ಜನಸ್ಪಂದನ ನ್ಯೂಸ್, ಡೆಸ್ಕ್ : ಚಲಿಸುವ ರೈಲು (moving train) ಹತ್ತಲು ಹೋಗಿ 40 ವರ್ಷದ ಪ್ರಯಾಣಿಕರೊಬ್ಬರು ಜಾರಿ ಬಿದ್ದ ಅಘಾತಕಾರಿ (Shocking) ಘಟನೆಯೊಂದು ಮುಂಬೈನ ಅಂಧೇರಿಯಲ್ಲಿ ನಡೆದಿದೆ.
ಹೀಗೆ ರೈಲು ಹತ್ತಲು ಹೋಗಿ ಜಾರಿ ಬಿದ್ದ ಪ್ರಯಾಣಿಕನನ್ನು ಕೂಡಲೇ ರೈಲೆ ರಕ್ಷಣಾ ಪಡೆಯ ಸಿಬ್ಬಂದಿ ರಕ್ಷಣೆ ಮಾಡಿದ್ದು, ಸದ್ಯ ಈ ದೃಶ್ಯ CCTV ಯಲ್ಲಿ ರೆಕಾರ್ಡ್ ಆಗಿದ್ದು ಬಹಳಷ್ಟು ವೈರಲ್ (Viral Video) ಆಗಿದೆ.
ಇದನ್ನು ಓದಿ : NRDRM ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಮುಂಬೈನ ಅಂಧೇರಿ (Andheri, February 16, 2025) ರೈಲು ನಿಲ್ದಾಣದಲ್ಲಿ ಈ ದುರ್ಘಟನೆ ನಡೆದಿದ್ದು, ಜಾರಿ ಬಿದ್ದ ಪ್ರಯಾಣಿಕ (passenger) ನನ್ನು ಅಂಧೇರಿಯ ಸೆವೆನ್ ಬಂಗಲೆಯ ನಿವಾಸಿ ರಾಜೇಂದ್ರ ಮಂಗಿಲಾಲ್ (40) ಎಂದು ಗುರುತಿಸಲಾಗಿದೆ. ಇನ್ನು ಪ್ರಯಾಣಿಕನ ಪ್ರಾಣ ಉಳಿಸಿದ ರೈಲ್ವೇ ರಕ್ಷಣಾ ಪಡೆ (RPF) ಸಿಬ್ಬಂದಿಯ ಸಮಯಪ್ರಜ್ಞೆಗೆ ನೆಟ್ಟಿಗರು ಮೆಚ್ಚುಗೆ (appreciate) ವ್ಯಕ್ತಪಡಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ :
ಪ್ರಯಾಣಿಕನು ಮುಂಬೈನ ಅಂಧೇರಿ ರೈಲು ನಿಲ್ದಾಣ ( railway station) ದಲ್ಲಿ ಇನ್ನೇನು ರೈಲು ತಪ್ಪಿಬಿಡುತ್ತದೆ ಎಂದು ಗಡಿಬಿಡಿ (fuss) ಯಲ್ಲಿ ಚಲಿಸುತ್ತಿದ್ದ ರೈಲಿಗೆ ಹತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ. ಆತ ಚಲಿಸುತ್ತಿದ್ದ ರೈಲಿನ ಸ್ಟೆಪ್ (step) ಹತ್ತುತ್ತಿದ್ದಂತೆ ಕಾಲು ಜಾರಿ ರೈಲು ಮತ್ತು ಪ್ಲಾಟ್ಫಾರ್ಮ್ (Platform) ನ ನಡುವಿನ ಅಂತರಕ್ಕೆ ಬಿದ್ದಿದ್ದಾನೆ.
ಇದನ್ನು ಓದಿ : ಮಗುವನ್ನು ಎದೆಗೆ ಕಟ್ಟಿಕೊಂಡು ಮಹಿಳಾ RPF ಸಿಬ್ಬಂದಿ ಸೇವೆ : ವಿಡಿಯೋ ವೈರಲ್.!
