ಜನಸ್ಪಂದನ ನ್ಯೂಸ್, ಡೆಸ್ಕ್ : ಮತ್ತೊಂದು ವಿಮಾನ ಅಪಘಾತ ಅಮೆರಿಕದಲ್ಲಿ ಸಂಭವಿಸಿದ್ದು, ಪ್ರಯಾಣಿಕರ ಹೊತ್ತು ಸಾಗಿದ್ದ ಪ್ರಯಾಣಿಕರ ವಿಮಾನವೊಂದು ಜನವಸತಿ ಕಟ್ಟಡಕ್ಕೆ ಅಪ್ಪಳಿಸಿದ ಪರಿಣಾಮ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರೂ ಭೀಕರವಾಗಿ ಸಾವನ್ನಪ್ಪಿದ್ದಾರೆ.
ಅಮೆರಿಕದ ಅಯೋವಾದಿಂದ ಮಿನ್ನೇಸೋಟ (From Iowa to Minnesota) ಕ್ಕೆ ತೆರಳುತ್ತಿದ್ದ ಸಣ್ಣ ವಿಮಾನವೊಂದು ಶನಿವಾರ ಮಿನ್ನಿಯಾಪೋಲಿಸ್ ಉಪನಗರದಲ್ಲಿರುವ ಮನೆಯೊಂದಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿ : ಸಂಪೂರ್ಣ ಬೆತ್ತಲಾಗಿ ವಿಮಾನ ನಿಲ್ದಾಣದಲ್ಲಿ ರಾದ್ಧಾಂತ ಸೃಷ್ಟಿಸಿದ Woman ; ವಿಡಿಯೋ ವೈರಲ್ .!
ವಿಮಾನವು ಡಿಕ್ಕಿ ಹೊಡೆದ ನಂತರ ಮನೆಗೆ ಬೆಂಕಿ ಹೊತ್ತಿಕೊಂಡು ಕಟ್ಟಡ ಕೂಡ ನಾಶವಾಗಿದೆ. ಆದರೆ ಅದೃಷ್ಟವಶಾತ ಮನೆಯಲ್ಲಿದ್ದ ನಿವಾಸಿಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.
ಸಿಂಗಲ್ ಎಂಜಿನ್ ಹೊಂದಿರುವ SOCATA TBM7 ವಿಮಾನದಲ್ಲಿ ಎಷ್ಟು ಜನರಿದ್ದರು ಎಂಬುದು ಇನ್ನೂ ತಿಳಿದಿಲ್ಲ. ಆದರೆ ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಯಾರೂ ಬದುಕುಳಿದಿಲ್ಲ ಎಂದು ವರದಿಯಾಗಿದೆ.
ಇದನ್ನು ಓದಿ : ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡ್‌ಆಗಿ ಸಿಕ್ಕಿಬಿದ್ದ ಪ್ರೇಮಿಗಳು ; ಮುಂದೆನಾಯ್ತು.? ಈ Video ನೋಡಿ.!
ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಪ್ರಕಾರ, ವಿಮಾನವು ಡೆಸ್ ಮೊಯಿನ್ಸ್ (Moines) ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮತ್ತೊಂದು ಮಿನ್ನಿಯಾಪೋಲಿಸ್ ಉಪನಗರದಲ್ಲಿರುವ ಅನೋಕಾ ಕೌಂಟಿ-ಬ್ಲೇನ್ ವಿಮಾನ ನಿಲ್ದಾಣಕ್ಕೆ ತೆರಳಿತ್ತು.
ಆದರೆ ಮಾರ್ಗಮಧ್ಯೆಯೇ ವಿಮಾನ ತಾಂತ್ರಿಕ ಸಮಸ್ಯೆಯಿಂದಾಗಿ ಜನವಸತಿ ಕಟ್ಟಡಕ್ಕೆ ಢಿಕ್ಕಿಯಾಗಿದೆ. ಇನ್ನು ವಿಮಾನ ಅಪಘಾತವನ್ನು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ತನಿಖೆ ನಡೆಸುತ್ತಿದೆ.
ಸಾಮಾಜಿಕ ಮಾಧ್ಯಮದಲ್ಲಿ ವಿಮಾನ ಅಪಘಾತದ ವೀಡಿಯೊಗಳು ವ್ಯಾಪಕ ವೈರಲ್ ಆಗುತ್ತಿವೆ.
