ಜನಸ್ಪಂದನ ನ್ಯೂಸ್, ಡೆಸ್ಕ್ : ಪಾಕಿಸ್ತಾನದಲ್ಲಿರುವ ಶ್ರೀರಾಮನ ಪುತ್ರ ಲವನ ಸಮಾಧಿಗೆ ಬಿಸಿಸಿಐ (BCCI) ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಭೇಟಿ ನೀಡಿದ್ದಾರೆ.
ಬಿಸಿಸಿಐ (BCCI) ಉಪಾಧ್ಯಕ್ಷ ರಾಜೀವ್ ಶುಕ್ಲಾ (Rajeev Shukla) ಅವರು ಮಾರ್ಚ್ 6, ಗುರುವಾರ ಲಾಹೋರ್‌ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ (ICC Champions Trophy) ದಕ್ಷಿಣ ಆಫ್ರಿಕಾ-ನ್ಯೂಜಿಲೆಂಡ್ 2ನೇ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಲು ಹೋಗಿದ್ದರು.
ಲಾಹೋರ್ ಭೇಟಿ ಸಂದರ್ಭದಲ್ಲಿ ರಾಜೀವ್ ಶುಕ್ಲಾ ಅವರು ಶ್ರೀರಾಮನ ಪುತ್ರ (Son of Lord Rama) ಲವ (LAVA) ಅವರ ಸಮಾಧಿಗೆ ಭೇಟಿ ನೀಡಿದ್ದಾರೆ. ರಾಜೀವ್ ಶುಕ್ಲಾ ಅವರೊಂದಿಗೆ ಪಾಕಿಸ್ತಾನದ ಗೃಹ ಸಚಿವ (Pakistan Home Minister) ಮೊಹ್ಸಿನ್ ನಖ್ವಿ ಕೂಡ ಇದ್ದರು.
ಇದನ್ನು ಓದಿ : ಸಿನಿಮಾ ಪ್ರಿಯರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ.!
ಬಿಸಿಸಿಐ (BCCI) ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ತಮ್ಮ ಎಕ್ಸ್ (formerly known as Twitter) ಖಾತೆಯಲ್ಲಿ ಭೇಟಿಯ ಬಗ್ಗೆ ಹಂಚಿಕೊಂಡಿದ್ದಾರೆ. “ಪುರಸಭೆಯ ದಾಖಲೆಗಳಲ್ಲಿ ಲಾಹೋರ್ (Lahore) ನಗರಕ್ಕೆ ಶ್ರೀರಾಮನ ಪುತ್ರ ಲವ ಅವರ ಹೆಸರಿಡಲಾಗಿದೆ ತಿಳಿದು ಬರುತ್ತದೆ.
ಹಾಗೆಯೇ ಕಸೂರ್ (Kasur) ನಗರಕ್ಕೆ ಅವರ ಮತ್ತೊಬ್ಬ ಪುತ್ರ ಕುಶ್ ಅವರ ಹೆಸರಿಡಲಾಗಿದೆ ಎಂದು ಪುರಸಭೆಯ ದಾಖಲೆಗಳಲ್ಲಿ ದಾಖಲಿಸಲಾಗಿದೆ. ಪಾಕಿಸ್ತಾನ ಸರ್ಕಾರವೂ (Pakistani government) ಈ ಸಂಗತಿಯನ್ನು ಒಪ್ಪಿಕೊಳ್ಳುತ್ತದೆ” ಎಂದು ರಾಜೀವ್ ಶುಕ್ಲಾ ಅವರು ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ : ಕಣ್ಣಿನ Shape ಹೇಳುತ್ತೆ ನಿಮ್ಮ ನಿಗೂಢ ಸ್ವಭಾವ.!
“ಲಾಹೋರ್‌ನ ಪ್ರಾಚೀನ ಕೋಟೆಯಲ್ಲಿ ಶ್ರೀರಾಮನ ಪುತ್ರ ಲವ ಅವರ ಪ್ರಾಚೀನ ಸಮಾಧಿ (ancient tomb) ಇದೆ. ಲಾಹೋರ್‌ಗೆ ಅವರ ಹೆಸರಿಡಲಾಗಿದೆ. ಅಲ್ಲಿ ಪ್ರಾರ್ಥನೆ ಸಲ್ಲಿಸಲು ನನಗೆ ಅವಕಾಶ ಸಿಕ್ಕಿತು. ನನ್ನೊಂದಿಗೆ ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ (Mohsin Naqvi) ಕೂಡ ಇದ್ದರು, ಅವರು ಈ ಸಮಾಧಿಯನ್ನು ನವೀಕರಿಸುತ್ತಿದ್ದಾರೆ. ಮೊಹ್ಸಿನ್ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಕೆಲಸವನ್ನು ಪ್ರಾರಂಭಿಸಿದ್ದರು” ಎಂದು ಟ್ವೀಟ್ ಹೇಳಿಕೊಂಡಿದ್ದಾರೆ.
ಹಿಂದಿನ ಸುದ್ದಿ : ಬಾಲಕನ ಮೇಲೆ ನಾಯಿ ದಾಳಿ : Hero ತರಹ ಎಂಟ್ರಿ ಕೊಟ್ಟ ಬೆಕ್ಕು ; ಮುಂದೆನಾಯ್ತು ವಿಡಿಯೋ ನೋಡಿ.
