ಜನಸ್ಪಂದನ ನ್ಯೂಸ್, ಡೆಸ್ಕ್ : ಮೃಗಾಲಯದಲ್ಲಿ ಹುಲಿಯೊಂದು ಬಾಲಕನ ಶರ್ಟ್ ಹಿಡಿದುಕೊಂಡ ವೇಳೆ ಆತ ಹುಲಿಗೆ ಹೇಳಿದ ಮಾತುಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ.
ವಿಡಿಯೋದಲ್ಲಿರುವ ದೃಶ್ಯ :
ಪಂಜರದಲ್ಲಿರುವ ಹುಲಿಯು ಏಕಾಏಕಿ ಬಾಲಕನ ಶರ್ಟ್ ಹಿಡಿದುಕೊಂಡಿದೆ. ಈ ವೇಳೆ ಆತ ಅದರಿಂದ ಬಿಡಿಸಿಕೊಳ್ಳಲು ಬೇಡಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ ಹುಲಿಯು ಬಾಲಕನ ಶರ್ಟ್ ಅನ್ನು ತನ್ನ ಕಡೆ ಎಳೆಯುತ್ತಲೇ ಇದೆ.
ಇದನ್ನು ಓದಿ : ಉಪನ್ಯಾಸಕರಿಗೆ Judge ವೇಷ ಹಾಕಿಸಿ ಆರೋಪಿಯನ್ನು ಬಂಧಿಸಿದ ಪೊಲೀಸರು.!
ಈ ಸಮಯದಲ್ಲಿ ಹುಡುಗ ಸಹಾಯಕ್ಕಾಗಿ ಕಿರುಚುತ್ತಾ ಹುಲಿಯನ್ನು ಕೇಳಿಕೊಳ್ಳುತ್ತಿದ್ದಾನೆ. ಹರಿದ ಅಂಗಿಯನ್ನು ನೋಡಿ ನನ್ನ ತಾಯಿ ಗದರಿಸುತ್ತಾಳೆ ಎಂದು ಹೇಳಿ ಬಿಡಿಸಿಕೊಳ್ಳಲು ಯತ್ನಿಸಿದ್ದಾನೆ. “ಮೇರಿ ಶರ್ಟ್ ಛೋಡ್ ದೇ, ಮಮ್ಮಿ ದಾಂಟೇಗಿ.” ಇದು ಮಕ್ಕಳು ತಮ್ಮದೇ ಆದ ಹಾಸ್ಯಮಯ ರೀತಿಯಲ್ಲಿ ಹೇಗೆ ಆದ್ಯತೆ ನೀಡುತ್ತಾರೆ ಎಂಬುದಕ್ಕೆ ಒಂದು ಪರಿಪೂರ್ಣ ಉದಾಹರಣೆಯಾಗಿದೆ.” ಎಂದು ಬರೆದಿದ್ದಾರೆ.
ಇನ್ನೂ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಡಿಯೋದ ಸ್ಥಳ ಮತ್ತು ಸಮಯ ಇನ್ನು ಖಚಿತವಾಗಿಲ್ಲ. ಮುಂದೆ ಏನಾಯ್ತು ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿಲ್ಲ.
ಇದನ್ನು ಓದಿ : ದೇಶದಲ್ಲಿ ಪ್ರತಿವರ್ಷ ಎರಡು Million ಜನರ ಸಾವಿಗೆ ಕಾರಣವಾಯ್ತು ಈ ಎಣ್ಣೆ.!
ಹುಲಿಯ ಕುರಿತು ಭಯಕ್ಕಿಂತ ಅಮ್ಮನ ಮೇಲಿನ ಭಯವೇ ಹೆಚ್ಚಾಗಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಆದರೆ ಇನ್ನು ಕೆಲವು ನೆಟ್ಟಿಗರು, ಮಗುವಿಗೆ ಸಹಾಯ ಮಾಡುವ ಬದಲು ವೀಡಿಯೊ ರೆಕಾರ್ಡ್ ಮಾಡಿದ ವ್ಯಕ್ತಿಯ ವಿರುದ್ಧ ಕೋಪ ವ್ಯಕ್ತಪಡಿಸಿದ್ದಾರೆ.
Kid Starts shouting "Meri shirt chhod de, mummy Daantegi" after Tiger grabeed his shirt in Zoo
pic.twitter.com/gl07jglZ46— Ghar Ke Kalesh (@gharkekalesh) February 9, 2025