Tuesday, October 22, 2024
spot_img
spot_img
spot_img
spot_img
spot_img
spot_img
spot_img

Health : ಈ ರೋಗಗಳಿಗೆ ಅತ್ಯುತ್ತಮ ಈ ನಿತ್ಯ ಪುಷ್ಪ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಪರಿಸರದಲ್ಲಿ ಸಿಗುವ ಸಸ್ಯ, ಹೂವು, ಬೀಜಗಳು ನಾನಾ ರೀತಿಯಲ್ಲಿ ಆರೋಗ್ಯಕ್ಕೆ ಉಪಯುಕ್ತವಾಗಿದೆ. ಪ್ರತಿನಿತ್ಯ ಕಣ್ಣಿಗೆ ಕಾಣ ಸಿಗುವ ಹೂವುಗಳು ಕೂಡ ಒಂದೊಂದು ರೀತಿಯ ಔಷಧೀಯ ಗುಣಗಳನ್ನು ಹೊಂದಿವೆ.

ಅತ್ಯಂತ ಸುಂದರವಾದ ಸಸ್ಯವೆಂದು ಕರೆಯಲ್ಪಡುವ ನಿತ್ಯ ಪುಷ್ಪ ಅಥವಾ ನಿತ್ಯ ಕಣಗಿಲೆ ಅನೇಕ ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿದೆ. ಬೇಲಿ ಬದಿಯಲ್ಲಿ ಕಾಣುವು ಈ ಗಿಡದ ಎಲೆಗಳು, ಹೂವು ಮತ್ತು ಬೇರು ಅನೇಕ ರೋಗಗಳನ್ನು ಗುಣಪಡಿಸುತ್ತವೆ.

ಇದನ್ನು ಓದಿ : ವಿಚ್ಛೇದನದ ಬಳಿಕ ಸೊಸೆ, ಅತ್ತೆ-ಮಾವನ ಮನೆಯಲ್ಲಿ ಇರುವಂತಿಲ್ಲ; High court ಮಹತ್ವದ ತೀರ್ಪು.!

* ಮಾನಸಿಕವಾಗಿ ದಣಿದಿದ್ದರೆ ಅಥವಾ ಮನಸ್ಸು ಕೆಟ್ಟಂತೆ ಭಾಸವಾಗುತ್ತಿದ್ದರೆ ನಿತ್ಯ ಪುಷ್ಪ ಹೂವಿನ ಚಹಾ ಮಾಡಿ ಸೇವಿಸಿ.

* ನಿತ್ಯ ಪುಷ್ಪದ ಬಳಕೆಯಿಂದ ಖಿನ್ನತೆ, ಆತಂಕದಂತಹ ಮಾನಸಿಕ ಅನಾರೋಗ್ಯದ ಸಮಸ್ಯೆಗಳು ನಿವಾರಣೆಯಾಗುತ್ತದೆ.

* ನಿತ್ಯ ಪುಷ್ಪದ ಗಿಡದ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಂಡರೆ ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ ಮುಖಕ್ಕೆ ಹಚ್ಚುತ್ತಾ ಬಂದರೆ ಚರ್ಮದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಅಲ್ಲದೆ ಮುಖದ ಕಾಂತಿ ಕೂಡ ಹೆಚ್ಚಾಗುತ್ತದೆ.

* ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನಿತ್ಯ ಪುಷ್ಪ ಹೂವಿನ ಎಸಳಿನ ಟೀಯನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬಂದು ಮಧುಮೇಹ ನಿಯಂತ್ರಣದಲ್ಲಿರುತ್ತದೆ.

ಇದನ್ನು ಓದಿ : ಮಸೀದಿಯೊಳಗೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಲ್ಲ : High court

* ಪ್ರತಿದಿನ ನಿತ್ಯ ಪುಷ್ಪ ಗಿಡದ ಎಲೆಗಳ ಪುಡಿಯನ್ನು ಚಿಟಿಕೆಯಷ್ಟು ಸೇವನೆ ಮಾಡುವುದರಿಂದ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ

* ನಿತ್ಯ ಪುಷ್ಪದಲ್ಲಿನ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕ್ಯಾನ್ಸರ್‌ ಜೀವಕೋಶಗಳ ಬೆಳವಣಿಗೆಯನ್ನು ತಡೆಯುತ್ತವೆ. ಹೀಗಾಗಿ ಕ್ಯಾನ್ಸರ್‌ ಜೀವಕೋಶಗಳ ವಿರುದ್ಧ ಹೋರಾಡಲು ನಿತ್ಯ ಪುಷ್ಪದ ಬೇರನ್ನು ಬಳಕೆ ಮಾಡಲಾಗುತ್ತದೆ.

* ನಿತ್ಯ ಪುಷ್ಪ ಗಿಡದ ಎಲೆಗಳನ್ನು ನೀರಿನಲ್ಲಿ ಕುದಿಸಿ ಸೇವಿಸಿದರೆ ಋತು ಚಕ್ರದ ಸಮಸ್ಯೆಗಳೂ ಕೂಡ ನಿವಾರಣೆಯಾಗುತ್ತದೆ.

ಇದನ್ನು ಓದಿ : Job : ಲಿಖಿತ ಪರೀಕ್ಷೆಯಿಲ್ಲದೇ ರೈಲ್ವೆ ಇಲಾಖೆಯಲ್ಲಿದೆ ಭರ್ಜರಿ ಉದ್ಯೋಗವಕಾಶ; 2 ಲಕ್ಷದವರೆಗೆ ಸಂಬಳ.!

* ಗಾಯ, ಹುಣ್ಣುಗಳು ಇರುವ ಸ್ಥಳದಲ್ಲಿ ಈ ಎಲೆಗಳನ್ನು ಪುಡಿಮಾಡಿ ಪೇಸ್ಟ್ ರೂಪದಲ್ಲಿ ಹಚ್ಚಿದರೆ ಬೇಗ ಗುಣವಾಗುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img