ಪ್ರಯಾಣಿಕ ರೈಲು ಮತ್ತು ಪ್ಲಾಟ್ಫಾರ್ಮ್ನ ನಡುವಿನ ಗ್ಯಾಪ್ (Gaps) ನಲ್ಲಿ ಬಿಳುತ್ತಿದಂತೆಯೇ ಸ್ಥಳದಲ್ಲಿದ್ದ ASI ಪಹೂಪ್ ಸಿಂಗ್ ಕಾರ್ಯಪ್ರವೃತ್ತರಾಗಿ ರಕ್ಷಿಸಲು (save) ಮುಂದಾಗುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಘಟನೆಯ ದೃಶ್ಯಾವಳಿಗಳು ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಪ್ರಯಾಣಿಕನು ಎರಡು ಲಗೇಜ್ ಬ್ಯಾಗ್ (Luggage bag) ಹಿಡಿದುಕೊಂಡು ರೈಲು ಹತ್ತಲು ಪ್ಲಾಟ್ಫಾರ್ಮ್ನಲ್ಲಿ ನಿಂತುಕೊಂಡಿರುವ ದೃಶ್ಯವನ್ನು ನೀವೂ ವಿಡಿಯೋ (Vedio) ದಲ್ಲಿ ನೋಡಬಹುದು.
ಇದನ್ನು ಓದಿ : ವಕ್ಪ್ ಬೋರ್ಡ್ ಲೆಕ್ಕಾಧಿಕಾರಿ ಸೇರಿ ಇಬ್ಬರು Lokayukta ಬಲೆಗೆ.!
ರೈಲು ಚಲಿಸುತ್ತಿದ್ದಂತೆ ಪ್ರಯಾಣಿಕ (Passenger) ಹತ್ತಲು ಪ್ರಯತ್ನಿಸುತ್ತಾನೆ. ಆದರೆ ರೈಲು ಮತ್ತು ಪ್ಲಾಟ್ಫಾರ್ಮ್ ನಡುವಿನ ಅಂತರದಲ್ಲಿ ಜಾರಿ ಬೀಳುತ್ತಾನೆ. ಪ್ರಯಾಣಿಕನು ಬಿದ್ದ ತಕ್ಷಣ, ಅವನ ಹಿಂದೆಯೇ ನಿಂತಿದ್ದ ಸಹಾಯಕ ಸಬ್-ಇನ್ಸ್ಪೆಕ್ಟರ್ ಪಹೂಪ್ ಸಿಂಗ್ (ASI Pahoop) ಎನ್ನುವವರು ಕೂಡಲೇ ಕಾರ್ಯ ಪ್ರವೃತ್ತರಾಗಿ ಪ್ರಯಾಣಿಕನನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.
RPF ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಓರ್ವ ಪ್ರಯಾಣಿಕ ಚಲಿಸುವ ರೈಲಿನಡಿ ಸಿಲುಕಿ ಪ್ರಾಣ ಕಳೆದುಕೊಳ್ಳುವುದು ತಪ್ಪಿದಂತಾಗಿದೆ.
ಇದನ್ನು ಓದಿ : KSP : ಖಾಲಿ ಇರುವ PC ಮತ್ತು PSI ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಘಟನೆಯ ನಂತರ, ರಾಜೇಂದ್ರನಿಗೆ ಅರಾವಳಿ ಎಕ್ಸ್ಪ್ರೆಸ್ (Aravali Express) ನಲ್ಲಿ ಅಹಮದಾಬಾದ್ಗೆ ಹೋಗಲು ಸಲಹೆ ನೀಡಲಾಯಿತು. ಮುಂಬೈ ರೈಲ್ವೇ ಪೊಲೀಸರು ಮತ್ತು ಆರ್ಪಿಎಫ್ ಸಿಬ್ಬಂದಿ (RPF staff) ಯ ಜಾಗರೂಕತೆಗೆ ಸಂಭಾವ್ಯ ದುರಂತವನ್ನು ಯಶಸ್ವಿಯಾಗಿ ತಡೆದಿರುವುದಕ್ಕೆ ಧನ್ಯವಾದಗಳು ಎಂದು ವಿಡಿಯೋ ಹಂಚಿಕೆದಾರರು “X” ನಲ್ಲಿ ಬರೆದುಕೊಂಡಿದ್ದಾರೆ.