ಜನಸ್ಪಂದನ ನ್ಯೂಸ್, ಡೆಸ್ಕ್ : ಸೈಕಲ್ ಓಡಿಸುತ್ತ ಆಟವಾಡುತ್ತಿದ್ದ ಬಾಲಕನ ಮೇಲೆ ನಾಯಿಯೊಂದು ದಾಳಿ (dog attack) ಮಾಡಲು ಬಂದ ವೇಳೆ ಬೆಕ್ಕು ಆತನನ್ನು ರಕ್ಷಿಸಿದ ಘಟನೆ ನಡೆದಿದೆ.
ಇನ್ನೂ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಇದನ್ನು ಓದಿ : ರಾಜ್ಯದಾದ್ಯಂತ ಖಾಲಿ ಇರುವ Anganwadi ಕಾರ್ಯಕರ್ತೆ/ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಬಾಲಕರಿಬ್ಬರು ರಸ್ತೆಯಲ್ಲಿ ಸೈಕಲ್ ತುಳಿಯುತ್ತಾ ಆಟವಾಡುತ್ತಿರುತ್ತಾರೆ. ಈ ವೇಳೆ ಮಾಲೀಕನ ಕೈಯಿಂದ ತಪ್ಪಿಸಿಕೊಂಡು ಬಂದ ನಾಯಿಯೊಂದು ನೀಲಿ ಬಣ್ಣದ ಶರ್ಟ್ ತೊಟ್ಟು ಸೈಕಲ್ ಮೇಲಿದ್ದ ಬಾಲಕನ ಮೇಲೆ ದಾಳಿ (A boy on a bicycle was attacked by a dog) ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು.
ಈ ವೇಳೆ ಬಾಲಕ ಸೈಕಲ್ ಸಮೇತ ಕೆಳಗೆ ಬಿದ್ದಿದ್ದಾನೆ. ಆದರೂ ನಾಯಿ ಆತನನ್ನು ಬಿಡದೇ ದಾಳಿ ಮಾಡಿದೆ. ಕೂಡಲೇ ಓಡಿ ಬರುವ ನಾಯಿಯ ಮಾಲೀಕ ನಾಯಿಯನ್ನು ಎಷ್ಟೇ ಹಿಡಿದು ಎಳೆದರೂ ನಾಯಿ ಮಾತ್ರ ದಾಳಿ ಮುಂದುವರಿಸಿದೆ. ಈ ವೇಳೆ ಎಲ್ಲಿತ್ತೊ ಗೊತ್ತಿಲ್ಲ. ದೇವರಂತೆ ಪ್ರತ್ಯಕ್ಷವಾದ ಬೆಕ್ಕೊಂದು ನಾಯಿಯ ಮೇಲೆ ದಾಳಿಗೆ ಮುಂದಾಗಿದೆ.
ಇದನ್ನು ಓದಿ : ವಿದ್ಯಾರ್ಥಿಗಳನ್ನು ಕ್ರೂರವಾಗಿ ಥಳಿಸಿದ ಪೊಲೀಸ್ ಅಧಿಕಾರಿ ;ಆಘಾತಕಾರಿ Vedio ವೈರಲ್.!
ಎರಡೆರಡು ಬಾರಿ ನಾಯಿಯ ಮೇಲೆ ಹಾರಿದ ಬೆಕ್ಕು ಅದರ ಗಮನವನ್ನು ಬೇರೆಡೆ ಸೆಳೆಯಲು (Distraction) ನೋಡಿದೆ. ಬೆಕ್ಕನ್ನು ಕಂಡ ನಾಯಿ ಬಾಲಕನನ್ನು ಬಿಟ್ಟು ಸುಮ್ಮನಾಗಿದೆ.
ಇದೇ ವೇಳೆ ಹುಡುಗ ಬಚಾವಾಗಲು ಅಲ್ಲಿಂದ ಓಡಿ ಹೋದರೆ, ನಾಯಿಯ ಮಾಲೀಕನ ಅದನ್ನು ಗಟ್ಟಿಯಾಗಿ ಹಿಡಿದುಕೊಂಡು ಅಲ್ಲಿಂದ ಎಳೆದುಕೊಂಡು ಹೋಗಿದ್ದಾನೆ. ಈ ವೇಳೆ ಬೆಕ್ಕು ಅದರ ಹಿಂದೆಯೇ ಓಡಿಸುತ್ತಾ ಹೋಗಿದೆ.
ಇದನ್ನು ಓದಿ : ಮದುವೆಯ ಮೆರವಣಿಗೆಯಲ್ಲಿ ಬಲವಂತವಾಗಿ ಕುದುರೆಗೆ ಸಿಗರೇಟ್ ಸೇದಿಸಿದ ಯುವಕರು ; Vedio ವೈರಲ್.!
ಈ ವೀಡಿಯೋ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದ್ದು, ಬೆಕ್ಕಿನ ಚಾಣಾಕ್ಷತನಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೀರೋ ತರ ಎಂಟ್ರಿ ಕೊಟ್ಟ ಬೆಕ್ಕಿನ ವಿಡಿಯೋ :
View this post on Instagram