ಜನಸ್ಪಂದನ ನ್ಯೂಸ್, ಬೆಂಗಳೂರು : ಕೃಪಾಂಕ (Normalisation) ಪ್ರಕ್ರಿಯೆಯನ್ನು ಅಳವಡಿಸಿಕೊಂಡ ಕಾರಣ ಒಬ್ಬ ಅಭ್ಯರ್ಥಿಯು (Candidate) ಮಧ್ಯ ಪ್ರದೇಶ (Madhya Pradesh) ಸರ್ಕಾರದ ನೇಮಕಾತಿ ಪರೀಕ್ಷೆಯಲ್ಲಿ ಒಟ್ಟು 100 ಅಂಕಗಳಿಗೆ 101.66 ಅಂಕಗಳನ್ನು ಪಡೆದಿದ್ದಾನೆ.
ಹೀಗಾಗಿ ಈ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿ ಉದ್ಯೋಗಾಕಾಂಕ್ಷಿಗಳು ಇಂದೋರ್ನಲ್ಲಿ (Indore) ಪ್ರತಿಭಟನೆ (Protest) ನಡೆಸಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿ : CM ವಿರುದ್ಧ ಮುಡಾ ಹಗರಣ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣ ನಾಪತ್ತೆ.!
ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ (protest) ನಡೆಸಿದ ಉದ್ಯೋಗಾಕಾಂಕ್ಷಿಗಳು, ಬಳಿಕ ಮುಖ್ಯಮಂತ್ರಿಗೆ ಬರೆದಿರುವ ಮನವಿ ಪತ್ರವನ್ನು (letter of appeal) ಡಿಸಿಗೆ ಸಲ್ಲಿಸಿದರು.
ಅರಣ್ಯ ಮತ್ತು ಬಂಧಿಖಾನೆ ಇಲಾಖೆಗಳ ಸಿಬ್ಬಂದಿ ನೇಮಕಾತಿಗೆ (Recruitment of staff of Forest and Jail Departments) ನಡೆದ ಜಂಟಿ ಪರೀಕ್ಷೆಯಲ್ಲಿ ಅಭ್ಯರ್ಥಿಯೊಬ್ಬರು 100ಕ್ಕೆ 101.66 ಅಂಕ ಪಡೆದು ಮೊದಲ ಸ್ಥಾನದಲ್ಲಿದ್ದಾರೆ (first place). ಈ ಬಗ್ಗೆ ತನಿಖೆ ನಡೆಸಬೇಕೆಂದು ಪ್ರತಿಭಟನಾಕಾರರು ಮುಖ್ಯಮಂತ್ರಿ ಮೋಹನ್ ಯಾದವ್ ಅವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನು ಓದಿ : ಪ್ರಪಂಚದಾದ್ಯಂತ ಪ್ರತಿ ವರ್ಷ ಸ್ಟ್ರೋಕ್ ನಿಂದ 50 ಲಕ್ಷಕ್ಕೂ ಅಧಿಕ ಮಂದಿ ಸಾವು : WHO.!
ಡಿಸೆಂಬರ್ 13ರಂದು ಪರೀಕ್ಷೆಯ ಫಲಿತಾಂಶ ಬಂದಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಮಂಡಳಿ, ಹೊಸ ನಿಯಮಗಳ ಪ್ರಕಾರ ಕೃಪಾಂಕ ಪ್ರಕ್ರಿಯೆ ಅಳವಡಿಸಿಕೊಂಡಿರುವುದರಿಂದ (apply) ಅಭ್ಯರ್ಥಿಯೊಬ್ಬರು 100ಕ್ಕೂ ಅಧಿಕ ಅಂಕ ಪಡೆದಿದ್ದಾರೆ ಎಂದು ಹೇಳಿತ್ತು.
ಪ್ರತಿಭಟನಾಕಾರರ ನೇತೃತ್ವವಹಿಸಿದ್ದ ಉದ್ಯೋಗಾಕಾಂಕ್ಷಿ ಗೋಪಾಲ್ ಪ್ರಜಾಪತ್, ರಾಜ್ಯದ ಇತಿಹಾಸದಲ್ಲಿ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಯೊಬ್ಬರು ನಿಗದಿತ ಅಂಕಗಳಿಗಿಂತ ಅಧಿಕ ಅಂಕ ಗಳಿಸಿರುವುದು ಇದೇ ಮೊದಲು (Scored more than the prescribed marks) ಎಂದು ಹೇಳಿದ್ದಾರೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.
ಹಿಂದಿನ ಸುದ್ದಿ : ನಿರುಪಯುಕ್ತ ಕೊಳವೆಬಾವಿ ಮುಚ್ಚದಿದ್ದರೆ Jail; ಮಸೂದೆಗೆ ಅಂಗೀಕಾರ.!