ವಿಡಿಯೋ ನೋಡಿ :
‘Operation Life Saving’ at Andheri Railway Station; Passenger Rescued While Boarding Moving Train.
Andheri, February 16, 2025: A crucial rescue operation under ‘Operation Life Saving’ took place today at platform number 8 of Andheri railway station. As Lokshakti Express (Train… pic.twitter.com/leu4O2Sz0P
— SUDHAKAR EDWIN NADAR (@nadarsudhakar29) February 16, 2025
ಹಿಂದಿನ ಸುದ್ದಿ : Bharath ಪೆಟ್ರೋಲಿಯಂನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಭಾರತ್ ಪೆಟ್ರೋಲಿಯಂ (Bharat Petroleum) ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಹತೆಯನ್ನು ಪರಿಶೀಲಿಸಿ, ಇಲ್ಲಿ ಕೊಡಲಾದ ಮಾಹಿತಿಯನ್ನು ಓದುವುಸಲ್ಲದೆ ಅಧಿಕೃತ website ಗೆ ಭೇಟಿ ನೀಡಿ ನಂತರ Online ಮೂಲಕ ಅರ್ಜಿ ಸಲ್ಲಿಸಬಹುದು.
ಇದನ್ನು ಓದಿ :
ಹುದ್ದೆಗಳ ವಿವರ :
- ನೇಮಕಾತಿಯ ಹೆಸರು : ಭಾರತ್ ಪೆಟ್ರೋಲಿಯಂ.
- ಹುದ್ದೆಗಳ ಹೆಸರು : ಪೆಟ್ರೋಲಿಯಂ ಜೂನಿಯರ್ ಎಕ್ಸಿಕ್ಯುಟಿವ್ ಮತ್ತು ಸೆಕ್ರೆಟರಿ.
ಹುದ್ದೆಗಳ ಸಂಖ್ಯೆ :
- ಅರ್ಜಿಗಳ ಸಂಖ್ಯೆಯನ್ನು ಆಧರಿಸಿ ಆಯ್ಕೆ ಪ್ರಕ್ರಿಯೆಯ ನಿರ್ಧರಿಸಲಾಗುತ್ತದೆ.
ವೇತನ ಶ್ರೇಣಿ :
- ಜೂನಿಯರ್ ಎಕ್ಸಿಕ್ಯೂಟಿವ್ : ರೂ.30,000/- ರಿಂದ ರೂ. 1,20,000/-
- ಸೆಕ್ರೇಟರಿ ಹುದ್ದೆಗೆ : ರೂ.40,000/- ರಿಂದ ರೂ.1,40,000/-
ಶೈಕ್ಷಣಿಕ ಅರ್ಹತೆ :
ಜೂನಿಯರ್ ಎಕ್ಸಿಕ್ಯುಟಿವ್ :
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ರಾಸಾಯನಿಕ ವಿಜ್ಞಾನದಲ್ಲಿ B.sc ಪದವಿಯನ್ನು ಹೊಂದಿರಬೇಕು.
- ಅಭ್ಯರ್ಥಿಯು ಕನಿಷ್ಠ ಶೇ. 60 (ಅಥವಾ ಸಮಾನವಾದ CGPA) ಅಂಕಗಳನ್ನು ಹೊಂದಿರಬೇಕು.
- SC/ST/PwBD ಅಭ್ಯರ್ಥಿಗಳಿಗೆ ಇದನ್ನು ಶೇ. 55 ಕ್ಕೆ ಇಳಿಸಲಾಗಿದೆ.
- ಅಭ್ಯರ್ಥಿಯು ಕನಿಷ್ಠ 60 ಶೇಕಡಾವಾರು (ಅಥವಾ ಸಮಾನ CGPA) ದೊಂದಿಗೆ ಕೆಮಿಕಲ್ ಎಂಜಿನಿಯರಿಂಗ್ನಲ್ಲಿ Diploma (3 ವರ್ಷಗಳ ಕೋರ್ಸ್) ಹೊಂದಿರಬೇಕು.
- SC/ST/PwBD ಅಭ್ಯರ್ಥಿಗಳು 55 ಶೇಕಡಾವಾರು ಹೊಂದಿರಬೇಕು.
- ಅಭ್ಯರ್ಥಿಯು ಪೆಟ್ರೋಲಿಯಂ/ತೈಲ ಮತ್ತು ಅನಿಲ/ಪೆಟ್ರೋ-ರಾಸಾಯನಿಕ ಉದ್ಯಮದಲ್ಲಿ ಪ್ರಯೋಗಾಲಯದಲ್ಲಿ ಕನಿಷ್ಠ 5 ವರ್ಷಗಳ ಅನುಭವವನ್ನು ಹೊಂದಿರಬೇಕು.
ಕಾರ್ಯದರ್ಶಿ :
- ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (3 ವರ್ಷಗಳ ಕೋರ್ಸ್) ಹೊಂದಿರಬೇಕು.
- 12 ನೇ ತರಗತಿ ಮತ್ತು 10 ನೇ ತರಗತಿಯಲ್ಲಿ ಕನಿಷ್ಠ ಶೇ.70 ಅಂಕಗಳು (ಅಥವಾ ಸಮಾನ CGPA) ಹೊಂದಿರಬೇಕು.
- SC/ST/PwBD ಅಭ್ಯರ್ಥಿಗಳು 65 ಶೇಕಡಾವಾರು ಹೊಂದಿರಬೇಕು.
- ಅಭ್ಯರ್ಥಿಯು ಆಡಳಿತಾತ್ಮಕ ಕಾರ್ಯದರ್ಶಿ, ಪಿಎ/ಕಾರ್ಯನಿರ್ವಾಹಕ ಸಹಾಯಕ/ಕಾರ್ಯದರ್ಶಿ ಕೆಲಸ/ಕಚೇರಿ ನಿರ್ವಹಣೆಯಲ್ಲಿ ಕನಿಷ್ಠ 6 ತಿಂಗಳ ಡಿಪ್ಲೊಮಾ ಅಥವಾ ಪ್ರಮಾಣಪತ್ರವನ್ನು ಹೊಂದಿರಬೇಕು.
- ಅಭ್ಯರ್ಥಿಯು ಕನಿಷ್ಠ 5 ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು.
ವಯೋಮಿತಿ :
- ಸಾಮಾನ್ಯ ವರ್ಗದವರು/ಆರ್ಥಿಕವಾಗಿ ಹಿಂದುಳಿದ ಕೆಟಗರಿ ಅಭ್ಯರ್ಥಿಗಳು : 29 ವರ್ಷ ವಯಸ್ಸು ಮೀರಿರಬಾರದು.
- ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು : 3 ವರ್ಷ. ಮತ್ತು
- SC/ST ಅಭ್ಯರ್ಥಿಗಳು : 5 ವರ್ಷ ವಯಸ್ಸಿನ ಸಡಿಲಿಕೆ ಇದೆ.
ಅರ್ಜಿ ಶುಲ್ಕ :
- ಅಭ್ಯರ್ಥಿಗಳು ಮರುಪಾವತಿಸಲಾಗದ ರೂ.1,180 ಶುಲ್ಕವನ್ನು ಪಾವತಿಸಬೇಕು.
