದಿಗೆ ಕಳೆದ ವರ್ಷದ ಡಿಸೆಂಬರ್ ನಲ್ಲಿ ಮಲ್ಲಪ್ಪನನ್ನು ಕೃಷ್ಣಾ ನದಿಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದರು.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments