Sunday, December 22, 2024
HomeNational Newsಇಲ್ಲಿ 8ನೇ ತರಗತಿ ಓದಿದವರು ಆಗಬಹುದು Doctor's.!
spot_img

ಇಲ್ಲಿ 8ನೇ ತರಗತಿ ಓದಿದವರು ಆಗಬಹುದು Doctor’s.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ಕಂದಾಯ ಇಲಾಖೆ ಸಹಯೋಗದೊಂದಿಗೆ (In collaboration with Revenue Department) ಸೂರತ್​ ಪೊಲೀಸರು, 8ನೇ ತರಗತಿ ಓದಿದವರಿಗೂ ವೈದ್ಯ ಪದವಿ ಪ್ರಮಾಣ ಪತ್ರಗಳನ್ನು ನೀಡುತ್ತಿದ್ದ ಜಾಲವೊಂದನ್ನು ಭೇದಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್​ ಮೈಂಡ್​ ಡಾ. ರಮೇಶ್ ಗುಜರಾತಿ ಎಂಬುವವರು ​ಸೇರಿದಂತೆ 14 ಜನರ ಗ್ಯಾಂಗ್​ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಇದನ್ನು ಓದಿ : ಇವರೇ ನೋಡಿ 33 ವರ್ಷಗಳ ಸೇವಾವಧಿಯಲ್ಲಿ 57 ಬಾರಿ ವರ್ಗಾವಣೆಯಾದ IAS ಅಧಿಕಾರಿ.!

ಈ ಗ್ಯಾಂಗ್​ ನಕಲಿ ‘ಬೋರ್ಡ್​ ಆಫ್​ ಎಲೆಕ್ಟ್ರೋ ಹೋಮಿಯೋಪತಿಕ್​ ಮೆಡಿಸಿನ್​(BEHM) ಗುಜರಾತ್​’ (Board of Electro Homeopathic Medicine Gujarat) ಅನ್ನು ಸ್ಥಾಪಿಸಿದ್ದಾರೆ. ಅಲ್ಲದೇ 1200 ಕ್ಕೂ ಅಧಿಕ ನಕಲಿ ಪ್ರಮಾಣ ಪತ್ರಗಳನ್ನು (Fake certificates) ನೀಡಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ಸರ್ಕಾರಿ ಅಧೀನದಲ್ಲಿರುವ (Under Govt) ಕಾಲೇಜುಗಳಿಗೆ ಈ ಪ್ರಮಾಣ ಪತ್ರಗಳು ಸಂಬಂಧಿಸಿದೆ ಎಂದು ನಂಬಿಸಲಾಗಿದೆ. ಇದರ ಮೂಲಕ ಪ್ರತಿ ನಕಲಿ ವೈದ್ಯ ಪದವಿ ಪ್ರಮಾಣಪತ್ರಕ್ಕೆ ಬರೋಬ್ಬರಿ 70 ಸಾವಿರ ರೂ. ನಿಗದಿ ಮಾಡಿದ್ದರು ಎಂದು ವರದಿ ತಿಳಿಸಿದೆ.

ಇದನ್ನು ಓದಿ : Belagavi : ನಾಪತ್ತೆಯಾಗಿದ್ದ ಅಥಣಿ ವಕೀಲನ ಶವ ಕೃಷ್ಣಾ ನದಿಯಲ್ಲಿ ಪತ್ತೆ.!

ಇವು ಹೋಮಿಯೋಪತಿ, ಅಲೋಪತಿ ಮತ್ತು ವೈದ್ಯಕೀಯ ಅಭ್ಯಾಸದ (Homeopathy, Allopathy and Medical Practice) ಪದವಿ ಪ್ರಮಾಣ ಪತ್ರಗಳು ಎಂದು ಹೇಳಿ ವಂಚಿಸಿದ್ದಾರೆ. ಹಣ ಕೊಟ್ಟ 15 ದಿನಗಳಲ್ಲೆ ಪದವಿ ಕಾರ್ಡ್​ ಕೈ ಸೇರುತ್ತದೆ. ಪ್ರತಿ ವರ್ಷಕ್ಕೊಮ್ಮೆ ಈ ಪ್ರಮಾಣ ಪತ್ರಗಳನ್ನು ಅಪ್ಡೇಟ್ ಮಾಡಬೇಕು. ಇದಕ್ಕೆ 5 ಸಾವಿರದಿಂದ 15 ಸಾವಿರ ಖರ್ಚು ತಗಲುತ್ತದೆ ಎಂಬ ನಿಯಮಗಳನ್ನು ಮಾಡಿದ್ದರು. ಇನ್ನೂ ಪ್ರಕರಣದಲ್ಲಿ 8ನೇ ತರಗತಿ ಓದಿ ಶಾಲೆ ಬಿಟ್ಟವರಿಗೂ ಸಹ ಪ್ರಮಾಣ ಪತ್ರ ನೀಡಿದ್ದಾರೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.