ಜನಸ್ಪಂದನ ನ್ಯೂಸ್, ಬೆಳಗಾವಿ : ಉಪಯೋಗವಿಲ್ಲದ ಕೊಳವೆ ಬಾವಿಗಳನ್ನು ಮುಚ್ಚದೆ ಇದ್ದಲ್ಲಿ ಒಂದು ವರ್ಷ ಜೈಲು (One year in jail) ಹಾಗೂ 25 ಸಾವಿರ ದಂಡ ವಿಧಿಸುವ ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆ ವಿನಿಮಯ ಹಾಗೂ ನಿಯಂತ್ರಣ (Development and management exchange and control) ಅಧಿನಿಯಮ 2011 ಮತ್ತು ನಿಯಮಾವಳಿ 2012ಕ್ಕೆ ತಿದ್ದುಪಡಿಯನ್ನು ವಿಧಾನಸಭೆ ಧ್ವನಿಮತದಿಂದ (By voice) ಅಂಗೀಕರಿಸಿತು.
ಸಚಿವ ಭೋಸರಾಜು (Minister Bhosaraju) ಅವರು ಮಂಡಿಸಿದ ಮಸೂದೆಗೆ ವಿಧಾನ ಸಭೆ ಅಸ್ತು ಎಂದಿತು ಎಂದು ತಿಳಿದು ಬಂದಿದೆ.
ಇದನ್ನು ಓದಿ : Video : ಮೆಟ್ರೋ ನಿಲ್ದಾಣದಲ್ಲಿ ಲಿಪ್ ಟು ಲಿಪ್ ಕಿಸ್ ಮಾಡುತ್ತ ನಿಂತ ಜೊಡಿ ; ಸಾರ್ವಜನಿಕರು ಶಾಕ್.!
ಈ ಮಸೂದೆಯ ಉದ್ದೇಶ, ಸಣ್ಣ ಮಕ್ಕಳು ಕೊಳವೆ ಬಾವಿಗೆ ಬಿದ್ದು ಸಾವನ್ನಪ್ಪುವ ಅಥವಾ ಜೀವನ್ಮರಣ ಹೋರಾಟ ನಡೆಸುವ ಪ್ರಕರಣಗಳನ್ನು ತಪ್ಪಿಸುವುದಾಗಿದೆ.
ಕೊಳವೆ ಬಾವಿ (tube well) ಕೊರೆಯಲು ಇಚ್ಛಿಸುವವರು ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರಗಳಿಗೆ 15 ದಿನಗಳಿಗಿಂತ ಮುಂಚೆ ಮಾಹಿತಿ (Give information before 15 days) ನೀಡಬೇಕು. ಕೊಳವೆ ಬಾವಿಗಳನ್ನು ಡ್ರಿಲ್ಲಿಂಗ್ ಏಜೆನ್ಸಿ ಮತ್ತು ಇಂಪ್ಲಿಮೆಂಟಿಂಗ್ ಏಜೆನ್ಸಿಗಳು ಕಬ್ಬಿಣದ ಮುಚ್ಚಳ (Iron lid) ಹಾಕಿ ಮುಚ್ಚಬೇಕು.
ಇದನ್ನು ಓದಿ : ಬಿಸಿ ನೀರಿಗಾಗಿ ವ್ಯಕ್ತಿಯ ಹೊಸ ಟ್ರಿಕ್ ; Video ನೊಡಿದ್ರೆ ಬಿದ್ದು ಬಿದ್ದು ನಗುತ್ತಿರಾ.!
ಕೊಳವೆ ಬಾವಿ ಕೊರೆದ 24 ತಾಸುಗಳ ಒಳಗೆ ಮುಚ್ಚಿರುವ ಬಗ್ಗೆ ಫೋಟೋ ತೆಗೆದು ಸುರಕ್ಷಿತವಾಗಿ ಮುಚ್ಚಿರುವುದನ್ನು ಅಧಿಕಾರಿಗಳು ತಪಾಸಣೆ (inspection) ಮಾಡಿ ದೃಢೀಕರಿಸಬೇಕು (confirm).
ಕೊಳವೆ ಬಾವಿ ಕೊರೆಯುವ ಬಗ್ಗೆ ಸಂಬಂಧಿತ ಅಧಿಕಾರಿಗಳಿಗೆ 15 ದಿನ ಮುಂಚಿತವಾಗಿ ಮಾಹಿತಿ ನೀಡದಿದ್ದರೆ, ಡ್ರಿಲ್ಲಿಂಗ್ ಏಜೆನ್ಸಿ/ ಇಂಪ್ಲಿಮೆಂಟಿಂಗ್ ಏಜೆನ್ಸಿಗಳಿಗೆ (Drilling Agency/ Implementing Agency) 5 ಸಾವಿರ ರೂ. ಜುಲ್ಮಾನೆ ಹಾಗೂ 3 ತಿಂಗಳ ಸಜೆ ವಿಧಿಸಲಾಗುವುದು.
ಡ್ರಿಲ್ಲಿಂಗ್ ಏಜೆನ್ಸಿ ಹಾಗೂ ಇಂಪ್ಲಿಮೆಂಟಿಂಗ್ ಏಜೆನ್ಸಿಗಳು ಒಂದು ವೇಳೆ ಕೊಳವೆ ಬಾವಿಗಳನ್ನು ಮುಚ್ಚದೆ ಇದ್ದಲ್ಲಿ 25 ಸಾವಿರ ದಂಡ ಹಾಗೂ 1 ವರ್ಷಗಳ ಜೈಲು ಶಿಕ್ಷೆ (25 thousand fine and 1 year imprisonment) ವಿಧಿಸುವುದನ್ನು ಈ ಮಸೂದೆ ಒಳಗೊಂಡಿದೆ.