Sunday, December 22, 2024
HomeNewsಭೀಕರ ರಸ್ತೆ ಅಪಘಾತ : 7 ಜನರ ಸಾವು, ಎದೆ ಝಲ್ಲೆನ್ನಿಸುವ ವಿಡಿಯೋ Viral.!
spot_img

ಭೀಕರ ರಸ್ತೆ ಅಪಘಾತ : 7 ಜನರ ಸಾವು, ಎದೆ ಝಲ್ಲೆನ್ನಿಸುವ ವಿಡಿಯೋ Viral.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ (car lost control and hit the divider) ಕಾರೊಂದು, ಇನ್ನೊಂದು ಬದಿಗೆ (other side) ಉರುಳಿ ಬಿದ್ದ ಪರಿಣಾಮ ಐವರು ವಿದ್ಯಾರ್ಥಿಗಳ ಸಹಿತ ಏಳು ಮಂದಿ ಮೃತಪಟ್ಟ ಘಟನೆ ಗುಜರಾತ್‌ನ ಜುನಾಗಢದಲ್ಲಿ (Junagadh in Gujarat) ಸೋಮವಾರ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಸಾವಿಗೀಡಾದವರು ವೀಣು ದೇವಶಿ ವಾಲಾ, ನಿಕುಲ್ ವಿಕ್ರಮ್ ಕುವಾಡಿಯಾ, ಓಂ ರಜನಿಕಾಂತ್ ಮುಗ್ರಾ, ರಾಜು ಕಾಂಜಿ ಗೋನೆ, ಧರಮ್ ವಿಜಯ್ ಗೋರ್, ಅಕ್ಸರ್ ದವೆ ಮತ್ತು ರಾಜು ಕಾಂಜಿ ಭೂತಾನ್ ಎಂದು ವರದಿಯಾಗಿದ್ದು, ಘಟನೆಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

ಇದನ್ನು ಓದಿ : News : ಯುವತಿಯರಿಗೆ ಮರ್ಮಾಂಗ ತೋರಿಸಿ ವಿಕೃತಿ ಮೆರೆದ ಯುವಕ.!

ವಿದ್ಯಾರ್ಥಿಗಳಿದ್ದ ಕಾರು ವೇಗವಾಗಿ ಬಂದು ಡಿವೈಡರ್‌ಗೆ ಡಿಕ್ಕಿ ಹೊಡೆದು ರಸ್ತೆಯ ಇನ್ನೊಂದು ಬದಿಗೆ ಪಲ್ಟಿಯಾಗಿದೆ ಎನ್ನಲಾಗಿದೆ. ಅಲ್ಲದೇ ವಿರುದ್ಧ ದಿಕ್ಕಿನಲ್ಲಿ (opposite direction) ವೇಗವಾಗಿ ಬಂದ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಐವರು ಕಾಲೇಜು ವಿದ್ಯಾರ್ಥಿಗಳಾಗಿದ್ದು (Five are college students), ಪರೀಕ್ಷೆ ಬರೆಯಲು ಕಾಲೇಜಿಗೆ ತೆರಳುತ್ತಿದ್ದರು. ಇನ್ನಿಬ್ಬರು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಕಾರಿನಲ್ಲಿದ್ದರು ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : ಕೋಚಿಂಗ್ ಇಲ್ಲದೇ UPSC ಪರೀಕ್ಷೆ ಬರೆದು ಉತ್ತೀರ್ಣರಾದ IAS ಅಧಿಕಾರಿ ಇವರು.!

2 ಕಾರುಗಳ ಮಧ್ಯೆ ಭಾರೀ ಡಿಕ್ಕಿ ಸಂಭವಿಸಿದ ಪರಿಣಾಮ ವಾಹನದ ಸಿಎನ್‌ಜಿ ಸಿಲಿಂಡರ್‌ (CNG Cylinder) ಒಂದೊಂದಾಗಿ ಸ್ಫೋಟಗೊಂಡಿದೆ (One by one exploded) ಎನ್ನಲಾಗಿದೆ. ಪರಿಣಾಮ ಕಾರಿಗೆ ಬೆಂಕಿ ಹೊತ್ತಿಕೊಂಡು ರಸ್ತೆಯ ಸಮೀಪವಿದ್ದ ಅಂಗಡಿಗಳಿಗೂ ಬೆಂಕಿ ವ್ಯಾಪಿಸಿದೆ (fire also spread to shops) ಎಂದು ವರದಿ ತಿಳಿಸಿದೆ.