 

ಹಿಂದಿನ ಸುದ್ದಿ : ಇವರೇ ನೋಡಿ 33 ವರ್ಷಗಳ ಸೇವಾವಧಿಯಲ್ಲಿ 57 ಬಾರಿ ವರ್ಗಾವಣೆಯಾದ IAS ಅಧಿಕಾರಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : IAS ಅಧಿಕಾರಿಯಾಗಿರುವ ಅಶೋಕ್ ಖೇಮ್ಕಾ (IAS officer Ashok Khemka) ಅವರು ಪ್ರಾಮಾಣಿಕತೆ ಹಾಗೂ ವೃತ್ತಿ ನಿಷ್ಠೆಯ (Honesty and professional loyalty) ಕಾರಣದಿಂದ ತಮ್ಮ 33 ವರ್ಷದ ಸೇವಾವಧಿಯಲ್ಲಿ ಬರೋಬ್ಬರಿ 57 ಬಾರಿ ವರ್ಗಾವಣೆಗೊಂಡಿದ್ದಾರೆ‌ (transfer) ಎಂದು ವರದಿಯಾಗಿದೆ.

ಇದನ್ನು ಓದಿ : ‘ಸಹಕರಿಸಿದರೆ ಪ್ರಕರಣದಲ್ಲಿ ಸಹಾಯ’ ಎಂದ ಪೊಲೀಸ್ ಇನ್ಸ್‌ಪೆಕ್ಟರ್ ; Video ವೈರಲ್.!

ಕೆಲವೇ ತಿಂಗಳ ಸೇವಾವಧಿ (Term of service) ಹೊಂದಿರುವ ಅಶೋಕ್ ಖೇಮ್ಕಾ, ತಮ್ಮ ವೃತ್ತಿ ಜೀವನದಲ್ಲಿ ಪದೇ ಪದೇ (repeatedly) ವರ್ಗಾವಣೆ ಶಿಕ್ಷೆಗೊಳಗಾಗಿದ್ದಾರೆ. 33 ವರ್ಷದ ಸೇವಾವಧಿಯಲ್ಲಿ ಒಟ್ಟು 57 ಬಾರಿ ವರ್ಗಾವಣೆಗೊಂಡಿದ್ದಾರೆ. ಈಗ ಮತ್ತೊಮ್ಮೆ ತಮ್ಮ ಹುದ್ದೆಯಿಂದ ವರ್ಗಾವಣೆಗೊಳ್ಳುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ಅಶೋಕ್ ಖೇಮ್ಕಾ ಅವರು ತಮ್ಮ ಸೇವಾವಧಿಯಲ್ಲಿ ಆರು ತಿಂಗಳಿಗೊಮ್ಮೆ ಟ್ರಾನ್ಸ್‌ಫರ್ ಆದ ಎರಡನೇ ಅಧಿಕಾರಿ (Second officer transferred in six months). ಮತ್ತೊಬ್ಬ ಐಎಎಸ್ ಅಧಿಕಾರಿಯಾದ ಪ್ರದೀಪ್ ಕಸ್ಮಿ, ತಮ್ಮ 35 ವರ್ಷಗಳ ಸೇವಾವಧಿಯಲ್ಲಿ ಒಟ್ಟು 71 ಸಲ ವರ್ಗಾವಣೆಯಾಗಿದ್ದರು. ತಮ್ಮ ವೈಯಕ್ತಿಕ ಕಾರಣಗಳಿಗಾಗಿ (personal reason) ಪ್ರದೀಪ್ ಕಸ್ಮಿ ಟ್ರಾನ್ಸ್‌ಫರ್ ಆಗುತ್ತಿದ್ದರು.

ಇದನ್ನು ಓದಿ : ಪ್ರಿಯಕರನ ಜೊತೆ ಸೇರಿ ನದಿಯಲ್ಲಿ ಮುಳುಗಿಸಿ ಪತಿಯ ಕೊಲೆ ; ವರ್ಷದ ಬಳಿಕ ಮೂವರ ಬಂಧನ.!