- SC/ST ಮತ್ತು PwBD ಅಭ್ಯರ್ಥಿಗಳು : ಯಾವುದೇ ಅರ್ಜಿ ಶುಲ್ಕ ನೀಡಬೇಕಾಗಿಲ್ಲ.
ಆಯ್ಕೆ ಪ್ರಕ್ರಿಯೆ : ಬಹು-ಹಂತಗಳ ಆಯ್ಕೆ ಪ್ರಕ್ರಿಯೆ ಇದಾಗಿದೆ.
- ಅರ್ಜಿ ಪರಿಶೀಲನೆ (ಶೈಕ್ಷಣಿಕ ಅರ್ಹತೆ, ಕೆಲಸದ ಅನುಭವ ಇತ್ಯಾದಿಗಳ ಆಧಾರದ ಮೇಲೆ).
- ಲಿಖಿತ/ಕಂಪ್ಯೂಟರ್ ಆಧಾರಿತ ಪರೀಕ್ಷೆ.
- ಪ್ರಕರಣ ಆಧಾರಿತ ಚರ್ಚೆ/ಗುಂಪು ಕಾರ್ಯ/ವೈಯಕ್ತಿಕ ಸಂದರ್ಶನ ಇತ್ಯಾದಿಗಳು.
ಅರ್ಜಿ ಸಲ್ಲಿಸುವ ವಿಧಾನ :
- BPCL ಹುದ್ದೆಗಳಿಗೆ ನೇಮಕ ಪ್ರಕ್ರಿಯೆಯನ್ನು banking ಸಿಬ್ಬಂದಿ ನೇಮಕಾತಿ ಸಂಸ್ಥೆ – IBPS ನಡೆಸುತ್ತಿದೆ.
- IBPS ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬೇಕು.
- IBPS ನ BPCL ನೇಮಕ ಪ್ರಕ್ರಿಯೆ website https://ibpsonline.ibps.in/bpcljan25/ ಗೆ ಭೇಟಿ ನೀಡಿ.
- Open ಆದ web page ನಲ್ಲಿ ‘Click Here For New Registration’ ಎಂದ ಸ್ಥಳದಲ್ಲಿ ಕ್ಲಿಕ್ ಮಾಡಿ.
- ಮತ್ತೊಂದು web page Open ಆಗುತ್ತದೆ.
- ಕೇಳಲಾದ basic details ನೀಡಿ ಮೊದಲು registration ಪಡೆಯಿರಿ.
- ನಂತರ login ಆಗುವ ಮೂಲಕ detail application ಸಲ್ಲಿಸಿ.
ಪ್ರಮುಖ ದಿನಾಂಕ :
- ಅರ್ಜಿ ಸಲ್ಲಿಕೆಯ ಆರಂಭಿಕ ದಿನಾಂಕ : ಜನವರಿ 22, 2025.
- ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : ಫೆಬ್ರವರಿ 22, 2025.
- ನಿಮ್ಮ Online ಅರ್ಜಿ print ತೆಗೆದುಕೊಳ್ಳಲು ಕೊನೆ ದಿನಾಂಕ : ಮಾರ್ಚ 09, 2025.
- ಅರ್ಜಿಯ ಶುಲ್ಕ ಪಾವತಿಗೆ : ಫೆಬ್ರುವರಿ 22, 2025 ರವರೆಗೆ ಅವಕಾಶ ನೀಡಲಾಗಿದೆ.
ಪ್ರಮುಖ ಲಿಂಕ್
ಅಭ್ಯರ್ಥಿಗಳು Bharath petroleum ನ ಅಧಿಕೃತ ವೆಬ್ಸೈಟ್ https://ibpsonline.ibps.in/bpcljan25/ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
Disclaimer : The above given information is available On online, candidates should check it properly before applying. This is for information only.