ಜನಸ್ಪಂದನ ನ್ಯೂಸ್, ಬೆಳಗಾವಿ : ಸಭಾಪತಿ ಬಸವರಾಜ ಹೊರಟ್ಟಿಯವರು MLC ಸಿಟಿ ರವಿ ಬಳಸಿದ ಪದ ರೆಕಾರ್ಡ್ ಆಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಸಿ.ಟಿ.ರವಿ ಬಳಸಿದ ಪದ ರೆಕಾರ್ಡ್ ಆಗಿಲ್ಲ. ಆದರೆ ಸಿಟಿ ರವಿ ಅಶ್ಲೀಲ ಪದ ಬಳಸಿದ್ದಾರೆ ಎಂದು 4 ಕಾಂಗ್ರೆಸ್ ಎಂಎಲ್ ಸಿಗಳು ಸಾಕ್ಷಿ ಹೇಳಿದ್ದಾರೆ.
ಇದನ್ನು ಓದಿ : MLC ಸಿ.ಟಿ.ರವಿಗೆ ಗಾಯ : ಬೆಂಗಳೂರಿಗೆ ಸ್ಥಳಾಂತರ ; ಬಿಜೆಪಿಯಿಂದ ಬಂದ್‌ಗೆ ಕರೆ.!
ಈ ಬಗ್ಗೆ ಯತೀಂದ್ರ, ಉಮಾಶ್ರೀ ಸೇರಿ ನಾಲ್ವರು ಸಾಕ್ಷಿ ಹೇಳಿದ್ದಾರೆ. ಆದರೆ ಸಿಟಿ ರವಿ ಅವರು ಬಳಸಿದ ಪದ ರೆಕಾರ್ಡ್ ಆಗಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ನಿನ್ನೆ ಸಂಜೆ 6:30 ಗಂಟೆ ಸುಮಾರಿಗೆ ಸುವರ್ಣ ಸೌಧದಲ್ಲಿ ಸಿಟಿ ರವಿಯನ್ನು ಅರೆಸ್ಟ್ ಮಾಡಲಾಗಿದ್ದು, ಶುಕ್ರವಾರ ಬೆಳಗ್ಗೆ ಪೊಲೀಸರು ಸಿ.ಟಿ. ರವಿ ಅವರನ್ನು ಬೆಳಗಾವಿ ಜೆಎಂಎಫ್ಸಿ ಕೋರ್ಟ್ ಗೆ ಹಾಜರುಪಡಿಸಿದರು.