ವೈರಲ್ ಆಗಿರುವ ಅಪಘಾತದ ವಿಡಿಯೋ : 

ಹಿಂದಿನ ಸುದ್ದಿ : ನಿಮ್ಮ ಪ್ರದೇಶದಲ್ಲಿ ಯಾವ ನೆಟ್‌ವರ್ಕ್ ಉತ್ತಮವಾಗಿದೆ? ಈ ರೀತಿ ಕಂಡು ಹಿಡಿಯಿರಿ.!

ಜನಸ್ಪಂದನ ನ್ಯೂಸ್, ಬೆಂಗಳೂರು : ನೀವು ಸಿಮ್ ಕಾರ್ಡ್ (SIM card) ಖರೀದಿ ಮಾಡುವಾಗ ಯಾವ ನೆಟ್‌ವರ್ಕ್ ಸರಿಯಾಗಿದೆ ಎಂದು ಗೊತ್ತಿಲ್ಲದೇ ಖರೀದಿಸುತ್ತೇವೆ. ಬಳಿಕ ನೆಟ್‌ವರ್ಕ್ ಸಮಸ್ಯೆಯಾದರೆ (network problem) ಮತ್ತೊಂದು ಸಿಮ್ ಕಾರ್ಡ್ ಕೊಂಡುಕೊಳ್ಳುತ್ತೇವೆ ಅಥವಾ ಪೋರ್ಟ್ ಆಗುತ್ತೇವೆ.

ಹೀಗಾಗಿ ನಿಮ್ಮ ಪ್ರದೇಶದಲ್ಲಿ ಯಾವ ಮೊಬೈಲ್ ನೆಟ್‌ವರ್ಕ್ ಉತ್ತಮವಾಗಿದೆ (Mobile network is good) ಎಂದು ನೀವು ಆನ್‌ಲೈನ್‌ನಲ್ಲಿ ಪರಿಶೀಲಿಸಿದರೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ನೀವು ಆನ್‌ಲೈನ್‌ನಲ್ಲಿ ಮೊಬೈಲ್ ನೆಟ್‌ವರ್ಕ್ ಅನ್ನು ವೊಡಾಫೋನ್, ಐಡಿಯಾ ಜಿಯೋ ಮತ್ತು ಏರ್​ಟೆಲ್ ಸಿಮ್ (Vodafone, Idea Jio and Airtel) ಕಾರ್ಡ್ ಬಳಕೆದಾರರು nperf ಮತ್ತು ಓಪನ್ ಸಿಗ್ನಲ್ ಸಹಾಯದಿಂದ (With the help of signal) ಪತ್ತೆ ಮಾಡಬಹುದು.

ಇದನ್ನು ಓದಿ : Health : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವವರೇ ಈ ಸುದ್ದಿಯನ್ನೊಮ್ಮೆ ಓದಿ.

ಈ ಮೂಲಕ ನೀವು ನಿಮ್ಮ ಪ್ರದೇಶದಲ್ಲಿ ಉತ್ತಮ ನೆಟ್‌ವರ್ಕ್ ಇರುವ ಕಂಪನಿಯ ಸಿಮ್ ಕಾರ್ಡ್ ಅನ್ನು ಖರೀದಿ ಮಾಡಬಹುದು.

nperf ಜಾಗತಿಕ ವೆಬ್‌ಸೈಟ್ (Global website) ಆಗಿದೆ. ಆನ್‌ಲೈನ್‌ನಲ್ಲಿ ಈ ವೆಬ್‌ಸೈಟ್ ದೇಶದ ಎಲ್ಲಾ ಮೊಬೈಲ್ ನೆಟ್‌ವರ್ಕ್ ವ್ಯಾಪ್ತಿಯ ಲಭ್ಯತೆಯನ್ನು ತೋರಿಸುತ್ತದೆ. ಇನ್ನೂ ಈ ವೆಬ್‌ಸೈಟ್ ಸಂಪೂರ್ಣವಾಗಿ ಉಚಿತವಾಗಿದೆ (free).

ಈ ವೆಬ್‌ಸೈಟ್‌ನಿಂದ ನೆಟ್‌ವರ್ಕ್ ವ್ಯಾಪ್ತಿಯನ್ನು ಈ ರೀತಿ ಹುಡುಕಬಹುದು :

nperf ವೆಬ್‌ಸೈಟ್ nperf.com ಗೆ ತೆರಳಿ.

ಮೇಲ್ಭಾಗದಲ್ಲಿರುವ ಮೈ ಅಕೌಂಟ್ ಆಯ್ಕೆಯಲ್ಲಿ ವಿವರಗಳನ್ನು ನಮೂದಿಸುವ ಮೂಲಕ (By entering the details) ಪ್ರೊಫೈಲ್ ಅನ್ನು ರಚಿಸಿ.

nperf ವೆಬ್‌ಸೈಟ್‌ನಲ್ಲಿ ಡ್ಯಾಶ್‌ಬೋರ್ಡ್ ನೀವು ಅನ್ನು ನೋಡುತ್ತೀರಿ. ಅಲ್ಲಿ ಮ್ಯಾಪ್ ಆಯ್ಕೆಯನ್ನು ಒತ್ತಿ. ನಂತರ ದೇಶ ಮತ್ತು ಮೊಬೈಲ್ network ಆಯ್ಕೆ ಮಾಡಬೇಕು.

ಇದನ್ನು ಓದಿ : ಜೈಲಿನಲ್ಲಿ ಗಾಂಜಾ, ಸಿಗರೇಟು ಸೇದುತ್ತ ಇಸ್ಪೀಟ್ ಆಡುತ್ತಿರುವ ಕೈದಿಗಳ ವಿಡಿಯೋ Viral.!

ಬಳಿಕ ಸ್ಥಳ ಅಥವಾ ನಗರವನ್ನು (place or city) ಸರ್ಚ್ ಮಾಡಬೇಕು.

ಈಗ ನೀವು ನಿಮ್ಮ ಪ್ರದೇಶದ ಜಿಯೋ, ಏರ್​ಟೆಲ್, ವೊಡಾಫೋನ್ ಐಡಿಯಾ, ಬಿಎಸ್​ಎನ್​ಎಲ್ ಸಿಗ್ನಲ್ ಅನ್ನು ಹುಡುಕಲು (search) ಸುಲಭವಾಗುತ್ತದೆ.

ಆಂಡ್ರಾಯ್ಡ್ ಅಥವಾ ಐಒಎಸ್ ಬಳಕೆದಾರರು ಓಪನ್ ಸಿಗ್ನಲ್ ಅಪ್ಲಿಕೇಶನ್ (open signal application) ಅನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಆಯಪಲ್ ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬೇಕು.

ನೀವು ಮೂರನೇ ಆಯ್ಕೆಯ ಮ್ಯಾಪ್ ಮೇಲೆ ಕ್ಲಿಕ್ ಮಾಡಿ (Click on the third option map).

ಸ್ಥಳ, ಆಪರೇಟರ್ ಮತ್ತು ನೆಟ್‌ವರ್ಕ್ ಪ್ರಕಾರವನ್ನು ಆಯ್ಕೆ ಮಾಡಿ.

ನಿಮ್ಮ ಪ್ರದೇಶದಲ್ಲಿ ಪ್ರಸ್ತುತ ಮೊಬೈಲ್ ನೆಟ್‌ವರ್ಕ್ ಅನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ.

ಈ ಅಪ್ಲಿಕೇಶನ್‌ನಲ್ಲಿ ವೊಡಾಫೋನ್- ಐಡಿಯಾ, ಜಿಯೋ, ಏರ್‌ಟೆಲ್ ಮತ್ತು ಬಿಎಸ್‌ಎನ್‌ಎಲ್‌ನ ನೆಟ್‌ವರ್ಕ್ ಕವರೇಜ್ ಅನ್ನು ನೀವು ಪಡೆಯಬಹುದಾಗಿದೆ.

ಮ್ಯಾಪ್​ನಲ್ಲಿ ಗೋಚರಿಸುವ ಹಸಿರು ಲೈನ್​ಗಳು ಉತ್ತಮ ನೆಟ್‌ವರ್ಕ್ ವ್ಯಾಪ್ತಿಯನ್ನು ಸೂಚಿಸುತ್ತವೆ. ಹಾಗೆಯೇ ಕೆಂಪು ಎಂದರೆ ನೆಟ್ ವರ್ಕ್ ಚೆನ್ನಾಗಿಲ್ಲ. ಕಡಿಮೆ ನೆಟ್‌ವರ್ಕ್ ಕವರೇಜ್ ಇದೆ ಎಂದರೆ ಅದು ಹಳದಿ ಬಣ್ಣ ತೋರಿಸುತ್ತದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments