ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿಯ ಪೋಕ್ಸೋ ನ್ಯಾಯಾಲಯವು (POCSO Court, Belagavi), ಮದುವೆಯಾಗುವುದಾಗಿ ನಂಬಿಸಿ (Believe in getting married) ಬಾಲಕಿ ಮೇಲೆ ಅತ್ಯಾಚಾರ ಎಸಗಿದ 27 ವರ್ಷದ ಯುವಕನಿಗೆ 20 ವರ್ಷಗಳ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ (Severe punishment and 10 thousand rupees impose a penalty) ಗುರುವಾರ ತೀರ್ಪು ಹೊರಡಿಸಿದೆ.
ಶಿಕ್ಷೆಗೊಳಗಾದ ಯುವಕ ರಾಯಬಾಗ ತಾಲೂಕು ಮೊರಬ (Raibag Taluk Moraba) ಗ್ರಾಮದ ಅಜಿತ ಪಾಟೀಲ ಎಂದು ತಿಳಿದು ಬಂದಿದೆ.
ಇದನ್ನು ಓದಿ : KSP : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
2020 ರಲ್ಲಿ ಮದುವೆಯಾಗುವುದಾಗಿ ನಂಬಿಸಿದ್ದ ಈತ ಬಾಲಕಿ ಮೇಲೆ ಅತ್ಯಾಚಾರ (rape of girl) ಎಸಗಿದ್ದ.
ಯುವಕನ ನೀಚ ಕೃತ್ಯ ತಿಳಿದ ಬಾಲಕಿಯ ಪೋಷಕರು ಈ ಬಗ್ಗೆ ಕುಡಚಿ ಪೊಲೀಸ್ ಠಾಣೆಯಲ್ಲಿ (Kudachi Police Station) ದೂರು ದಾಖಲು ಮಾಡಿದ್ದರು.
ನ್ಯಾಯಾಲಯಕ್ಕೆ ತನಿಖಾಧಿಕಾರಿ ಕೆ. ಎಚ್. ಹಟ್ಟಿ ದೋಷಾರೋಪ ಪಟ್ಟಿ (charge sheet) ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ನಡೆಸಿರುವ ನ್ಯಾಯಾಧೀಶೆ ಸಿ. ಎಂ. ಪುಷ್ಪಲತಾ ಅವರು, ಆರೋಪ ಸಾಬೀತಾದ ಹಿನ್ನೆಲೆ ಈ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.
ಇದನ್ನು ಓದಿ : ಪ್ರಿಯಕರನ ಜೊತೆ ಸೇರಿ ನದಿಯಲ್ಲಿ ಮುಳುಗಿಸಿ ಪತಿಯ ಕೊಲೆ ; ವರ್ಷದ ಬಳಿಕ ಮೂವರ ಬಂಧನ.!
ಸಂತ್ರಸ್ತೆಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶ ಹೊರಡಿಸಲಾಗಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಎಲ್. ವಿ. ಪಾಟೀಲ ವಾದ ಮಂಡಿಸಿದ್ದರು ಎಂದು ತಿಳಿದು ಬಂದಿದೆ.