ಮೂಲತಃ ಪಶ್ಚಿಮ ಬಂಗಾಳ (West Bengal) ರಾಜ್ಯದವರಾದ‌ ಅಶೋಕ್ ಖೇಮ್ಕಾ, ಐಎಎಸ್ ಅಧಿಕಾರಿಯಾಗಿ ಹರ್ಯಾಣದಲ್ಲಿ (Haryana) 33 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಎಪ್ರಿಲ್ 30, 2025ರಲ್ಲಿ ಅವರು ತಮ್ಮ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ (retired) ತಸವು ನಿವೃತ್ತಿಯಾಗಲೂ ಕೇವಲ 5 ತಿಂಗಳಿದ್ದರೂ ಸಹ, ಮತ್ತೆ ಸಾರಿಗೆ ಇಲಾಖೆಗೆ ವರ್ಗಾವಣೆಗೊಂಡಿದ್ದಾರೆ (Transfer to Transport Department).

ಇದಕ್ಕೂ ಮುನ್ನ ಅಶೋಕ್ ಖೇಮ್ಕಾ, ಮುದ್ರಣ ಮತ್ತು ಲೇಖನ ಸಾಮಗ್ರಿಗಳ ಇಲಾಖೆಯಲ್ಲಿ (Department of Printing and Stationery) ಕಾರ್ಯನಿರ್ವಹಿಸುತ್ತಿದ್ದರು. ಈಗ ಮತ್ತೆ ಒಂದು ದಶಕದ ಹಿಂದೆ ಸಾರಿಗೆ ಇಲಾಖೆಯಲ್ಲಿ ಹೊಂದಿದ್ದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (Additional Chief Secretary) ಹುದ್ದೆಗೆ ವಾಪಸ್ಸಾಗಿದ್ದಾರೆ.

ಇದನ್ನು ಓದಿ : Health : ಬೆಳಿಗ್ಗೆ ಕರಿಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ?

ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರು, ಭ್ರಷ್ಟಾಚಾರದ ವಿರುದ್ಧ ದೃಢ ನಿಲುವು (firm stand against corruption) ಹೊಂದಿದ್ದಾರೆ. ಕಳೆದ ವರ್ಷ ಹರ್ಯಾಣ ಮುಖ್ಯಮಂತ್ರಿಗೆ ತಮ್ಮನ್ನು ವಿಚಕ್ಷಣಾ ಇಲಾಖೆಗೆ (Intelligence Department) ನೇಮಿಸುವಂತೆ ಪತ್ರ ಬರೆಯುವ ಮೂಲಕ, ಅಶೋಕ್ ಖೇಮ್ಕಾ ಮತ್ತೆ ಸುದ್ದಿಯಾಗಿದ್ದರು. ನಾನು ನನ್ನ ಉಳಿದ ಸೇವಾವಧಿಯನ್ನು ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಮುಡುಪಿಡಲು ಬಯಸುತ್ತೇನೆ ಎಂದು ಅವರು ಪತ್ರದಲ್ಲಿ ತಮ್ಮ ಬಯಕೆ ತಿಳಿಸಿದ್ದರು.

ಅಶೋಕ್ ಖೇಮ್ಕಾ ಅವರು ಖರಗ್ ಪುರ್ ಭಾರತೀಯ ತಂತ್ರಜ್ಞಾನ ಸಂಸ್ಥೆಯಿಂದ ಕಂಪ್ಯೂಟರ್ ಸೈನ್ಸ್ (Computer Science from Indian Institute of Technology) ನಲ್ಲಿ ಬಿಟೆಕ್ ಪದವಿ ಪಡೆದಿದ್ದಾರೆ. ಮುಂಬೈನ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯಿಂದ (Tata Institute of Fundamental Research) ಕಂಪ್ಯೂಟರ್ ಸೈನ್ಸ್ ನಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ.

ವ್ಯಾಪಾರ ಆಡಳಿತ ಮತ್ತು ಹಣಕಾಸು ವಿಷಯದಲ್ಲಿ ಎಂಬಿಎ ಪದವಿ ಹಾಗೂ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದಿಂದ (Indira Gandhi Open University) ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನೂ (Master’s Degree in Economics) ಪಡೆದಿದ್ದಾರೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments