ಜನಸ್ಪಂದನ ನ್ಯೂಸ್, ಬೆಂಗಳೂರು : ಯೂಟ್ಯೂಬ್ ಚಾನೆಲ್ ಹೆಸರಿನಲ್ಲಿ ಸ್ಪಾ ಸೆಂಟರ್ ನಡೆಸುತ್ತಿದ್ದ ಕಟ್ಟಡದ ಮೇಲೆ ದಾಳಿ ನಡೆಸಿದ ಪೊಲೀಸರು ಹತ್ತು ಮಹಿಳೆಯರನ್ನು ಅರೆಸ್ಟ್ ಮಾಡಿದ ಘಟನೆ ಆಂಧ್ರ ಪ್ರದೇಶದ ವಿಜಯವಾಡದ (Vijayawada in Andhra Pradesh) ಮಾಚವರಂ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಯೂಟ್ಯೂಬ್ ಚಾನೆಲ್ ಹೆಸರಿನಲ್ಲಿ ಚಲಸಾನಿ ಪ್ರಸನ್ನ ಭಾರ್ಗವ್ ಎಂಬಾತ ಸ್ಪಾ ಸೆಂಟರ್ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ : ಸೆಲ್ಪಿ ನೆಪದಲ್ಲಿ ನಡುರಸ್ತೆಯಲ್ಲೇ ನಟಿಗೆ ಕಿಸ್ ಮಾಡಲು ಮುಂದಾದ ವ್ಯಕ್ತಿ ; ಶಾಕಿಂಗ್ ವಿಡಿಯೋ ವೈರಲ್.!
ಹೊರಗೆ ಯೂಟ್ಯೂಬ್ ಚಾನೆಲ್ ಸ್ಟುಡಿಯೋ, ಆದ್ರೆ ಒಳಗೆ ಸ್ಪಾ ಸೆಂಟರ್. ಇಲ್ಲಿ ಅನೈತಿಕ ಚಟುವಟಿಕೆಗಳು (Unethical activities) ನಡೆಯುತ್ತಿವೆ ಎಂಬ ದೂರುಗಳು ಬಂದಿದ್ದವು.
ಈ ಹಿನ್ನೆಲೆ ದಾಳಿ ನಡೆಸಿದ ಮಾಚವರಂ ಪೊಲೀಸರು ಹತ್ತು ಜನ ಮಹಿಳೆಯರನ್ನು ಬಂಧಿಸಿದ್ದಾರೆ. ಬಂಧಿತ ಎಲ್ಲಾ ಮಹಿಳೆಯರು ಬೇರೆ ರಾಜ್ಯಗಳಿಗೆ ಸೇರಿದವರು (All the arrested women belong to other states) ಎಂದು ವರದಿಯಾಗಿದೆ.
ಇದನ್ನು ಓದಿ : ಯುವತಿಯ ಬರ್ತ್ ಡೇ ಆಚರಣೆ ವೇಳೆ ಬಲೂನ್ ಸ್ಫೋಟ ; ಮುಂದೆನಾಯ್ತು? ಈ ವಿಡಿಯೋ ನೋಡಿ.!
ಮಾಚವರಂ ಸಿಐ ಪ್ರಕಾಶ್ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಈ ಕಾರ್ಯಾಚರಣೆ ನಡೆಸಿದ್ದು, ದಾಳಿ ವೇಳೆ 13 ಪುರುಷರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.
ವೈರಲ್ ವಿಡಿಯೋ ನೋಡಿ :
ಹಿಂದಿನ ಸುದ್ದಿ : ಕೋರ್ಟ್ ಆವರಣದಲ್ಲಿಯೇ ಅತ್ತೆ – ಸೊಸೆ ಜಗಳ ; Vedio ನೋಡಿ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಮನೆಗಳಲ್ಲಿ ಅತ್ತೆ (mother in law) ಸೊಸೆ ಮಧ್ಯೆ ಆಗಾಗ ಜಗಳ ನಡೆಯುತ್ತವೆ. ಇವರ ಗಲಾಟೆ ತಾರಕಕ್ಕೇರಿ ನ್ಯಾಯಾಲಯ, ಪೊಲೀಸ್ ಠಾಣೆಯ ಮೆಟ್ಟಿಲೇರಿದ ಉದಾಹರಣೆಗಳು ಸಾಕಷ್ಟಿವೆ.
ಇದೀಗ ಕೋರ್ಟ್ ಆವರಣದಲ್ಲಿಯೇ ಅತ್ತೆ ಸೊಸೆಯ (daughter in law) ಜಗಳವಾಡಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಇದನ್ನು ಓದಿ : ಬಿಗ್ ಟ್ವಿಸ್ಟ್ ; ಬೆಳಗಾವಿಯಲ್ಲಿ ಹಲ್ಲೆಗೊಳಗಾಗಿದ್ದ ಕಂಡಕ್ಟರ್ ಮೇಲೆ ಬಿತ್ತು ಪೋಕ್ಸೋ ಕೇಸ್.!
ವಿಚಾರಣೆಗಾಗಿ ಬಂದಿದ್ದ ಸಂದರ್ಭ ಅತ್ತೆ- ಸೊಸೆ ಕೋರ್ಟ್ ಆವರಣದಲ್ಲಿಯೇ ಪರಸ್ಪರ ಕೈ ಮಿಲಾಯಿಸಿ ಜಗಳವಾಡಿದ್ದಾರೆ. ಇವರ ಜಗಳವನ್ನು ಕಂಡು ಅಲ್ಲಿದ್ದ ಜನರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.
ಮಹಾರಾಷ್ಟ್ರದ ನಾಸಿಕ್‌ನಲ್ಲಿ (In Nashik, Maharashtra) ಈ ಘಟನೆ ನಡೆದಿದ್ದು, ಕೋರ್ಟ್ ವಿಚಾರಣೆಗೆ ಹಾಜರಾಗಿದ್ದ ಅತ್ತೆ ಸೊಸೆ ಕೋರ್ಟ್ ಆವರಣದಲ್ಲಿಯೇ ಗಲಾಟೆ ಶುರು ಮಾಡಿದ್ದಾರೆ.
ಇದನ್ನು ಓದಿ : ಪೋನ್ ಪೇ ಮೂಲಕ ಲಂಚ ಪಡೆದ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ.!
ಮೊದಲು ಇಬ್ಬರ ಮಧ್ಯೆ ವಾಗ್ವಾದ ನಡೆದಿದ್ದು, ನಂತರ ಮಾತುಕತೆ ತಾರಕಕ್ಕೇರಿ ದೊಡ್ಡ ಜಗಳವೇ ನಡೆದಿದೆ. ಅತ್ತೆ ಸೊಸೆ ಪರಸ್ಪರ ದೈಹಿಕ ಹಲ್ಲೆ ನಡೆಸಿದ್ದಾರೆ. ಅಲ್ಲಿದ್ದ ಸಾರ್ವಜನಿಕರು ಗಲಾಟೆ ನಿಲ್ಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ (The public tried to stop the commotion but could not). ಅಂತಿಮವಾಗಿ ಪೊಲೀಸರು ಮಧ್ಯ ಪ್ರವೇಶಿಸಿ ಜಗಳ ನಿಲ್ಲಿಸಿದರು ಎಂದು ವರದಿಯಿಂದ ತಿಳಿದು ಬಂದಿದೆ.
Ghar ke kalesh ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಫೆಬ್ರವರಿ 21 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4.3 ಲಕ್ಷ ವೀಕ್ಷಣೆ ಹಾಗೂ ಹಲವಾರು ಕಾಮೆಂಟ್ಸ್ (4.3 lakh views and many comments) ಪಡೆದುಕೊಂಡಿದೆ.
ಇದನ್ನು ಓದಿ : ಅರೆಸ್ಟ್ ಮಾಡಲು ಹೋದಾಗ ಹಲ್ಲೆ ಮಾಡಿದ ರೌಡಿಶೀಟರ್ ; ಗುಂಡು ಹಾರಿಸಿದ ಪೊಲೀಸ್.!
ಒಬ್ಬರು ನಿಜಕ್ಕೂ ಅತ್ತೆ ಸೊಸೆ ಜಗಳ ಭಯಾನಕ ಸಮಸ್ಯೆಯಾಗಿದೆ ಎಂದು ಕಮೆಂಟ್ ಮಾಡಿದರೆ, ಮಹಿಳಾ ಸಬಲೀಕರಣ (Women empowerment) ಎಂದು ಕಮೆಂಟ್ ಮಾಡಿದ್ದಾರೆ ಮತ್ತೊಬ್ಬರು.
ನೋಡಿ ವೈರಲ್ ವಿಡಿಯೋ :