ಜನಸ್ಪಂದನ ನ್ಯೂಸ್, ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಗರಣದ (Mysore Urban Development Authority plot scam) ದೂರು ದಾಖಲಿಸಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇದೀಗ ನಾಪತ್ತೆ ಆಗಿದ್ದಾರೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ, ಭಾವಮೈದ ಮಲ್ಲಿಕಾರ್ಜುನ ಸ್ವಾಮಿ (Mallikarhun swami) ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲಿಸಿದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ನಾಪತ್ತೆ (missing) ಆಗಿದ್ದಾರೆ.
ಇದನ್ನು ಓದಿ : ಶಬರಿಮಲೆ ದೇವಸ್ಥಾನದಲ್ಲಿಯೇ ಕರ್ನಾಟಕದ ಭಕ್ತ ಆತ್ಮಹತ್ಯೆ ; ಶಾಕಿಂಗ್ Video ವೈರಲ್.!
ಸ್ನೇಹಮಯಿ ಕೃಷ್ಣ ಅವರ ಮೊಬೈಲ್ ಕಳೆದ ಮೂರು ದಿನಗಳಿಂದ ಸ್ವಿಚ್‌ಆಫ್ (Switch off) ಆಗಿದೆ.
ಚಾಮುಂಡಿಬೆಟ್ಟ ಪ್ರಾಧಿಕಾರ ಕಾರ್ಯದರ್ಶಿ ರೂಪ ವಿರುದ್ಧ ಸೀರೆ ಕಳ್ಳತನ ಆರೋಪವನ್ನು (Alleged theft of sarees) ಮಾಡಿದ್ದರು. ಆದರೆ, ಈ ದೂರು ಸ್ನೇಹಮಯಿ ಕೃಷ್ಣ ಅವರ ವಿರುದ್ಧವೇ ತಿರುಗಿ ಬಿದ್ದಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ನಿರುಪಯುಕ್ತ ಕೊಳವೆಬಾವಿ ಮುಚ್ಚದಿದ್ದರೆ Jail; ಮಸೂದೆಗೆ ಅಂಗೀಕಾರ.!
ದೂರು ಕೊಟ್ಟ ಸ್ನೇಹಮಯಿ ಕೃಷ್ಣ ವಿರುದ್ಧವೇ ಚಾಮುಂಡಿಬೆಟ್ಟ (Chamundibetta) ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪಾ ಅವರು ಪ್ರತಿದೂರು ನೀಡಿದ್ದಾರೆ.
ಕೆ. ಆರ್. ಠಾಣೆಯಲ್ಲಿ ಎಫ್. ಐ. ಆರ್ ದಾಖಲಾಗುತ್ತಿದ್ದಂತೆ ಸ್ನೇಹಮಯಿ ಕೃಷ್ಣ ಕಾಣೆಯಾಗಿದ್ದಾರೆ. ಬಂಧನದ ಭೀತಿಯಲ್ಲಿ (under threat of arrest) ಕಾಣೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.