Minnesota Plane Crash: A tragic plane crash shook Brooklyn Park, Minnesota, when a single-engine SOCATA TBM7 slammed into a home at 10792 Kyle Avenue just after noon on Saturday. The aircraft, en route from Des Moines International Airport to Anoka County-Blaine Airport, erupted… pic.twitter.com/w4GitAqIVt
— John Cremeans (@JohnCremeansX) March 30, 2025
Courtesy : KannadaPrabha
ಹಿಂದಿನ ಸುದ್ದಿ : ಟ್ರಾಫಿಕ್ ಮಧ್ಯೆ Reels ಮಾಡಿ ಜೈಲು ಸೇರಿದ ಪೊಲೀಸ್ ಅಧಿಕಾರಿಯ ಪತ್ನಿ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಟ್ರಾಫಿಕ್ ಮಧ್ಯೆ ರೀಲ್ಸ್ (Reels) ಮಾಡಿಲು ಹೋಗಿ ಓರ್ವ ಪೊಲೀಸ್ ಅಧಿಕಾರಿಯ ಪತ್ನಿ ಜೈಲು ಸೇರಿದ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಕೈಯಲ್ಲಿ ಮೊಬೈಲ್ (Mobile) ಒಂದಿದ್ದರೆ ಸಾಕು ಎಲ್ಲಿಂದೇಲ್ಲದೆ ಯಾವ ಸಂದರ್ಭನು ಕೂಡ ನೋಡದೆ ರೀಲ್ಸ್ ಮಾಡಲು ಜನ ಮುಂದಾಗುತ್ತಾರೆ. ಕೆಲ ದಿನಗಳ ಹಿಂದೆ ಓರ್ವ ಮಹಿಳೆ ತನ್ನ ಅಣ್ಣ ತೀರಿಕೊಂಡಾಗ ರೋಧಿಸುವ ವಿಡಿಯೋ ಮಾಡಿರುವ ಘಟನೆ ಬಗ್ಗೆ ವರದಿಯಾಗಿತ್ತು.
ಇದನ್ನು ಓದಿ : Video : ಮೈಮೇಲೆ ಪ್ರಜ್ಞೆಯಿಲ್ಲದಂತೆ ಕುಣಿಯುತ್ತ ಡ್ಯಾನ್ಸರ್ಗೆ ಹಣ ಕೊಟ್ಟ ಬಾಲಕ.!
ಇದೀಗ ಟ್ರಾಫಿಕ್ ಲೈಟ್‌ನ (traffic light) ಹಸಿರು ದೀಪ ಉರಿಯುತ್ತಿರುವಾಗ ಇಲ್ಲೊಬ್ಬ ಪೊಲೀಸ್ ಅಧಿಕಾರಿಯ ಪತ್ನಿ ವಾಹನಗಳು ಓಡಾಡುವಂತಹ ರಸ್ತೆ ಮಧ್ಯೆ ನಿಂತು ರೀಲ್ಸ್‌ಗಾಗಿ ಹರಿಯಾನ್ವಿ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಇವರ ಈ ರೀಲ್ಸ್ ಹುಚ್ಚಾಟದಿಂದಾಗಿ ಕೆಲ ಕಾಲ ಟ್ರಾಫಿಕ್ ಜಾಮ್ (Jam) ಉಂಟಾಗಿ ವಾಹನ ಸವಾರರು ಪರದಾಡಿದ್ದಾರೆ.
ಇನ್ನೂ ರೀಲ್ಸ್ ಮಾಡುತಿರುವ ಮಹಿಳೆಯನ್ನು ಚಂಡೀಗಢ ಪೊಲೀಸ್ ಅಧಿಕಾರಿಯ ಪತ್ನಿ ಜ್ಯೋತಿ (Jyoti) ಎಂದು ಮತ್ತು ವಿಡಿಯೋ ಚಿತ್ರಿಕರಣ ಮಾಡುತ್ತಿರುವರು ಜ್ಯೋತಿಯ ಸಹೋದರಿ ಪೂಜಾ (Pooja) ಗುರುತಿಸಲಾಗಿದೆ.
ಇದನ್ನು ಓದಿ : Lokayukta ಬಲೆಗೆ ಬಿದ್ದ ಮಾಹಿತಿ ಆಯೋಗದ ಆಯುಕ್ತ.!
ಇನ್ನು ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದಂತೆಯೇ ಹೆಡ್ ಕಾನ್ಸ್‌ಟೇಬಲ್ ಜಸ್ಬೀರ್ ಅವರ ದೂರಿನ ಮೇರೆಗೆ ಇಬ್ಬರು ಸಹೋದರಿಯರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ. ಕೊನೆಗೆ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸಿದ ಬಳಿಕ ಇಬ್ಬರೂ ಜಾಮೀನು ಪಡೆದು ವಾಪಸ್ ಆಗಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ (public places) ಇಂತಹ ಚಟುವಟಿಕೆಗಳು ಸಂಚಾರಕ್ಕೆ ಅಡ್ಡಿಯುಂಟುಮಾಡುತ್ತವೆ, ಇದು ರಸ್ತೆ ಅಪಘಾತಗಳಿಗೆ ಕಾರಣವಾಗಬಹುದು ಎಂದು ಘಟನೆಯ ನಂತರ ಚಂಡೀಗಢ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿ : ರಾಜ್ಯದಲ್ಲಿ ಮಾ.29 ರಿಂದ ಮುಂದಿನ ಆರು ದಿನಗಳ ಕಾಲ ಭರ್ಜರಿ ಮಳೆ ಸಾಧ್ಯತೆ.!
ಯಾವುದೇ ಮಹಿಳೆ ಅಥವಾ ಪುರುಷ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ರಸ್ತೆ ಮಧ್ಯದಲ್ಲಿ ರೀಲ್‌ಗಳನ್ನು ಮಾಡುವುದು ಕಂಡುಬಂದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ವಿಡಿಯೋ ನೋಡಿ :
चंडीगढ़ः पुलिस कर्मी की पत्नी और बहन ने रेड लाइट के बीच बनाई रील, गिरफ्तारी के बाद थाने से मिली बेल.#Chandigarhvibes #Reels #reelsvideo pic.twitter.com/tmk6qkLWIz
— Vinod Katwal (@Katwal_Vinod) March 27, 2025